ISPL ಸೀಸನ್ 3 ನಲ್ಲಿ ಚೆನ್ನೈ ಸಿಂಗಮ್ಸ್ ಬಲಿಷ್ಠವಾದ ತಂಡವನ್ನು ರೂಪಿಸುವಲ್ಲಿ ಯಶಸ್ವಿಯಾಗಿದ್ದು, ಸಂದೀಪ್ ಗುಪ್ತಾ, ರಾಜ್‌ದೀಪ್ ಗುಪ್ತಾ ಮತ್ತು ಟಾಲಿವುಡ್ ನಟ ಸೂರ್ಯ ಶಿವಕುಮಾರ್ ಅವರ ಸಹ-ಮಾಲೀಕತ್ವದ ಫ್ರಾಂಚೈಸಿಯಾಗಿದೆ.
₹26.40 ಲಕ್ಷಕ್ಕೆ ಸಹಿ ಹಾಕಿ ಕೇತನ್ ಮ್ಹಾತ್ರೆ ತಂಡಕ್ಕೆ ಪುನಃ ಮರಳಿದ್ದು,ಈ ಹರಾಜಿನ ಮೂರನೇ ಅತ್ಯಧಿಕ ಖರೀದಿ ಇದಾಗಿದೆ. ಕಳೆದ ಮೂರು ಸೀಸನ್‌ಗಳಿಂದ ಸಿಂಗಮ್ಸ್ ತಂಡದಲ್ಲಿದ್ದ ಕೇತನ್ ಮ್ಹಾತ್ರೆ ಅವರ ಪುನರಾಗಮನವು ತಂಡವನ್ನುಮತ್ತಷ್ಠು ಬಲಗೊಳಿಸಲಿದೆ.
₹20.02 ಲಕ್ಷಕ್ಕೆ ಅದ್ಭುತ ಬ್ಯಾಟ್ಸ್‌ಮನ್ ಜಗನ್ನಾಥ್ ಸರ್ಕಾರ್, ಸರ್ಫರಾಜ್ ಖಾನ್ (₹12 ಲಕ್ಷ), ಮೊಹಮ್ಮದ್ ನದೀಮ್ (₹5.50 ಲಕ್ಷ), ಅಮನ್ ಯಾದವ್ (₹3.80 ಲಕ್ಷ), ನಾಗೇಶ್ ವಾಡೇಕರ್ (₹3 ಲಕ್ಷ), ಸಂಭಾಜಿ ಪಾಟೀಲ್ (₹3 ಲಕ್ಷ), ಮೊಯೊದ್ದಿನ್ ಶೇಖ್ (₹3 ಲಕ್ಷ), ಕಿಸಾನ್ ಸತ್ಪುಟೆ (₹3 ಲಕ್ಷ), ಮತ್ತು ಗಣೇಶ್ ಶಿಲ್ಲಿಕ್ಯಾತರ್ (₹3 ಲಕ್ಷ) ತಂಡಕ್ಕೆ ಸೇರಿದ್ದಾರೆ.
ಚೆನ್ನೈ ತಂಡವು ಬೌಲಿಂಗ್ ವಿಭಾಗವನ್ನು ಮತ್ತಷ್ಟು ಬಲಪಡಿಸಿದ್ದು, ಅನುರಾಗ್ ಸರ್ಷರ್ (₹19.20 ಲಕ್ಷ) ಮತ್ತು ಆಶಿಶ್ ಪಾಲ್ (₹5.25 ಲಕ್ಷ) ಮತ್ತು ಸುನಿಲ್ ಕುಮಾರ್ (₹3 ಲಕ್ಷ) ಅವರನ್ನು ಸೇರಿಸಿಕೊಂಡಿದ್ದಾರೆ.
ಆಲ್‌ರೌಂಡರ್ ವಿಭಾಗದಲ್ಲಿ ಅಂಕುರ್ ಸಿಂಗ್ (₹11 ಲಕ್ಷ), ರಾಜೇಶ್ ಸೋರ್ಟೆ (₹10 ಲಕ್ಷ) ಮತ್ತು ಧೀರಜ್ ಸಿಂಗ್ (₹3.60 ಲಕ್ಷ) ಇರಲಿದ್ದಾರೆ. ಹಾಗೆಯೆ ಯುವ ಪ್ರತಿಭೆಗಳಿಗೂ ತಂಡದಲ್ಲಿ ಅವಕಾಶ ನೀಡಿದ್ದು, U-19 ಬೌಲರ್‌ಗಳಾದ ಆರ್ಯನ್ ಖಾರ್ಕರ್ (₹4 ಲಕ್ಷ) ಮತ್ತು ಅಂಕಿತ್ ಯಾದವ್ (₹3 ಲಕ್ಷ) ತಂಡಕ್ಕೆ ಸೇರ್ಪಡೆಯಾಗಿದ್ದಾರೆ.
ಹರಾಜಿನ ಬಳಿಕ ಮಾತನಾಡಿದ ಚೆನ್ನೈ ಸಿಂಗಮ್ಸ್ ತಂಡದ ಸಹ ಮಾಲೀಕ ರಾಜದೀಪ್ ಗುಪ್ತಾ ‘ಕಳೆದ ಸೀಸನ್ ಗಿಂತ ಈ ಸೀಸನ್ ದೊಡ್ಡದ್ದಾಗಿದ್ದು, ISPL ಸೀಸನ್ 3ಕ್ಕೆ ಕಾಲಿಡುತ್ತಿದ್ದಂತೆ ನಮ್ಮ ಗಮನ ದೇಶದ ಅತ್ಯುತ್ತಮ ಟೆನಿಸ್ ಬಾಲ್ ಕ್ರಿಕೆಟ್ ಪ್ರತಿಭೆಯನ್ನು ಗುರುತಿಸುವುದಾಗಿದೆ ಎಂದರು.





