ಸರಸ್ವತಿ*
ನಿರ್ಮಾಪಕ ಮಾಧವಾನಂದ ಅವರ ಕನ್ನಡ ಓಟಿಟಿ ಅರ್ಪಿಸುವ “ಮಹಾರಾಣಿ ಕ್ರಿಕೆಟ್ ಲೀಗ್ ಸೀಸನ್-1 MCL” ಸೆಲೆಬ್ರಿಟಿ ಮಹಿಳಾ ಕ್ರಿಕೆಟ್ ಟೂರ್ನಮೆಂಟ್ ಅಶೋಕ ರೈಸಿಂಗ್ ಸ್ಟಾರ್ ಕ್ರಿಕೆಟ್ ಸ್ಟೇಡಿಯಂ ನಲ್ಲಿ ಜನವರಿ 17ರಂದು 6 ಮಹಿಳಾ ಸೆಲೆಬ್ರಿಟಿ ಟಿಮ್ ಗಳು ಆಟವಾಡಿದವು. ಪೂಜ್ಯ ಶ್ರೀಜಂಬುನಾಥ ಮಳಿಮಠ ಗುರೂಜೀ ಜ್ಯೋತಿ ಬೆಳಗಿಸುವ ಮೂಲಕ ಚಾಲನೆ ನೀಡಿದರು. ಮ್ಯಾಚ್ ವೀಕ್ಷಿಸಲು ಶಿಕ್ಷಣ ಸಚಿವರಾದ ಮಧು ಬಂಗಾರಪ್ಪ, ಮಾಜಿಸಚಿವರಾದ ಎಚ್ ಎಮ್ ರೇವಣ್ಣ, ಉಪ್ಪಾರ ಅಭಿವೃದ್ಧಿ ನಿಗಮ ಅಧ್ಯಕ್ಷ ಭರಮಣ್ಣ ಉಪ್ಪಾರ, ಫಿಲಂ ಚೇಂಬರ್ ಕಾರ್ಯದರ್ಶಿ ಡಿ ಕೆ ರಾಮಕೃಷ್ಣ (ಪ್ರವೀಣ್), ಕಲಾವಿದರಾದ ಗುರುರಾಜ್ ಹೊಸಕೋಟೆ, ವಿಕ್ರಂ ಸೂರಿ, ರಘುಭಟ್, ನಿರಂಜನ್ ದೇಶಪಾಂಡೆ, ನಿರೂಪಕಿ ಬಿಗ್ ಬಾಸ್ ಜಾನ್ಹವಿ ಸೇರಿದಂತೆ ಮುಂತಾದವರು ಮುಖ್ಯ ಅತಿಥಿಗಳಾಗಿ ಆಗಮಿಸಿ “MCL” ಸೀಸನ್ 1 ರ ಆಟಗರರಿಗೆ ತಮ್ಮ ಪ್ರೋತ್ಸಾಹದ ನುಡಿಗಳ ಮೂಲಕ ಹಾರೈಸಿದರು.

ಈ ಟೂರ್ನಿಯಲ್ಲಿ ಆರು ತಂಡಗಳು ಭಾಗವಹಿಸಿದ್ದು, ಎಮ್ ಸಿ ಎಲ್ ಟೈಮ್ಸ್ insight ವಾರಿಯರ್ಸ್ ಓನರ್ ಶರತ್ ಕುಮಾರ್ ಎಸ್, ಎನ್ ಎಸ್ ಆರ್ ರೈಡರ್ಸ್ ಓನರ್ ರಘುಕುಮಾರ್ ಬಿ, ವಿ ಪಿ ಚಾಲೆಂಜರ್ಸ್ ಓನರ್ ಆರ್ ಎಸ್ ಮಹೇಶ್, ಪಿ ಆರ್ ಎಮ್ ಟೈಟನ್ಸ್ ಓನರ್ ಪ್ರೇಮ ಗೌಡ, ಕ್ಲಾಸಿಕ್ ಕ್ವೀನ್ ಓನರ್ ಲಕ್ಷ್ಮಣ ಉಪ್ಪಾರ್, ಆರ್ ಜೆ ರಾಯಲ್ ಓನರ್ ರೇನೇಶ್ ಸೇರಿದಂತೆ ಸೆಲೆಬ್ರಿಟಿ ಪ್ಲೇಯರ್ ಗಳಾದ ಸ್ಫೂರ್ತಿ ವಿಶ್ವಾಸ, ಜಯಲಕ್ಷ್ಮಿ, ಕವಿತಾ ಕಂಬಾರ, ಪ್ರೇಮ ಗೌಡ, ವಾಣಿಶ್ರೀ 60 ಆಟಗಾರರಿದ್ದರು. ಎನ್ ಎಸ್ ಆರ್ ರೈಡರ್ಸ್ ಓನರ್ ರಘುಕುಮಾರ್ ಟಿಮ್ ಎಮ್ ಸಿ ಎಲ್ ಸೀಸನ್ 1ರ ಕಪ್ ಗೆದ್ದು ತಮ್ಮದಾಗಿಸಿದರು. ಕ್ಲಾಸಿಕ್ ಕ್ವೀನ್ ಓನರ್ ಲಕ್ಷ್ಮಣ ಉಪ್ಪಾರ್ ಧಾರವಾಡ ರನ್ನರ್ ಅಪ್ ಆದರು. ಖ್ಯಾತ ನಿರೂಪಕ ಹರೀಶ್ ನಾಗರಾಜ್ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರೂಪಣೆ ಮಾಡಿದರು. ಈ ಪಂದ್ಯಗಳನ್ನು ಆನಂದ್ ಸ್ಪೋರ್ಟ್ ನಲ್ಲಿ ಲೈವ್ ವೀಕ್ಷಿಸಲು ಅನುಕೂಲ ಮಾಡಲಾಗಿತ್ತು.
“MCL” ಟೂರ್ನಮೆಂಟ್ ನ ನಿರ್ಮಾಪಕ ಮಾಧವಾನಂದ ಜೊತೆಗೆ ಕುಮಾರ್, ಮೀನಾ ಗೌಡ ಹಾಗು ಕಲಾವಿದೆ ರೇಣು ಶಿಖಾರಿಯವರು ಅಯೋಜಿಸಿದ್ದರು. “MCL” ಸೀಸನ್ 1 ರ ಪಂದ್ಯಗಳು ಜನವರಿ 17(ಒಂದು ದಿನ)ರಂದು ಬೆಂಗಳೂರಿನ ಅಶೋಕ್ ರೈಸಿಂಗ್ ಸ್ಟಾರ್ ಕ್ರಿಕೆಟ್ ಗ್ರೌಂಡ್ ನಲ್ಲಿ ಯಶಸ್ವಿಯಾಗಿ ಜರುಗಿತು.





