- ರಾಘವೇಂದ್ರ ಅಡಿಗ ಎಚ್ಚೆನ್.
ಕನ್ನಡ ಚಿತ್ರರಂಗದ ನಟ ರಕ್ಷಿತ್ ಶೆಟ್ಟಿ ಇತ್ತೀಚಿನ ದಿನಗಳಲ್ಲಿ ಸಾರ್ವಜನಿಕವಾಗಿ ಹೆಚ್ಚು ಕಾಣಿಸಿಕೊಳ್ಳದೇ ಇರುವುದರಿಂದ ಅಭಿಮಾನಿಗಳಲ್ಲಿ ಕುತೂಹಲ ಮೂಡಿದೆ. ಕಾರ್ಯಕ್ರಮಗಳು ಹಾಗೂ ಚಿತ್ರ ಅಪ್ಡೇಟ್‌ಗಳಲ್ಲಿ ಅವರ ಗೈರುಹಾಜರಿ ಗಮನ ಸೆಳೆದಿರುವಾಗಲೇ, ಅವರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ 777 ಚಾರ್ಲಿ ಚಿತ್ರದ ಫೋಟೋ ಇದೀಗ ಚರ್ಚೆಗೆ ಕಾರಣವಾಗಿದೆ.
2022ರ ಜೂನ್‌ನಲ್ಲಿ ಬಿಡುಗಡೆಯಾದ ‘777 ಚಾರ್ಲಿ’ ಸಿನಿಮಾ ಬಳಿಕ, ರಕ್ಷಿತ್ ಶೆಟ್ಟಿ ಅಭಿನಯದ ಸಪ್ತ ಸಾಗರದಾಚೆ ಎಲ್ಲೋ ಚಿತ್ರದ ಪಾರ್ಟ್ ‘ಎ’ ಮತ್ತು ‘ಬಿ’ ಬಿಡುಗಡೆಯಾಗಿದ್ದವು. ಆದರೆ ಅದಾದ ಬಳಿಕ ಅವರು ಹೊಸ ಸಿನಿಮಾಗಳ ಬಗ್ಗೆ ಹೆಚ್ಚಿನ ಮಾಹಿತಿ ನೀಡದೇ ಮೌನವಾಗಿದ್ದಾರೆ. ಇದೇ ವೇಳೆ ಅವರು ಘೋಷಿಸಿದ್ದ ರಿಚರ್ಡ್ ಆ್ಯಂಟನಿ ಚಿತ್ರದ ಬಗ್ಗೆ ಕೂಡ ಯಾವುದೇ ಹೊಸ ಅಪ್ಡೇಟ್ ಇಲ್ಲದಿರುವುದು ಅಭಿಮಾನಿಗಳಲ್ಲಿ ನಿರಾಸೆ ಮೂಡಿಸಿದೆ.
ಈ ನಡುವೆ ರಕ್ಷಿತ್ ಶೆಟ್ಟಿ ತಮ್ಮ ಹುಟ್ಟೂರಾದ ಉಡುಪಿನಲ್ಲಿ ಸ್ಕ್ರಿಪ್ಟ್ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ ಎಂಬ ಮಾಹಿತಿ ಕೇಳಿಬಂದಿದೆ. ಆದರೆ ಅವರು ಏಕಾಏಕಿ ‘777 ಚಾರ್ಲಿ’ ಸಿನಿಮಾದ ಭಾವನಾತ್ಮಕ ದೃಶ್ಯದ ಫೋಟೋವನ್ನು ಫೇಸ್ಬುಕ್ ಕವರ್ ಫೋಟೋ ಆಗಿ ಹಾಕಿರುವುದು ಅಭಿಮಾನಿಗಳಲ್ಲಿ ಹಲವು ಪ್ರಶ್ನೆಗಳನ್ನು ಹುಟ್ಟಿಸಿದೆ.
ಇನ್ನೊಂದೆಡೆ, ರಶ್ಮಿಕಾ ಮಂದಣ್ಣ ಅವರೊಂದಿಗೆ ನಡೆದಿದ್ದ ನಿಶ್ಚಿತಾರ್ಥ ಮುರಿದ ಬಳಿಕ ರಕ್ಷಿತ್ ಶೆಟ್ಟಿ ಅವರ ವೈಯಕ್ತಿಕ ಬದುಕಿನ ಬಗ್ಗೆ ಕೂಡ ಸಾಕಷ್ಟು ಚರ್ಚೆಗಳು ನಡೆದಿದ್ದವು. ಇತ್ತೀಚೆಗೆ ರಶ್ಮಿಕಾ ಮಂದಣ್ಣ ಅವರು ವಿಜಯ್ ದೇವರಕೊಂಡ ಅವರೊಂದಿಗೆ ಮದುವೆಯಾದ ಹಿನ್ನೆಲೆ, ಈ ಸಂದರ್ಭದಲ್ಲಿ ರಕ್ಷಿತ್ ಶೆಟ್ಟಿ ಹಂಚಿಕೊಂಡಿರುವ ಸ್ಯಾಡ್ ಫೋಟೋ ಮತ್ತಷ್ಟು ಕುತೂಹಲ ಹುಟ್ಟಿಸಿದೆ.
ಸೋಶಿಯಲ್ ಮೀಡಿಯಾದಲ್ಲಿ ಅಭಿಮಾನಿಗಳು ರಕ್ಷಿತ್ ಶೆಟ್ಟಿಗೆ ಬೆಂಬಲ ಸೂಚಿಸುತ್ತಿದ್ದಾರೆ. “ಹಳೆಯದನ್ನು ಮರೆತು ಮುಂದೆ ಸಾಗಿರಿ” ಎಂದು ಕೆಲವರು ಪ್ರೋತ್ಸಾಹ ನೀಡಿದರೆ, “ನಿಮ್ಮ ಕಂಬ್ಯಾಕ್ ಬೇರೆಯವರಿಗೆ ಸ್ಲಿಪ್ಪರ್ ಶಾಟ್ ಆಗಬೇಕು” ಎಂದು ಇನ್ನೂ ಕೆಲವರು ಕಾಮೆಂಟ್ ಮಾಡಿದ್ದಾರೆ.
ಗಮನಾರ್ಹ ಸಂಗತಿಯೆಂದರೆ, ರಕ್ಷಿತ್ ಶೆಟ್ಟಿ ಫೇಸ್ಬುಕ್‌ನಲ್ಲಿ ಕೊನೆಯದಾಗಿ 2025ರ ಏಪ್ರಿಲ್‌ನಲ್ಲಿ ಪೋಸ್ಟ್ ಮಾಡಿದ್ದರು. ದೀರ್ಘ ವಿರಾಮದ ಬಳಿಕ ಅವರು ಹಂಚಿಕೊಂಡಿರುವ ಈ ಫೋಟೋ ಅಭಿಮಾನಿಗಳಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.