ಕುಂದಾನಗರಿಯಕಾಯಕಪ್ರಭೆ

ಇವರು  ಪ್ರಭಾಬಾಲಚಂದ್ರ. ವಯಸ್ಸು 50 ದಾಟಿದೆ. ಕಳೆದ 3 ವರ್ಷಗಳಿಂದಬೆಳಗಾವಿನಗರದಲ್ಲಿಆಟೋರಿಕ್ಷಾಓಡಿಸುತ್ತಿರುವ  ಧೀಮಂತಮಹಿಳೆ.

ಮೊನ್ನೆನಾನುಬೆಳಗಾವಿಯಕೇಂದ್ರಬಸ್ನಿಲ್ದಾಣದಲ್ಲಿಳಿದುಹೊರಬರಬೇಕಾದರೆನಾಲ್ಕೈದುಆಟೋಚಾಲಕರುಮುತ್ತಿದರು. ನಾನುಹೋಗಬೇಕಾದಸ್ಥಳಕ್ಕೆಅವರುಹೇಳಿದಬಾಡಿಗೆದರಅತಿದುಬಾರಿಎನ್ನಿಸಿನಾನುಹಾಗೇಮುನ್ನಡೆದೆ. ಸ್ವಲ್ಪಮುಂದೆಹೋದಾಗಪ್ರಭಾಅವರವಿದ್ಯುತ್ಚಾಲಿತಆಟೋಕಂಡುಅವರುಹೇಳಿದದರಸಮಂಜಸಅನ್ನಿಸಿಹತ್ತಿಬಿಟ್ಟೆ. ಬೆಂಬಿಡದೇಹಿಂದೆಬಂದಿದ್ದಆಆಟೋಚಾಲಕರುಗೊಣಗುತ್ತಾಹೊರಟುಹೋದರು.

ಪ್ರಭಾಅವರಸರಳನಡತೆ, ನೇರನುಡಿ, ಸಂಚಾರಿನಿಯಮಗಳನ್ನುಪಾಲಿಸುತ್ತಜಾಗರೂಕತೆಯಿಂದ  ಓಡಿಸುವಅವರಚಾಕಚಕ್ಯತೆಮತ್ತುಗಾಡಿಯಒಳಹಾಗೂಹೊರಮೈಯನ್ನುಶುಚಿಯಾಗಿಟ್ಟರೀತಿನೋಡಿಖುಷಿಯಿಂದಮಾತಿಗೆಳೆದೆ. ಅವರಅನುಭವವನ್ನುಅವರಮಾತಿನಲ್ಲೇಕೇಳಿ:

-“ಈಗಾಡಿನಡಸಾಕಸುರುಮಾಡಿ 3 ವರ್ಷಆತರಿ.ನಮ್ಮಮನೀಯವರೂಆಟೋಓಡಸ್ತಾರ. ಮೊದಲು ೪-೫ಮನೆಗಳಲ್ಲಿಅಡಿಗಿಮಾಡತಿದ್ದೆ. ಆದರ ದುಡಿತ ಜಾಸ್ತಿ ಪಗಾರಭಾಳಕಮ್ಮಿ. ತುಟ್ಟಿದಿನಗೋಳು.ಜೀವನನಿರ್ವಹಣಿಕಷ್ಟಆತು. ಮಕ್ಕಳುಇನ್ನೂತಮ್ಮಕಾಲಮ್ಯಾಲನಿಂತಿಲ್ಲ. ವಯಸ್ಸಾದನನ್ನಅತ್ತೆ, ನನ್ನತಾಯಿಯನ್ನುನಾವೇನೋಡ್ಕೋತೀವಿ. ಅದಕ್ಕಆಟೋನಡಸೂದಕಲ್ತುಬ್ಯಾಂಕ್ಸಾಲಮಾಡಿಹೊಸಗಾಡಿತೊಗೊಂಡೆ.  ನಮ್ಮಮನಿಯೋರುಸಾಥ್ಕೊಟ್ರು. RTO ಅಧಿಕಾರಿಗಳು, ಪೊಲೀಸ್ಅಧಿಕಾರಿಗಳುನನಗಬೆನ್ನುತಟ್ಟಿಪ್ರೋತ್ಸಾಹನೀಡಿದರು.ಬೆಳಿಗ್ಗೆಎಲ್ಲಾಮನಿಕೆಲಸಮುಗಿಸಿಹತ್ತೂವರಿ- ಹನ್ನೊಂದಕ್ಕಮನಿಬಿಟ್ಟುರಾತ್ರಿ 8-9ರತನಕದುಡೀತೀನಿ”

Auto Prabhaa_2

-“ಮೊದಮೊದಲು  ಭಾಳತ್ರಾಸಆತರಿ. ಬಹುತೇಕಆಟೋಚಾಲಕರುಸಹಾಯಮಾಡಿದರು. ಆದರಎಲ್ಲಾಕಡೆಇರೂವಂಗದುಡಿಯಾಕಒಲ್ಲದೆಅಮಾಯಕಪ್ರಯಾಣಿಕರಿಗೆಮೋಸಮಾಡಿದಿಢೀರ್ದುಡ್ಡುಮಾಡೋಆಸೆಬುರುಕರುಸ್ವಲ್ಪಮಂದಿಇದ್ದೇಇರತಾರ. ಅಂಥವರುಕಿರಿಕಿರಿಮಾಡಿದರು. ನಾವುಹೆಣ್ಣುಮಕ್ಕಳುಸರಿಇದ್ದುಎದೆಸೆಟೆಸಿನಿಂತರೆಯಾರೂಕಿತಾಪತಿಮಾಡುವಂಗಿಲ್ಲ. ಪೊಲೀಸ್ಇಲಾಖೆ, ವಿವಿಧಸಂಘಗಳುನನಗಸನ್ಮಾನಮಾಡಿಮೀಡಿಯಾದಾಗಇಂಟರ್ವ್ಯೂಬಂದಮ್ಯಾಲಕಿರಿಕಿರಿಮಂದಿಗಪ್ಆಗ್ಯಾರ”

-“ನನ್ನಗಾಡ್ಯಾಗಒಮ್ಮೆಬಂದಬಹುತೇಕರುಖಾಯಂಗಿರಾಕಿಆಗಿಬಿಡ್ತಾರ. ಫೋನ್ಮಾಡಿಕರಸ್ತಾರ. ದವಾಖಾನಿಜರೂರಿಇತ್ತಂದ್ರಅನೇಕಸಲರಾತ್ರಿಒಂದು-ಎರಡುಗಂಟೆಕನೂಹೋಗೀನ್ರಿ”

ನನ್ನ  ಸ್ಥಳಹತ್ತಿರಬರುತ್ತಿದ್ದಂತೆ, ಪ್ರಭಾಅವರಿಗೆಅಜ್ಜಿಯೊಬ್ಬರಫೋನ್ಬಂತು – ಚೆಕಪ್ಸಲುವಾಗಿ ದವಾಖಾನೆಗೆಕರೆದುಕೊಂಡುಹೋಗಲು.

ಪ್ರಭಾಅವರುಹೇಳಿದ್ದಕ್ಕಿಂತಹೆಚ್ಚುಹಣಕೊಟ್ಟಾಗ ಕಣ್ಣರಳಿಸಿ  “ಸರ್ತುಂಬಾಥ್ಯಾಂಕ್ಸ್.  ನೀವುಮನಸಾಪೂರ್ತಿಕೊಟ್ರನಮಗೂಖುಷಿಅನಸತೈತಿ. ಮೈಗೂಹತ್ತತೈತಿ” ಅಂತನಸುನಗುತ್ತಾಹೊರಟರು.

ಮನಸ್ಸಿದ್ದರೆಮಾರ್ಗಅಷ್ಟೇಅಲ್ಲ – ಹೆದ್ದಾರಿಯೇತೆರೆದುಕೊಳ್ಳುತ್ತದೆಎನಿಸಿತು.

ಆರ್. ಟಿ. ಶರಣ್,

೧-೮೬೭/೩೮, ವೆಂಕಟೇಶ ನಗರ, ಕಲಬುರಗಿ  – 8317398631

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ