ರಾಘವೇಂದ್ರ ಅಡಿಗ ಎಚ್ಚೆನ್.

ಎ.ಪಿ ಅರ್ಜುನ್ ನಿರ್ಮಾಣದ ‘ಲಕ್ಷ್ಮಿಪುತ್ರ’ ಚಿತ್ರದಲ್ಲಿ ಚಿಕ್ಕಣ್ಣ ಹೀರೊ ಆಗಿ ನಟಿಸುತ್ತಿದ್ದಾರೆ. ಈಗಾಗಲೇ ‘ಉಪಾಧ್ಯಕ್ಷ’ ಚಿತ್ರದ ಮೂಲಕ ಚಿಕ್ಕಣ್ಣ ಹೀರೊ ಆಗಿ ಚಿತ್ರರಂಗಕ್ಕೆ ಪರಿಚಿತರಾಗಿದ್ದಾರೆ. ಇದು ನಾಯಕನಾಗಿ ಅವರ 2ನೇ ಸಿನಿಮಾ. ವಿಜಯ್ ಸ್ವಾಮಿ ಚಿತ್ರಕ್ಕೆ ಆಕ್ಷನ್ ಕಟ್ ಹೇಳ್ತಿದ್ದಾರೆ. ಲಕ್ಷ್ಮಿಪುತ್ರ’ ಚಿತ್ರದ ಬಹುತೇಕ ಚಿತ್ರೀಕರಣ ಮುಕ್ತಾಯವಾಗಿದೆ. ಆದರೆ ನಾಯಕಿ ಯಾರು ಎನ್ನುವ ಪ್ರಶ್ನೆಗೆ ಉತ್ತರ ಸಿಕ್ಕಿರಲಿಲ್ಲ. ಚಿಕ್ಕಣ್ಣನಿಗೆ ಜೊತೆ ನಾಯಕಿಯಾಗಿ ನಟಿಸೋಕೆ ಕೆಲ ನಟಿಯರು ಒಪ್ಪಲಿಲ್ಲವಂತೆ. ಈ ವಿಚಾರವನ್ನು ಸ್ವತಃ ಚಿತ್ರತಂಡವೇ ತಮಾಷೆಯಾಗಿ ವೀಡಿಯೋ ಮಾಡಿ ತೋರಿಸಿದೆ. ಅಂತೂ ಇಂತೂ ಹೊಸ ನಟಿಯನ್ನು ಚಿತ್ರಕ್ಕೆ ನಾಯಕಿಯಾಗಿ ಆಯ್ಕೆ ಮಾಡಿದೆ ಚಿತ್ರತಂಡ.
ತಾರಾ, ಕುರಿ ಪ್ರತಾಪ್, ಧರ್ಮಣ್ಣ ಸೇರಿ ದೊಡ್ಡ ತಾರಾಗಣ ‘ಲಕ್ಷ್ಮಿಪುತ್ರ’ ಚಿತ್ರದಲ್ಲಿದೆ. ಅರ್ಜುನ್ ಜನ್ಯಾ ಸಂಗೀತ ಚಿತ್ರಕ್ಕಿದ್ದು ಎ.ಪಿ ಅರ್ಜುನ್ ಚಿತ್ರದ ಹಾಡುಗಳಿಗೆ ಸಾಹಿತ್ಯ ಬರೆಯುತ್ತಿದ್ದಾರೆ. ಹೋದಲ್ಲಿ ಬಂದಲ್ಲಿ ‘ಲಕ್ಷ್ಮಿಪುತ್ರ’ ಚಿತ್ರದ ನಾಯಕಿ ಯಾರು ಎಂದು ಚಿಕ್ಕಣ್ಣನನ್ನು ಕೇಳುತ್ತಿದ್ದರು. ಆ ಗೋಳು ಏನು ಎನ್ನುವುದನ್ನು ವೀಡಿಯೋ ಮಾಡಿ ಚಿತ್ರತಂಡ ಹಂಚಿಕೊಂಡಿದೆ.
ಆದರೊಂದಿಗೆ ಅಂತಿಮವಾಗಿ ಈಗ ಚಿತ್ರಕ್ಕೆ ನಾಯಕಿ ಸಿಕ್ಕಿದ್ದಾರೆ. ವಿಶೇಷ ಎಂದರೆ ತಮ್ಮ ಚಿತ್ರಕ್ಕೆ ನಾಯಕಿಯನ್ನು ಹುಡುಕಿಕೊಡು ಎಂದು ದೇವಸ್ಥಾನಕ್ಕೆ ತೆರಳಿ ದೇವರ ಬಳಿ ಹೋಗಿ ಚಿಕ್ಕಣ್ಣ ಮೊರೆ ಇಟ್ಟಾಗ ಅದೇ ಸಮಯಕ್ಕೆ ದೇವಸ್ಥಾನಕ್ಕೆ ನಟಿ ವಂದಿತಾ ಬಂದಿದ್ದಾರೆ. ‘ಲಕ್ಷ್ಮಿಪುತ್ರ’ ಚಿತ್ರತಂಡದ ಪರವಾಗಿ ಎಲ್ಲರಿಗೂ ಹೊಸವರ್ಷದ ಶುಭಾಶಯ ಕೋರಿದ್ದಾರೆ. ಹೊಸ ಪ್ರತಿಭೆ ವಂದಿತಾ ಇದೀಗ ‘ಲಕ್ಷ್ಮಿಪುತ್ರ’ ಚಿತ್ರದಲ್ಲಿ ನಾಯಕಿಯಾಗಿ ನಟಿಸಲಿದ್ದಾರೆ. ಹೀಗೆ ಚಿಕ್ಕಣ್ಣನ ನಾಯಕಿ ಹುಡುಕಾಟ ಅಂತ್ಯವಾಗಿದೆ.
’ಉಪಾಧ್ಯಕ್ಷ’ ಚಿತ್ರದಲ್ಲಿ ಕಾಮಿಡಿ ಹೀರೊ ಆಗಿ ಚಿಕ್ಕಣ್ಣ ಪ್ರೇಕ್ಷಕರನ್ನು ರಂಜಿಸಿದ್ದರು. ಇದೀಗ ‘ಲಕ್ಷ್ಮಿಪುತ್ರ’ ಚಿತ್ರದಲ್ಲಿ ಕೂಡ ಅದೇ ಪ್ರಯತ್ನ ಮಾಡಲಾಗುತ್ತಿದೆ. ಎ.ಪಿ. ಅರ್ಜುನ್ ಕಥೆಗೆ ಅವರ ತಂಡದವರೇ ಆದ ವಿಜಯ್ ಆಕ್ಷನ್ ಕಟ್ ಹೇಳಿದ್ದಾರೆ. . ಚಿತ್ರದಲ್ಲಿ ತಾಯಿ, ಮಗನ ಬಾಂಧವ್ಯದ ಕಥೆಯನ್ನು ಹೇಳಲಾಗ್ತಿದೆ. ವರ್ಷದ ಹಿಂದೆ ಸಿನಿಮಾ ಸೆಟ್ಟೇರಿತ್ತು.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ