ಸರಸ್ವತಿ*
“45” ಚಿತ್ರವು ಘೋಷಣೆಗೊಂಡಾಗಿನಿಂದ, ಬಿಡುಗಡೆಯ ವರೆಗೂ ಜನರಲ್ಲಿ ಒಂದು ಬಗೆಯ ಕುತೂಹಲವನ್ನು ಮೂಡಿಸಿತ್ತು. ಬಿಡುಗಡೆಯ ನಂತರ ತನ್ನ ವಿಭಿನ್ನವಾದ ಕಥಾ ಹಂದರದಿಂದ ಪ್ರೇಕ್ಷಕರ ಕಣ್ಮನಗಳನ್ನು ಸೆಳೆದಿದೆ.
ಒಬ್ಬ ಸಾಮಾನ್ಯ ಮನುಷ್ಯನ ಜೀವನದಲ್ಲಿ ಒಂದಿಷ್ಟು ಸವಾಲುಗಳು ಎದುರಾದಾಗ, ತನ್ನಲ್ಲೇ ನಡೆಯುವ ನಂಬಿಕೆ ಮತ್ತು ಭಯದ ನಡುವಿನ ಘರ್ಷಣೆ, ಸತ್ಯ ಮತ್ತು ಮಿಥ್ಯ, ಒಳ್ಳೆಯದು ಮತ್ತು ಕೆಟ್ಟದರ ನಡುವಿನ ಯುದ್ಧವನ್ನು “45” ಚಿತ್ರವೂ ಸಾಂಕೇತಿಕವಾಗಿ ಹೇಳುತ್ತದೆ.
ಕರುನಾಡ ಚಕ್ರವರ್ತಿ ಡಾ ಶಿವರಾಜ್ ಕುಮಾರ್, ರಿಯಲ್ ಸ್ಟಾರ್ ಉಪೇಂದ್ರ ಹಾಗೂ ರಾಜ್ ಬಿ ಶೆಟ್ಟಿ, ಕೌಸ್ತುಭಾ ಮಣಿ, ಜಿಶು ಸೇನ್ ಗುಪ್ತಾ ಮುಂತಾದವರ ಅಭಿನಯದ “45” ಚಿತ್ರಕ್ಕೆ ಖ್ಯಾತ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಆಕ್ಷನ್ ಕಟ್ ಹೇಳಿದ್ದಾರೆ. ಇದು ಅವರ ಚೊಚ್ಚಲ ನಿರ್ದೇಶನದ ಚಿತ್ರವಾಗಿದೆ. ಎಂ ರಮೇಶ್ ರೆಡ್ಡಿ ಸೂರಜ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ಈ ಚಿತ್ರವನ್ನು ನಿರ್ಮಿಸಿರುತ್ತಾರೆ.
ಚಿತ್ರದ ಬಗ್ಗೆ ಮತ್ತು ಅದರ ಡಿಜಿಟಲ್ ಪ್ರಸಾರದ ಬಗ್ಗೆ ಮಾತನಾಡಿದ ಡಾ ಶಿವರಾಜ್ ಕುಮಾರ್, “45 ಒಂದು ವಿಭಿನ್ನವಾದ ಕಥೆಯಾಗಿದೆ. ಜೀವನದಲ್ಲಿ ನಾವು ಮಾಡುವ ಆಯ್ಕಗಳು, ನಿರ್ಧಾರಗಳು ಮತ್ತು ಅದರೊಂದಿಗೆ ಬರುವ ಜವಾಬ್ದಾರಿಗಳನ್ನು, ಒಟ್ಟಾಗಿ ಹೇಳುವುದಾದರೆ ನಮ್ಮ ಜೀವನವನ್ನು ಬಿಂಬಿಸುವ ಕಥೆಯಾಗಿದೆ. ಜೀ5ನೊಂದಿಗೆ ನನ್ನ ಒಡನಾಟ ಬಹಳ ವಿಶೇಷವಾದದ್ದು. ಹೊಸ ಕಥೆಗಳಿಗೆ ಉತ್ತೇಜನ ನೀಡುವ
ಜೀ5ನಂತಹ ಡಿಜಿಟಲ್ ವೇದಿಕೆಯಲ್ಲಿ ಈ ಚಿತ್ರವು ಪ್ರಸಾರಗೊಳ್ಳುವುದು ನನಗೆ ಇನ್ನಷ್ಟು ಸಂತೋಷ ತಂದಿದೆ” ಎಂದು ಸಂತಸ ವ್ಯಕ್ತಪಡಿಸಿದರು.
ಇನ್ನು ಇದರ ಕುರಿತು ಮಾತನಾಡಿದ ರಿಯಲ್ ಸ್ಟಾರ್ ಉಪೇಂದ್ರ, ” ಈ ಚಿತ್ರವು ತಾತ್ವಿಕ ಹಾಗೂ ಧಾರ್ಮಿಕ ಮೌಲ್ಯಗಳನ್ನು ಮನರಂಜನಾತ್ಮಕವಾಗಿ ಹೇಳುತ್ತದೆ. ಹೊಸ ರೀತಿಯ ಕಥೆಗಳನ್ನು ಪ್ರೋತ್ಸಾಹಿಸುವ ಜೀ5 ಕನ್ನಡ ಈ ಚಿತ್ರವನ್ನು ಪ್ರಸಾರ ಮಾಡುತ್ತಿರುವುದು ಸಂತಸದ ಸಂಗತಿ. ಈ ಚಿತ್ರವು ಕೇವಲ ಮನರಂಜನೆ ನೀಡುವುದಷ್ಟೇ ಅಲ್ಲದೆ, ಜನರಿಗೆ ಮೌಲ್ಯಗಳನ್ನು ತಿಳಿಸಿ, ಅವರ ಮೇಲೆ ಆಳವಾದ ಪ್ರಭಾವವನ್ನು ಬೀರುತ್ತದೆ. ಕನ್ನಡ ಜೀ5 ಈ ಚಿತ್ರವನ್ನು ಪ್ರಸಾರ ಮಾಡುವ ಮೂಲಕ ಮತ್ತೊಮ್ಮೆ ಎಲ್ಲರ ಮನೆಮಾತಾಗಲಿದೆ. ಚಿತ್ರಮಂದಿರದಲ್ಲಿ ನೋಡುವ ಅವಕಾಶ ಕಳೆದುಕೊಂಡವರಿಗೆ ಜೀ5 ಸುವರ್ಣಾವಕಾಶ ಒದಗಿಸಿದೆ” ಎಂದರು.
ತನ್ನ ವಿಭಿನ್ನವಾದ ಕಥಾ ಹಂದರ, ಹೊಸತನದೊಂದಿಗೆ “45” ಚಿತ್ರ ಜನವರಿ 23ರಿಂದ ಜೀ5ನಲ್ಲಿ ಪ್ರಸಾರವಾಗಲಿದೆ.
ಜೀ5 ಕಿರುಪರಿಚಯ:
ಜೀ5 ಭಾರತದ ಅತಿ ಮುಖ್ಯ ಡಿಜಿಟಲ್ ವೇದಿಕೆಗಳಲ್ಲಿ ಒಂದಾಗಿದ್ದು, ಬಹುಭಾಷಾ ಕಥೆಗಳನ್ನು ಇಡೀ ಪ್ರಪಂಚಕ್ಕೆ ಕೊಂಡೊಯ್ಯುವಲ್ಲಿ ಯಶಸ್ವಿಯಾಗಿದೆ. ಇದು ಜೀ ಎಂಟರ್ಟೇನ್ಮೆಂಟ್ ಎಂಟರ್ಪ್ರೈಸಸ್ ಲಿಮಿಟೆಡ್ (ZEEL) ಅವರ ಡಿಜಿಟಲ್/ ಓ ಟಿ ಟಿ (OTT) ಮಾಧ್ಯಮವಾಗಿದೆ. ಕನ್ನಡ, ತಮಿಳು, ತೆಲುಗು, ಹಿಂದಿ, ಮಲಯಾಳಂ, ಬೆಂಗಾಲಿ, ಮರಾಠಿ, ಇಂಗ್ಲಿಷ್ ಭಾಷೆಗಳು ಸೇರಿದಂತೆ ಹಲವಾರು ಭಾಷೆಗಳ ಚಿತ್ರಗಳನ್ನು ಪ್ರಸಾರ ಮಾಡುತ್ತದೆ.





