ಇತ್ತೀಚೆಗೆ ನಗರದ ಕುಮಾರಸ್ವಾಮಿ ಲೇಔಟ್ನಲ್ಲಿ ನಡೆದ, ಉತ್ಸಾಹೀ ನೃತ್ಯಪಟುಗಳಾದ, ಐಶೆನಿ ರಾಯ್ಮತ್ತು ಶ್ರಿಯಾಶೆಟ್ಟಿರವರ ಮನಮೋಹಕ ಭರತನಾಟ್ಯ ರಂಗಪ್ರವೇಶ ಕಾರ್ಯಕ್ರಮದ ಬಗ್ಗೆ ವಿವರಗಳನ್ನು ತಿಳಿಯೋಣವೇ......?

ಉತ್ಸಾಹೀ ನೃತ್ಯಪಟುಗಳಾದ, ಐಶೆನಿ ರಾಯ್‌ ಮತ್ತು ಶ್ರಿಯಾಶೆಟ್ಟಿರವರ ಮನಮೋಹಕ ಭರತನಾಟ್ಯ ರಂಗಪ್ರವೇಶ ಕಾರ್ಯಕ್ರಮ, ಇತ್ತೀಚೆಗೆ ಇವರುಗಳ ಗುರುಗಳಾದ ಆಚಾರ್ಯ ಅಶೋಕ್‌ ಕುಮಾರ್‌, ನಿರ್ದೇಶಕರು, `ನಾಟ್ಯಾಂಜಲಿ ಸ್ಕೂಲ್ ‌ಆಫ್‌ ಡ್ಯಾನ್ಸ್'ರವರ ಮಾರ್ಗದರ್ಶನದಲ್ಲಿ, ಬೆಂಗಳೂರಿನ ಕುಮಾರಸ್ವಾಮಿ ಲೇಔಟ್‌ ನಲ್ಲಿರುವ `ಡಾ. ಡಿ. ಪ್ರೇಮಚಂದ್ರ ಸಾಗರ್ ಆಡಿಟೋರಿಯಂ ಸೆಂಟರ್‌ ಫಾರ್‌ ಪರ್ಫಾರ್ಮಿಂಗ್‌ ಆರ್ಟ್ಸ್' (ಡಿಎಸ್‌ಐ)ನಲ್ಲಿ ಯಶಸ್ವಿಯಾಗಿ ನೆರವೇರಿತು.

ಕಿರುಪರಿಚಯ

ಐಶೆನಿ ರಾಯ್‌ : ಇವರು `ಪಬ್ಲಿಕ್‌ ಪಾಲಿಸಿ ಗರ್ನೆನ್ಸ್' ಕ್ಷೇತ್ರದಲ್ಲಿ ಸಂಶೋಧಕರಾಗಿದ್ದಾರೆ. ಐಶೆನಿ ವಿದ್ಯಾಭ್ಯಾಸದ ಯಾತ್ರೆಯು `ಶ್ರೀ ಕುಮರನ್‌ ಚಿಲ್ಡ್ರನ್ಸ್ ಹೋಮ್'ನಿಂದ ಪ್ರಾರಂಭವಾಗಿ, ಕ್ರೈಸ್ಟ್ ಯೂನಿವರ್ಸಿಟಿಯಿಂದ `ಬಿಎ ಎಲ್.ಎಲ್.ಬಿ' (ಆನರ್ಸ್‌) ಪಡೆಯುವವರೆಗೆ ನಡೆಯಿತು. ಇವರು ತಮ್ಮ ಹತ್ತನೇ ವಯಸ್ಸಿನಲ್ಲಿಯೇ ಗುರುಗಳಾದ ಆಚಾರ್ಯ ಅಶೋಕ್‌ ಕುಮಾರ್‌ ಬಳಿ ಶಿಷ್ಯತ್ವ ಪಡೆದು ಭರತನಾಟ್ಯ ಕಲಿಯಲು ಪ್ರಾರಂಭಿಸಿದರು.

`ಕರ್ನಾಟಕ ಸ್ಟೇಟ್‌ ಎಜುಕೇಶನ್‌ ಎಗ್ಸಾಮಿನೇಶನ್‌ ಬೋರ್ಡ್‌' ಏರ್ಪಡಿಸುವ ಭರತನಾಟ್ಯ ಜೂನಿಯರ್‌ಗ್ರೇಡ್‌ ಎಗ್ಸಾಮ್ ನಲ್ಲಿ ಉತ್ತಮ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ. ಅಲ್ಲದೇ ಶಕ್ತಿ, ರಾಮಾಯಣ, ಭಗದುಜ್ಜುಕೀಯಂ, ಕೃಷ್ಣಲೀಲಾ ಮತ್ತು ಜಿನದತ್ತರಾಯನ ಚರಿತ್ರೆ, ಮುಂತಾದ ನೃತ್ಯ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾರೆ.

IMG_6947-(1)

ಶ್ರಿಯಾಶೆಟ್ಟಿ : ಇವರು `ಪ್ರಾಡಕ್ಟ್ಸ್ ಫುಡ್‌ ಸ್ಟೈಲಿಂಗ್‌' ಕ್ಷೇತ್ರದಲ್ಲಿ ವತ್ತಿಪರರಾಗಿದ್ದಾರೆ. ಶ್ರಿಯಾ ತಮ್ಮ ಆರಂಭಿಕ ವಿದ್ಯಾಭ್ಯಾಸನ್ನು `ಇನ್ನಿಸ್ಛ್ರೀ ಹೌಸ್‌ಸ್ಕೂ್‌'ನಿಂದ ಪ್ರಾರಂಭಿಸಿ, `ಶ್ರೀ ಕುಮರನ್‌ ಚಿಲ್ಡ್ರನ್ಸ್ ಹೋಮ್'ನಲ್ಲಿ ಮುಂದುವರಿಸಿದರು. ನಂತರ ಜೈನ್ ಯೂನಿವರ್ಸಿಟಿಯ `ಸೆಂಟರ್‌ ಫಾರ್‌ ಮ್ಯಾನೇಜ್‌ ಮೆಂಟ್‌ ಸ್ಟಡೀಸ್‌'ನಿಂದ `ಬಿಸ್‌ ನೆಸ್‌ ಅಡ್ಮಿನಿಸ್ಟ್ರೇಶನ್‌' (ಮಾರ್ಕೆಟಿಂಗ್‌) ವಿಭಾಗದಲ್ಲಿ ಡಿಸ್ಟಿಂಕ್ಷನ್‌ ನಲ್ಲಿ ಡಿಗ್ರಿಯನ್ನು ಪಡೆದುಕೊಂಡರು. ಇವರು ಆಚಾರ್ಯ ಅಶೋಕ್‌ ಕುಮಾರ್‌ ರವರ ಬಳಿ ಭರತನಾಟ್ಯವನ್ನು ಕಲಿತರು. ಕರ್ನಾಟಕ ಸರ್ಕಾರ ಏರ್ಪಡಿಸುವ `ಕೆಎಸ್‌ಇಇಬಿ,' `ಜೂನಿಯರ್‌ ಗ್ರೇಡ್‌ ಭರತನಾಟ್ಯಂ ಎಗ್ಸಾಮ್ ನಲ್ಲಿ ಡಿಸ್ಟಿಂಕ್ಷನ್‌ ನಲ್ಲಿ ಉತ್ತೀರ್ಣರಾದರು. ಅಲ್ಲದೆ, ಉತ್ಕೃಷ್ಟ ನೃತ್ಯ ಕಾರ್ಯಕ್ರಮಗಳಾದ, ಶಕ್ತಿ, ರಾಮಾಯಣ, ಭಗದುಜ್ಜುಕೀಯಂ, ಕೃಷ್ಣಲೀಲಾ ಮತ್ತು ಜಿನದತ್ತರಾಯನ ಚರಿತ್ರೆಯಲ್ಲಿ ಭಾಗವಹಿಸಿದ್ದಾರೆ.

IMG_6953

ಆಚಾರ್ಯ ಅಶೋಕ್ಕುಮಾರ್‌ : ಆಚಾರ್ಯ ಅಶೋಕ್‌ ಕುಮಾರ್‌ `ನಾಟ್ಯಾಂಜಲಿ ಸ್ಕೂಲ್ ‌ಆಫ್‌ ಡ್ಯಾನ್ಸ್' ಸಂಸ್ಥೆಯ ಕಲಾತ್ಮಕ ನಿರ್ದೇಶಕರಾಗಿದ್ದಾರಲ್ಲದೇ, ನುರಿತ ನೃತ್ಯ ನಿರ್ದೇಶಕರು, ನೃತ್ಯಪಟು ಮತ್ತು ಸುಪ್ರಸಿದ್ಧ ಭರತನಾಟ್ಯ ಗುರುಗಳಾಗಿದ್ದಾರೆ. ನಾಟ್ಯಾಂಜಲಿಯಲ್ಲಿ ಇವರಿಂದ ತರಬೇತಿ ಪಡೆದ ವಿದ್ಯಾರ್ಥಿಗಳನ್ನು ಒಳಗೊಂಡು ಅನೇಕ ಮನಮೋಹಕ ನೃತ್ಯ ಕಾರ್ಯಕ್ರಮ, ಪ್ರದರ್ಶನಗಳನ್ನು ನಮ್ಮ ದೇಶದಲ್ಲೇ ಅಲ್ಲದೇ, ಯುನೈಟೆಡ್‌  ಕಿಂಗ್ಡಮ್, ದುಬೈ, ಹಾಂಕಾಂಗ್‌, ಮಲೇಷಿಯಾ, ಶ್ರೀಲಂಕಾ, ಯುಎಸ್‌ಎ, ಕೆನಡಾ ಮುಂತಾದ ದೇಶಗಳಲ್ಲಿ ಹಲವಾರು ವರ್ಷಗಳಿಂದ ನಿರಂತರವಾಗಿ ನೀಡುತ್ತಾ ಬಂದಿದ್ದಾರೆ.

ಇವರು ತಮ್ಮ `ಟಚ್‌ಫೀಲ್‌' ಎಂಬ ವಿಶೇಷ ನೃತ್ಯ ಕಾರ್ಯಕ್ರಮವನ್ನು ವಿಶ್ವದಾದ್ಯಂತ ಸಾವಿರಾರು ಪ್ರದರ್ಶನಗಳನ್ನು ನೀಡಿದ್ದಾರೆ. ಅದಕ್ಕಾಗಿ `ಲಿಮ್ಕಾ ಬುಕ್‌ ಆಫ್‌ ರೆಕಾರ್ಡ್ಸ್'ನಲ್ಲಿ ಸೇರ್ಪಡೆಯಾಗಿದ್ದಾರೆ. ಈ ಕಾರ್ಯಕ್ರಮದ ವಿಶೇಷತೆ ಎಂದರೆ ಕಣ್ ದೃಷ್ಟಿಯಿಂದ ವಂಚಿತರಾದ ಅನೇಕ ಅಂಧ ವಿದ್ಯಾರ್ಥಿಗಳನ್ನು ಒಟ್ಟುಗೂಡಿಸಿ ಅವರಿಗೆ ತರಬೇತಿ ನೀಡಿ, ಈ ನೃತ್ಯ ಕಾರ್ಯಕ್ರಮವನ್ನು ಆಯೋಜಿಸಿದ್ದಾರೆ!

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ