ರಾಘವೇಂದ್ರ ಅಡಿಗ ಎಚ್ಚೆನ್.

ಕೊಡಗು ಜಿಲ್ಲೆಯಿಂದ ದೇಶ-ವಿದೇಶಗಳಲ್ಲೂ ಖ್ಯಾತಿ ಪಡೆದಿರುವ ಚಿತ್ರತಾರೆ ರಶ್ಮಿಕಾ ಮಂದಣ್ಣ ಇದೀಗ ಆದಾಯ ತೆರಿಗೆ ಪಾವತಿಯಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿದ್ದಾರೆ. 2025–26ನೇ ಆರ್ಥಿಕ ವರ್ಷದಲ್ಲಿ ಕೊಡಗು ಜಿಲ್ಲೆಯಿಂದ ಅತಿಹೆಚ್ಚು ಆದಾಯ ತೆರಿಗೆ ಪಾವತಿಸಿದ ವ್ಯಕ್ತಿಯಾಗಿ ರಶ್ಮಿಕಾ ಮಂದಣ್ಣ ಮೊದಲ ಸ್ಥಾನಕ್ಕೇರಿದ್ದಾರೆ.
ಕನ್ನಡ ಚಿತ್ರರಂಗದಿಂದ ಸಿನಿ ಬದುಕು ಆರಂಭಿಸಿ, ನಂತರ ತೆಲುಗು ಹಾಗೂ ಬಾಲಿವುಡ್‌ನಲ್ಲಿ ಬಹುಬೇಡಿಕೆಯ ನಟಿಯಾಗಿ ಬೆಳೆದಿರುವ ರಶ್ಮಿಕಾ ಮಂದಣ್ಣ, ತಮ್ಮ ಉದ್ಯಮ ಸಂಬಂಧಿತ ಹಣಕಾಸಿನ ವ್ಯವಹಾರಗಳನ್ನು ‘ರಶ್ಮಿಕಾ ಮಂದಣ್ಣ ಪ್ರೊಡಕ್ಷನ್ಸ್ LLP’ ಸಂಸ್ಥೆಯ ಮೂಲಕ ನಿರ್ವಹಿಸುತ್ತಿದ್ದಾರೆ.
2022ರ ಆಗಸ್ಟ್‌ನಲ್ಲಿ ಸ್ಥಾಪನೆಯಾದ ಈ ಸಂಸ್ಥೆ ಇದೀಗ 2025–26ನೇ ಹಣಕಾಸು ವರ್ಷದಲ್ಲಿ ಕೊಡಗು ಜಿಲ್ಲೆಯಿಂದ ಗರಿಷ್ಠ ಆದಾಯ ತೆರಿಗೆ ಪಾವತಿಸಿದ ಸಂಸ್ಥೆಯಾಗಿ ಗುರುತಿಸಲ್ಪಟ್ಟಿದೆ. ಪ್ರಸಕ್ತ ಹಣಕಾಸು ವರ್ಷದ ಮೂರು ಅವಧಿಗಳಲ್ಲಿ ರಶ್ಮಿಕಾ ಮಂದಣ್ಣ ತೆರಿಗೆ ಪಾವತಿಯಲ್ಲಿ ನಿರಂತರವಾಗಿ ಮೊದಲ ಸ್ಥಾನದಲ್ಲಿದ್ದಾರೆ.
ಮಾರ್ಚ್ ಅಂತ್ಯದವರೆಗೆ ಈ ಹಣಕಾಸು ವರ್ಷ ಮುಂದುವರಿಯಲಿದ್ದು, ಈ ಅವಧಿಯಲ್ಲೂ ರಶ್ಮಿಕಾ ಮಂದಣ್ಣ ನಂಬರ್ 1 ಸ್ಥಾನ ಕಾಯ್ದುಕೊಳ್ಳುವ ವಿಶ್ವಾಸವನ್ನು ಆದಾಯ ತೆರಿಗೆ ಇಲಾಖೆ ವ್ಯಕ್ತಪಡಿಸಿದೆ.
ಈ ಸಾಧನೆಯ ಕುರಿತು ಆದಾಯ ತೆರಿಗೆ ಇಲಾಖೆ ರಶ್ಮಿಕಾ ಮಂದಣ್ಣ ಅವರ ಪೋಷಕರಿಗೆ ಮಾಹಿತಿ ನೀಡಿದ್ದು, ಸಂತಸ ವ್ಯಕ್ತಪಡಿಸಿದೆ. ತೆರಿಗೆ ಪಾವತಿಯಲ್ಲಿ ಜಿಲ್ಲೆಯಿಂದ ಮೊದಲ ಸ್ಥಾನದಲ್ಲಿರುವ ರಶ್ಮಿಕಾ ಮಂದಣ್ಣ ಈಗಾಗಲೇ ವಿಕಸಿತ ಭಾರತದ ಬ್ರ್ಯಾಂಡ್ ಅಬಾಸಿಡರ್ ಆಗಿಯೂ ಗುರುತಿಸಿಕೊಂಡಿದ್ದಾರೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ