ಕೌಶಲ್ಯ ತರಬೇತಿ ಪಡೆದಿರುವ ಕರ್ನಾಟಕದ ಪ್ರತಿಭಾನ್ವಿತರಿಗೆ ಜಾಗತಿಕ ಮಟ್ಟದಲ್ಲಿ ಉದ್ಯೋಗ ಅವಕಾಶಗಳನ್ನು ಒದಗಿಸುವ ನಿಟ್ಟಿನಲ್ಲಿ ಸರ್ಕಾರಿ ಉಪಕರಣ ಮತ್ತು ತರಬೇತಿ ಕೇಂದ್ರ (ಜಿಟಿಟಿಸಿ) ಈಗ ಆಸ್ಟ್ರೇಲಿಯಾದ ಜೊತೆ ಒಪ್ಪಂದಕ್ಕೆ ಸಹಿ ಹಾಕಿದೆ.
ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಜೀವನೋಪಾಯ, ರಾಯಚೂರು ಜಿಲ್ಲಾ ಉಸ್ತುವಾರಿ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಆರ್. ಪಾಟೀಲ್ ಸಮ್ಮುಖದಲ್ಲಿ ಜಿಟಿಟಿಸಿ ವ್ಯವಸ್ಥಾಪಕ ನಿರ್ದೇಶಕ ಸಿದ್ದಲಿಂಗಪ್ಪ ಪೂಜಾರಿ ಮತ್ತು ವರ್ಕ್ ಇನಿಶಿಯೇಟಿವ್ಸ್‌ನ ಸ್ಥಾಪಕ ಮತ್ತು ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಕ್ರಿಸ್ ಕಾರ್ಮನ್ ಗುರುವಾರ ವಿಕಾಸಸೌಧದಲ್ಲಿ ಒಪ್ಪಂದಕ್ಕೆ ಸಹಿ ಹಾಕಿದರು.
ಆಸ್ಟ್ರೇಲಿಯಾದಲ್ಲಿ ಕೌಶಲ್ಯಭರಿತ ಉದ್ಯೋಗಿಗಳ ಕೊರತೆ ನೀಗಿಸಲು ಮತ್ತು ಕರ್ನಾಟಕದ ಕೌಶಲ್ಯಪೂರ್ಣ ಕಾರ್ಯಪಡೆಗೆ ಜಾಗತಿಕ ವೃತ್ತಿ ಮಾರ್ಗ ಸೃಷ್ಟಿಸಲು ಈ ಕ್ರಮ ಕೈಗೊಳ್ಳಲಾಗಿದೆ.
ಕರ್ನಾಟಕದ ವೃತ್ತಿಪರರು, ವ್ಯಾಪಾರಿಗಳು ಮತ್ತು ಸಮುದಾಯ ಕಾರ್ಯಕರ್ತರನ್ನು ಆಸ್ಟ್ರೇಲಿಯಾದ ಉದ್ಯೋಗದಾತರು ಸಂಪರ್ಕಸಲಿದ್ದಾರೆ. ನಿರ್ಮಾಣ, ಆರೋಗ್ಯ ರಕ್ಷಣೆ, ಉತ್ಪಾದನೆ ಮತ್ತು ತಂತ್ರಜ್ಞಾನದಂತಹ ಕ್ಷೇತ್ರಗಳಲ್ಲಿ ಅವಕಾಶಗಳು ಸಿಗಲಿದೆ.
ಈ ಪಾಲುದಾರಿಕೆಯಡಿ ಉದ್ಯೋಗದಾತರು ಮತ್ತು ಸರ್ಕಾರಿ ಸಂಸ್ಥೆಗಳನ್ನು ಸಂಪರ್ಕಿಸಲು ವರ್ಕ್ ಇನಿಶಿಯೇಟಿವ್ಸ್‌ನ ನವೀನ ತಂತ್ರಜ್ಞಾನವನ್ನು ಬಳಸಿಕೊಳ್ಳಲಾಗುತ್ತದೆ.
ಆಸ್ಟ್ರೇಲಿಯಾದಲ್ಲಿ ನಿರ್ಮಾಣ ಕ್ಷೇತ್ರದಲ್ಲಿ (100,000 ಕ್ಕಿಂತ ಹೆಚ್ಚು), ಆರೋಗ್ಯ ರಕ್ಷಣೆ ಮತ್ತು ವೃದ್ಧರ ಆರೈಕೆ ಕ್ಷೇತ್ರದಲ್ಲಿ (400,000 ಕ್ಕಿಂತ ಹೆಚ್ಚು), ಸೈಬರ್ ಭದ್ರತೆ, AI ಮತ್ತು ಸಾಫ್ಟ್‌ವೇರ್ ಅಭಿವೃದ್ಧಿ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಕೌಶಲ್ಯ ತರಬೇತಿ ಪಡೆದವರ ಕೊರತೆ ಇದೆ ಎಂದು ಕ್ರಿಸ್ ಕಾರ್ಮನ್ ತಿಳಿಸಿದ್ದಾರೆ.
“ಕರ್ನಾಟಕದ ಈ ಕ್ರಮ ನಮಗೆ ಅನುಕೂಲವಾಗಲಿದೆ. ಕರ್ನಾಟಕದ ಕೌಶಲ್ಯ ತರಬೇತಿದವರು ನಮ್ಮಲ್ಲಿರುವ ಕೊರತೆ ನೀಗಿಸಬಲ್ಲರು ಎಂಬ ವಿಶ್ವಾಸವಿದೆ ಎಂದು ತಿಳಿಸಿದರು.





