ರಾಘವೇಂದ್ರ ಅಡಿಗ ಎಚ್ಚೆನ್.

ಇದು ನಿಮ್ಮ ವಾಹಿನಿ ಕಲಾ ವೇದಿಕೆ ವತಿಯಿಂದ ಹೊಸ ವರ್ಷದ ಹಾಗೂ ಸಂಕ್ರಾಂತಿ ಹಬ್ಬದ ಅಂಗವಾಗಿ 20ನೇ ಸಾಂಸ್ಕೃತಿಕ ಸಿಂಚನ ಕಾರ್ಯಕ್ರಮವನ್ನು ಜನವರಿ 18ರ ಭಾನುವಾರದಂದು ರವೀಂದ್ರ ಕಲಾಕ್ಷೇತ್ರದ ನಯನ ಸಭಾಂಗಣದಲ್ಲಿ ಅದ್ದೂರಿಯಾಗಿ ನಡೆಸಲಾಯಿತು..

Vahini 5

ಈ ಕಾರ್ಯಕ್ರಮದಲ್ಲಿ ಹಲವಾರು ಕಲಾತಂಡಗಳಿಂದ ಸಾಂಸ್ಕೃತಿಕ ಕಾರ್ಯಕ್ರಮವನ್ನು ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭವನ್ನು ನಡೆಸಿಕೊಡಲಾಯಿತು.. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನ ಹಿರಿಯ ಪತ್ರಕರ್ತರಾದ ಗಂಡಸಿ ಸದಾನಂದ ಸ್ವಾಮಿ ಅವರು

Vahini 1

ವಹಿಸಿಕೊಂಡಿದ್ದರು. ವಿಶೇಷ ಆಹ್ವಾನಿತರಾಗಿ ರಾಜ್ ನ್ಯೂಸ್ ಪ್ರಧಾನ ಸಂಪಾದಕರಾದ ಬಿಎಸ್ ಮಂಜುನಾಥ್, ರಾಜ್ ನ್ಯೂಸ್ ನಿರ್ದೇಶಕರಾದ ಎನ್‌ಪಿ ಅನಿಲ್ ಕುಮಾರ್, ಗಾಯಕರು ಹಾಗೂ ನಟರಾದ ಶಶಿಧರ್ ಕೋಟೆ ಹಾಗೂ ಇವೆಂಟ್ ಕೋ ಆರ್ಡಿನೇಟರ್ ಶ್ರೀಮತಿ ಚಂದ್ರಿಕಾ ಅವರು ವಹಿಸಿಕೊಂಡಿದ್ದರು.. ಎಲ್ಲರೂ ಜೊತೆಗೂಡಿ ದೀಪ ಬೇಕಾಗುವ ಮೂಲಕ ಜೊತೆಗೆ ಕನ್ನಡಾಂಬೆಗೆ ಹಾಗೂ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ಕೊಟ್ಟರು.. ಕಾರ್ಯಕ್ರಮದಲ್ಲಿ ಹಲವು ಪ್ರತಿಭೆಗಳನ್ನ ಗುರುತಿಸಿ ಸನ್ಮಾನಿಸಲಾಯಿತು..

Vahini 2

ಇನ್ನು ದ್ವಿತೀಯಾರ್ಥದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷರಾದ ಎಂ ನರಸಿಂಹಲು, ನಾಟ್ಯ ಕಲಾಶ್ರೀ ಸಾಂಸ್ಕೃತಿಕ ವೇದಿಕೆಯ ಸಂಸ್ಥಾಪಕ ಕಾರ್ಯದರ್ಶಿಯಾದ ಶ್ರೀಮತಿ ಮೋನಿಕಾ ನವೀನ್ ಅವರು ಅಧ್ಯಕ್ಷತೆಯನ್ನು ವಹಿಸಿದ್ದರು.. ವಿಶೇಷ ಅತಿಥಿಗಳಾಗಿ ಸ್ಕ್ರೀನಿಂಗ್ ಸ್ಟಾರ್ ಸೊಲ್ಯೂಷನ್ಸ್ ನಿರ್ದೇಶಕರಾದ ಮಂಜುನಾಥ್ ಎಚ್ ಎಸ್ ರವರು ಹಾಗೂ ಶ್ರೇಯಸ್ ಎಂಟರ್ಪ್ರೈಸಸ್ ನಿರ್ದೇಶಕರಾದ ಮಂಜಪ್ಪ ಅವರು ವಹಿಸಿಕೊಂಡಿದ್ದರು.. ಮುಖ್ಯ ಅತಿಥಿಗಳಾಗಿ ಉದಯ ಕಾಮಿಡಿಯ ನಿರೂಪಕರಾದ ಮುದ್ದುಕೃಷ್ಣರವರು  ಎಲ್ಲರೂ ದೀಪ ಬೆಳಗುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಶುಭ ಹಾರೈಸಿದರು..

Vahini 3

ಇನ್ನು ಕಾರ್ಯಕ್ರಮದಲ್ಲಿ ಹಲವಾರು ಕಲಾತಂಡಗಳು ಭಾಗವಹಿಸಿದ್ದು ನೂರಾರು ಪ್ರತಿಭಾನ್ವಿತರು ಕಾರ್ಯಕ್ರಮದಲ್ಲಿ ತಮ್ಮ ಪ್ರತಿಭಾ ಪ್ರದರ್ಶನವನ್ನ ನಡೆಸಿದ್ದು ವಿಶೇಷವಾಗಿತ್ತು.

Vahini 4

ಈ ಒಂದು ಕಾರ್ಯಕ್ರಮ ಅರ್ಥಪೂರ್ಣವಾಗಿ ಜರುಗಿದ್ದು, ಕನ್ನಡವನ್ನ ಉಳಿಸಿ ಬೆಳೆಸುವ ಜೊತೆಗೆ , ಮುಂದಿನ ದಿನಗಳಲ್ಲಿ ಮತ್ತಷ್ಟು ಪ್ರತಿಭೆಗಳನ್ನು ಗುರುತಿಸುವ ಕೆಲಸ ನಡೆಯಲಿದೆ ಎಂದು ಇದು ನಿಮ್ಮ ವಾಹಿನಿ ಕಲಾವೇದಿಕೆಯ ಸಂಸ್ಥಾಪಕರಾದ ಕಿಶೋರ್ ಕುಮಾರ್ ಅವರು ತಿಳಿಸಿದರು

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ