ಗಂಡಸರಿಗೆ ಸರಿಸಮನಾಗಿ ಸ್ವಾತಂತ್ರ್ಯ ಬೇಕೇ?
4ನೇ ಜೂನ್, 2024ರಂದು ಬಂದ ಚುನಾವಣೆಯ ಬೆಚ್ಚಿಬೀಳಿಸುವ ಪರಿಣಾಮಗಳಿಂದ ಭಕ್ತ ಸವರ್ಣೀಯರು, ಮೇಲು ಜಾತಿಯ ಮಹಿಳೆಯರು ಖುಷಿಯಿಂದ ಸಂಭ್ರಮ ಆಚರಿಸಬೇಕಾದ್ದೇ! ಇವರುಗಳು ಗಂಟೆಗಟ್ಟಲೇ ಪೂಜೆ ವ್ರತಗಳಲ್ಲಿ ಕಳೆಯುತ್ತಾ, ಉಪವಾಸ ಮಾಡುತ್ತಾ, ಭಜನೆ ಕೀರ್ತನೆಗಳಲ್ಲಿ ಸಮಯ ಕಳೆಯುತ್ತಾ, ಸಮಯ ಸಂದರ್ಭವಿಲ್ಲದೆ ಬೀದಿ ಬೀದಿಗಳಲ್ಲಿ ತಲೆ ಮೇಲೆ ಕಲಶ ಹೊತ್ತು ಬಿಸಿಲು, ಮಳೆ ಎನ್ನದೆ ದೇವರ ಸೇವೆಗೆ ತೊಡಗುತ್ತಾರೆ, ಪತಿಯೇ ಪರಮೇಶ್ವರ ಎಂದು ತಲೆ ಮೇಲೆ ಸೆರಗು ಹೊದೆಯುತ್ತಾರೆ. ಖುಷಿಗೆ ಮತ್ತೊಂದು ಕಾರಣ, ಇವರ ಮನಸ್ಸಿಗೆ ಹತ್ತಿರವಾಗಿದ್ದ, ಸದಾ ಸಾಂಪ್ರದಾಯಿಕ ಸರಪಣಿಗಳಿಂದ ಬಂಧಿತರಾಗಿದ್ದ ಜನಕನ ಕಾಲ ಬುಡದ ನೆಲ ಸರಿದು ಹೋಗಿತ್ತು.
ಈ ಹೆಂಗಸರು ತಮ್ಮ ಹೆಚ್ಚಿನ ಸಮಯ ಪೂಜೆ ಪುನಸ್ಕಾರಗಳಲ್ಲಿ ಕಳೆಯಲು ಅವಕಾಶವಾಯ್ತು, ಭಗವಂತನ ದರ್ಶನಕ್ಕೆ ದಾರಿ ಆಯ್ತು, ದೇವಿ ಭಜನೆಗೆ ದಾರಿ ಆಯ್ತು, ಪ್ರವಚನಗಳಲ್ಲಿ ಗಂಟೆಗಟ್ಟಲೆ ಕುಳಿತು ಸ್ವಾಮೀಜಿಯ ಪಾದಕ್ಕೆ ಮಣಿಯಲು ಸುವರ್ಣಾವಕಾಶ ಎಂದೆಲ್ಲ ಸಂಭ್ರಮಿಸುವಂತಾಗಿದೆ. ಅಸಲಿಗೆ ಮಾನಸಿಕ ಗುಲಾಮಗಿರಿಯ ಕಾರಣ ಹೆಂಗಸರು ಹೀಗಾಡುತ್ತಾರೆ. ಇದು ಎಲ್ಲಾ ಎಸ್ಟಾಬ್ಲಿಷ್ಡ್ ಧರ್ಮಗಳಲ್ಲೂ ನಡೆಯುತ್ತದೆ.
ಯಾವ ಪ್ರಚಾರತಂತ್ರದಿಂದ ಬಿಜೆಪಿ ದೇಶವಿಡೀ ತನ್ನ ಹಿಡಿತ ಸಾಧಿಸಿತ್ತೋ, ಅದಕ್ಕಿಂತ ಹೆಚ್ಚಿನ ಕಪಿಮುಷ್ಟಿ ಪಕ್ಷ ನಡೆಸುವ ಪೀಳಿಗೆಗಳು ಅನಾದಿ ಕಾಲದಿಂದ ಸವರ್ಣೀಯ ಹೆಂಗಸರನ್ನು ಹಿಡಿದಿಟ್ಟಿವೆ. ರಾಮ ಮಂದಿರದ ಹೆಸರಿನಲ್ಲಿ ಬಿಜೆಪಿ ವಿಧಾಯಕರು, ಸಾಂಸದರನ್ನು ರೂಪಿಸುವ ರಣನೀತಿ ಅನುಸರಿಸುತ್ತಿದ್ದಂತೆ, ಮೇಲು ಜಾತಿಯ ಸುಶಿಕ್ಷಿತ, ಹಣವಂತ, ತಾಯಿ ತಂದೆಯರ ಕಣ್ಮಣಿಗಳಾದ ಈ ಹೆಂಗಸರು ಮಾತ್ರ ಧರ್ಮದ ಸರಪಣಿಗಳ ಎಡರುತೊಡರುಗಳನ್ನು ಬಿಡಿಸಿಕೊಳ್ಳುತ್ತ ಗಮನ ಹರಿಸುವುದೇ ಇಲ್ಲ.
ವಾಟ್ಸ್ ಆ್ಯಪ್, FB, ಇಂಟರ್ ನೆಟ್, ಇನ್ ಸ್ಟಾಗ್ರಾಂ, ಟ್ವಿಟರ್ ಗಳನ್ನು ಧಾರಾಳವಾಗಿ ಬಳಸಿಕೊಳ್ಳುತ್ತಾ, ಅಧಿಕಾರ ಪಡೆದ ತಕ್ಷಣ ಈ ಹೆಂಗಸರನ್ನು ವಾಪಸ್ಸು ಪೌರಾಣಿಕ ಕಾಲಕ್ಕೆ ಅವರು ಕೊಂಡೊಯ್ಯುತ್ತಾರೆ. ಆಧುನಿಕ ಶಿಕ್ಷಣ, ನಗರ ಜೀವನದ ಕಾರಣದಿಂದ ಹೆಂಗಸರು ತಾವೇನೋ ಇಂಡಿಪೆಂಡೆಂಟ್ ಎಂಬಂತೆ ತೋರಿಸಿಕೊಳ್ಳುತ್ತಾರೆ….. ಆದರೆ ಅವರು ಓದಿ, ಬರೆದು, ಕಲಿತದ್ದು, ನೋಡಿದ್ದು, ಗ್ರಹಿಸಿದ್ದು ಎಲ್ಲ ಪೌರಾಣಿಕ ಜ್ಞಾನ ಮಾತ್ರವೇ ಆಗಿದ್ದು ಸತಿ ಸಾವಿತ್ರಿ, ಸೀತಾ, ದ್ರೌಪದಿ, ದಮಯಂತಿ, ತಾರಾ, ಮಂಡೋದರಿಯರಿಗಷ್ಟೇ ಸೀಮಿತವಾಗಿದೆ.
ಈ ಹೆಂಗಸರಲ್ಲಿ ಎಷ್ಟೋ ಮಂದಿಗೆ ಇಂಗ್ಲಿಷ್ ನಲ್ಲಿ ಪೌರಾಣಿಕ ಜ್ಞಾನ ಉಣಬಡಿಸಲಾಯಿತು. ಹಾಲ್ ಗಳಲ್ಲಿ ಪ್ರವಚನ, ಭಜನೆಯ ಕಾರ್ಯಕ್ರಮಗಳು ಜೋರಾಗಿ ನಡೆಯುತ್ತಿದ್ದು, ಹೈಟೆಕ್ ದೇವಿದೇವರುಗಳನ್ನು ಪ್ರಸ್ತುತಪಡಿಸಲಾಗುತ್ತದೆ. ಏಕೆಂದರೆ ಇದೆಲ್ಲದರ ಹಿಂದೆ ಸರ್ಕಾರದ ಸಪೋರ್ಟ್‌ಫೈನಾನ್ಸ್ ಇದೆ! ಈ ಕಾರಣದಿಂದಲೇ ಇಂದಿನ ಸುಶಿಕ್ಷಿತ ಹೆಣ್ಣುಮಕ್ಕಳು ಸಹ ಉಸಿರುಗಟ್ಟಿಸುವ ವಾತಾವರಣದಲ್ಲಿ ಗಂಡ, ಮನೆ, ಮಕ್ಕಳು ಎಂದು ಹೋರಾಡುತ್ತಿರುತ್ತಾರೆ.
ಈ ಭಗವಾ ಸರ್ಕಾರ ಮಂದಿರಗಳ ಪುನರುಜ್ಜೀನಗೊಳಿಸಿ ಈ ಹೆಂಗಸರನ್ನು ಗಿಲೀಟು ಮಾಡಿದ್ದೂ ಮಾಡಿದ್ದೇ! ಆಗ ಈ ಹೆಂಗಸರು ಮಂದಿರದ ಹೆಸರಲ್ಲಿ ಹೊರಗೆ ಬಂದು ಅಲ್ಲಿನ ಹತ್ತಿರದ ಹೋಟೆಲ್ ಗಳಲ್ಲಿ ಊಟ ತಿಂಡಿ ಎಂಜಾಯ್ ಮಾಡುತ್ತಾ, ಮಾಡರ್ನ್ ಹಾಲ್ ಗಳಲ್ಲಿ ಕೀರ್ತನೆ ಭಜನೆ ಹಾಡುತ್ತಾ, ರತ್ನಗಂಬಳಿ ಹಾಸಿದ ಮಾರ್ಬಲ್ ನೆಲದಲ್ಲಿ ಕುಳಿತು ಧ್ಯಾನಾಸಕ್ತರಾಗಬಹುದಾಗಿದೆ.
1955-56ರಲ್ಲಿ ನೆಹರೂ ಇವರುಗಳಿಗೆ ಸ್ವಾತಂತ್ರ್ಯ ತಂದುಕೊಟ್ಟು, ಹಿಂದೂ ಕಾನೂನಿನಲ್ಲಿ ಬದಲಾವಣೆ ಮಾಡಿಸಿದ್ದೇ, ತಾಯಿ ತಂದೆ ಅದನ್ನೆಲ್ಲ ಮರೆತುಬಿಟ್ಟರು. ಹಿಂದೂ ಸವರ್ಣೀಯ ಹೆಂಗಸರಿಗೆ ಮುಸ್ಮಾನರ 3 ಬಾರಿಯ ತಲಾಖ್, ಬಹುವಿವಾಹಗಳು, ಅಗತ್ಯಕ್ಕಿಂತ ಹೆಚ್ಚು ಮಕ್ಕಳನ್ನು ಹಡೆಯುವ ಅವರುಗಳ ಕುರಿತು ಇವರಲ್ಲಿ ಗೊಂದಲ ಎಬ್ಬಿಸಲಾಯಿತು. ಆಗ ಇವರುಗಳು ತಮ್ಮ ಮೇಲಾಗುತ್ತಿರುವ ಅನ್ಯಾಯದ ವಿರುದ್ಧ ಸಿಡಿದೇಳದಿರಲಿ ಅಂತ!
ಕಾಂಗ್ರೆಸ್ ಈ ಚುನಾವಣೆಯಲ್ಲಿ ಸ್ತ್ರೀ ನ್ಯಾಯದ ಕಲ್ಪನೆ ಕಂಡಿತ್ತು. ಬಿಜೆಪಿಯ ಘೋಷಣೆ ಅಂದ್ರೆ `ವಾಡ್ಲಿ ಬೆಹನ್ ಔರ್‌ಉಜ್ವಲಾ!’ ಬಿಜೆಪಿಯ ಮತ್ತೊಂದು ಘೋಷಣೆಯಲ್ಲಿ, ಅಣ್ಣ ತಮ್ಮಂದಿರಿಗೂ ಪ್ರಾಮುಖ್ಯತೆ ನೀಡಲಾಗಿತ್ತು, ಮತ್ತೊಂದು ಕಡೆ ಹೆಂಗಸರನ್ನು ಅಡುಗೆಮನೆಗಷ್ಟೇ ಸೀಮಿತ ಎಂದು ಕಟ್ಟಿ ಹಾಕಿತು. ಇದನ್ನೇ ಅಲ್ಲವೇ ಅನಾದಿ ಕಾಲದಿಂದಲೂ ಸನಾತನ ಸಂಸ್ಕೃತಿಯ ಪುರಾಣ, ಸ್ಮೃತಿಗಳು ಮಾಡಿದ್ದು? ಇದನ್ನೇ ಎಲ್ಲಾ ಪ್ರವಚನಕಾರರು ಹೇಳುತ್ತಿರುತ್ತಾರೆ. ಬಿಜೆಪಿ ತನ್ನ ನೀತಿ ನಿಜಾಯಿತಿ, ವಾದಗಳಲ್ಲಿ ಎಲ್ಲೂ ಸಹ ಹೆಂಗಸರಿಗೆ ಸಮಾನ ಹಕ್ಕು ನೀಡುವ ಕುರಿತು ಕಿಮಕ್ ಕಮಕ್ ಎಂದಿಲ್ಲ. ಅವರುಗಳಾಡುವ ಮಾತುಗಳೆಲ್ಲ ತಲೆ ಬಾಲ ಇಲ್ಲದವುಗಳು, ಏಕೆಂದರೆ ಹೆಂಗಸರ ಪರವಾಗಿ ಮಾತನಾಡುವವರ ರೀತಿನೀತಿಗಳೇ ಬೇರೆ ಆಗಿರುತ್ತವೆ, ಅಂಥ ಮಹತ್ತರ ಅಸಲಿತನ ಇಲ್ಲವಲ್ಲ.
ಬಿಜೆಪಿಯಂತೂ ಮಹಿಳಾ ಕುಸ್ತಿಪಟುಗಳು ಬೆಳೆಯದಂತೆ ಅವರ ಏಳಿಗೆಗೆ ಮಟ್ಟ ಹಾಕಿತು, ಅದರ ಜನಕನ ಪುತ್ರನಿಗೆ ಉ.ಪ್ರದೇಶ ರಾಜ್ಯದಲ್ಲಿ ಚುನಾವಣೆಗೆ ಟಿಕೆಟ್ ಸಹ ಕೊಡಿಸಿತು, ಗೆಲ್ಲಿಸಿತು ಕೂಡಾ! ಯಾವ ಕಾನೂನು ಇಂದು ಹೆಂಗಸರಿಗೆ ಸುರಕ್ಷತೆ ಒದಗಿಸುತ್ತಿದೋ, ಅವೆಲ್ಲ 2014ಕ್ಕೆ ಮೊದಲೇ ರೂಪುಗೊಂಡಿದ್ದು. ಬಿಜೆಪಿಯಂತೂ ಕಲಂ 370, ಕೃಷಿ ಕಾನೂನು, ನೋಟು ರದ್ದಿನ ಆದೇಶ, ಹಿಂದೂ ಮುಸ್ಲಿಂ ವಿವಾದ ಹೆಚ್ಚಿಸುವ, ಲಿವ್ ಇನ್ ಹಕ್ಕನ್ನು ಇನ್ನಿಲ್ಲವಾಗಿಸುವ ಹುನ್ನಾರ ನಡೆಸುವುದರಲ್ಲಿ ಆಗಿಹೋಯಿತು.
ಹಿಂದೂ ಪರ್ಸನ್ ಕಾನೂನುಗಳಲ್ಲಿ ಸುಧಾರಣೆ ತರುವುದಿರಲಿ, ಏನೋ ಚೂರುಪಾರು ಆಗಿದ್ದ ಸುಧಾರಣೆಗಳ ವಿರುದ್ಧ ಈ ಘನ ಸರ್ಕಾರ ಸುಪ್ರೀಂ ಕೋರ್ಟಿನಲ್ಲಿ ಮೂಗು ತೂರಿಸುತ್ತಾ ಇತ್ತು. ಏಕೆಂದರೆ ಪುರಾಣಗಳಲ್ಲಿ ಹೇಳಿರುವಂತೆ ಸವರ್ಣೀಯ ಹೆಂಗಸರ ಬಳಿಯಂತೂ ಯಾವ ಹಕ್ಕು ಅಧಿಕಾರಗಳೂ ಇರಲಿಲ್ಲ. ಹಿಂದೂ ಹೆಂಗಸರಿಗೆ ಮತ್ತೆ ಮತ್ತೆ ಪತಿವ್ರತಾ ಶಿರೋಮಣಿಯರಾದ ಸೀತಾ, ದ್ರೌಪದಿ, ತಾರಾ, ಮಂಡೋದರಿ, ಅಹಲ್ಯಾರ ತರಹ ಸದಾ ತ್ಯಾಗ ಮಾಡುತ್ತಿರಿ ಎಂದಷ್ಟೇ ಮತ್ತೆ ಮತ್ತೆ ಉಪದೇಶಿಸಲಾಗುತ್ತಿದೆ. ಸಾಲದೆಂಬಂತೆ ಈ ಮೂಢನಂಬಿಕೆಗಳನ್ನು ಶಾಲಾ ಪಠ್ಯದಲ್ಲೂ ತುರುಕಲಾಗುತ್ತಿದೆ.
4 ಜೂನ್, 2024ರಂದು ಒಂದು ಬ್ರೇಕ್ ಹಾಕಲಾಗಿದೆ. ಇದು ಬ್ರೇಕ್ ಮಾತ್ರವಲ್ಲ, ಸ್ಪೀಡ್ ಬ್ರೇಕರ್ ಸಹ. ಜೊತೆಗೆ `ಸ್ಟಾಪ್’ ಎಂಬುದರ ಸಂಕೇತವೇ ಎಂಬುದನ್ನು ಈಗಲೇ ಹೇಳಲಾಗದು. ಹೆಂಗಸರಿಗೆ ಗಂಡಸರಷ್ಟೇ ಸರಿಸಮಾನ ಸ್ವಾತಂತ್ರ್ಯ ಬೇಕಿದ್ದರೆ, ಅವರು ಅದಕ್ಕೆ ಪೂರಕವಾದ ಸರ್ಕಾರವನ್ನು ಮಾತ್ರ ಆರಿಸಬೇಕು. ಆಗ ಈ ಹೆಂಗಸರು ಸರಿಸಮಾನತೆಯ ಹಕ್ಕು ಕೊಡಿಸುವವರ ಗುಣಗಾನ ಮಾಡಬಹುದೇ ಹೊರತು, ಇವರನ್ನು ಮನೆಯಿಂದ ಓಡಿಸುವವರನ್ನಲ್ಲ!
ಇದು ಎಲ್ಲಾ ಶ್ರೀಮಂತ ತಾಯಿ ತಂದೆಯರಿಗೊಂದು ಎಚ್ಚರಿಕೆಯ ಗಂಟೆ!
ಇದು ಪಬ್ಲಿಕ್ ಒತ್ತಡದ ಪರಿಣಾಮವೇ ಸರಿ, ಪುಣೆಯ ಹತ್ತಿರದ ಒಬ್ಬ ಬಿಲ್ಡರ್ ನ ಮಗನ ತಂದೆಯನ್ನು ಅರೆಸ್ಟ್ ಮಾಡಿಸಲಾಯಿತು. ಆ ಮಗರಾಯ ಒಂದು ಅತಿ ದುಬಾರಿ 2 ಕೋಟಿಗಳ ಕಾರನ್ನು 200 ಕಿ.ಮೀ.ಗಿಂತ ಹೆಚ್ಚಿನ ವೇಗದಲ್ಲಿ ನಡೆಸುತ್ತಿದ್ದ. 17ರ ಹರೆಯದ ಈ ಮಗರಾಯ, ಮೊದಲು ಪುಣೆಯ 2 ಪಬ್ಬುಗಳಲ್ಲಿ ಪುಂಡುಪೋಕರಿಗಳೊಂದಿಗೆ 50 ಸಾವಿರಕ್ಕೂ ಹೆಚ್ಚಿನ ಹೆಂಡದ ಹೊಳೆ ಹರಿಸಿ, ತನ್ನ ಗಾಡಿಯನ್ನು ಎದುರಿಗೆ ಮೋಟರ್ ಸೈಕಲ್ ನಲ್ಲಿ ಬರುತ್ತಿದ್ದ ಇಬ್ಬರು ಯುವಕರ ಮೇಲೆ ಹರಿಸಿ, ಅವರನ್ನು ಯಮಪುರಿಗೆ ಅಟ್ಟಿದ!
ಇಲ್ಲಿನ ವಿಡಂಬನೆ ಎಂದರೆ, ಇಂಥ ಅಪ್ರಾಪ್ತ ಮಗನನ್ನು ಜುಲೈನ್ ಜಸ್ಟೀಸ್ ಬೋರ್ಡ್ ನ ಜಜ್ ಎದುರು ತಂದು ನಿಲ್ಲಿಸಿದಾಗ, 300 ಶಬ್ದಗಳ ದೊಡ್ಡ ಪ್ರಬಂಧ ಬರೆಯುವ ಅತಿ ಕಠಿಣ ಶಿಕ್ಷೆ ನೀಡಿ, ಫೈನ್ ಕಟ್ಟಿಸಿಕೊಂಡು, ಬೇಲ್ ಒದಗಿಸಿ ಬಿಡುಗಡೆ ಮಾಡಲಾಯಿತು.
ಇದು ನಮ್ಮ ಸಂವಿಧಾನದ ವಾಕ್ ಸ್ವಾತಂತ್ರ್ಯದ ತಾಕತ್ತು, 2 ದಿನಗಳಲ್ಲಿ ಈ ಪ್ರಕರಣ ಹಳಸಲಾಯಿತು. ಆ ಮಗರಾಯನೇನೋ ಬಚಾವಾದ, ಆದರೆ ಅವನ ತಂದೆ, ತಾತಾ, ತಾಯಿ, ಡ್ರೈವರ್, ಪಬ್ ಮಾಲೀಕರನ್ನು ಅರೆಸ್ಟ್ ಮಾಡಲಾಯಿತು. ಇಂಥ ಸಂವಿಧಾನದ ಸ್ವಾತಂತ್ರ್ಯ ಇರದಿದ್ದರೆ, ಪೊಲೀಸರು ಇಬ್ಬರು ಮಂತ್ರಿಗಳು ಈ ಪ್ರಕರಣ ಯಾರಿಗೂ ಗೊತ್ತಾಗಬಾರದು ಎಂದು ಬಯಸಿದರೆ, ಎಷ್ಟೋ ದೇವಿ ದೇವರುಗಳನ್ನು ಪೂಜಿಸಿದ ನಂತರ, ಸತ್ತವರ ಕುಟುಂಬದವರು ಈ ಉದ್ದಂಡ, ದುಡ್ಡಿನ ಮುದಾಂಧ ಹುಡುಗ ಯಾ ಅವನ ತಾಯಿ ತಂದೆಯರನ್ನು ಮುಟ್ಟಲಿಕ್ಕೂ ಆಗುತ್ತಿರಲಿಲ್ಲ.
ಸಂವಿಧಾನದಿಂದ ಇಂಥ ವಾಕ್ ಸ್ವಾತಂತ್ರ್ಯ ದೊರಕಿದ್ದೇ, ಇದರಿಂದ ಇಡೀ ದೇಶದ ಮೊರಾಲಿಟಿಯ ಸೆನ್ಸ್ ಜಾಗೃತಗೊಂಡು, ಅದರಿಂದಾಗಿ ಇಮೇಲೆ, ಕಾರ್ಟೂನ್, ಜೋಕ್ಸ್, ಕ್ರಿಟಿಕ್ ಕಮೆಂಟ್, ಸೋಶಿಯಲ್ ಮೀಡಿಯಾ, ರೆಗ್ಯುಲರ್ ಮೀಡಿಯಾ ಹಾಗೂ ಪ್ರಿಂಟ್ ಮೀಡಿಯಾಗಳಲ್ಲಿ ಹರಡಿಹೋಗಿದೆ. ಇನ್ನೂ ನ್ಯಾಯ ಸಿಕ್ಕಿಲ್ಲ ಬಿಡಿ, ಆದರೆ ಒಂದಂತೂ ನಿಜ, ಮುಂದಿನ ಎಷ್ಟೋ ವರ್ಷಗಳ ಕಾಲ ಈ ಕುಕೃತ್ಯ ಎಸಗಿದ ಮಗರಾಯನ ಆ ಅಗ್ರವಾಲ್ ಪರಿವಾರ ಈ ಭಯಂಕರ ಕೃತ್ಯದ ಶಿಕ್ಷೆ ಎದುರಿಸಲು ಕೋರ್ಟಿಗೆ ಎಡತಾಕುತ್ತಲೇ ಇರಬೇಕು. ಇದರಲ್ಲಿ ಆ ತಲೆಕೆಟ್ಟ ಮಗರಾಯ ಸಹ ಸಾಯುತ್ತಿದ್ದ, ಆದರೆ ಅವನಿಂದಾಗಿ ಅನ್ಯಾಯವಾಗಿ ಇಬ್ಬರು ಯುವಕರು ಸತ್ತರು.
ಇಲ್ಲಿನ ವಿಡಂಬನೆ ಎಂದರೆ, ಒಬ್ಬ ಶ್ರೀಮಂತ ವ್ಯಕ್ತಿ, ಆದರೆ ರಾಜಕೀಯದಲ್ಲಿ ಝೀರೋ ಆಗಿದ್ದ ಕಾರಣ ಆ ಮಗರಾಯನ ತಂದೆಯನ್ನು ಪಬ್ಲಿಕ್ ಶೌಟಿಂಗ್ ಶೂಲಕ್ಕೇರಿಸಿತು. ಆದರೆ ಇದೇ ಪಬ್ಲಿಕ್ ಶೌಟಿಂಗ್ ಮಾತ್ರ, ಅಧಿಕಾರದ ಗದ್ದುಗೆ ಹಿಡಿದ ನೇತಾರರು ತಲಾ ಪೊಲೀಸ್ ಎನ್ ಕೌಂಟರ್ಸ್, ಬುಲ್ಡೋಝರ್ಸ್, ಜಪ್ತಿಯ ಆದೇಶ, ದೀರ್ಘ ಪ್ರಯಾಣದಲ್ಲಿ ತಮ್ಮ ವಿರೋಧಿಗಳ ಕೈಗಳಲ್ಲಿ ಶಿಕ್ಷೆ ಕೊಡಿಸುತ್ತಾರೆ ಹಾಗೂ ಅತಿ ಹೆಮ್ಮೆಯಿಂದ ಇಡೀ ದೇಶದ ನೈತಿಕ ಹೊಣೆ ಹೊತ್ತವರಂತೆ ಆಡುತ್ತಾರೆ.
ಆ್ಯಕ್ಸಿಡೆಂಟ್ ಎಂಬುದು ದೊಡ್ಡ ಅಸಾಮಾನ್ಯ ವಿಷಯವೇನಲ್ಲ. ಆದರೆ ಒಂದು ಅನ್ ರೆಜಿಸ್ಟರ್ಡ್ ದುಬಾರಿ ಕಾರನ್ನು ಇಕ್ಕಟ್ಟಾದ ಗಲ್ಲಿಗಳಲ್ಲಿ ನಡೆಸುವಂತೆ, ಅದೂ ಅಪ್ರಾಪ್ತ ತಲೆಕೆಟ್ಟವನಿಗೆ ಅವಕಾಶ ಕಲ್ಪಿಸಿದ್ದು ಮಾತ್ರ ಅಕ್ಷಮ್ಯ. ಕಾರನ್ನು ಅಡ್ಡಾದಿಡ್ಡಿಯಾಗಿ ಓಡಿಸಿ ಕಂಡವರ ಜೀವ ತೆಗೆಯಬಾರದೆಂಬ ನೈತಿಕ ಪಾಠವನ್ನು ಇಂಥವರಿಗೆ ಕಲಿಸುವವರಾರು?
ಈಗ ತಯಾರಾಗುವ ಎಲ್ಲಾ ಆಧುನಿಕ ಕಾರುಗಳಲ್ಲೂ 10 ವಿಧದ ಫೇಲೆ ಸೇಫ್ ಉಪಾಯಗಳಿವೆ, ಆದರೆ ಅದನ್ನು ನುರಿತವರು ಚಲಾಯಿಸಬೇಕಷ್ಟೆ. 17ರ ಕುಡುಕ ಮಗರಾಯನಿಗೆ ಇದು ಎಲ್ಲಿಂದ ಹೊಳೆಯಬೇಕು? ಬಿಲ್ಡರ್ ಅಪ್ಪನ ಹಣ ಉಡಾಯಿಸುವುದೊಂದೇ ಅವನಿಗೆ ಗೊತ್ತು. ಈ ಪ್ರಕರಣ ಗಮನಿಸಿದ ಮಾತ್ರಕ್ಕೆ ಇಂಥ ಅಶಡ್ಡಾಳ ಉಡಾಳರು ಪಾಠ ಕಲಿಯುತ್ತಾರೆ ಅಂತಲ್ಲ. ಇಲ್ಲಿ ಅಪರಾಧಿಗೆ ಸೂಕ್ತ ಶಿಕ್ಷೆ ಸಿಗಲಿ, ಬಿಡಲಿ, ಈ ಪ್ರಕರಣವಂತೂ ಪ್ರತಿ ಶ್ರೀಮಂತ ತಾಯಿ ತಂದೆಯರಿಗೊಂದು ಎಚ್ಚರಿಕೆಯ ಗಂಟೆ ಆಗಿದೆ, ಹಣ ಸೌಲಭ್ಯಗಳನ್ನು ಅನಗತ್ಯವಾಗಿ ಅಪ್ರಾಪ್ತರಿಗೆ ಕೊಡಬಾರದು ಎಂದು ಅವರು ತಿಳಿಯಬೇಕು.
ಏಟಿಗೆ ಎದುರೇಟು
ಬಿಜೆಪಿಯ ಘನಘೋರ ಅಂಧ ಸಮರ್ಥ ನಟಿ ಕಂಗನಾ ರಾಣವತ್, ಚುನಾವಣೆಯಲ್ಲಿ ಗೆದ್ದು 48 ಗಂಟೆಗಳೂ ಆಗಿರಲಿಲ್ಲ. ಅವಳ ಕಂದಾಚಾರದ ಛವಿಗೆ ಒಂದು ಮರೆಯಲಾಗದ ಕಲೆ ತಗಲಿತು. ಏನಾಯಿತೋ ಅದು ಖಂಡಿತಾ ಮಹಾ ತಪ್ಪು ಮಾತ್ರವಲ್ಲದೆ, ಭಯಂಕರ ಆಗಿತ್ತು. ಕಂಗನಾ ಚಂಡೀಗಢದಿಂದ ದೆಹಲಿಗೆ ಬರಲು, ಏರ್ ಪೋರ್ಟಿನಲ್ಲಿ ಸೆಕ್ಯುರಿಟಿ ಚೆಕ್ ನಲ್ಲಿದ್ದಳು. ಆಗ ಅಲ್ಲಿದ್ದ ಒಬ್ಬ ಮಹಿಳಾ ಪೊಲೀಸ್ ಗೆ ಅದೇನು ಆವೇಶ ಬಂತೋ ಏನೋ, ಎಲ್ಲರ ಮುಂದೆ ಈಕೆಯ ಕೆನ್ನೆಗೆ `ರಪ್’ ಎಂದು ಬಾರಿಸಿಯೇಬಿಟ್ಟಳು, ಅದೂ ಕಾರಣವೇ ಇಲ್ಲದೆ!
ಕೆಲವೇ ನಿಮಿಷಗಳಲ್ಲಿ ಈ ರೀತಿ ಬಾರಿಸಿದವಳು, ಸೆಂಟ್ರಲ್ ಸೆಕ್ಯುರಿಟಿ ಪೋರ್ಸ್ ನ ಒಬ್ಬ ಮಹಿಳಾ ಪೊಲೀಸ್ ಕುಲವಿಂದರ್ ಕೌರ್ ಎಂಬುದು ಸ್ಪಷ್ಟವಾಯಿತು. ಆಕೆಗೆ ಕಂಗನಾ ಕುರಿತು ಏನೋ ಹಳೆಯ ದ್ವೇಷ ಇತ್ತಂತೆ. ಆ ದ್ವೇಷಕ್ಕೆ ಕಾರಣ, ಕಂಗನಾ ತನ್ನ ಅಂಧಭಕ್ತಿಯ ದಿನಗಳಲ್ಲಿ, ಮೋದಿ ಸರ್ಕಾರ ಹೊರೆ ಹೊರಿಸಿರುವ 3 ಫಾರ್ಮಲ್ ಕಾನೂನುಗಳನ್ನು ವಿರೋಧಿಸುತ್ತಿರುವ ರೈತರು ನಾಲಾಯಕ್ ಅಂದಿದ್ದಳಂತೆ! ಕಂಗನಾ ತನ್ನ ಬ್ಲಾಗ್‌ನಲ್ಲಿ, ತಲಾ 100/ ರೂ. ಕೊಟ್ಟು ಎಷ್ಟೋ ರೈತ ಮಹಿಳೆಯರನ್ನು ಇಲ್ಲಿ ಕರೆತಂದು ಕೂರಿಸಿದ್ದಾರೆ ಎಂದು ಬರೆದಿದ್ದಳಂತೆ. ಒಂದು ವಿಧದಲ್ಲಿ ಕಂಗನಾಳ ಕಮೆಂಟ್, ಆ ಕಾನೂನುಗಳನ್ನು ಕಾನೂನುಬದ್ಧವಾಗಿ ಪ್ರತಿಭಟಿಸುತ್ತಿದ್ದ ಹೆಂಗಸರಿಗೆ ಹಾಗೆ ಹೇಳಬಾರದಿತ್ತು. ಕುಲವಿಂದರ್ ಕೌರ್ ಳ ತಾಯಿಯೂ ಆ ಪ್ರತಿಭಟನೆಯಲ್ಲಿ ಕುಳಿತಿದ್ದಳಂತೆ. ಅದಕ್ಕೆ ಪ್ರತಿಯಾಗಿ ಈಕೆ ಖುಲ್ಲಂಖುಲ್ಲ, ಆಗ ತಾನೇ ಗೆದ್ದು ಬಂದ ಹೊಸ ಸಾಂಸದೆಗೆ ಬಾರಿಸಿದ್ದಲ್ಲದೆ, ಎಲ್ಲರೆದುರು ತಾನು ಹೀಗೆ ಬಾರಿಸಿದ್ದಕ್ಕೆ, ತನಗೇನೂ ಪಶ್ಚಾತ್ತಾಪವಿಲ್ಲ ಎಂದು ಬೆಂಕಿಗೆ ತುಪ್ಪ ಸುರಿದಳು.
ಕಂಗನಾ ಮೊದಲೇ ಮಹಾ ಬಾಯಾಳಿ. ಎಷ್ಟೋ ಸಲ ಇಂಟರ್ ನೆಟ್ ನಲ್ಲಿ ತನ್ನ ಬ್ಲಾಗಿನ ಕಾರಣ ಅತಿ ಕೆಟ್ಟದಾಗಿ ಟ್ರೋಲಿಂಗ್ ಎದುರಿಸಿದ್ದಾಳೆ, ಆದರೆ ಅಂಧಭಕ್ತರ ದೊಡ್ಡ ಗುಂಪೊಂದು ಸದಾ ಅವಳ ಬೆಂಗಾವಲಿಗಿದೆ. ಆ ಕಾರಣಕ್ಕಾಗಿಯೇ ಈ ಕ್ವೀನ್ ಗೆ ಟಿಕೆಟ್ ಸಿಕ್ಕಿಬಹುದು, ಅವಳ ಅದೃಷ್ಟಕ್ಕೆ ಗೆದ್ದೂಬಿಟ್ಟಳು! ಇದು ಆ ಅಂಧಭಕ್ತರ ಪವಾಡವೇ ಸರಿ.
ಈ ಪ್ರಕರಣದಲ್ಲಿ ಅಪಾಯಕಾರಿ ವಿಷಯ ಅಂದ್ರೆ, ಯಾವ ಅಂಧಭಕ್ತರು ಕಳೆದ 20 ವರ್ಷಗಳಿಂದ ಹಿಂದೂ ಮುಸ್ಮಾನರ ಕುರಿತಾಗಿ ಇಡೀ ದೇಶದಲ್ಲಿ ಎಲ್ಲಾ ಕಡೆ ಬೆಂಕಿ ಹರಡಿದ್ದರೋ, ಅದು ಅದೇ ರೀತಿಯಲ್ಲಿ ಬ್ಯಾಕ್ ಫೈರ್ ಆಗುತ್ತದೆ ಎಂಬುದು ಇಂಥ ಘಟನೆಗಳಿಂದ ಸುಸ್ಪಷ್ಟ. ಇಂದಿರಾ ಗಾಂಧಿಯವರ ಹತ್ಯೆಗೂ ಇದೇ ಮೂಲ. ಕಂಗನಾಳ ಈ ಕಪಾಳವೋಕ್ಷ ಮುಂದೆ ಎಲ್ಲಿ, ಯಾವಾಗ ಬೇಕಾದರೂ ಮರುಕಳಿಸಬಹುದು. ಇಂಥ ಅವಘಡಗಳನ್ನು ತಪ್ಪಿಸಲಿಕ್ಕಂತೂ ಆಗದು, ಇದು ದೊಡ್ಡ ವಿಷಯವಲ್ಲ ಎಂದಾಗಿಬಿಟ್ಟಿದೆ.
ನರೇಂದ್ರ ಮೋದಿಯವರ ಸೋಲಿನಿಂದ ಕೆರಳಿದ್ದ ಅಂಧಭಕ್ತರು ಹಿಂದೂಗಳನ್ನು ಹೇಡಿ, ಸ್ವಾರ್ಥಿ, ಲೂಟಿಕೋರರು, (ಏಕೆಂದರೆ 85 ಕೋಟಿ ಮಂದಿಗೆ ಊಟ ಸಿಗುತ್ತದೆ) ಯೂಸ್ ಲೆಸ್, ನಾಲಾಯಕ್, ದ್ರೋಹಿ ಇತ್ಯಾದಿ ನಾನಾ ಹೆಸರುಗಳಿಂದ ಹೀಗಳೆದರು. ಯಾವ ಹೆಂಗಸರು ಅಯೋಧ್ಯೆಯ ರಾಮ ಮಂದಿರದ ನೆರವಿಗಾಗಿ ರಸ್ತೆಗಳ ಅಗಲೀಕರಣಕ್ಕೆ ತಮ್ಮ ಮನೆಗಳನ್ನು ಮುರಿದರೆಂದು ಟಿವಿ ಸಂದರ್ಶದಲ್ಲಿ ಹೇಳಿಕೊಂಡರೋ, ಅಂಥವರನ್ನು ನೆಟ್ ನಲ್ಲಿ ಟ್ರೋಲಿಗರು ಆಡಿಕೊಂಡರು. ಏಕೆಂದರೆ ಈ ಅಯೋಧ್ಯಾ ಸೀಟ್ ನಿಂದಲೇ ಬಿಜೆಪಿ ಕ್ಯಾಂಡಿಡೇಟ್ ಸೋತದ್ದು.
ಕಂಗನಾಳಂತೆಯೇ ಆ ಸಮಯದಲ್ಲಿ ಬಹಳಷ್ಟು ಅಂಧಭಕ್ತರು ಹೀಗೆ ತಮ್ಮ ಬಾಯಿ ಹರಿಬಿಟ್ಟಿದ್ದರು. ಇಂದೂ ಸಹ ಟಿವಿ ಆ್ಯಂಕರುಗಳಲ್ಲಿ ಅಂಜನಾ ಕಶ್ಯಪ್, ರುಬಿಯಾ ಲಿಯಾಕತ್, ಚಿತ್ರಾ ತ್ರಿಪಾಠಿಯಂಥವರು ಈ ತರಹದ ಟ್ರೋಲಿಂಗ್ ಎದುರಿಸುತ್ತಿರುತ್ತಾರೆ. ಯಾವ ಹೆಂಗಸರು, ಹೆಂಗಸರ ವಿರೋಧಿ ಅಜೆಂಡಾಗಳಿಗೆ ಸಪೋರ್ಬ್ ಮಾಡುತ್ತಾರೋ, ಹೀಗೆ ಎಲ್ಲರೆದರು ಹಿಂಸೆ ಸಹಿಸಬೇಕಾಗುತ್ತದೆ.





