ಅಪೂರ್ಣ ಜ್ಞಾನ ನೀಡುವ ಮೊಬೈಲ್
ಸೋಶಿಯಲ್ ಮೀಡಿಯಾ ಇಂದು ಸಾಮಾನ್ಯ ಜನರನ್ನು ಅದರಲ್ಲೂ ಹೆಣ್ಣುಮಕ್ಕಳು, ಪ್ರೌಢರನ್ನು ದಾರಿ ತಪ್ಪಿಸುತ್ತಿದೆ. ತಾವು ಮೊಬೈಲ್ ಸ್ಕ್ರೀನ್ ನಲ್ಲಿ ನೋಡುತ್ತಿರುವುದೆಲ್ಲ ಅಪ್ಪಟ ಸತ್ಯ ಎಂದೇ ಅವರು ಭಾವಿಸುತ್ತಾರೆ. ಅದುವೇ ವೇದವಾಕ್ಯ, ಅದುವೇ ಧರ್ಮಾದೀಶ ಎಂಬ ಭ್ರಮೆಯಲ್ಲಿದ್ದಾರೆ. ಇಂಥ ಮೆಸೇಜ್ ಗಳನ್ನು ಇವರಿಗೆ ಕಳಿಸಿದರು ಅದು ಎಷ್ಟು ಸತ್ಯ ಎಂದು ಚಿಂತಿಸುವುದಿಲ್ಲ. ಅವರು ಇವರದೇ ಆಲೋಚನೆಯವರೇ, ವರ್ಗದವರೇ, ಹಿತಚಿಂತಕರೇ…. ಒಂದೂ ಗೊತ್ತಿಲ್ಲ. ಸೋಶಿಯಲ್ ಮೀಡಿಯ ಇಂದು ಕೋಟ್ಯಂತರ ಮಂದಿಯನ್ನು ಮುಟ್ಟುತ್ತಿರಬಹುದು, ನಿಮ್ಮನ್ನು ನಂಬಿದವರು ನಿಮ್ಮ ಮೆಸೇಜ್ ಫಾಲೋ ಮಾಡಬಹುದಷ್ಟೆ.
ಸೋಶಿಯಲ್ ಮೀಡಿಯಾದ ಸೋಜಿಗವೆಂದರೆ ಯಾರೂ ಅದನ್ನು ಎಡಿಟ್ ಮಾಡುವುದಿಲ್ಲ, ಸರಿ/ತಪ್ಪು ಪರೀಕ್ಷಿಸುವುದಿಲ್ಲ. ಕಮೆಂಟ್ಸ್ ರೂಪದಲ್ಲಿ ಬೈಗುಳದ ಮಳೆ ಸುರಿಸಬಹುದು. ಸೋಶಿಯಲ್ ಮೀಡಿಯಾವನ್ನು ಮಾಹಿತಿಯ ಮೂಲಾಧಾರ ಎಂದುಕೊಳ್ಳುವುದು ಮಹಾ ತಪ್ಪು. ಇದು ದಿಶಾಹೀನ, ಭ್ರಾಮಕ, ಸುಳ್ಳು, ಗೊಂದಲಗಳ ಗೂಡವಾಗಿದೆ. ಇದು ನೀಡುತ್ತಿರುವ ಮಾಹಿತಿ ಎಲ್ಲಾ ಅಪೂರ್ಣ!
ಇದರ ಪರಿಣಾಮವಾಗಿ ಸಂಪಾದಿಸುವ ಸುಶಿಕ್ಷಿತ ಹೆಂಗಸರೂ ಸಹ ಬದಲಾಗುತ್ತಿರುವ ಸಮಾಜದ ಕುರಿತಾಗಿ ಏನೂ ಅರಿತುಕೊಳ್ಳುತ್ತಿಲ್ಲ, ಆ ಬಗ್ಗೆ ಹೇಳುತ್ತಿಲ್ಲ, ಅಥವಾ ಏನೂ ಮಾಡಲಾಗುತ್ತಿಲ್ಲ. ಏಕೆಂದರೆ ಇವರಿಗೆ ಸಿಗುತ್ತಿರುವ ಇಂಥ ಪ್ರತಿ ಮಾಹಿತಿಯೂ ಅಪೂರ್ಣ! ಯಾರಿಗೆ ಯಾವುದರ ಬಗ್ಗೆ ಸರಿಯಾಗಿ ಗೊತ್ತಿಲ್ಲವೋ ಅಂಥವರು ಕಳಿಸಿದ್ದನ್ನೇ ಇವರು ನಂಬುತ್ತಿದ್ದಾರೆ. ಎಲ್ಲಾ ಪ್ಲಾಟ್ ಫಾರ್ಮ್ ಗಳಲ್ಲೂ ನೀವು ಪದೇ ಪದೇ ಅಂಥದ್ದೇ ಪೋಸ್ಟ್ ನೋಡಬಹುದು, ಇದನ್ನೇ ಎಲ್ಲರೂ ಫಾಲೋ ಮಾಡುತ್ತಾರೆ. ಎಲ್ಲಿ ಹೆಂಗಸರ ಹಕ್ಕಿನ ಕುರಿತಾಗಿ ವಿಷಯ ಬರುತ್ತದೋ, ಅದು ತಂತಾನೇ ಅಡಗಿ ಹೋಗುತ್ತದೆ. ಏಕೆಂದರೆ ಅಂಥವನ್ನು ಯಾರೂ ಫಾರ್ವರ್ಡ್ ಮಾಡುವುದಿಲ್ಲ. ಹೆಂಗಸರ ಸಮಸ್ಯೆಗಳು ಒಂದೆರಡಲ್ಲ. ಇಂದಿಗೂ ಸ್ತ್ರೀ ಭ್ರೂಣ ಹತ್ಯೆ ನಿಂತಿಲ್ಲ, ಹುಟ್ಟಿದ ಹೆಣ್ಣು ಮಗು ಭಯದಲ್ಲೇ ಬದುಕಬೇಕು. ಅವಳಿಗೆ ಗುಡ್ ಟಚ್ ಬ್ಯಾಡ್ ಟಚ್ ಗಳ ಬಗ್ಗೆ ಹೇಳಿ ಹೇಳಿ ಭಯಪಡಿಸುತ್ತಾರೆ. ಅವಳಿಗೆ ಮೊಬೈಲ್ ನೀಡಿ ಕಾರ್ಟೂನ್, ಸಿನಿಮಾ ಸಾಗರದ ಮಧ್ಯೆ ದೂಡಲಾಗುತ್ತದೆ. ಹೊರಗೆ ನಡೆಯುವ ವೈಲೆನ್ಸ್ ಸೀನ್ಸ್ ನೋಡಿ ನೋಡಿ ಅವಳು ಸದಾ ಭಯಪಡುತ್ತಾಳೆ. ಪ್ರತಿ ಕ್ಷಣ ಅವಳು ಅತ್ತಿತ್ತ ಸುಳಿಯದಂತೆ ಮನೆಯಲ್ಲಿ ಸರ್ಪಗಾವಲಿರುತ್ತದೆ. ಹೊರಗಿನ ಪ್ರಾಪಂಚಿಕ ಜೀವನ ಹೇಗಿರುತ್ತದೆ ಎಂಬ ಕಲ್ಪನೆಯೇ ಅವಳಿಗಿರುವುದಿಲ್ಲ.
ನಮ್ಮ ಪಠ್ಯ ಪುಸ್ತಕಗಳು ಇತ್ತೀಚೆಗೆ ಬಿಲ್ ಕುಲ್ ಖಾಲಿ ಅಥವಾ ಭಗವಾ ಪಬ್ಲಿಸಿಟಿಯ ಮೂಲ ಆಗಿವೆ. ಅದರಿಂದ ನಾವು ಬದುಕು ಕಲೆ ಕಲಿಯಲು ಸಾಧ್ಯವಿಲ್ಲ. ಮನೆಗಳಲ್ಲಿ ಮೊಬೈಲ್‌ಸೋಶಿಯಲ್ ಮೀಡಿಯಾ ಕಾರಣ ಪರಸ್ಪರ ಮಾತುಕಥೆಯೇ ನಡೆಯುತ್ತಿಲ್ಲ. ಅಪರಿಚಿತರ ರೀಲ್ಸ್ ಹಾಗೂ ಅರೆಬರೆ ಮಾಹಿತಿಗಳ ಪೋಸ್ಟ್ ಗಳಿಂದಾಗಿ, ಮನೆ ಮಂದಿ ಹೇಗೆ ವಾಸಿಸುತ್ತಿದ್ದಾರೆ, ಏನು ಯೋಚಿಸುತ್ತಿದ್ದಾರೆ, ಏನು ಮಾಡುತ್ತಿದ್ದಾರೆ ಒಂದೂ ತಿಳಿಯುತ್ತಿಲ್ಲ. ಈ ಮಾತುರಹಿತ ವಾತಾವರಣ ಮನೆಗಳನ್ನು ವಿವಾದದ ಜಡವಾಗಿಸಿದೆ. ಯಾರೂ ಪರಸ್ಪರರನ್ನು ಅರಿಯಲು ಯತ್ನಿಸುತ್ತಿಲ್ಲ. ಏಕೆಂದರೆ ಮೊಬೈಲ್ ನಲ್ಲಿ ಕಂಡವರೊಂದಿಗೆ ಮಾತಿನಲ್ಲೇ ಕಾಲ ಕಳೆಯುತ್ತದೆ. ಅದರಿಂದ ಜೀವನಕ್ಕೆ ಲಾಭವಿದೆಯೇ? ಇಲ್ಲ. ಕೇವಲ ಟೈಂಪಾಸ್.
ಧರ್ಮದ ದಲ್ಲಾಳಿಗಳು ಇದರ ಲಾಭ ಪಡೆದುಕೊಳ್ಳುತ್ತಿದ್ದಾರೆ. ಅವರು ರೀಲ್ಸ್ ರೂಪದಲ್ಲಿ ಆರತಿ, ಕೀರ್ತನೆ, ಭಜನೆ, ಧಾರ್ಮಿಕ ಉಪದೇಶ, ಪ್ರವಚನ, ಬಾಬಾಗಳ ಮಹಿಮೆ, ಭವಿಷ್ಯವಾಣಿ, ಸಂಪ್ರದಾಯದ ಹೆಸರಿನಲ್ಲಿ ತಲೆ ಬಾಲ ಇಲ್ಲದ ಪೋಸ್ಟ್ ಹಾಕುತ್ತಿರುತ್ತಾರೆ. ಸೋಶಿಯಲ್ ಮೀಡಿಯಾ ಒಂದು ಬಲವಾದ ಮಾಧ್ಯಮ ಆಗಿರುವುದರಿಂದ, ಅದನ್ನು ನೋಡುವವರಿಗೆ ಸತ್ಯ ಸುಳ್ಳು ಗೊತ್ತೇ ಆಗುವುದಿಲ್ಲ. ಇದು ಹೆಂಗಸರನ್ನು ಹೆಚ್ಚು ಭಯಭೀತರನ್ನಾಗಿಸುತ್ತಾರೆ. ಏಕೆಂದರೆ ಇಂದಿಗೂ ಅವರಿಗೆ ತಮ್ಮ ಪತಿ ಯಾ ಬಾಯ್ ಫ್ರೆಂಡ್ ಮೋಸ ಮಾಡಿಬಿಟ್ಟರೆ ಎಂಬ ಆತಂಕ ತಪ್ಪಿಲ್ಲ. ಹೆಂಗಸರು ಈಗ ಏನು ಹೇಳಬೇಕಿದೆಯೋ ಅದನ್ನು ಅವರಿಂದ ಹೇಳಲಾಗುತ್ತಿಲ್ಲ. ಏಕೆಂದರೆ ಗಂಭೀರವಾಗಿ ವಿಷಯ ಹೇಳಿಕೊಳ್ಳಬಹುದಾದಂಥ ಪ್ಲಾಟ್ ಫಾರ್ಮ್ಸ್ ಈಗ ಕಡಿಮೆ ಆಗುತ್ತಿವೆ. ಬ್ಲಾಗರ್ಸ್ ಸಹ ಅದನ್ನು ಇನ್ ಸ್ಟಾಗ್ರಾಂ ಯೂಟ್ಯೂಬ್ ಗಳ ಶಾರ್ಟ್ ರೀಲ್ಸ್ ನ ಅನಗತ್ಯ ಹರಟೆ, ಅರ್ಥಹೀನ ಡ್ರೆಸ್ ಡಿಸೈನ್ಸ್, ಹುಚ್ಚುಚ್ಚು ಕುಣಿತಗಳ ಭಂಡಾರ ಆಗಿಸಿಕೊಂಡಿದ್ದಾರೆ.
ಬದುಕು ನಡೆಯುವುದು ಭೌತಿಕ ವಸ್ತುಗಳಿಂದ. ಕೇವಲ ಮೆಸೇಜುಗಳಲ್ಲಿ ಒಂದಿಷ್ಟು ಓದಿ, ಫೋಟೋ, ವಿಡಿಯೋ ನೋಡಿದ ಮಾತ್ರಕ್ಕೆ ಆಗಿಹೋಗಲಿಲ್ಲ. ಪ್ರತಿಯೊಂದನ್ನೂ ಪ್ರಾಯೋಗಿಕವಾಗಿ ಮಾಡಬೇಕೇ ಹೊರತು ವರ್ಚುಯಲ್ ಆಗಿ ಕುಕರಿ ವಿಡಿಯೋ ನೋಡಿದರೆ ಹೊಟ್ಟೆ ತುಂಬುತ್ತಿದೆಯೇ? ಇಂದು ನಮ್ಮನ್ನು ಸುತ್ತುವರೆದಿರುವ ವಸ್ತುಗಳೆಲ್ಲ ಭೌತಿಕ ಕೊಡುಗೆಗಳಾಗಿವೆ. ಈ ಮೊಬೈಲ್ ಸಹ ಫಿಜಿಕಲಿ ಕಟ್ಟಲ್ಪಟ್ಟ ಎಂಜಿನಿಯರಿಂಗ್ ಯಂತ್ರ ತುಂಬಿದ ಕಾರ್ಖಾನೆಗಳ ಕೊಡುಗೆಯೇ ಸರಿ. ಈ ಫಿಜಿಕಲ್ ವರ್ಲ್ಡ್ ಮರೆತು ವರ್ಚುಯಲ್ ವರ್ಲ್ಡ್ ನಲ್ಲಿ ಮುಳುಗಿ ಹೋಗುವುದು ಅಂದ್ರೆ, ಒಂದು ರೀತಿಯಲ್ಲಿ ಧರ್ಮದ ವಿಜಯವೇ ಸರಿ. ಅಂದರೆ ಭಕ್ತರು ಕೆಲಸ ಮಾಡಬೇಕು, ಫಿಜಿಕಲಿ ಗಳಿಸಿದ ಹಣ, ಸಾಧನಗಳನ್ನು ಮಠಾಧೀಶರಿಗೆ ಒಪ್ಪಿಸಿ ಬಿಡಬೇಕು. ಸದಾ ದೇವರ ಮುಂದೆ ಮಂಡಿಯೂರಿ, ಹುಂಡಿಗೆ ಕಾಣಿಕೆ ಹಣ ತುಂಬಿಸುತ್ತಾ ಇರಬೇಕು!
ಫಿಜಿಕಲ್ ವರ್ಲ್ಡ್ ನ ಲಾಸ್ ಹೆಣ್ಣುಮಕ್ಕಳಿಗೆ ಕಟ್ಟಿಟ್ಟ ಬುತ್ತಿ. ಎಲ್ಲಾ ವಯಸ್ಸಿನವರಿಗೂ ಇದು ಅನ್ವಯ. ಇವರ ಬಳಿ ಈಗ ತಮ್ಮವರೆನ್ನುವವರು ಯಾರೂ ಇಲ್ಲ. ಕೇವಲ ಮೆಸೇಜ್ ಗಳಲ್ಲಿ ರಾಶಿ ರಾಶಿ ಬರುವ ಸಂದೇಶ, ಫೋಟೋ, ಶುಭಾಶಯ ಇತ್ಯಾದಿ ಬಿಟ್ಟರೆ ಬೇರೇನೂ ಇಲ್ಲ. ಅಂಬಾನಿ, ಅಡಾನಿ, ಇಲಾನ್ ಮಸ್ಕ್ ಮುಂತಾದವರನ್ನು ಮರೆತುಬಿಡಿ. ಅವರು ಧಾರ್ಮಿಕ ಕಾನ್ಸ್ ಪಿರೆಸಿಯ ಭಾಗವಾಗಿದ್ದಾರೆ, ಹೆಂಗಸರ ಹಿತಶತ್ರುಗಳಾಗಿದ್ದಾರೆ. ಹೆಣ್ಣನ್ನು ಕುಣಿಸಲು, ತಮ್ಮ ಸಂಪತ್ತು ಪ್ರದರ್ಶಿಸಲಿಕ್ಕಷ್ಟೇ ತಮ್ಮ ಬಳಿ ಇರಿಸಿಕೊಳ್ಳುತ್ತಾರೆ.
ದತ್ತಕ ಕಾನೂನು ಸರಳವಾಗಲಿ
ನವಜಾತ ಶಿಶುಗಳ ಖರೀದಿ ಪ್ರಕರಣ ಮಾಮೂಲು. ಇದಕ್ಕಾಗಿ ಯಾರೂ ಆಶ್ಚರ್ಯ ಪಡಬೇಕಿಲ್ಲ. ಒಂದು ಅತ್ಯಗತ್ಯ ಸಾಮಾನ್ಯ, ನೈತಿಕ, ಮಾನವೀಯ ಅವಶ್ಯಕತೆ ಇರುವಂಥ ಕಾನೂನಿನ ಅಂತರ್ಗತ ಇದನ್ನು ಅಸಿಂಧು ಎಂದು ಘೋಷಿಸಿ, ಇದನ್ನು ಬ್ಲ್ಯಾಕ್ ಮಾರ್ಕೆಟ್‌ಗೆ ತಳ್ಳಲಾಗಿದೆ. ಸಂತಾನಹೀನ ದಂಪತಿ ಸಹಜವಾಗಿಯೇ ಯಾವುದಾದರೂ ಮಗುವನ್ನು ದತ್ತಕ್ಕೆ ಪಡೆಯಲು ಬಯಸುತ್ತಾರೆ. ನೆಂಟರಿಷ್ಟರಲ್ಲಿ ಅದು ಸಿಗದಿದ್ದಾಗ ದೂರ ಪ್ರದೇಶದಿಂದ ಅಪರಿಚಿತ ಮಗುವನ್ನು ತಂದು ಸಾಕುವುದೇ ಉಳಿದ ಉಪಾಯವಾಗಿದೆ.
ಸರ್ಕಾರ ಈ ದತ್ತಕ ಪ್ರಕ್ರಿಯೆಯನ್ನು ಬಹಳ ಜಟಿಲ ಆಗಿಸಿದೆ. ಮಾನವರ ಕದ್ದು ಸಾಗಾಣಿಕೆ, ಮಕ್ಕಳಿಂದ ಭಿಕ್ಷಾಟನೆ ಮಾಡಿಸು, ಕಾರ್ಖಾನೆಗಳಲ್ಲಿ ಅವರಿಂದ ಬಿಟ್ಟಿ ದುಡಿಸಿಕೊಳ್ಳುವ, ಅವರನ್ನು ಸೂಳೆಗೇರಿ ಸೇರದಂತೆ ತಡೆಯುವ ಹೆಸರಿನಲ್ಲಿ ಹೇರಲಾಗಿರುವ ಕಾನೂನು, ನಿಜಕ್ಕೂ ದತ್ತು ಮಗು ಬೇಕೆಂದು ಬಯಸುವವರಿಗೆ ಹಿಂಸಾತ್ಮಕವಾಗಿದೆ.
ಒಂದು ನವಜಾತ ಶಿಶುವನ್ನು ಖರೀದಿಸಿ, ನಕಲಿ ಡಾಕ್ಯುಮೆಂಟ್ಸ್ ನಿಂದ ಅದನ್ನು ತನ್ನದೆಂದು ಘೋಷಿಸುವುದು ಬಲು ಸುಲಭ, ವ್ಯಾವಹಾರಿಕ ಹೌದು. ಇದನ್ನು ಅನೈತಿಕ ಎಂದೂ ಹೇಳಲಾಗದು. ಏಕೆಂದರೆ ಮಗು ಖರೀದಿಸಿದ್ದೇ ಆಗಿರಲಿ, ತನ್ನದೇ ಆಗಿರಲಿ, ಅದನ್ನು ಬೆಳೆಸಿ ದೊಡ್ಡದು ಮಾಡಲು ಅಷ್ಟೇ ಹಣ ತಗುಲುತ್ತದೆ. ಹೊರಗಿನ ಮಗು ಒಮ್ಮೆ ನಮ್ಮ ಮನೆ ಪ್ರವೇಶಿಸಿದರೆ, ಅದು ನಮ್ಮದೇ ಆಗಿಬಿಡುತ್ತದೆ.
ಮಗು ತಮ್ಮ ಸಾಂಪ್ರದಾಯಿಕ ಮದುವೆಯಿಂದ ಆಗಿರಲಿ, ದತ್ತಕವೇ ಆಗಿರಲಿ, ಇದು ಸಮಾಜದ ಕೊಡುಗೆ. ರಕ್ತ ಸಂಬಂಧ ಇಲ್ಲದೆ ಪತಿಪತ್ನಿ ಒಂದಾಗುವಂತೆ ಹೊರಗಿನ ಮಗು ನಮ್ಮದಾಗುತ್ತದೆ. ಪತಿ ಪತ್ನಿಯನ್ನೂ ಸಮಾಜ ಸಂಗಾತಿಗಳು ಎಂದು ಒಪ್ಪುವುದರಿಂದ, ಜೀವನ ಸಲೀಸಾಗಿ ನಡೆಯುತ್ತದೆ. ಏಕೆಂದರೆ ಒಬ್ಬರು ಅಪರಿಚಿತ ವ್ಯಕ್ತಿಗಳು ಒಟ್ಟಿಗೆ ವಾಸಿಸುವುದನ್ನು ಈ ಸಮಾಜ ಬಿಟ್ಟೀತೇ? ಎಲ್ಲಿಯವರೆಗೆ ದೇಹದ ಹಸಿವು ಇರುತ್ತದೋ, ಪರಸ್ಪರರಿಂದ ಕೊಡುಕೊಳ್ಳುವುದು ಇರುತ್ತದೋ ಅಲ್ಲಿಯವರೆಗೂ ಸರಿ, ಇಲ್ಲದಿದ್ದರೆ ಇದೆಂಥ ಮದುವೆ…. ಎಂಥ ಸಂಬಂಧ? ಒಂದು ಶ್ರದ್ಧೆಯ ಕಾರಣ ಪತಿ ಪತ್ನಿ ನಡುವೆ ಬೆಲೆಯು ಸಂಬಂಧ ಅದು ದತ್ತಕ ಪಡೆದ ಮಗು ಕೊಂಡದ್ದೇ ಆಗಿರಲಿ, ನೆಂಟರಿಂದ ಶಾಸ್ತ್ರೋಕ್ತವಾಗಿ ದತ್ತಕ ಪಡೆದದ್ದೇ ಆಗಿರಲಿ…. ಎಲ್ಲಾ ಒಂದೇ! ಒಂದು ಸಲ ಮಗು ನಮ್ಮ ಮನೆಗೆ ಬಂದ ಮೇಲೆ ಅದು ನಮ್ಮದೇ ಆಗಿಹೋಗುತ್ತದೆ.
ಆದಿವಾಸಿಗಳಿಂದ ಸುಲಭವಾಗಿ ಮಗು ಖರೀದಿಸಬಹುದಾಗಿದೆ, ಈ ಮಾತನ್ನು ಸೆನ್ಸೇಶನ್ ಗೊಳಿಸಿ, ದತ್ತಕ ಪಡೆಯಬಯಸುವ ಸಾವಿರಾರು ಸಂತಾನಹೀನ ದಂಪತಿಗಳಿಗೆ ನಿರಾಸೆ ಉಂಟು ಮಾಡಲಾಗುತ್ತಿದೆ. ಅಂಥ ಮಗುವಿನ ಬಣ್ಣ, ಚಹರೆ, ದೈಹಿಕ ರೂಪುರೇಷೆ ಭಿನ್ನವಾಗಿದ್ದರೂ ತಪ್ಪೇನು…?
ಆದಿವಾಸಿಗಳಲ್ಲಿ ಈಗಲೂ ಮಕ್ಕಳಾಗುತ್ತಿವೆ, ಏಕೆಂದರೆ ಅವರಲ್ಲಿ ಬರ್ತ್ ಕಂಟ್ರೋಲ್ ನ ವಿಧಾನ ಗೊತ್ತಿಲ್ಲ, ಬೇಕಾಗಿಯೂ ಇಲ್ಲ. ಅವರಲ್ಲಿ ಮಗು ಹುಟ್ಟುವುದು ಎಂದರೆ ಬಲು ಸಹಜ ಪ್ರಕ್ರಿಯೆ. ಅದನ್ನು ಯಾರಿಗಾದರೂ ಮಾರಿ ಹಣದ ಲಾಭ ಪಡೆಯಬಾರದೇಕೆ? ಒಮ್ಮೊಮ್ಮೆ ಹಾಗೆಯೇ ಅದನ್ನು ಕೊಟ್ಟುಬಿಡುವುದೂ ಇಂಟು. ದೇಶಾದ್ಯಂತ ಮನೆಗೆಲಸಕ್ಕೆಂದು ಬರುವ ಹುಡುಗಿಯರು ಆದಿವಾಸಿ ಕ್ಷೇತ್ರಗಳಿಂದಲೇ ಬಂದಿರುತ್ತಾರೆ, ಅವರು ದೂರ ಹೋಗುವುದರಿಂದ ಹೆತ್ತವರಿಗೇನೂ ನಷ್ಟವಿಲ್ಲ.
ಇಂದಿನ ತುರ್ತು ಅಗತ್ಯ ಎಂದರೆ ಈ ದತ್ತಕದ ಕಾನೂನು ಎಷ್ಟು ಸರಳವಾದರೆ ಅಷ್ಟು ಲೇಸು, ಅದರಿಂದ ಲಾಸ್ ಆದರೂ ಚಿಂತೆ ಇಲ್ಲ. ಇದನ್ನು ಜಟಿಲಗೊಳಿಸುವುದರಿಂದ ಹ್ಯೂಮನ್ ಟ್ರಾಫಿಕಿಂಗ್ ಇನ್ನಷ್ಟು ಹೆಚ್ಚುತ್ತಿದೆ. ವಿಚ್ಛೇದನಗಳ ಕಾರಣ ಬೇಡದ ಮಕ್ಕಳು ಸುಲಭವಾಗಿ ದಲ್ಲಾಳಿಗಳ ಕೈಗೆ ಸಿಕ್ಕಿಬೀಳುತ್ತಾರೆ. ಅವಿವಾಹಿತ ಹೆಣ್ಣು ಕಸದ ತೊಟ್ಟಿಗೆ ಹಸುಗೂಸನ್ನು ಎಸೆಯುವುದು ಮಾಮೂಲೇ ಆಗಿದೆ. ಅವನ್ನು ಯಾರಾದರೂ ತಮ್ಮದಾಗಿಸಿಕೊಂಡರೆ, ಬೆಳೆಸಿ ಸಾಕಿದರೆ ಇಂಥ ಎಷ್ಟೋ ಅನಾಥ ಶಿಶುಗಳಿಗೆ ಒಂದು ದಿಕ್ಕು ದಾರಿಯಾಗುತ್ತದೆ.
ಸರ್ಕಾರಿ ಬಾಲಗೃಹಗಳು ಯಾತನಾ ಮಂದಿರಗಳಾಗಿವೆ. ಇದು ವಿಶ್ವದೆಲ್ಲೆಡೆ ಮಾಮೂಲಿ. ಹದಿಹರೆಯದ ಹೆಣ್ಣು ರೇಪ್ ಗೆ ಒಳಗಾಗುವಂತೆ, ಗಂಡು ಮಕ್ಕಳು ಹೋಮೋಗಳ ಶಿಕಾರಿ ಆಗುತ್ತಾರೆ, ಇವೆಲ್ಲ ಜಗಜ್ಜಾಹೀರು. ಕೇವಲ ಕಾನೂನಿನ ಕಪಿಮುಷ್ಟಿಯಿಂದ ಸುಲಭವಾಗಿ ದತ್ತು ಪಡೆಯಲಾಗದೆ, ಸಂತಾನಹೀನ ದಂಪತಿಗಳು ಮಗುವಿಗಾಗಿ ಪರದಾಡುತ್ತಿರುತ್ತಾರೆ. ಸರ್ಕಾರಿ ಅನಾಥಾಲಯಗಳು ಇಂಥ ಮಕ್ಕಳನ್ನು ಸಾಕುವ ನಾಟಕವಾಡುತ್ತಾ, ಸರ್ಕಾರ ಅದಕ್ಕಾಗಿ ನೀಡು ಹಣವನ್ನು ಉಡಾಯಿಸುತ್ತಾ ಮೋಜು ಮಾಡುತ್ತಾರೆ. ಇವರ ಕೈಗೆ ಸಿಕ್ಕು ಮಕ್ಕಳು ಸದಾ ಸರ್ವದಾ ಅನಾಥರಾಗಿಯೇ ನರಳುತ್ತಾರೆ.
ದತ್ತಕದ ಕಾನೂನು ಸರಳ ಆಗಲೇಬೇಕು, ಆಗ ಮಾತ್ರ ಅನಧಿಕೃತ ಮಾರಾಟದ ಮೇಲೆ ನಿಯಂತ್ರಣ ಗ್ಯಾರಂಟಿ. ಆದರೆ ಇದು ಸುಲಭಕ್ಕೆ ಆಗುವಂಥದ್ದಲ್ಲ…. ಏಕೆಂದರೆ ಈ ವಿಭಾಗದಲ್ಲಿ ಕುಳಿತ ಅಧಿಕಾರಿಗಳು, ಅವರ ವರಿಷ್ಠರು, ಹಿರಿಯ ಮಂತ್ರಿಗಳು ಎಲ್ಲರೂ ಇದಕ್ಕೆ ಸಂಬಂಧಿಸಿದ ಹಣ ಸ್ವಾಹಾಗೊಳಿಸುತ್ತಾ ಅನಾಥ ಮಕ್ಕಳ ಹೆಸರಿನಲ್ಲಿ ಭ್ರಷ್ಟ ಹೆಗ್ಗಣಗಳಾಗಿ ಮೆರೆಯುತ್ತಿದ್ದಾರೆ. ಈ ಅನಾಥ ಮಕ್ಕಳು ಇವರಿಗೆ ಚಿನ್ನ ಬೆಳ್ಳಿ ಅಲ್ಲದಿದ್ದರೂ ನೋಟಿನ ಬಂಡಲ್ ಗಳ ಮೊಟ್ಟೆ ನೀಡುತ್ತಿರುವಾಗ, ಅವರನ್ನು ಸುಲಭವಾಗಿ ಸುರಕ್ಷಿತರ ಕೈಗೆ ದತ್ತು ನೀಡಿ ಇವರೇಕೆ ತಮ್ಮ ಕೈ ಬರಿದು ಮಾಡಿಕೊಂಡಾರು?
ಮಕ್ಕಳು ಹುಟ್ಟಿದ ತಕ್ಷಣ ದತ್ತಕ್ಕೆ ಕೊಟ್ಟುಬಿಟ್ಟರೆ, ಅವು ಅನೇಕ ರೋಗ, ಅಪೌಷ್ಟಿಕತೆಗಳಿಂದಲೂ ಬಚಾವಾಗುತ್ತವೆ. ದತ್ತು ಪಡೆಯುವ ತಾಯಿ ತಂದೆಯರಿಗೆ ಆ ಮಗುವಿನ ಮೇಲಿರುವ ಪ್ರೀತಿಯನ್ನು ಅನಾಥಾಲಯಗಳ ಹಣ ನುಂಗುವ ಹೆಗ್ಗಣಗಳು ಎಂದಾದರೂ ನೀಡಲು ಸಾಧ್ಯವೇ? ಏನಾದರಾಗಲಿ, ಈ ವ್ಯಾಪಾರವನ್ನು ನಿಲ್ಲಿಸಲೇಬೇಕು. ಒಮ್ಮೆ ಮಗು ಸುರಕ್ಷಿತವಾಗಿ ಇಂಥ ಪಾಲಕರಿಗೆ ಕೈಗೆ ಸಿಕ್ಕಿದರೆ, ಮಗುವಿಗೆ ನೆಮ್ಮದಿಯ ನೆರಳು ಸಿಕ್ಕಂತೆಯೇ!
ಸ್ವಚ್ಛತೆ ಶುಭ್ರತೆ ಕೇವಲ ಒಬ್ಬಿಬ್ಬರ ಜವಾಬ್ದಾರಿಯಲ್ಲ
ನಮ್ಮಲ್ಲಿ ಸ್ವಚ್ಛತೆ ಶುಭ್ರತೆ ಎಂಬುದು ಕೇವಲ ಹಬ್ಬಗಳ ಸಂದರ್ಭ, ಮನೆಗೆ ಅತಿಥಿಗಳು ಬರುತ್ತಾರೆ ಎಂದಾಗ ಮಾತ್ರ ನಡೆಯುವ ಅಸಾಮಾನ್ಯ ಪ್ರಕ್ರಿಯೆಯಾಗಿದೆ. ಇಲ್ಲದಿದ್ದರೆ ನಮಗೆ ಕೊಳಕುತನ ಹಾಸುಹೊಕ್ಕಾಗಿದೆ. ಮೊದಲು ದೆಹಲಿಯಲ್ಲಿ ಜಬರ್ದಸ್ತಾಗಿ ಶೃಂಗಸಭೆಗಾಗಿ ಸ್ವಚ್ಛತೆ ಶುಭ್ರತೆಯ ಕಾರ್ಯ ನಿರ್ವಹಿಸಲಾಯಿತು. ಈಗ ಆ ಜಾಗದಲ್ಲಿ ಶುಭ್ರತೆಯ ಒಂದು ತುಣುಕೂ ಕಾಣುವುದಿಲ್ಲ. ನಮ್ಮ ಪ್ರಧಾನಿ ವಿಶ್ವದ ನೇತಾ ಎಂಬಂತೆ ಪೋಸ್ ನೀಡುತ್ತಿರುವ ಕೆಲವು ಹರಕಲು ಪೋಸ್ಟರ್ ಗಳು ಮಾತ್ರ ಅಲ್ಲಿ ಇಲ್ಲಿ ಕಂಡುಬರುತ್ತದೆ.
ಕಳೆದ ಜುಲೈನ ಕೊನೆ ವಾರದ ಹೊತ್ತಿಗೆ ವರ್ಲ್ಡ್ ಹೆರಿಟೇಜ್ ಕಮಿಟಿಯ ದೆಹಲಿಯ ಸಭೆಗಾಗಿಯೂ ಸಹ ಇಂಥದ್ದೇ ಭರ್ಜರಿ ಸ್ವಚ್ಛತೆ ಕಾರ್ಯ ನಡೆಸಲಾಯಿತು. ಇದೆಂಥ ದೊಡ್ಡ ಸುದ್ದಿ ಆಯ್ತು ಅಂದ್ರೆ, ಎನ್ ಕ್ರೋಚ್ ಮೆಂಟ್‌ಕ್ಲೀನಿಂಗ್ ಅತಿ ಜೋರಾಗಿ ನಡೆಯುತ್ತಿದೆ ಎಂದು ಎಲ್ಲಾ ಪತ್ರಿಕೆ, ಟಿವಿ ಚಾನೆಲ್ ಗಳೂ ಸಾರಿದವು.
ನಮ್ಮ ನರನಾಡಿಗಳಲ್ಲಿ ಸ್ವಚ್ಛತೆ ಶುಭ್ರತೆ ಎಂಬುದರ ಅಂಶವೇ ಬೆರೆತಿಲ್ಲ. ಏಕೆಂದರೆ ನಾವು ಜಾತಿ ಪದ್ಧತಿಯ ಆಧಾರದಿಂದ ಕ್ಲೀನಿಂಗ್ ಮೊನೊಪಲಿಯನ್ನು ಕೇವಲ ಒಂದು ವರ್ಗದ ಜನರಿಗಷ್ಟೇ ಸೀಮಿತಗೊಳಿಸಿದ್ದೇವೆ. ಈಗವರು ತಿರುಗಿ ಬಿದ್ದಿದ್ದಾರೆ, ಅಷ್ಟೆ. ಈಗ ಅವರು ಆ ದಂಧೆ ಬಿಟ್ಟು, ಸಂವಿಧಾನದಲ್ಲಿ ಸಮಾನತೆಯ ಮಾತನಾಡುತ್ತಿದ್ದಾರೆ. ಉಳಿದವರು ವಿಧಿಯಿಲ್ಲದೆ ಬೀದಿಯ ಕಸ ಗುಡಿಸುತ್ತಾರೆ. ಏಕೆಂದರೆ ಅವರು ಸ್ವತಃ ವಾಸಿಸುವ ಜಾಗದಲ್ಲೂ ಆ ಭಾಗದ ಸ್ವಚ್ಛತೆಯ ಕಾಂಟ್ರಾಕ್ಟ್ ನ್ನು ಅಲ್ಲಿನ ಮುನಿಸಿಪಾಲಿಟಿ ಇನ್ಯಾರಿಗೋ ಕೊಟ್ಟಿರುತ್ತದೆ! ಘೋರ ಮಳೆ ಸುರಿದಾಗ ಮಾತ್ರ ಅಂಥ ಜಾಗದ ಕೊಳಕು ತಾನಾಗಿ ತೊಳೆದುಹೋಗುತ್ತದೆ.
ನಮ್ಮ ದೇಶದ ಎಲ್ಲಾ ನಗರಗಳೂ ಕೊಳಕುಮಯ ಆಗಿರಲು ಮುಖ್ಯ ಕಾರಣವೆಂದರೆ, ಈ ಶುಭ್ರತೆಗಾಗಿ ಮಾನವ ಸಹಾಯ ಬೇಕೇಬೇಕು. ನೀವು ನಿಮ್ಮ ಮನೆಯ ಕಸವನ್ನು ಅದನ್ನೊಯ್ಯುವ ಕಸದವರಿಗೆ ಸುರಿದರೂ, ಆ ರಾಶಿಯನ್ನು ಅವರು ನಗರದಾಚೆ ಯಾವುದೋ ಹಳ್ಳಿಗೆ ಕೊಂಡೊಯ್ದು ಗುಡ್ಡೆ ಹಾಕಬೇಕಷ್ಟೆ. ಇದು ಸುಲಭದ ಕೆಲಸವಲ್ಲ, ಇದಕ್ಕಾಗಿ ಕೋಟ್ಯಂತರ ಹಣ, ನಿರ್ವಹಣೆ, ಯೋಜನೆ ಎಲ್ಲಾ ಬೇಕು. ಆದರೆ ನಾವು ನಯಾ ಪೈಸೆ ಖರ್ಚು ಮಾಡದೆ, ನಮ್ಮ ಬೀದಿಗಳು ಕ್ಲೀನಾಗಿರಬೇಕು ಅಂತ ಬಯಸುತ್ತೇವೆ.
ಇಡೀ ನಗರ ಸ್ವಚ್ಛವಾಗಿರ ಬೇಕೆಂದರೆ, ಅಲ್ಲಿನ ಪ್ರತಿಯೊಬ್ಬರೂ ವಯಸ್ಸಿನ ಭೇದವಿಲ್ಲದೆ ಈ ಕೆಲಸಕ್ಕೆ ನೆರವಾಗಬೇಕು. ಕಾರ್ಖಾನೆಗಳಲ್ಲಿ ಪ್ರೊಡಕ್ಷನ್ ಮ್ಯಾನೇಜ್ ಮೆಂಟ್ ಇರುವಂತೆ ಈ ವೇಸ್ಟ್ ಮ್ಯಾನೇಜ್ ಮೆಂಟ್ ಇರಲೇಬೇಕು. ಯಾವ ರೀತಿ ಪ್ರೊಡಕ್ಷನ್ ನಲ್ಲಿ ಪ್ರತಿಯೊಬ್ಬರೂ ತಂತಮ್ಮ ಕಾಂಟ್ರಿಬ್ಯೂಷನ್ ನೀಡುತ್ತಾರೋ, ಹಾಗೆಯೇ ಇಲ್ಲೂ ಆಗಬೇಕು. ಹೊಸ ಹೊಸ ವಸ್ತುಗಳ ಡಿಸೈನ್ ಆಗಬೇಕು, ಡಿಸ್ಪೋಸ್ ಗಾಗಿ ಇಂಡಿಯನ್ ಟೆಕ್ನಿಕ್ಸ್ ಅಳವಡಿಸಿಕೊಳ್ಳಬೇಕು. ಇದು ನಗರಕ್ಕೆ ಮಾತ್ರ ಸೀಮಿತವಾಗದೆ ಪ್ರತಿ ಸಣ್ಣ ಪುಟ್ಟ ಹಳ್ಳಿಯನ್ನೂ ತಲುಪಬೇಕು.
ಜನ ಎಲ್ಲರೂ ಒಗ್ಗಟ್ಟಾಗಿ ಕೈ ಜೋಡಿಸಿ ತಂತಮ್ಮ ಬೀದಿಗಳನ್ನೂ ಕ್ಲೀನ್ ಮಾಡಿಕೊಳ್ಳಬೇಕು. ಏಕೆಂದರೆ ವಿದೇಶದಲ್ಲಿರುವಂತೆ ಇಲ್ಲಿ ಮೆಕೇನೈಸ್ಡ್ ಸ್ವೀಪಿಂಗ್ ಟ್ರಕ್ ನಡೆಯಲಾಗದು. ಜನ ತಮ್ಮ ಮನೆಯ ಕಸವನ್ನು ಎಂಥ ಕಂಟೇನರ್ ಗೆ ಎಸೆಯಬೇಕೆಂದರೆ, ಅದು ಎಲ್ಲರ ಕನಸನ್ನೂ ಕಂಪ್ರೆಸ್ ಮಾಡಿ, ಕರ್ಬ್ ಮಾಡಿ ಸಣ್ಣದಾಗಿಸುವಂತೆ ಇರಬೇಕು. ಆಗ ಮಾತ್ರ ಪ್ರತಿ ಮನೆಯವರೂ ಅದನ್ನು ಸುಲಭವಾಗಿ ಡಿಸ್ಪೋಸ್ ಮಾಡಬಹುದು.
ಇದನ್ನು ನಾವು ಅಳವಡಿಸಿಕೊಳ್ಳದಿದ್ದರೆ, ಸದಾ ಸರ್ವದಾ ನಾವು ಕೊಳಕು ಮಂಡಲದಲ್ಲೇ ವಾಸಿಸಬೇಕು. 100 ವರ್ಷಗಳ ಹಿಂದೆ ಎಲ್ಲರ ಮನೆಗೂ ನೀರು ಮಡಕೆಗಳಲ್ಲಿ ಬರುತ್ತಿತ್ತು, ನಗರ ವಲಯಕ್ಕೆ ನೀರು ಬರುವಷ್ಟರಲ್ಲಿ ಅದು ಮಹಾ ಗಲೀಜಾಗುತ್ತಿದ್ದು, ಜನ ಅದೆನ್ನೇ ಹೇಗೋ ನಿಭಾಯಿಸುತ್ತಿದ್ದರು. ಈಗ ಅದು ಸರಿಹೋಗಿದೆ ಅಲ್ಲವೇ? ಹಾಗೆಯೇ ಈ ಶುಭ್ರತೆ ಸಹ ಆಧುನಿಕ ಟೆಕ್ನಾಲಜಿಯಿಂದ ಸರಿಹೋಗಬೇಕು, ಮಾನವ ಸಹಾಯ ಬೇಕೇಬೇಕು! ಕೇವಲ ನಗರಪಾಲಿಕೆಯ ಕಾರ್ಮಿಕರು ಅದನ್ನು ಮಾಡಿಕೊಳ್ಳಲಿ, ಇದು ನಮ್ಮ ಸ್ಟೇಟಸ್ ಗೆ ತಕ್ಕುದಲ್ಲ ಎಂದು ನಿರ್ಲಕ್ಷಿಸಿದರೆ, ಇಡೀ ನಗರ ಸದಾ ಕೊಳಕುಮಂಡಲವಾಗಿಯೇ ಉಳಿಯುತ್ತದೆ. ಪ್ರವಾಸಿ ತಾಣಗಳು ಮಾತ್ರವಲ್ಲ, ನಮ್ಮ ಸುತ್ತಮುತ್ತಲ ಪ್ರದೇಶ ಕೂಡ.





