ಸರಸ್ವತಿ*
ಬೆಂಗಳೂರು: ದಕ್ಷಿಣ ಭಾರತದ ಅತ್ಯಂತ ಪ್ರತಿಷ್ಠಿತ ಮಲ್ಟಿಪ್ಲೆಕ್ಸ್ ಸರಪಳಿಯಾದ ಎಎಂಬಿ ಸಿನಿಮಾಸ್ (AMB Cinemas), ತನ್ನ ನೂತನ ಶಾಖೆಯನ್ನು ಜನವರಿ 16, 2026 ರಂದು ಬೆಂಗಳೂರಿನಲ್ಲಿ ಉದ್ಘಾಟಿಸಲು ಸಜ್ಜಾಗಿದೆ. ಹೈದರಾಬಾದ್‌ನಲ್ಲಿ ಈಗಾಗಲೇ ಅತ್ಯುತ್ತಮ ಸಿನೆಮಾ ಅನುಭವಕ್ಕೆ ಹೆಸರಾಗಿರುವ ಎಎಂಬಿ ಸಿನಿಮಾಸ್, ಈಗ ಅದೇ ವೈಭವವನ್ನು ಉದ್ಯಾನ ನಗರಿ ಬೆಂಗಳೂರಿಗೂ ತರುತ್ತಿದೆ.
*ಒಂಭತ್ತು ಸ್ಕ್ರೀನ್ಸ್*: ಬೆಂಗಳೂರಿನ ಐತಿಹಾಸಿಕ ಮೆಜೆಸ್ಟಿಕ್ ಸರ್ಕಲ್‌ನಲ್ಲಿರುವ ಕಪಾಲಿ ಮಾಲ್‌ನಲ್ಲಿ ಈ ಮಲ್ಟಿಪ್ಲೆಕ್ಸ್ ತಲೆಎತ್ತಿದೆ. ಈ ಸಿನಿಮಾಸ್‌ನ ವಿಶೇಷತೆಯನ್ನು ನೋಡುವುದಾದರೆ, ಕಪಾಲಿ ಮಾಲ್‌ನ ಐದು ಅಂತಸ್ತುಗಳಲ್ಲಿ ಹರಡಿಕೊಂಡಿರುವ ಈ ಮಲ್ಟಿಪ್ಲೆಕ್ಸ್ ಒಟ್ಟು ಒಂಬತ್ತು ಪರದೆಗಳಿವೆ.

*ಬಾರ್ಕೋ ಲೇಸರ್ ಪ್ರೊಜೆಕ್ಷನ್*: ಸ್ಕ್ರೀನ್ 1, 2, 3, 4, 5, 7, 8 ಮತ್ತು 9 ರಲ್ಲಿ ಅತ್ಯುತ್ತಮ ಬಣ್ಣ ಹಾಗೂ ದೃಶ್ಯ ಸ್ಪಷ್ಟತೆಗಾಗಿ ಬಾರ್ಕೋ ಲೇಸರ್ ಪ್ರೊಜೆಕ್ಷನ್ ತಂತ್ರಜ್ಞಾನವನ್ನು ಎಎಂಬಿ ಸಿನಿಮಾಸ್‌ನಲ್ಲಿ ಬಳಸಲಾಗಿದೆ.
*ದಕ್ಷಿಣ ಭಾರತದ ಮೊದಲ ಡಾಲ್ಬಿ ಸಿನಿಮಾ*: ಸ್ಕ್ರೀನ್ 6 ವಿಶೇಷವಾಗಿದ್ದು, ಇದು ದಕ್ಷಿಣ ಭಾರತದ ಮೊದಲ ಡಾಲ್ಬಿ ಸಿನಿಮಾ ಪರದೆಯಾಗಿದೆ. ಇದು ಕ್ರಿಸ್ಟಿ 6K ಡಾಲ್ಬಿ ವಿಷನ್ ಪ್ರೊಜೆಕ್ಟರ್ ಮತ್ತು ಇಮ್ಮರ್ಸಿವ್ ಸೌಂಡ್ ವ್ಯವಸ್ಥೆಯನ್ನು ಹೊಂದಿದೆ.
*ಎಂ-ಲೌಂಜ್*: ಪ್ರೇಕ್ಷಕರಿಗೆ ಐಷಾರಾಮಿ ಸೌಕರ್ಯ ನೀಡಲು 'ಎಂ-ಲೌಂಜ್' ಎಂಬ ವಿಶೇಷ ಲೌಂಜ್ ಮತ್ತು ಆಸನ ವ್ಯವಸ್ಥೆಯನ್ನು ಪರಿಚಯಿಸಲಾಗಿದೆ. ಆಹಾರ ಮತ್ತು ಪಾನೀಯ: ಚಲನಚಿತ್ರ ವೀಕ್ಷಕರಿಗಾಗಿ ವಿಶೇಷವಾಗಿ ಆಯ್ಕೆ ಮಾಡಿದ ರುಚಿಕರವಾದ ಆಹಾರ ಮತ್ತು ಪಾನೀಯಗಳ ವ್ಯವಸ್ಥೆ ಇಲ್ಲಿದೆ.

ಹೈದರಾಬಾದ್‌ನಲ್ಲಿ ಈಗಾಗಲೇ ಯಶಸ್ಸು ಕಂಡಿರುವ ಎಎಂಬಿ ಸಿನಿಮಾಸ್, ಈಗ ಬೆಂಗಳೂರಿನ ಸಿನೆಮಾ ಪ್ರಿಯರಿಗೂ ಮತ್ತು ಗಣ್ಯರಿಗೂ ಒಂದು ಹೊಸ ಥರದ ಸಿನಿಮಾ ಅನುಭವವನ್ನು ನೀಡಲು ಸಿದ್ಧವಾಗಿದೆ.





