ಶರತ್ ಚಂದ್ರ
ಕಳೆದ ವರ್ಷ ಕ್ರಿಸ್ಮಸ್ ಸಮಯದಲ್ಲಿ ಬಿಡುಗಡೆಯಾದ ಸುದೀಪ್ ಅಭಿನಯದ ಮ್ಯಾಕ್ಸ್ ಕನ್ನಡದ ಅತೀ ಯಶಸ್ವಿ ಚಿತ್ರ ವಾಗಿ ಹೊರಹೊಮ್ಮಿತ್ತು.ಒಂದು ರಾತ್ರಿಯಲ್ಲಿ ನಡೆಯುವ ಕಥೆಯನ್ನು ಡೈರೆಕ್ಟರ್ ವಿಜಯ ಕಾರ್ತಿಕೇಯನ್ ತುಂಬಾ ಕುತೂಹಲಕಾರಿಯಾಗಿ ನಿರ್ದೇಶಿಸಿದ್ದರು.
ಈ ವರ್ಷ ಮತ್ತೆ ಮ್ಯಾಕ್ಸ್ ಚಿತ್ರ ನಿರ್ಮಿಸಿದ ನಿರ್ಮಾಪಕರು ಮಾರ್ಕ್ ಎಂಬ ಚಿತ್ರ ನಿರ್ಮಿಸಿ ಅನೌನ್ಸ್ ಮಾಡಿರುವ ದಿನಾಂಕದಂದು ಬಿಡುಗಡೆ ಮಾಡುತ್ತಿರುವುದು ನಿಮಗೆಲ್ಲಾ ಗೊತ್ತಿದೆ.
ಮ್ಯಾಕ್ಸ್ ಚಿತ್ರದ ಕೇಂದ್ರ ಬಿಂದು ಸುದೀಪ್ ಆಗಿದ್ದರೂ ಕೂಡ ಚಿತ್ರದಲ್ಲಿ ಪೋಷಕ ನಟರ ಒಂದು ದೊಡ್ಡ ತಂಡವೇ ಇತ್ತು. ಈ ಪೋಷಕ ನಟರ ಉತ್ತಮ ಅಭಿನಯ ಕೂಡ ಚಿತ್ರ ಸಾಕಷ್ಟು ಉತ್ತಮವಾಗಿ ಬರಲು ಕಾರಣವಾಗಿತ್ತು. ಅದರಲ್ಲಿ ವಿಶೇಷವಾಗಿ ತೆಲುಗು ನಟ ಸುನಿಲ್ ಖಳ ನಟನಾಗಿ ನೀಡಿದ ಅಭಿನಯ, ಉಗ್ರಂ ಮಂಜು, ಸುಕ್ರತ ವಾಗ್ಲೆ, ಸಂಯುಕ್ತ ಹೊರನಾಡು ಪ್ರಮೋದ್ ಶೆಟ್ಟಿ ಅಲ್ಲದೆ ಒಂದಷ್ಟು ತಮಿಳು ಕಲಾವಿದರು ಕೂಡ ನಟಿಸಿದ್ದರು.

ಅದರಲ್ಲಿ ವಿಶೇಷವಾಗಿ ಕರೆಫ್ಟ್ ಪೊಲೀಸ್ ಅಧಿಕಾರಿ ಯಾಗಿ ನಟಿಸಿದ ವರಲಕ್ಷ್ಮಿ ಶರತ್ ಪಾತ್ರ ಕೂಡ ಜನಕ್ಕೆ ತುಂಬಾ ಇಷ್ಟ ಆಗಿತ್ತು. ಈ ಬಾರಿ ಕೂಡ ಮಾರ್ಕ್ ಚಿತ್ರದಲ್ಲಿ ಒಂದಷ್ಟು ತಮಿಳು ಕಲಾವಿದರ ಜೊತೆ ನಮ್ಮ ಕನ್ನಡದ ಪೋಷಕ ಕಲಾವಿದರು ಈ ಚಿತ್ರದಲ್ಲಿ ಕೆಲಸ ಮಾಡಿದ್ದಾರೆ .
ಮ್ಯಾಕ್ಸ್ ಚಿತ್ರದಂತೆ ಈ ಚಿತ್ರದಲ್ಲಿ ಕೂಡ ಸುದೀಪ್ ಪೊಲೀಸ್ ಇನ್ಸ್ಪೆಕ್ಟರ್ ಪಾತ್ರ ವಹಿಸುತ್ತಿದ್ದೂ ಅಜಯ್ ಮಾರ್ಕಂಡೇಯ ಅಲಿಯಾಸ್ ಮಾರ್ಕ್ ಆಗಿ, ಮಕ್ಕಳ ಕಿಡ್ನಾಪ್ ಕೇಸನ್ನು 18 ಗಂಟೆ ಒಳಗಡೆ ಸಾಲ್ವ್ ಮಾಡುವ ಅಧಿಕಾರಿಯಾಗಿ ಪಾತ್ರ ನಿರ್ವಹಿಸುತ್ತಿದ್ದಾರೆ.

ಮ್ಯಾಕ್ಸ್ ಚಿತ್ರದಂತೆ ಅವರ ಪೊಲೀಸ್ ತಂಡದಲ್ಲಿ ಬರುವ ಒಂದಷ್ಟು ಪಾತ್ರಗಳನ್ನು ಈ ಬಾರಿ ಬೇರೆ ಬೇರೆ ಕಲಾವಿದರು ನಿರ್ವಹಿಸಿದ್ದಾರೆ. ಮ್ಯಾಕ್ಸ್ ಚಿತ್ರದಂತೆ ಈ ಚಿತ್ರದಲ್ಲಿ ಕೂಡ ಪೋಷಕ ಪಾತ್ರಗಳಿಗೆ ಹೆಚ್ಚು ಅವಕಾಶ ಇದೆಯಂತೆ. ಈ ಬಾರಿ ನವೀನ್ ಚಂದ್ರ, ಬಾಲಿವುಡ್ ನ ದೀಪ್ಸಿಕಾ ಕನ್ನಡದ ಪ್ರತಿಭೆಗಳಾದ ರೋಷನಿ ಪ್ರಕಾಶ್, ಅರ್ಚನ ಕೊಟ್ಟಿಗೆ, ಗೋಪಾಲಕೃಷ್ಣ ದೇಶಪಾಂಡೆ, ಮಹಾಂತೇಶ್ ಹಿರೇಮಠ, ಮುಂತಾದ ಕಲಾವಿದರಲ್ಲದೆ ಕಾಲಿವುಡ್ ನ ಜನಪ್ರಿಯ ಹಾಸ್ಯ ನಟ ಯೋಗಿ ಬಾಬು ತಮ್ಮ ಕಾಮಿಡಿ ಮೂಲಕ ತಮ್ಮನ್ನು ರಂಜಿಸಲಿದ್ದಾರೆ.

ಈಗಾಗಲೇ ಟ್ರೆಂಡಿಂಗ್ನಲ್ಲಿರುವ ಮಸ್ತ್ ಮಲೈಕಾ ಹಾಡಿಗೆ ಸಕತ್ತಾಗಿ ಸ್ಟೆಪ್ಸ್ ಹಾಕಿರುವ ನಿಶ್ವಿಕಾ ನಾಯ್ಡು ಅತಿಥಿ ಪಾತ್ರ ಮಾಡಿದ್ದಾರೆ. ಒಟ್ಟಿನಲ್ಲಿ ಇತ್ತೀಚೆಗೆ ಬರುವ ಚಿತ್ರಗಳಲ್ಲಿ ಒಂದೇ ಸಿನಿಮಾದಲ್ಲಿ ಹೆಚ್ಚಿನ ಪೋಷಕ ಪಾತ್ರರಿಗೆ ಅವಕಾಶಗಳು ಇರುವುದು ಕಡಿಮೆ.

ಮಾರ್ಕ್ ಚಿತ್ರ ತಮಿಳು ಮತ್ತು ಬೇರೆ ಭಾಷೆಗಳಲ್ಲಿ ಕೂಡ ಬಿಡುಗಡೆಯಾಗುವುದರಿಂದ ಹಾಗೂ ನಿರ್ದೇಶಕರು ಕೂಡ ತಮಿಳಿನಿಂದ ಬಂದಿರುವುದರಿಂದ ಒಂದಷ್ಟು ತಮಿಳು ಕಲಾವಿದರನ್ನು ಜೊತೆಗೆ ನಮ್ಮ ಕನ್ನಡದ ಕಲಾವಿದರನ್ನು ಹೆಚ್ಚಾಗಿ ಈ ಚಿತ್ರದಲ್ಲಿ ಬಳಸಿಕೊಳ್ಳಲಾಗಿದೆ





