ಇಂಡಿಯಾ ಕೋತೂರ್‌ ವೀಕ್‌ 2024ರಲ್ಲಿ ಮತ್ತೊಮ್ಮೆ ತಾರೆಯರ ಮೇಳ ದಂಡೈಸಿತ್ತು. ಸೋನಾಕ್ಷಿ ಸಿನ್ಹಾ, ಜ್ಯಾಕ್ಲಿನ್ ಫರ್ನಾಂಡೀಸ್‌, ಸುಹಾನಾ ಖಾನ್‌, ಅದಿತಿ ರಾವ್ ‌ಹೈದರಿ, ಶೋಭಿತಾ ಧೂಲಿಪಾಲಾ ಮಾತ್ರವಲ್ಲದೆ, ಇನ್ನೂ ಅನೇಕ ತಾರೆಯರು ಅಲ್ಲಿ ನೆರೆದಿದ್ದರು. ಈ ಫ್ಯಾಷನ್‌ ಮೇಳ ಅದ್ಭುತ ಬಣ್ಣಗಳಿಂದ ಕೋರೈಸುತ್ತಿತ್ತು. ನೀವು ಸಹ ಈ ತಾರೆಯರ ಇಲ್ಲಿನ ವಿಭಿನ್ನ, ವೈವಿಧ್ಯಮಯ ಡ್ರೆಸ್‌ ಗಳನ್ನು ಗಮನಿಸಿ, ನಿಮಗೆ ಬೇಕಾದ್ದನ್ನು ಆರಿಸಿ, ಅವರ ಹಾಗೆಯೇ ರೆಡಿಯಾಗಿ ಪಾರ್ಟಿಗಳಲ್ಲಿ ಮಿಂಚಬಲ್ಲಿರಿ! ಸಿದ್ದಾರ್ಥ್‌ ಟೈಟ್ಲರ್‌, ಮನೀಶ್‌ ಮಲ್ಹೋತ್ರಾರಂಥ ಅತಿ ದುಬಾರಿ ಫ್ಯಾಷನ್‌ ಡಿಸೈನರ್ಸ್‌ ಸಿದ್ಧಪಡಿಸಿದ ಈ ಡ್ರೆಸೆಸ್‌ ನಮ್ಮ ಬಜೆಟ್‌ಗೆ ಹೊಂದಬಲ್ಲದೇ ಎಂದು ಗಾಬರಿಗೊಳ್ಳಬೇಡಿ. ನಿಮ್ಮದೇ ಊರಿನ ಮೇಜರ್‌ ಡ್ರೆಸೆಸ್‌ ಲಭ್ಯವಿರುವ ಗಲ್ಲಿಗಲ್ಲಿಗಳನ್ನು ಸುತ್ತು ಹಾಕಿ, ಇಲ್ಲಿನ ಡ್ರೆಸೆಸ್‌ ಗೆ ಅತಿ ಹತ್ತಿರ ಇರುವಂಥ ಉಡುಗೆ ಸಿಗದೇ ಹೋಗಲಾರದು! ಸುಮಾರಾಗಿರುವುದು ಸಿಕ್ಕಿದರೂ, ಇಲ್ಲಿ ನನ್ನು ನೋಡಿದರೆ ಒಂದು ಐಡಿಯಾ ಅಂತೂ ಬರುತ್ತದೆ, ನಿಮ್ಮ ಬೊಟಿಕ್‌ ನವರಿಗೆ ಹೇಳಿ, ಬೇಕಾದಂತೆ ರೆಡಿ ಮಾಡಿಸಿಕೊಳ್ಳಿ!

ananya

ಬಂದ ಪುಟ್ಟ….. ಹೋದ ಪುಟ್ಟ!

ಯಾವ ಭಾಷೆಯ ಯಾವ ತಾರೆಯೇ ಇರಲಿ, ಬಹಳ ದಿನ ಬೆಳ್ಳಿತೆರೆಯಲ್ಲಿ ಕಾಣಿಸದಿದ್ದರೆ, ಜನ ಹೇಳುವುದೇ ಹೀಗೇ! ಅನನ್ಯಾ ಪಾಂಡೆ ಭೀ ಜಬರ್ದಸ್ತಾಗಿ ಜೋರಿನಿಂದ ಬಾಲಿವುಡ್‌ ಗೆ ಕಾಲಿಟ್ಟಿದ್ದೇನೋ ಆಯ್ತು, ಆದರೆ 1-2 ವರ್ಷಗಳಲ್ಲೇ ಆಲ್ ಮೋಸ್ಟ್ ಕಣ್ಮರೆ ಆಗಿಬಿಡುವುದೇ…..? ಈಗಲೂ ಈಕೆಯ ಬಳಿ ಹೇಳಿಕೊಳ್ಳುವಂಥ ಯಾವ ದೊಡ್ಡ ಪ್ರಾಜೆಕ್ಟ್ ಗಳೂ ಇಲ್ಲ. ಇರುವ ಬೆರಳೆಣಿಕೆಯ ಪ್ರಾಜೆಕ್ಟ್ ಗಳೂ ಅನನ್ಯಾಳ ಠುಸ್‌ ಪಟಾಕಿ ಮಾರ್ಕೆಟ್‌ ನಿಂದಾಗಿ, ಮಖಾಡೆ ಮಲಗಿವೆ! ಈಕೆಯ ಜೊತೆ ಬಂದ ಜಾಹ್ನವಿ ಕಪೂರ್‌, ಸಾರಾ ಖಾನ್‌ ಮುಂತಾದವರು ಅಂತೂ ಇಂತೂ ಒಂದಿಷ್ಟು ಹೆಸರು ಗಳಿಸಿದ್ದಾರೆ. ಹೋಗಲಿ ಬಿಡಮ್ಮ, ಪ್ರತಿಭೆ ಪ್ರದರ್ಶಿಸಲು ಬಾಲಿವುಡ್‌ ಗ್ಲಾಮರ್‌ ಒಂದೇ ದಾರಿಯಲ್ಲ, ಎನ್ನುತ್ತಿದ್ದಾರೆ ಹಿತೈಷಿಗಳು.

pashmeena

ಪಶ್ಮೀನಾ ಬಾಲಿವುಡ್ನಲ್ಲಿ ಹೆಸರು ಗಳಿಸುವಳೇ?

ಪ್ರಸಿದ್ಧ ಸಂಗೀತಕಾರರಾದ ರಾಜೇಶ್‌ ರೋಶನ್‌ ರ ಮಗಳು ಹಾಗೂ ಹ್ಯಾಂಡ್ಸಮ್ ಹೃತಿಕ್‌ ರೋಶನ್‌ ನ ಕಸಿನ್‌ ಪಶ್ಮೀನಾಳ ಎಂಟ್ರಿ ಬಾಲಿವುಡ್‌ ನಲ್ಲಿ ಅಂತೂ ಆಗಿಯೇಹೋಯಿತು. `ಇಶ್ಕ್ ವಿಶ್ಕ್’ ಚಿತ್ರದಲ್ಲಿ ಇವಳು ಶಾಹಿದ್‌ ಕಪೂರ್‌ ನ ನಾಯಕಿ ಆಗಿದ್ದಾಳೆ. ಇಲ್ಲಿ ಅರ್ಥವಾಗದ ಒಂದು ವಿಷಯ ಅಂದ್ರೆ, 2022ರ ಹರೆಯದ ಹುಡುಗಿಯರನ್ನು 40-50ರ ನಾಯಕರ ಜೊತೆ ಏಕೆ ನಾಯಕಿ ಆಗಿಸುತ್ತಾರೆ ಎಂಬುದು! ಇದು ನಿರ್ಮಾಪಕರ ಅಸಹಾಯಕತೆ ಸಹ ಇರಬಹುದು, ಒಬ್ಬ ಫೇಮಸ್‌ ಹೀರೋ ಜೊತೆಗಿದ್ದರೆ ಇಂಥ ಹೊಸ ಹುಡುಗಿಯರ ಚಿತ್ರ ನೋಡಲು ಜನ ಬರಬಹುದು ಅಂತ. ಏನೇ ಇರಲಿ, ಪಶ್ಮೀನಾ ತನ್ನ ರೋಶನ್‌ ಮನೆತನದ ಹೆಸರು ಎಷ್ಟು ಉಳಿಸುತ್ತಾಳೋ ಕಾದು ನೋಡಬೇಕಿದೆ!

Sharvari

ಮಿರಿಮಿರಿ ಮಿಂಚುತ್ತಿರುವ ಶಾರ್ವರಿ

`ಮುಂಜ್ಯಾ’ ಚಿತ್ರದ ಯಶಸ್ಸಿನ ನಂತರ `ವೇದಾ’ ಚಿತ್ರದಲ್ಲೂ ಶಾರ್ರಿ ಗೆದ್ದಿದ್ದಾಳೆ. `ಸ್ತ್ರೀ’ ಚಿತ್ರದ ಎದುರು ಇದು ತುಸು ಮಂಕಾದರೂ, ಶಾರ್ವರಿ ಮಾತ್ರ ಲೈಮ್ ಲೈಟ್‌ ನ ಟಾಪ್‌ ನಲ್ಲೇ ಮಿಂಚುತ್ತಿದ್ದಾಳೆ. ಈಕೆಯ ಫೀಚರ್ಸ್‌ ಕುರಿತು ಯಾರೇನೇ ಆಡಿಕೊಳ್ಳಲಿ, ಅವಳು ಅದರಿಂದ ಒಳಗೊಳಗೇ ಕೊರಗುತ್ತಾಳೆ ಎಂಬುದು ನಿಜ. ಇವಳನ್ನು ಆಲಿಯಾ ಭಟ್‌ ಳ ಕಾಪಿ ಅಂತಾರೆ. ತನ್ನ ಪರ್ಸನಾಲಿಟಿಯೇ ಬೇರೆ, ತಾನೆಂದೂ 2ನೇ ಆಲಿಯಾ ಆಗಲು ಬಯಸಿದವಳಲ್ಲ ಅಂತಾಳೆ. ಚಿಂತೆ ಬೇಡ ಶಾರ್ವರಿ , ಇದೇ ರೀತಿ ಮುನ್ನುಗ್ಗುತ್ತಿರು, ಅಂತಾರೆ ಹಿತೈಷಿಗಳು.

Shradha_Stree_2

ಎಲ್ಲೆಡೆ ಮಿಂಚುತ್ತಿರುವ ಸ್ತ್ರೀ

ಶ್ರದ್ಧಾ ಕಪೂರ್‌ ಳ ಫಾರ್ಮುಲಾ ಅಂದ್ರೆ, ಕಡಿಮೆ ಚಿತ್ರದಲ್ಲಿ ನಟಿಸಿದರೂ ಪರ್ಫೆಕ್ಟ್ ಚಿತ್ರ ಆಗಿರಲಿ ಎಂಬುದು! ಇದರಿಂದ ಇವಳು ಗೆಲ್ಲುವಂತಾಗಿದೆ. `ತೂ ಝೂಠಿ ಮೈ ಮಕ್ಕಾರ್‌’ ಚಿತ್ರದ ಸಕ್ಸೆಸ್‌ ನಂತರ `ಸ್ತ್ರೀ-2′ ಚಿತ್ರ ಸೂಪರ್‌ ಹಿಟ್‌ ಎನಿಸಿದೆ. ಫ್ಲಾಪ್‌ ಹೀರೋ ರಾಜ್‌ ಕುಮಾರ್‌ ರಾವ್ ‌ಸಹ ಈಗ ಮತ್ತೆ ಚಿಗುರಿಕೊಂಡಿದ್ದಾನೆ. ಹೀಗಾಗಿ ಶ್ರದ್ಧಾ ಇದೀಗ ತನ್ನ ಯಶಸ್ವೀ ಚಿತ್ರಗಳ ಸೆಲೆಬ್ರೇಷನ್‌ ಪಾರ್ಟಿ ನಡೆಸುತ್ತಿದ್ದಾಳೆ. ತನ್ನ ಮುಂಬರಲಿರುವ ಚಿತ್ರಗಳ ಕುರಿತಾಗಿ ಈಕೆ ಏನೂ ಬಾಯಿ ಬಿಡಲಿಲ್ಲ. ಆದರೆ ಇವಳ ಚಲನವಲನ ಗಮನಿಸಿದರೆ, ಇಂದಿನ ಬಾಲಿವುಡ್‌ ನಾಯಕಿಯರಲ್ಲಿ ಇವಳೇ ಟಾಪ್‌ ಎಂಬುದರಲ್ಲಿ ಸಂದೇಹವಿಲ್ಲ.

download-2

ಖಿಲಾಡಿ ಮತ್ತೆ ತೆಗೆದ ಹಳೇ ವರಸೆ

ಖಿಲಾಡಿ ಕುಮಾರ್‌ ನ `ಖೇಲ್ ‌ಖೇಲ್ ‌ಮೇ’ ಚಿತ್ರದಲ್ಲಿ ಫರ್ದೀನ್‌ ಖಾನ್‌, ಆ್ಯಮಿ ವಿರ್ಕ್‌ ರಂಥ ಗ್ಲಾಮರಸ್‌ ತಾರೆಯರೂ ಜೊತೆಗೂಡಿದ್ದರು. ಆದರೆ ಪರಿಣಾಮ ಮಾತ್ರ ಅದೇ…. ಫ್ಲಾಪ್‌ ಫ್ಲಾಪ್‌! ಈ ಚಿತ್ರವನ್ನು ಜನ ಇಷ್ಟಪಡಲೇ ಇಲ್ಲ. ಅಕ್ಷಯ್‌ ತನ್ನ ಚಿರಪರಿಚಿತ ಕಾಮಿಕ್‌ ಸ್ಟೈಲ್ ‌ನಲ್ಲಿ ವೀಕ್ಷಕರನ್ನು ರಂಜಿಸಲು ಯತ್ನಿಸಿದ್ದನಾದರೂ, ಅವರೇನೂ ಅದಕ್ಕೆ ಸೊಪ್ಪು ಹಾಕಲಿಲ್ಲ. ಇದೀಗ ಅಕ್ಷಯ್‌ ತುಸು ಬಿಡುವು ಮಾಡಿಕೊಂಡು, ತನ್ನ ಕೆರಿಯರ್‌ ಕುರಿತಾಗಿ ಗಂಭೀರವಾಗಿ ಆಲೋಚಿಸಬೇಕು, ಇಲ್ಲದಿದ್ದರೆ ವೀಕ್ಷಕರ ಸಮಯ, ನಿರ್ಮಾಪಕರ ಹಣ, ಎರಡೂ ಹಾಳಾಗುತ್ತಲೇ ಇರುತ್ತದೆ.

Vikrant

ವಿಕ್ರಾಂತ್ `12th  ಫೇಲ್ಪಾಸ್ಆದೀತೇ?

ಇತ್ತೀಚೆಗೆ OTTಯಲ್ಲಿ ಬಿಡುಗಡೆಯಾದ `ಫಿರ್‌ ಆಯಿ ಹಸೀನಾ ದಿಲ್ ರುಬಾ’ ಚಿತ್ರವನ್ನು ಪ್ರೇಕ್ಷಕರು ಬಹಳ ಮೆಚ್ಚಿದ್ದಾರೆ. ಆದರೆ ನಟ ವಿಕ್ರಾಂತನಿಗೆ ಮತ್ತೊಂದು ಗುಡ್‌ ನ್ಯೂಸ್‌ ಅಂದ್ರೆ, ಈತನ `12th ಫೇಲ್’ 70ನೇ ಫಿಲ್ಮಂ ಫೆಸ್ಟಿವಲ್ ‌ನ ಟಾಪ್‌ ಲಿಸ್ಟ್ ನಲ್ಲಿ ಆಯ್ಕೆಯಾಗಿದೆ! ವಿಕ್ರಾಂತನಂಥ ಪ್ರತಿಭಾವಂತ ನಟನಿಗೆ ದೊಡ್ಡ ಪ್ರಾಜೆಕ್ಟ್ ಯಾಕೆ ಸಿಗುತ್ತಿಲ್ಲ ಎಂಬುದು ನಿಜಕ್ಕೂ ವಿಷಾದಕರ ಸಂಗತಿ. ಇಂದಿಗೂ ಬಾಲಿವುಡ್‌ ನ ನಿರ್ಮಾಪಕರು ಫ್ಲಾಪ್‌ ಖಾನ್‌ ಗಳು, ಕುಮಾರರ ಕದ ತಟ್ಟುವುದರಲ್ಲಿ ಬಿಝಿ ಆಗಿದ್ದಾರಾ?

ವಿಕ್ರಾಂತ್‌ ಕಿರುತೆರೆ ಧಾರಾವಾಹಿ, OTT ಚಿತ್ರಗಳಲ್ಲೂ ಉತ್ತಮ ಹೆಸರು ಗಳಿಸಿದ್ದಾನೆ. ಬಾಲಿವುಡ್‌ನ ಚೀಪ್‌ ಪಾಲಿಟಿಕ್ಸ್ ಈತನ ಪ್ರಗತಿ ತಡೆಯಲು ಸಾಧ್ಯವಿಲ್ಲ!

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ