ವಧುವಿನ ಮುಖದ ಸೌಂದರ್ಯವನ್ನು ಹೆಚ್ಚಿಸಲು ಏನು ಮಾಡಬಹುದು ಎಂಬುದನ್ನು ನೀವು ಸಹ ತಿಳಿದಿರಬೇಕು…….!

ವಧು ತನ್ನ ಮದುವೆಯಲ್ಲಿ ಸುಂದರವಾಗಿ ಕಾಣಲು ಕಲೆಗಳಿಲ್ಲದ ತ್ವಚೆಯ ಮುಖವನ್ನು ಪಡೆಯಲು ಇಷ್ಟಪಡುತ್ತಾಳೆ. ವಧುವಿನ ಮುಖದ ಆರೈಕೆಗಾಗಿ ಮಾರುಕಟ್ಟೆಯಲ್ಲಿ ಹಲವಾರು ಬಗೆಯ ಫೇಸ್‌ ಪ್ಯಾಕ್‌ ಗಳು ಲಭ್ಯವಿದ್ದರೂ, ಈ ಸ್ಕಿನ್‌ ಕೇರ್‌ ಪ್ಯಾಕ್‌ ಅಥವಾ ಫೇಸ್‌ ಪ್ಯಾಕ್‌ ಚಿಕಿತ್ಸೆಯು ಸಂಪೂರ್ಣವಾಗಿ ರಾಸಾಯನಿಕ ಮುಕ್ತವಾಗಿದ್ದು, ನಿಮ್ಮ ಚರ್ಮ ಅಥವಾ ಮುಖಕ್ಕೆ ಯಾವುದೇ ಹಾನಿಯಾಗದಂತೆ ನೋಡಿಕೊಳ್ಳುವುದು ಬಹಳ ಮುಖ್ಯ.

ದಿನದ ಗಡಿಬಿಡಿ ಮತ್ತು ಅನಿಯಮಿತ ವೇಳಾಪಟ್ಟಿಯಿಂದಾಗಿ, ವಧು ಉತ್ತಮ ತ್ವಚೆಯನ್ನು ಕಾಪಾಡಿಕೊಳ್ಳುವುದು ಸ್ವಲ್ಪ ಕಷ್ಟ ಮತ್ತು ಆಗಾಗ್ಗೆ ಬ್ಯೂಟಿ ಪಾರ್ಲರ್‌ ಗೆ ಹೋಗಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಕೆಲವು ಮನೆಮದ್ದುಗಳು ಮತ್ತು ಸ್ಕಿನ್‌ ಕ್ರಾಫ್ಟ್ ಸಲಹೆಗಳು ಉಪಯುಕ್ತವಾಗಿರುತ್ತವೆ. ಇವು ವಧುವಿನ ಚರ್ಮ ಮತ್ತು ಮುಖವನ್ನು ಹೊಳೆಯುವಂತೆ ಮಾಡುತ್ತವೆ. ಮನೆಯಲ್ಲೇ ಮಾಡಲು ಮತ್ತು ಬಳಸಲು ಸುಲಭವಾಗಿರುತ್ತವೆ.

ವಧು 1 ವಾರ, ತಿಂಗಳು ಅಥವಾ ಅದಕ್ಕಿಂತ ಕಡಿಮೆ ಅವಧಿಯಲ್ಲಿ ಹೊಳೆಯುವ ಮುಖವನ್ನು ಪಡೆಯಲು ಬಯಸಿದರೆ ಈ ಫೇಸ್ ಪ್ಯಾಕ್‌ ಗಳು ಉತ್ತಮ ಆಯ್ಕೆಯಾಗಿರುತ್ತವೆ.

ವಧುವಿಗಾಗಿ ಫೇಸ್ಪ್ಯಾಕ್

ಅರಿಶಿನ ಮತ್ತು ಶ್ರೀಗಂಧದ ಫೇಸ್‌ ಪ್ಯಾಕ್‌, ಭಾರತೀಯ ವಿವಾಹಗಳಲ್ಲಿ ಅರಿಶಿನಕ್ಕೆ ಬಹಳ ವಿಶೇಷವಾದ ಸ್ಥಾನವಿದೆ. ಒಂದು ಇಡೀ ದಿನದ ಆಚರಣೆಯು ಈ ಗಾಢ ಬಣ್ಣಕ್ಕೆ ಮೀಸಲಾಗಿರುತ್ತದೆ. ಇದು ಬ್ಯಾಕ್ಟೀರಿಯಾ ವಿರೋಧಿ ಗುಣಲಕ್ಷಣಗಳಿಗೆ ಹೆಸರುವಾಸಿಯಾಗಿದೆ ಮತ್ತು ಸೌಂದರ್ಯವರ್ಧಕ ಎಂದು ಪರಿಗಣಿಸಲಾಗುತ್ತದೆ. ಆದ್ದರಿಂದ ಇದು ವಧುವಿಗೆ ಅತ್ಯಗತ್ಯ ಆಗಿರುತ್ತದೆ. ಇದಕ್ಕಾಗಿ ಅರಿಶಿನ ಅಥವಾ ಶ್ರೀಗಂಧದ ಫೇಸ್‌ ಮಾಸ್ಕ್ ಗಳು ಬಹಳ ಜನಪ್ರಿಯವಾಗಿವೆ.

ನಮ್ಮ ಮುಖದ ಬಣ್ಣ ಮತ್ತು ಗುಣಮಟ್ಟವನ್ನು ಸುಧಾರಿಸಲು, ಪಾರ್ಲರ್‌ ಗೆ ಹೋಗುವ ಬದಲು ಕೆಲವು ನೈಸರ್ಗಿಕ ಮನೆ ಮದ್ದುಗಳೊಂದಿಗೆ ನಮ್ಮ ಚರ್ಮಕ್ಕೆ ಚಿಕಿತ್ಸೆ ನೀಡುವುದು ಉತ್ತಮ. ಇದಕ್ಕಾಗಿ ಫೇಸ್‌ ಪ್ಯಾಕ್‌ ಉತ್ತಮ ಆಯ್ಕೆಯಾಗಿದೆ.

ವಧುವಿನ ಸೌಂದರ್ಯ ಮತ್ತು ಅವಳ ಮುಖದ ಚರ್ಮದ ಕಾಂತಿಯನ್ನು ಹೆಚ್ಚಿಸಲು ಮದುವೆಗೆ 1-2 ವಾರಗಳ ಮೊದಲು ಫೇಸ್ ಪ್ಯಾಕ್‌ ನ್ನು ಬಳಸಲು ಪ್ರಾರಂಭಿಸಿ. ಏಕೆಂದರೆ ಇದು ಅನೇಕ ನೈಸರ್ಗಿಕ ಪೋಷಕಾಂಶಗಳನ್ನು ಒಳಗೊಂಡಿರುತ್ತದೆ. ಅದು ಚರ್ಮವನ್ನು ಮೃದುವಾಗಿಸುತ್ತದೆ, ಹೊಳೆಯುವಂತೆ ಮಾಡುತ್ತದೆ, ಜೊತೆಗೆ ಚರ್ಮವನ್ನು ಬಿಗಿಗೊಳಿಸುತ್ತದೆ.

13022012vk0349

ಅರಿಶಿನದ ಫೇಸ್ಪ್ಯಾಕ್

ಬೇಕಾಗುವ ಸಾಮಗ್ರಿ : 1 ಚಮಚ ಅರಿಶಿನ ಪುಡಿ, 3 ಚಮಚ ಕಡಲೆಹಿಟ್ಟು, 2 ಚಮಚ ಮೊಸರು, 2 ಚಮಚ ಹಸಿ ಹಾಲು, 2 ಚಮಚ  ರೋಸ್‌ ವಾಟರ್‌.

ಮಾಡುವುದು ಹೇಗೆ? : ಅರಿಶಿನ ಪುಡಿ ಮತ್ತು ಕಡಲೆಹಿಟ್ಟನ್ನು ಮಿಶ್ರ ಮಾಡಿ. ಈ ಪುಡಿಯನ್ನು ಗಾಳಿಯಾಡದ ಡಬ್ಬಿಯಲ್ಲಿ ಸಂಗ್ರಹಿಸಿಡಿ. ಒಂದು ಬಟ್ಟಲಲ್ಲಿ 1-2 ಚಮಚ ಈ ಪುಡಿಯನ್ನು ತೆಗೆದುಕೊಳ್ಳಿ. ಇದಕ್ಕೆ 2 ಚಮಚ ಮೊಸರು, 2 ಚಮಚ ಹಸಿ ಹಾಲು, 2 ಚಮಚ ರೋಸ್‌ ವಾಟರ್‌ ಸೇರಿಸಿ ಇದನ್ನು ಪೇಸ್ಟ್ ಮಾಡಿ 4-5 ನಿಮಿಷ ಬಿಡಿ.

ಈಗ ಈ ಫೇಸ್‌ ಮಾಸ್ಕ್ ನ್ನು ಸ್ವಚ್ಛವಾದ ಮುಖ ಮತ್ತು ಕುತ್ತಿಗೆಗೆ ಹಚ್ಚಿಕೊಂಡು, 20 ನಿಮಿಷ ಹಾಗೇ ಬಿಡಿ. ನಂತರ ಕೈಯನ್ನು ಒದ್ದೆ ಮಾಡಿಕೊಂಡು, ಕೈಗಳಿಂದ ನಿಧಾನವಾಗಿ ವೃತ್ತಾಕಾರವಾಗಿ ಉಜ್ಜಿಕೊಳ್ಳಿ. ನಂತರ ಶುದ್ಧ ನೀರಿನಿಂದ ತೊಳೆದು, ಮಾಯಿಶ್ಚರೈಸರ್‌ ಹಚ್ಚಿಕೊಳ್ಳಿ.

ಲಾಭ : ನೈಸರ್ಗಿಕ ಪದಾರ್ಥಳಿಂದ ತಯಾರಿಸಿದ ಫೇಸ್‌ ಪ್ಯಾಕ್‌ ನಿಮ್ಮ ಚರ್ಮವನ್ನು ನೈಸರ್ಗಿಕವಾಗಿ ಪೋಷಿಸುತ್ತದೆ. ಮಾತ್ರವಲ್ಲ, ತ್ವಚೆಯ ಹೊಳಪನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

ಆ್ಯಂಟಿ ಏಜೆಂಟ್‌ : ಮನೆಯಲ್ಲಿ ತಯಾರಿಸಿದ ಪೇಸ್ಟ್ ನ್ನು ಹಚ್ಚುವುದರಿಂದ ಮುಖದ ಮೇಲಿನ ನೆರಿಗೆ ಮತ್ತು ಸುಕ್ಕುಗಳನ್ನು ಕಡಿಮೆ ಮಾಡುತ್ತದೆ.

ಮೊಡವೆಗಳನ್ನು ಕಡಿಮೆ ಮಾಡುತ್ತದೆ : ಈ ಪೇಸ್ಟ್ ನಲ್ಲಿರುವ ನೈಸರ್ಗಿಕ ಪದಾರ್ಥಗಳು ಚರ್ಮವನ್ನು ಸ್ವಚ್ಛವಾಗಿಡಲು ಸಹಾಯ ಮಾಡುತ್ತದೆ. ಇದು ಮುಖದ ಮೇಲೆ ಧೂಳು ಸಂಗ್ರಹವಾಗುವುದನ್ನು ತಡೆದು, ಮೊಡವೆಗಳಿಗೆ ಪರಿಹಾರ ನೀಡುತ್ತದೆ.

ಗ್ಲೋಯಿಂಗ್ಸ್ಕಿನ್‌ : ಇದರಲ್ಲಿರುವ ಹಾಲು ಮತ್ತು ಅರಿಶಿನ ಚರ್ಮವನ್ನು ಹೊಳೆಯುವಂತೆ ಮಾಡಲು ಸಹಾಯ ಮಾಡುತ್ತದೆ. ಮದುವೆಯ ದಿನಕ್ಕೆ ಒಂದು ತಿಂಗಳ ಮೊದಲು ಈ ಪೇಸ್ಟ್ ನ್ನು ಹಚ್ಚುವುದರಿಂದ ನಿಮ್ಮ ಮುಖ ಪ್ರಕಾಶಮಾನವಾಗಿ ಮತ್ತು ಕಾಂತಿಯುತವಾಗಿ ಕಾಣುತ್ತದೆ. ಜೊತೆಗೆ ನೀವು ಪಾರ್ಲರ್‌ ವೆಚ್ಚವನ್ನೂ ಉಳಿಸಬಹುದು.

ಶ್ರೀಗಂಧದ ಪೇಸ್ಟ್ ಮುಖದ ತ್ವಚೆಯ ಹೊಳಪನ್ನು ಹೆಚ್ಚಿಸಲು, ನೀವು ಶ್ರೀಗಂಧದ ಪೇಸ್ಟ್ ಬಳಸಬಹುದು. ಇದು ನಿಮ್ಮ ಮುಖದ ಮೇಲೆ ವಿಶೇಷ ರೀತಿಯ ಹೊಳಪು ನೀಡುವುದಲ್ಲದೆ, ನಿಮಗೆ ರಾಯಲ್ ಲುಕ್‌ ನೀಡುತ್ತದೆ.

ಶ್ರೀಗಂಧದ ಫೇಸ್ ಪ್ಯಾಕ್

ಬೇಕಾದ ಸಾಮಗ್ರಿ : 2 ಚಮಚ ಶ್ರೀಗಂಧದ ಪುಡಿ, 2 ಚಮಚ ಅರಿಶಿನ, 2 ಚಮಚ ರೋಸ್‌ ವಾಟರ್‌.

ಈ ಎಲ್ಲಾ ವಸ್ತುಗಳನ್ನು ಹಾಲಿನೊಂದಿಗೆ ಬೆರೆಸಿ ಪೇಸ್ಟ್ ತಯಾರಿಸಿ ಮತ್ತು ಸ್ವಚ್ಛವಾದ ಚರ್ಮಕ್ಕೆ ಲೇಪಿಸಿ. 20 ನಿಮಿಷಗಳ ಕಾಲ ಒಣಗಲು ಬಿಡಿ. ಅದು ಒಣಗಿದ ನಂತರ ಶುದ್ಧ ನೀರಿನಿಂದ ತೊಳೆಯಿರಿ ಮತ್ತು ಮಾಯಿಶ್ಚರೈಸರ್‌ ಹಚ್ಚಿ.

ಅನುಕೂಲಗಳು : ಶ್ರಿಗಂಧ ಆ್ಯಂಟಿ ಟ್ಯಾನಿಂಗ್‌ ಗುಣಗಳನ್ನು ಹೊಂದಿದೆ. ಇದು ಚರ್ಮವನ್ನು ಟ್ಯಾನಿಂಗ್‌ ನಿಂದ ರಕ್ಷಿಸುತ್ತದೆ. ಇದರಿಂದಾಗಿ ಚರ್ಮ ಕಲೆಗಳು ಮತ್ತು ಕಪ್ಪಾಗುವಿಕೆಯಿಂದ ರಕ್ಷಿಸುತ್ತದೆ. ಇದು ಮುಖದ ಹೊಳಪನ್ನು ಹೆಚ್ಚಿಸುತ್ತದೆ. ಚರ್ಮವನ್ನು ಯಂಗ್‌ ಆಗಿರಿಸುತ್ತದೆ. ತ್ವಚೆಯು ಶುಷ್ಕವಾಗದಂತೆ ತೇವಾಂಶದಿಂದ ಇಡುತ್ತದೆ.

ಚರ್ಮಕ್ಕೆ ತ್ವರಿತವಾಗಿ ಹೊಳಪು ನೀಡಲು ಮತ್ತು ಹಾನಿಯಾಗದಂತೆ ಇರಿಸಲು ಈ ಮಾಸ್ಕ್ ನಂಥ ಉತ್ತಮ ಆಯ್ಕೆ ಬೇರೊಂದಿಲ್ಲ. ಏಕೆಂದರೆ, ಫೇಸ್‌ ಪ್ಯಾಕ್‌ ತಯಾರಿಸಲು ಬಳಸುವ ಎಲ್ಲಾ ಪದಾರ್ಥಗಳು ರಾಸಾಯನಿಕ ಮುಕ್ತವಾಗಿದ್ದು, ಚರ್ಮವನ್ನು ಮೃದುಗೊಳಿಸಿ ಹರ್ಬಲ್ ನಿಂದ ಹೊಳಪು ನೀಡುತ್ತದೆ.

ನೆನಪಿರಲಿ : ಈ ಫೇಸ್‌ ಪ್ಯಾಕ್‌ ನ್ನು ಮುಖದ ಮೇಲೆ ಮಾತ್ರವಲ್ಲದೆ, ಇಡೀ ದೇಹಕ್ಕೂ ಲೇಪಿಸಬಹುದು. ತ್ವಚೆಯ ಹೊಳಪನ್ನು ಹೆಚ್ಚಿಸಲು, ಮುಖದ ಮೇಲೆ ರಾಸಾಯನಿಕಗಳ ಬದಲಿಗೆ, ಕೆಮಿಕಲ್ಸ್ ಮುಕ್ತ ನೈಸರ್ಗಿಕ ವಸ್ತುಗಳನ್ನು ಬಳಸಿ. ಹಾರ್ಮೋನ್ ಸಮಸ್ಯೆಗಳು ಮತ್ತು ಒತ್ತಡದಿಂದಾಗಿ ನಿಮ್ಮ ಚರ್ಮ ಡಲ್ ಆಗಿ ಕಾಣುತ್ತಿದ್ದರೆ ವೈದ್ಯರನ್ನು ಸಂಪರ್ಕಿಸಿ.

ಸ್ಕಿನ್ಕ್ರಾಫ್ಟ್ ಸಲಹೆಗಳು : ನಿಮ್ಮ ಚರ್ಮಕ್ಕೆ ಕೆಲವು ಪೋಷಕಾಂಶಗಳು ಸುಂದರವಾದ ಹೊಳಪನ್ನು ನೀಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಇದನ್ನು ಚರ್ಮದ ಸಂಪೂರ್ಣ ಆರೈಕೆಗಾಗಿ ಬಳಸಬಹುದು.

ಸಾಕಷ್ಟು ನೀರು ಕುಡಿಯಿರಿ : ವಧುವಿನ ಚರ್ಮ ಹೊಳೆಯುವಂತೆ, ಮೃದು ಹಾಗೂ ಕೋಮಲವಾಗಿ ಇರಲು ಪ್ರತಿದಿನ 3-4 ಲೀಟರ್ ನೀರು ಕುಡಿಯುವುದು ಬಹಳ ಮುಖ್ಯ.

ಮಲಗುವ ಮುನ್ನ ಮೇಕಪ್ತೆಗೆಯಿರಿ : ಮೇಕಪ್‌ ತೆಗೆಯುವುದರಿಂದ ಚರ್ಮದಲ್ಲಿರುವ ಕಲ್ಮಶಗಳನ್ನು ತೆಗೆದುಹಾಕಬಹುದು. ರಾತ್ರಿ ಸಮಯದಲ್ಲಿ ನಿಮ್ಮ ಚರ್ಮವನ್ನು ಉಸಿರಾಡಲು ಬಿಡಿ.

ಕೆಫಿನ್ತಪ್ಪಿಸಿ : ಹೊಳೆಯುವ ಚರ್ಮಕ್ಕಾಗಿ, ನೀವು ಕೆಫಿನ್‌ ಮತ್ತು ಧೂಮಪಾನ ಚಟದಿಂದ ದೂರವಿರಬೇಕು. ಕೆಫಿನ್‌, ಡ್ರಗ್ಸ್, ಆಲ್ಕೋಹಾಲ್ ‌ಇವೆಲ್ಲ ಚರ್ಮದ ಸಮಸ್ಯೆಗಳನ್ನು ಹುಟ್ಟುಹಾಕುತ್ತವೆ. ನಿಮ್ಮ ಚರ್ಮವನ್ನು ಅಕಾಲಿಕ, ವಯಸ್ಸಾದ ಮತ್ತು ಸುಕ್ಕುಗಳಿಂದ ರಕ್ಷಿಸಲು ದಿನಕ್ಕೆ 2 ಕಪ್‌ ಗಿಂತ ಹೆಚ್ಚು ಕಾಫಿ ಕುಡಿಯಬೇಡಿ. ಜೊತೆಗೆ ಅಮಲು ಪದಾರ್ಥಗಳನ್ನು ಸೇವಿಸಬೇಡಿ.

ಎಕ್ಸ್ ಫಾಲಿಯೇಟ್ಮಾಡಿ : ವಾರಕ್ಕೆ ಎರಡು ಬಾರಿ ನಿಮ್ಮ ಚರ್ಮವನ್ನು ಎಕ್ಸ್ ಫಾಲಿಯೇಟ್‌ ಮಾಡಿ. ನಿಮ್ಮ ಚರ್ಮವನ್ನು ನೈಸರ್ಗಿಕವಾಗಿ ಎಕ್ಸ್ ಫಾಲಿಯೇಟ್‌ ಮಾಡಲು ಕಡಲೆಹಿಟ್ಟು, ಅರಿಶಿನ ಮತ್ತು ಒಣಗಿದ ಕಿತ್ತಳೆ ಸಿಪ್ಪೆ ಪುಡಿ ಬಳಸಿ.

ಇವು ನಿಮ್ಮ ದೇಹವನ್ನು ಡೀಟಾಕ್ಸಿಫೈ ಮಾಡಲು ಸಹಾಯ ಮಾಡುತ್ತದೆ.

ವ್ಯಾಯಾಮದಿಂದ ಉಂಟಾಗುವ ಬೆವರು, ವಿಷ ಮತ್ತು ಕಲ್ಮಶಗಳನ್ನು ತೆಗೆದು ಹಾಕುತ್ತದೆ.

ಚರ್ಮವನ್ನು ಡೀಟಾಕ್ಸಿಫೈ ಮಾಡಿಸಿ, ಬೆವರುವುದು ಉತ್ತಮ ಆಯ್ಕೆಯಾಗಿದೆ.

ಮುಖದ ಹೊಳಪನ್ನು ಹೆಚ್ಚಿಸಲು, ಆರೋಗ್ಯಕರ ಆಹಾರದ ಜೊತೆಗೆ ಯೋಗಾಭ್ಯಾಸಗಳನ್ನು ಅಳವಡಿಸಿಕೊಳ್ಳಬೇಕು. ಇದರಿಂದ ಹೊಳೆಯುವ ಚರ್ಮಕ್ಕೆ ಅನುಕೂಲವಾಗಿರುತ್ತದೆ. ಆದ್ದರಿಂದ ಪ್ರತಿದಿನ ಬೆಳಗ್ಗೆ ಎದ್ದು ಕಪಾಲಭಾತಿ ಮತ್ತು ಅನುಲೋಮ ವಿಲೋಮದಂತಹ ಪ್ರಾಣಾಯಾಮ ಮಾಡಿ.

ಸಾಕಷ್ಟು ನಿದ್ರೆ : ರಾತ್ರಿ ತಡವಾಗಿ ಮಲಗುವುದರಿಂದ ನಿಮ್ಮ ಮುಖದ ಹೊಳಪು ಮಸುಕಾಗಬಹುದು. ಉತ್ತಮ ಚರ್ಮಕ್ಕಾಗಿ ನಿಮಗೆ ಕನಿಷ್ಠ 8 ಗಂಟೆಗಳ ಉತ್ತಮ ನಿದ್ರೆ ಬೇಕು. ರಾತ್ರಿಯಲ್ಲಿ ನೀವು ಉತ್ತಮವಾಗಿ ನಿದ್ರೆ ಮಾಡುತ್ತಿದ್ದೀರಾ ಎಂದು ಖಚಿತಪಡಿಸಿಕೊಳ್ಳಿ.

ಸಮತೋಲಿತ ಆಹಾರ ಸೇವಿಸಿ

ಆರೋಗ್ಯಕರ ಆಹಾರ, ತಾಜಾ ಹಣ್ಣುಗಳು ನಿಮ್ಮ ಚರ್ಮಕ್ಕೆ ನೈಸರ್ಗಿಕ ಹೊಳಪನ್ನು ನೀಡುತ್ತವೆ.

ನಿಮ್ಮ ಚರ್ಮದ ಆರೋಗ್ಯ ಸುಧಾರಿಸಲು ಡ್ರೈ ಫ್ರೂಟ್ಸ್ ಸೇವಿಸಿ.

ಆರೋಗ್ಯಕರ ಚರ್ಮವನ್ನು ಕಾಪಾಡಿಕೊಳ್ಳಲು ಅಗತ್ಯವಾದ ಪೋಷಕಾಂಶಗಳನ್ನು ಹೊಂದಿರುವ ಹಸಿರು ತರಕಾರಿ, ಹಣ್ಣು, ಜೂಸ್ ಸೇವಿಸುವುದು ಬಹಳ ಮುಖ್ಯ.

ಸರಿಯಾದ ಆಹಾರ ಮತ್ತು ಸೂಕ್ತ ವ್ಯಾಯಾಮ ಅನುಸರಿಸುವುದರಿಂದ ಚರ್ಮಕ್ಕೆ ಆರೈಕೆ ನೀಡಿ ಅದನ್ನು ಹೊಳೆಯುವಂತೆ ಮಾಡಲು ಪ್ರಮುಖವಾಗಿದೆ.

ಶೋಭಾ  ಕುಮಾರ್

ಚರ್ಮವನ್ನು ಹೀಗೆ ಡೀಟಾಕ್ಸಿಫೈ ಮಾಡಿ

ದೇಹದಲ್ಲಿರುವ ವಿಷಯವನ್ನು ತೆಗೆದುಹಾಕಲು ಉತ್ತಮ ಮಾರ್ಗವೆಂದರೆ, ನಿಯಮಿತವಾಗಿ ಸಾಕಷ್ಟು ನೀರು ಕುಡಿಯುವುದು. ನಿಮ್ಮ ನೀರಿನ ಬಾಟಲಿಯನ್ನು ಯಾವಾಗಲೂ ನಿಮ್ಮೊಂದಿಗೆ ಇಟ್ಟುಕೊಳ್ಳಿ. ಇದರಿಂದ ನೀವು ದಿನವಿಡೀ ನೀರನ್ನು ಕುಡಿಯುವ ಮೂಲಕ ನಿಮ್ಮನ್ನು ಹೈಡ್ರೇಟ್‌ ಆಗಿರಿಸಿಕೊಳ್ಳಬಹುದು.

ನೀವು ಯಾವುದೇ ಸಿಟ್ರಸ್‌ ಹಣ್ಣು ಅಥವಾ ಸೌತೇಕಾಯಿಯ ಕೆಲವು ಹೋಳುಗಳನ್ನು ಕತ್ತರಿಸಿ, ಅವುಗಳನ್ನು ನಿಮ್ಮ ನೀರಿನ ಬಾಟಲಿಗೆ ಸೇರಿಸಬೇಕು, ಜೊತೆಗೆ ಉತ್ತಮ ಫ್ಲೇವರ್‌ ಸಹ. ಇದು ನಿಮಗೆ ಜೀವಸತ್ವಗಳನ್ನು ಒದಗಿಸಿ, ಡೀಟ್ಯಾಕ್ಸಿಫೈ ಪ್ರಕ್ರಿಯೆಯಲ್ಲಿ ಮತ್ತಷ್ಟು ಸಹಾಯ ಮಾಡುತ್ತದೆ.

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ