ಪ್ರ : ಬೇಸಿಗೆಯಲ್ಲಿ ಹೊರಗೆ ಹೊರಡುವಾಗ ಅಗತ್ಯವಾಗಿ ನಾನು 30 +SPF ಸನ್ಸ್ಕ್ರೀನ್ಬಳಸಿಯೇ ಹೊರಡುತ್ತೇನೆ. ಚಳಿಗಾಲದಲ್ಲೂ ಹೀಗೆ ಮಾಡಬೇಕಾದುದು ಅನಿವಾರ್ಯವೇ?

ಉ : ಬೇಸಿಗೆ ತರಹ ಚಳಿಗಾಲದಲ್ಲೂ ಬಿಸಿಲು ತೀವ್ರವಾಗಿಯೇ ಇರುತ್ತದೆ. ಆದರೆ ಅದು ನಮಗೆ ಗೊತ್ತಾಗುವುದಿಲ್ಲ, ಅಷ್ಟೆ. ಏಕೆಂದರೆ ಚಳಿಗಾಲದ ಥಂಡಿ ಹಾಗಿರುತ್ತದೆ. ಸೂರ್ಯನ ತೀಕ್ಷ್ಣ ಕಿರಣಗಳಂತೂ ಎಲ್ಲಾ ಕಾಲದಲ್ಲೂ ಒಂದೇ ತರಹ ಕೆಲಸ ಮಾಡುತ್ತದೆ. ಹೀಗಾಗಿ ಬೇಸಿಗೆ, ಮಳೆಗಾಲ, ಚಳಿಗಾಲವೇ ಇರಲಿ, ಸನ್‌ ಸ್ಕ್ರೀನ್‌ ಲೋಶನ್‌ ಬಳಸದೆ ಇರಬೇಡಿ. ನೀವು ಬಳಸುವ ಸನ್‌ ಸ್ಕ್ರೀನ್‌ ಹೆಚ್ಚಿನ ಮಾಯಿಶ್ಚರೈಸಿಂಗ್‌ನರಿಶಿಂಗ್‌ ಅಂಶ ಹೊಂದಿರಬೇಕು ಎಂಬುದನ್ನು ನೆನಪಿಡಿ. ಮನೆಯಿಂದ ಹೊರಗೆ ಹೊರಡುವ ಮೊದಲು ಸನ್‌ ಸ್ಕ್ರೀನ್‌ ಬಳಸಿದ ನಂತರ, ತುಸು ಫೇಸ್‌ ಪೌಡರ್‌ ಹಚ್ಚಿಕೊಳ್ಳಿ ಅಥವಾ ಲೈಟ್‌ ಮೇಕಪ್ ಮಾಡಿಕೊಳ್ಳಿ.

 

ಪ್ರ : ನನಗೀಗ 30 ಪ್ರಾಯ. ನನಗೆ ವಿಪರೀತ ತಲೆಗೂದಲು ಉದುರುತ್ತಿರುತ್ತದೆ. ಹೀಗೆ ಉದುರಿದ ಕೂದಲಿನ ಜಾಗದಲ್ಲಿ ಹೊಸ ಕೂದಲು ಹುಟ್ಟಿ ಬರಲು ನಾನು ಏನು ಮಾಡಬೇಕು?

ಉ : 30+ ನಂತರ ಕೂದಲು ಉದುರುವಿಕೆ ಒಂದು ಸಾಮಾನ್ಯ ಪ್ರಕ್ರಿಯೆ ಎನಿಸಿದೆ. ಇದಕ್ಕೆ ಹಲವಾರು ಕಾರಣಗಳು ನಿಮ್ಮ ಆಹಾರದಲ್ಲೇ ಇರುತ್ತದೆ. ನೀವು ಆಹಾರದಲ್ಲಿ ಯಾವೆಲ್ಲ ಅಂಶ ಬೆರೆಸಿಕೊಳ್ಳುತ್ತೀರಿ ಎಂಬುದು ಬಲು ಮುಖ್ಯ. ಕೂದಲಿನ ಉತ್ತಮ ಆರೋಗ್ಯಕ್ಕೆ ಅತ್ಯಗತ್ಯ ಬೇಕಾದುದು ಪ್ರೋಟೀನ್‌. ನಿಮ್ಮ ದೇಹದಲ್ಲಿ ಪ್ರೋಟೀನ್‌ಅಂಶದ ಕೊರತೆ ಇದ್ದರೆ, ಅದು ಕೂದಲಿನ ಬೆಳ;ಗೆ ಮೇಿ ಪರಿಣಾಮ ಬೀರುತ್ತದೆ. ಹೀಗಾಗಿ ನಿಮ್ಮ ಆಹಾರದಲ್ಲಿ ಪ್ರೋಟೀನ್‌ ಅಂಶ ಹೆಚ್ಚಿಸಲು ಹಾಲಿನ ಉತ್ಪನ್ನಗಳು, ಮೊಳಕೆ ಕಟ್ಟಿದ ಕಾಳು, ಬೇಳೆ ಇತ್ಯಾದಿ ಹೆಚ್ಚಿಸಿ. ಹೆಲ್ದಿ ಹೇರ್‌ ಗಾಗಿ ಬಾದಾಮಿ, ಹೂಕೋಸು, ಅಣಬೆ, ಮೊಟ್ಟೆ ಇತ್ಯಾದಿಗಳಲ್ಲಿ ಲಭ್ಯವಿರುವ ಬಯೋಟಿನ್‌ ಎಂಬ ವಿಟಮಿನ್‌ ಬಲು ಪ್ರಭಾಕಾರಿ. ಕೂದಲು ಉದುರುವಿಕೆಯನ್ನು ತಡೆಯಲು ಇದರ ಸತತ ಸೇನೆ ಬಲು ಮುಖ್ಯ. ಇಂಥದ್ದನ್ನು ಬಳಸಿ ನಿಮ್ಮ ದೇಹದಲ್ಲಿ ಈ ವಿಟಮಿನ್‌ ಕೊರತೆಯನ್ನು ನೀಗಿಸಿ. ಹುರಿಗಡಲೆ, ಹಸಿ ಬಟಾಣಿ, ರಾಜ್ಮಾ, ಕಡಲೆಕಾಳು, ಗೋಡಂಬಿ ಇತ್ಯಾದಿಗಳನ್ನು ದಿನ ಅಲ್ಪ ಪ್ರಮಾಣದಲ್ಲಿ ಸೇವಿಸಿ. ಇದರಿಂದ ನಿಮ್ಮ ಕೂದಲಿನ ಬೆಳವಣಿಗೆಗೆ ಬೇಕಾದ ಕಬ್ಬಿಣಾಂಶ ಧಾರಾಳ ಸಿಗುತ್ತದೆ.

ಈ ಕಬ್ಬಿಣಾಂಶದ ಕೊರತೆಯಿಂದ ಕೂದಲು ಉದುರುವಿಕೆ, ಬೋಳುತಲೆಯ ಸಮಸ್ಯೆ ಹೆಚ್ಚುತ್ತದೆ, ಉಳಿದ ಕೂದಲು ನಿರ್ಜೀವ ಎನಿಸಬಹುದು. ವಿಟಮಿನ್‌ಈ, ಹೇರ್‌ ಗ್ರೋಥ್‌ ಹಾಗೂ ಶೈನಿಂಗ್‌ ಗೆ ಬಲು ಪರಿಣಾಮಕಾರಿ ಆಗಿದೆ. ಹೀಗಾಗಿ ಸಮೃದ್ಧ ವಿಟಮಿನ್‌ಅಂಶಕ್ಕಾಗಿ ಕ್ಯಾರೆಟ್‌, ನುಗ್ಗೆಸೊಪ್ಪು, ಕುಂಬಳ, ಸಿಹಿಗೆಣಸು, ಹಾಲು ಮೊಸರು ಇತ್ಯಾದಿ ಧಾರಾಳ ಸೇವಿಸಬೇಕು. ಹಾಗೆಯೇ ವಿಟಮಿನ್‌ ಸಿಯ ಅಂಶಕ್ಕಾಗಿ ನಿಂಬೆ, ನೆಲ್ಲಿ, ಸೇಬು, ಸೀಬೆ, ಸ್ಟ್ರಾಬೆರಿ ಇತ್ಯಾದಿ ಸೇವಿಸಿ.

ಕೂದಲು ಉದುರುವಿಕೆಯ ಇತರ ಕಾರಣಗಳಲ್ಲಿ ಟೆನ್ಶನ್‌ ಅತಿ ಪ್ರಧಾನವಾದುದು. ಹೀಗಾಗಿ ನಿಮ್ಮ ಟೆನ್ಶನ್‌ ಕಡಿಮೆ ಆಗುವಂತೆ ಧ್ಯಾನ, ಯೋಗ ಇತ್ಯಾದಿ ನಿಯಮಿತವಾಗಿ ಮಾಡಿ. ಈ ವಯಸ್ಸಿನಲ್ಲಿ ನೀವು ವಿವಿಧ ಹೇರ್‌ ಸ್ಟೈಲ್ಸ್‌ ಟ್ರೈ ಮಾಡ ಬಯಸುವಿರಿ. ಇದರಿಂದ ನಿಮ್ಮ ಕೂದಲು ದುರ್ಬಲ ಆದೀತು. ಹೀಗಾಗಿ ಹೆಚ್ಚಿನ ಹೇರ್‌ ಎಕ್ಸ್ ಪೆರಿಮೆಂಟ್ಸ್ ಟ್ರೈ ಮಾಡಬೇಡಿ. ಸೌಂದರ್ಯ ತಜ್ಞೆಯರ ಸಲಹೆಯ ಮೇರೆಗೆ ಮಾತ್ರ, ಹೊಸತನ್ನು ಟ್ರೈ ಮಾಡಬೇಕು.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ