ಧರ್ಮ ಮತ್ತು ಆಚಾರ ವಿಚಾರಗಳ ಹೆಸರಿನಲ್ಲಿ ಯಾವುದೇ ವಿವಾಹವನ್ನು ಎಳೆದಾಡುವ ಬದಲು ಅದ್ಭುತವಾಗಿ ಮಾಡುವುದು ಉತ್ತಮ. ಮದುವೆ ನಿಮ್ಮ ಸ್ಮರಣೆಯಲ್ಲಿ ಶಾಶ್ವತವಾಗಿ ಉಳಿಯುವಂತೆ ಮಾಡಬೇಕೆಂದು ನೀವು ಬಯಸಿದರೆ, ಈ ರೀತಿ ಮಾಡಿ……!
ಪ್ರತಿಯೊಬ್ಬರ ಜೀವನದಲ್ಲೂ ಮದುವೆ ಎಂಬುದು ಅತ್ಯಂತ ಸುಂದರವಾದ ಸಮಯ. ಇದೊಂದು ಮರೆಯಲಾಗದ ಕ್ಷಣಗಳ ಪಯಣ. ಪ್ರತಿಯೊಬ್ಬರೂ ತಮ್ಮ ಕನಸುಗಳು ನನಸಾಗುವುದನ್ನು ನೋಡಲು ಬಯಸುತ್ತಾರೆ. ತಮ್ಮ ದಾಂಪತ್ಯಕ್ಕೆ ಕಾಲಿಡುವ ಮುನ್ನ ತಾವು ಮಾಡಬೇಕಾದ ಕೆಲಸಗಳನ್ನು ಬಹಳ ದಿನಗಳಿಂದ ಕಲ್ಪಿಸಿಕೊಂಡು ನಿರ್ವಹಿಸಲು ಬಯಸುತ್ತಾರೆ.
ಮದುವೆ ಕೇವಲ ಇಬ್ಬರು ವ್ಯಕ್ತಿಗಳ ಮಧ್ಯೆ ಮಾತ್ರ ನಡೆಯುವ ಸಂಬಂಧವಲ್ಲ. ಅದು ಎರಡು ಕುಟುಂಬಗಳ ಒಗ್ಗೂಡುವಿಕೆ. ವಧೂವರರ ಕುಟುಂಬಗಳು ಈ ಮದುವೆಯನ್ನು ಸ್ಮರಣೀಯ ಮತ್ತು ಅದ್ಭುತವಾಗಿಸಲು ಬಯಸುತ್ತಾರೆ. ಆ ಕ್ಷಣಗಳನ್ನು ಮತ್ತೆ ಮತ್ತೆ ನೆನಪಿಸಿಕೊಳ್ಳುತ್ತಾ ಸಂತಸಪಡಲು ಬಯಸುತ್ತಾರೆ. ನೀವು ಶ್ರೀಮಂತರಾಗಲಿ ಅಥವಾ ಸಾಮಾನ್ಯ ಕುಟುಂಬಕ್ಕೆ ಸೇರಿದವರೇ ಆಗಿರಬಹುದು, ನಿಮ್ಮಲ್ಲಿ ಅಗತ್ಯವಿರುವುದು ಮನಸ್ಸಿನ ಉತ್ಸಾಹ ಮತ್ತು ಸರಿಯಾದ ವ್ಯವಸ್ಥೆ. ಕೆಲವು ಅನನ್ಯವಾದ ಆಲೋಚನೆ ಮತ್ತು ಸೃಜನಶೀಲ ಚಿಂತನೆಗಳಿಂದ ವಿವಾಹದ ಪ್ರತಿ ಕ್ಷಣವನ್ನೂ ಸ್ಮರಣೀಯ ಆಗಿಸಬಹುದು.
ಬನ್ನಿ, ನಿಮ್ಮ ಮನೆಯಲ್ಲಿ ನಡೆಯುವ ವಿವಾಹವನ್ನು ಯಾವ ರೀತಿ ಸ್ಮರಣೀಯ ಹಾಗೂ ಅದ್ಭುತವಾಗಿ ನಡೆಸಬಹುದು ಎಂಬುದನ್ನು ತಿಳಿಯೋಣ :
ಮದುವೆಗಾಗಿ ಪ್ಲಾನಿಂಗ್ ಮಾಡಿ
ಮದುವೆಯ ವ್ಯವಸ್ಥೆಗಳನ್ನು ಮಾಡಿಕೊಳ್ಳುವಾಗ ಯಾವ್ಯಾವ ವಿಷಯಗಳು ಗಮನದಲ್ಲಿ ಇರಬೇಕು ಎಂಬುದರ ಬಗ್ಗೆ ನಗರದ ಖ್ಯಾತ ವೆಡ್ಡಿಂಗ್ ಪ್ಲಾನರ್ಸ್ ನೀಡುವ ವಿವರಣೆ ಗಮನಿಸೋಣವೇ…?
ಮೊದಲನೆಯದಾಗಿ ಮದುವೆ ತಯಾರಿಗೆ ನೀವು ಕೆಲವು ಯೋಜನೆಗಳನ್ನು ರೂಪಿಸಿಕೊಳ್ಳುವುದು ಬಹಳ ಮುಖ್ಯ.
ನೀವು ಸ್ಥಳೀಯವಾಗಿ ಅಥವಾ ಬೇರೆ ಗಮ್ಯ ಸ್ಥಳದಲ್ಲಿ ವಿವಾಹವಾಗಲು ನಿರ್ಧರಿಸಿದ್ದೀರೆಂಬುದು ಸ್ಪಷ್ಟವಾಗಿರಲಿ. ನಿಮ್ಮ ಬಜೆಟ್ ಪ್ರಕಾರ ಸ್ಥಳ ಮತ್ತು ಅತಿಥಿಗಳ ಪಟ್ಟಿಯನ್ನು ತಯಾರಿಸಿ. ನಿಶ್ಚಿತಾರ್ಥ, ಅರಿಶಿನ, ಸಂಗೀತ, ಮೆಹೆಂದಿ ಸೇರಿದಂತೆ ಮದುವೆಯಲ್ಲಿ ಯಾವ್ಯಾವ ಶಾಸ್ತ್ರ ಸಂಪ್ರದಾಯಗಳನ್ನು ನೆರವೇರಿಸಬೇಕು ಎಂಬುದನ್ನು ನಿರ್ಧರಿಸಿಕೊಳ್ಳಿ. ಸಮಯ ಮತ್ತು ಬಜೆಟ್ ಸಮಸ್ಯೆ ಇದ್ದರೆ 2-3 ಕಾರ್ಯಕ್ರಮಗಳನ್ನು ಒಟ್ಟಿಗೆ ಸೇರಿಸಿ ಮಾಡಬಹುದು.
ಪ್ರತಿ ಕಾರ್ಯಕ್ರಮದ ಒಟ್ಟುಗೂಡಿಸುವಿಕೆಯನ್ನು ಮೊದಲೇ ನಿರ್ಧರಿಸಿ. ಇದರ ನಂತರ, ಡೆಕೋರೇಟ್, ಎಂಟರ್ ಟೈನರ್, ಮೇಕಪ್ ಆರ್ಟಿಸ್ಟ್, ವಾದ್ಯದವರು, ಕೇಟರಿಂಗ್ ಮುಂತಾದವರ ಪಟ್ಟಿ ತಯಾರಿಸಿ. ಈಗ ಎಲ್ಲಾ ಯೋಜನೆ ಮತ್ತು ವ್ಯವಸ್ಥೆಗಳನ್ನು ವೆಡ್ಡಿಂಗ್ ಪ್ಲಾನರ್ ಗೆ ನಿರ್ವಹಿಸಲು ತಿಳಿಸಿ ಅಥವಾ ಕುಟುಂಬದ ಒಂದಿಬ್ಬರು ಸದಸ್ಯರಿಗೆ ಈ ಎಲ್ಲಾ ವ್ಯವಸ್ಥೆಗಳ ಜವಾಬ್ದಾರಿ ವಹಿಸಿಕೊಡಿ.

ಮದುವೆ ಕಾರ್ಯಕ್ಕೆ ಸ್ಥಳ ಆಯ್ಕೆ ಮಾಡಿಕೊಳ್ಳುವುದು ಒಂದು ಪ್ರಮುಖ ನಿರ್ಧಾರವಾಗಿದೆ. ನೀವು ಆವರಿಸಿಕೊಳ್ಳುವ ಜಾಗ ಲಾನ್, ಪೂಲ್ ಸೈಡ್, ಔತಣ ಕೂಟ ಇತ್ಯಾದಿಗಳಂತಹ ಬಹು ಆಯ್ಕೆಗಳನ್ನು ಹೊಂದಿರಬೇಕು ಎಂಬುದು ನೆನಪಿನಲ್ಲಿರಲಿ. ಇದು ಉತ್ತಮ ಸೌಲಭ್ಯಗಳನ್ನು ಹೊಂದಿರಬೇಕು. ಆಹಾರ, ವಿಮರ್ಶೆಗಳು ಸಹ ಉತ್ತಮವಾಗಿರಬೇಕು ಮತ್ತು ಮದುವೆ ಸ್ನೇಹಪರವಾಗಿರಬೇಕು. ಹೆಚ್ಚು ಟ್ರಾಫಿಕ್ ಜಾಮ್ ಇರುವ ಪ್ರದೇಶಗಳಾಗಿ ಇರಬಾರದು. ಮೆಟ್ರೋ ಸ್ಟೇಷನ್ ಗೆ ಹತ್ತಿರವಾಗಿರುವುದು ಉತ್ತಮ. ಆಗ ನಿಮ್ಮ ಅತಿಥಿಗಳು ಕಾರ್ಯಕ್ರಮದ ಸ್ಥಳ ತಲುಪಲು ಯಾವುದೇ ಸಮಸ್ಯೆ ಎದುರಿಸುವುದಿಲ್ಲ. ಕಾರ್ಪೋರೇಟ್ ಕಾರ್ಯಕ್ರಮಗಳನ್ನು ನಿರ್ವಹಿಸುವ ಅನೇಕ ಸಂಸ್ಥೆಗಳು ಮಾರುಕಟ್ಟೆಯಲ್ಲಿವೆ. ಆದರೆ, ಅವರಿಗೆ ವಿವಾಹದ ಕಾರ್ಯಗಳನ್ನು ನಿರ್ವಹಿಸುವ ಹೆಚ್ಚಿನ ಅನುಭವ ಇರುವುದಿಲ್ಲ.
ವಿವಾಹದ ಕಾರ್ಯಗಳನ್ನು ವಿವಿಧ ಸ್ಥಳಗಳಲ್ಲಿ ನೆರವೇರಿಸಲು ಪ್ರಯತ್ನಿಸಿ. ನೀವು ಸ್ಥಳವನ್ನು ಪುನರಾವರ್ತಿಸಿದರೆ ಫೋಟೋಗ್ರಫಿಯಲ್ಲಿ ಎಲ್ಲಾ ಕಾರ್ಯಗಳು ಒಂದೇ ರೀತಿ ಕಾಣಿಸುತ್ತವೆ, ಜೊತೆಗೆ ಫೋಟೋಗಳನ್ನು ನೋಡಲು ಯಾವುದೇ ಸಂತೋಷ ಎನಿಸದು.
ಇದು ಆಚರಣೆಗೆ ಒಂದು ವಿಶೇಷ ಸಂದರ್ಭವಾಗಿದೆ. ರುಚಿಕರವಾದ ಭಕ್ಷ್ಯಗಳಿಲ್ಲದೆ ಯಾವುದೇ ಆಚರಣೆ ಸಂಪೂರ್ಣ ಎನಿಸುವುದಿಲ್ಲ. ಹಾಗಾಗಿ ಮದುವೆಯಲ್ಲಿ ಉತ್ತಮ ಆಹಾರದ ವ್ಯವಸ್ಥೆ ಮಾಡಲಾಗುತ್ತದೆ. ಇದಕ್ಕಾಗಿಯೇ ಮದುವೆಗೆ ಮುಂಚಿತವಾಗಿ ಮೆನುವನ್ನು ಸಿದ್ಧಪಡಿಸಲಾಗುತ್ತದೆ.
ಡೆಸ್ಟಿನೇಶನ್ ವೆಡ್ಡಿಂಗ್ ಗೆ ಆಯ್ಕೆಗಳು ರಾಜಾಸ್ಥಾನ ಪುಷ್ಕರ್, ಜೈಪುರ, ರಣಥಂಬೋರ್, ಉದಯಪುರ, ಜೋಧ್ ಪುರ ಇತ್ಯಾದಿಗಳನ್ನು ಹೊಂದಿದೆ. ಇಲ್ಲಿನ ಅರಮನೆ, ಕೋಟೆಗಳಲ್ಲಿ ನಡೆಯುವ ಮದುವೆಗಳು ಅದ್ಭುತವಾಗಿ ಕಂಡುಬರುತ್ತವೆ. ಆದರೆ ಇವು ದುಬಾರಿ ಆಯ್ಕೆಗಳಾಗಿರುತ್ತವೆ. ಇದಕ್ಕೆ ಬಹಳ ವೆಚ್ಚ ಮಾಡಬೇಕಾಗುತ್ತದೆ. ಅಗ್ಗದ ಆಯ್ಕೆಗಳಲ್ಲಿ ಜಿಮ್ ಕಾರ್ಬೆಟ್, ಆಗ್ರಾ, ಹೃಷಿಕೇಶ್, ಮಸೂರಿ, ನೈನಿತಾಲ್, ಊಟಿ, ಮಡಿಕೇರಿ ಇತ್ಯಾದಿಗಳಲ್ಲಿ ಸಮಂಜಸವಾದ ಮದುವೆ ನಡೆಸಬಹುದು. ಒಟ್ಟಿನಲ್ಲಿ ಬೇರೆ ಊರಿಗೆ ಅಂದರೆ ಡೆಸ್ಟಿನೇಶನ್ ವೆಡ್ಡಿಂಗ್ ಗೆ ಹೋಗುವುದು ದುಬಾರಿ. ಜನರ ಶುಲ್ಕಗಳೂ ಹೆಚ್ಚು ಮತ್ತು ಪ್ರಯಾಣ ದುಬಾರಿಯಾಗುತ್ತದೆ.

ಮದುವೆಯನ್ನು ಸ್ಮರಣೀಯವಾಗಿಸಲು ಈ ಅಂಶಗಳು ನೆನಪಿನಲ್ಲಿರಲಿ : ಅಲಂಕಾರ ಸೃಜನಶೀಲವಾಗಿರಬೇಕು. ಮೊರೊಕನ್ ಥೀಮ್, ಹಳ್ಳಿಯ ಥೀಮ್, ದುಬೈ ಥೀಮ್ ಮುಂತಾದ ವಿಶಿಷ್ಟವಾದ ಥೀಮ್ ನಲ್ಲಿ ಅಲಂಕರಿಸಬೇಕು. ವಧುವಿನ ಪ್ರವೇಶ ವಿಶಿಷ್ಟವಾಗಿರಬೇಕು. ಕಡಿಮೆ ಮಂಜು ಪ್ರದೇಶ ನೋಡಲು ಅದ್ಭುತವಾಗಿರುತ್ತದೆ. ಮೋಡಗಳ ಮೇಲೆ ನಡೆಯುತ್ತಿರುವಂತೆ, ಇದು ಕನಸಿನಂತೆಯೂ ಭಾಸವಾಗುತ್ತದೆ. ನೀವು ಹೂವಿನ ಮಳೆಯನ್ನೂ ಸುರಿಸಬಹುದು. ಅದು ದುಬಾರಿಯೂ ಆಗುವುದಿಲ್ಲ. ಅಲ್ಲದೆ, ಸುಂದರವಾಗಿಯೂ ಕಾಣುತ್ತದೆ. ಅಂತೆಯೇ ಕೊಲ್ ಯಾಝಿಂಗ್ ಮಾಡಬಹುದು. ಇತ್ತೀಚಿನ ದಿನಗಳಲ್ಲಿ ಮ್ಯಾಜಿಕ್ ಫೇರ್ ಗಳು ಪ್ರವೃತ್ತಿಯಲ್ಲಿ ಇರುವಂತಹ ಫೇರ್ ಗಳ ಸಮಯದಲ್ಲಿ ಜನರು ವಿಭಿನ್ನವಾಗಿ ಮಾಡುತ್ತಾರೆ. ವರ ವಿಶೇಷವಾಗಿ ಪ್ರವೇಶಿಸುವಂತೆ ಮಾಡಬಹುದು. ಲೈವ್ ಬ್ಯಾಂಡ್ ನೊಂದಿಗೆ ಡಿಜೆ ಮತ್ತು ಢೋಲ್ ನ ಜುಗಲ್ ಬಂಧಿಯೂ ಸಹ ಅದ್ಭುತವಾಗಿರುತ್ತದೆ.
ಮದುವೆಯನ್ನು ಸ್ಮರಣೀಯವಾಗಿಸಿ ಮದುವೆಯಲ್ಲಿ ನೀವು ನೃತ್ಯ ಅಥವಾ ಗಾಯನ ಸ್ಪರ್ಧೆಯನ್ನು ಆಯೋಜಿಸಬಹುದು. ಇದಕ್ಕಾಗಿ ನೀವು ಅತಿಥಿಗಳ ತಂಡವನ್ನು ಮಾಡಿ ಸ್ಪರ್ಧೆಯನ್ನು ಆಯೋಜಿಸಬಹುದು. ಇಂತಹ ಮೋಜಿನ ಚಟುವಟಿಕೆಗಳು ನಿಮ್ಮ ಅತಿಥಿಗಳಿಗೆ ಸ್ಮರಣೀಯವಾಗಿ ಎಲ್ಲರಿಗೂ ಇಷ್ಟವಾಗುತ್ತದೆ. ಈ ಮೋಜಿನ ಚಟುವಟಿಕೆಗಳ ನಂತರ ನಿಮ್ಮ ಅತಿಥಿಗಳಿಗೆ ನೀವು ಕೆಲವು ವಿಶೇಷ ಉಡುಗೊರೆಗಳನ್ನೂ ನೀಡಬಹುದು.
ಮದುವೆಯಲ್ಲಿ ನೀವು ಹೂವಿನ ಆರ್ಚ್ ಗಳನ್ನು ನಿರ್ಮಿಸಬಹುದು. ಇದರಿಂದ ಅಲಂಕಾರ ಸುಂದರವಾಗಿ ಕಾಣುತ್ತದೆ. ಜೊತೆಗೆ ನೀವು ಫೋಟೋಗಳನ್ನು ತೆಗೆಯಲು ಉತ್ತಮವಾದ ಫ್ರೇಮ್ ಪಡೆಯಬಹುದು. ಇದು ನಿಮ್ಮ ಸ್ಮರಣೀಯ ಕ್ಷಣಗಳನ್ನು ಹೆಚ್ಚು ವಿಶೇಷವಾಗಿಸುತ್ತದೆ. ನೀವು ಈ ಆರ್ಚ್ ನ್ನು ವಿವಿಧ ಹೂಗಳಿಂದ ಅಥವಾ ಒಂದೇ ಬಣ್ಣದ ಹೂಗಳಿಂದ ಅಲಂಕರಿಸಬಹುದು.
ಇಂದಿನ ಪೀಳಿಗೆ ಸೋಶಿಯಲ್ ಮೀಡಿಯಾದಲ್ಲಿ ಬಹಳ ಸಕ್ರಿಯವಾಗಿದೆ ಮತ್ತು ಈ ಫ್ರೇಮ್ ನಲ್ಲಿ ಫೋಟೋ ತೆಗೆದ ನಂತರ ಅದನ್ನು ಸೋಶಿಯಲ್ ಮೀಡಿಯಾದಲ್ಲಿಯೂ ಹಂಚಿಕೊಳ್ಳಬಹುದು.
ಮೆಹೆಂದಿ ಅಥವಾ ಅರಿಶಿನ ಕಾರ್ಯಕ್ರಮದಲ್ಲಿ ಫೋಟೋಗಳಿಂದ ಪೂರ್ಣ ಅಲಂಕಾರ ಮಾಡಬಹುದು. ನೀವು ಈ ಅಲಂಕಾರವನ್ನು ಲೈಟ್ ಗಳು ಮತ್ತು ಫೋಟೋಗಳೊಂದಿಗೂ ಮಾಡಬಹುದು. ಈ ಫೋಟೋಗಳಲ್ಲಿ ನಿಮ್ಮ ಹಳೆಯ ನೆನಪುಗಳನ್ನು ರಿಫ್ರೆಶ್ ಮಾಡಬಹುದು ಮತ್ತು ಸರಣಿಯ ನಡುವೆ ಅದನ್ನು ಅಲಂಕರಿಸಬಹುದು.
ಈ ಅಲಂಕಾರ ನಿಮ್ಮ ಪ್ರಸ್ತುತ ನೆನಪುಗಳನ್ನು ಸ್ಮರಣೀಯವಾಗಿಸುತ್ತದೆ. ಅಲ್ಲದೆ, ನಿಮ್ಮ ಕೆಲವು ವಿಶೇಷ ಹಳೆಯ ನೆನಪುಗಳನ್ನು ರಿಫ್ರೆಶ್ ಮಾಡುತ್ತದೆ. ಫೋಟೋ ಅಲಂಕಾರದ ಜೊತೆಗೆ, ಹೂಗಳ ಬಂಚ್ ಗಳನ್ನು ಅಲ್ಲಲ್ಲಿ ಜೋಡಿಸುವುದು ಅದ್ಭುತವಾಗಿರುತ್ತದೆ.
ಭಾರತೀಯ ವಿವಾಹಗಳಲ್ಲಿ ಸ್ವಂತ ಕುಟುಂಬಕ್ಕಿಂತ ಸಂಬಂಧಿಕರಿಗೆ ಮತ್ತು ಅವರ ಅಗತ್ಯಗಳಿಗೆ ಹೆಚ್ಚಿನ ಗಮನ ನೀಡಲಾಗುತ್ತದೆ. ನೀವು ಸಂಬಂಧಿಕರಿಗೆ ವಿಶೇಷ ಭಾವನೆ ಮೂಡಿಸಲು ಧನ್ಯವಾದದ ಪ್ಯಾಕಿಂಗ್ ನ್ನು ಬಳಸಬಹುದು. ಇದರ ವಿಶೇಷತೆಯೆಂದರೆ, ಇದನ್ನು ನೀಡಿದಾಗ ತುಂಬಾ ಸುಂದರವಾಗಿ ಕಾಣುತ್ತದೆ. ಅಲ್ಲದೆ, ಇದಕ್ಕೆ ಹೆಚ್ಚಿನ ವೆಚ್ಚ ಆಗುವುದಿಲ್ಲ.
ನೀವು ಅದರೊಳಗೆ ಕೆಲವು ವಿಶೇಷ ಉಡುಗೊರೆಗಳನ್ನು ಇರಿಸಿ, ಹೊರಗೆ ಧನ್ಯವಾದದ ಸಂದೇಶವನ್ನು ಬರೆಯಬಹುದು. ಮದುವೆಯ ಹೊರತಾಗಿ, ನೀವು ಯಾವುದೇ ಸಣ್ಣ ಕಾರ್ಯಕ್ರಮದಲ್ಲೂ ಇಂತಹ ಪ್ಯಾಕಿಂಗ್ ನ್ನು ಬಳಸಬಹುದು. ಇದನ್ನು ಮಕ್ಕಳಿಗೆ ಕೊಡುವುದಾದರೆ, ಇದರೊಳಗೆ ಡ್ರೈ ಫ್ರೂಟ್ಸ್ ಅಥವಾ ಚಾಕ್ಲೇಟ್ ಗಳನ್ನು ಇರಿಸಬಹುದು.

ಪ್ರೀ ವೆಡ್ಡಿಂಗ್ ಫೋಟೋ ಶೂಟ್
ಪ್ರೀ ವೆಡ್ಡಿಂಗ್ ಪೋಟೋ ಶೂಟ್ ನ್ನು ನೀವು ವಿಶೇಷ ಸ್ಥಳದಲ್ಲಿ ಮಾಡಬಹುದು. ಇದರಿಂದ ಫೋಟೋಗಳ ಬ್ಯಾಕ್ ಗ್ರೌಂಡ್ ಅದ್ಭುತವಾಗಿ ಕಾಣುತ್ತದೆ. ಇದಕ್ಕಾಗಿ ನೀವು ಯಾವುದೇ ಐತಿಹಾಸಿಕ ಕಟ್ಟಡ, ಕಡಲತೀರ ಅಥವಾ ಬೆಟ್ಟದ ಸ್ಥಳಗಳನ್ನು ಆಯ್ಕೆ ಮಾಡಬಹುದು.
ನೀವು ಇಚ್ಛಿಸಿದರೆ, ನಿಮ್ಮ ಮದುವೆಯ ಪೂರ್ವ ಚಿತ್ರೀಕರಣವನ್ನು ಫಿಲ್ಮಿ ಥೀಮ್ ನಲ್ಲಿ ಮಾಡಿಸಬಹುದು. ಹಸಿರಿನಿಂದ ಕಂಗೊಳಿಸುವ ಹೊಲ ಗದ್ದೆಯಲ್ಲಿ, `ದಿಲ್ ವಾಲೆ ದುಲ್ಹನಿಯಾ ಲೇ ಜಾಯೇಂಗೆ’ ಸಿನಿಮಾ ಅಥವಾ ಇಷ್ಟದ ಚಿತ್ರದ ಥೀಮ್ ನಲ್ಲಿ ಫೋಟೋ ಶೂಟ್ ಮಾಡಿಸಬಹುದು.
ನಿಮ್ಮ ಮದುವೆಯ ಪೂರ್ವ ಚಿತ್ರೀಕರಣದಲ್ಲಿ ಗಾಳಿಯಲ್ಲಿ ಹಾರುವ ದುಪಟ್ಟಾ, ಹಸಿರು ಬ್ಯಾಕ್ ಗ್ರೌಂಡ್ ನಲ್ಲಿ ಕೆಂಪು ಬಟ್ಟೆ, ಸರ್ಪ್ರೈಸ್ ಪ್ರಪೋಸ್ ಭಂಗಿಗಳ ಮೂಲಕ ಸ್ಮರಣೀಯವಾಗಿಸುವ ಟಚ್ ಗಳನ್ನು ನೀಡಬಹುದು. ಇದರೊಂದಿಗ ನೀವು ತಮಾಷೆಯಾಗಿ ಏನನ್ನಾದರೂ ಪ್ರಯತ್ನಿಸಬಹುದು. ವಿಶೇಷ ಸ್ಥಳವನ್ನು ಹೊಂದಿಲ್ಲದ್ದಿದರೆ, ಅದನ್ನು ಬೇರೆ ರೀತಿಯಲ್ಲೂ ಶೂಟ್ ಮಾಡಿಸಬಹುದು. ಮೇಲಿನಿಂದ ಬೀಳುವ ಗುಲಾಬಿ ಹೂವಿನ ಪಕಳೆಗಳು ನಿಮ್ಮ ಫೋಟೋಗೆ ವಿಶೇಷ ಮೆರುಗು ನೀಡುತ್ತವೆ.
ಧರ್ಮದ ಹೆಸರಿನಲ್ಲಿ ಪೋಲು ಬೇಡ
ಪುರಾತನ ಕಾಲದಿಂದಲೂ ಮದುವೆಯ ಸಂದರ್ಭದಲ್ಲಿ ಧಾರ್ಮಿಕ ಆಚರಣೆಗಳಿಗೆ ಹೆಚ್ಚಿನ ಒತ್ತು ನೀಡಲಾಗಿದೆ. ಶಾಸ್ತ್ರಗಳಲ್ಲೂ ಹಲವಾರು ನಿರುಪಯುಕ್ತ ಆಚರಣೆಗಳಿಗೆ ಒತ್ತು ನೀಡಲಾಗಿದೆ. ಮೊದಲು ಯಾವ ಹೆಜ್ಜೆ ಇಡಬೇಕು, ಯಾವ ಬಣ್ಣದ ಬಟ್ಟೆಗಳನ್ನು ಧರಿಸಬೇಕು, ಯಾವ ಮುಹೂರ್ತದಲ್ಲಿ ಮದುವೆ ನಡೆಯಬೇಕು, ಯಾವ ಪೂಜೆ ಮುಗಿದ ನಂತರ ಯಾವ ಪೂಜೆ ಪೂರೈಸಬೇಕು, ಯಾವ ಮಂತ್ರಗಳನ್ನು ಪಠಿಸಬೇಕು, ಯಾವ ವಸ್ತುಗಳನ್ನು ತರಬೇಕು, ಯಾವ ಖಾದ್ಯಗಳನ್ನು ತಯಾರಿಸಬೇಕು, ವಿಶೇಷ ಆತಿಥ್ಯ ಸೇರಿದಂತೆ ವಿವಿಧ ರೀತಿಯ ಆಚರಣೆಗಳನ್ನು ಪೂರೈಸುವುದು ಅವಶ್ಯಕ ಎಂದು ಪರಿಗಣಿಸಲಾಗುತ್ತದೆ.
ಆಚಾರ ವಿಚಾರಗಳನ್ನು ಮತ್ತೆ ಮತ್ತೆ ಪ್ರಸ್ತಾಪಿಸಿ ಕೊಡಬಲ್ಲರು ಅನಾವಶ್ಯಕವಾಗಿ ಆತಂಕಗಳನ್ನು ಮೂಡಿಸುತ್ತಾರೆ. ಆಚರಣೆಗಳನ್ನು ಸರಿಯಾಗಿ ಪೂರೈಸದಿದ್ದರೆ ಮದುವೆ ಮುರಿದು ಬೀಳಬಹುದು ಎಂಬ ಬೆದರಿಕೆಯನ್ನೂ ಹಾಕಲಾಗುತ್ತದೆ. ಪುರಾಣಗಳಲ್ಲಿ ಮದುವೆಯ ಬಗ್ಗೆ ಈ ರೀತಿಯ ಉಲ್ಲೇಖಗಳಿವೆ ಎಂದು ಹೇಳಿ ದಾರಿ ತಪ್ಪಿಸುವ ಕೆಲವು ಪುರೋಹಿತರು ತಮ್ಮ ಲಾಭಕ್ಕಾಗಿ ಅದನ್ನು ಬಳಸಿಕೊಳ್ಳುವ ಸಂಭವ ಇರುತ್ತದೆ. ಯಾವುದೇ ಕಾರಣಕ್ಕೂ ಇಂತಹ ಗೊಂದಲಗಳಿಗೆ ಸಿಲುಕಿಕೊಳ್ಳಬೇಡಿ.
ರಾಮಾಯಣ ಕಾಲದಲ್ಲಿ ವಾಲ್ಮೀಕಿ ರಾಮಾಯಣದಲ್ಲಿ ಜನಕ ಮತ್ತು ದಶರಥನ ಮಕ್ಕಳ ವಿವಾಹದ ವಿವರವಾದ ವಿವರಣೆಯಿದೆ. ಇದು ವಾಲ್ಮೀಕಿ ರಾಮಾಯಣದ ಬಾಲಖಾಂಡದಲ್ಲಿಯೂ ಉಲ್ಲೇಖಿಸಲ್ಪಟ್ಟಿರುವುದರಿಂದ ಇದನ್ನು ಪುನರಾವರ್ತಿಸುವುದು ಯೋಗ್ಯವಲ್ಲ.
ಮದುವೆಯ ವೇದಿಕೆಯ ನಾಲ್ಕೂ ಕಡೆ ಪರಿಮಳಯುಕ್ತ ವಿವಿಧ ಹೂಗಳಿಂದ ಅಲಂಕರಿಸಲಾಗಿತ್ತು. ಅದರ ಹತ್ತಿರ ವಿಚಿತ್ರವಾದ ಬಣ್ಣಗಳ ಕಲಶಗಳನ್ನು ಇರಿಸಲಾಗಿತ್ತು. ಆ ಕಲಶಗಳ ಮೇಲೆ ಧೂಪದ್ರವ್ಯವಿರುವ ಧೂಪಪತ್ರೆಗಳನ್ನು ಹಾಕಿ, ಆನಂತರ ಅರ್ಘ್ಯ ಇತ್ಯಾದಿಗಳಿರುವ ಶಂಖಗಳು ಮೊದಲಾದವುಗಳನ್ನು ಸಂಗ್ರಹಿಸಲಾಗಿತ್ತು.
ಇವುಗಳಲ್ಲದೆ ಮಂತ್ರಜಲ ತುಂಬಿದ ಪಾತ್ರೆಗಳು, ಅರಿಶಿನದ ಅಖಂಡ ಪಾತ್ರೆಗಳು ಆ ಸ್ಥಳದಲ್ಲಿ ಇರಿಸಲ್ಪಟ್ಟಿದ್ದವು. ನಂತರ ಮಂತ್ರಪಠಣದೊಂದಿಗೆ, ಕಲಶ, ನೈವೇದ್ಯವನ್ನು ಹರಡಿ ಅಗ್ನಿಯನ್ನು ಸ್ಪರ್ಶಿಸಲಾಯಿತು. ಮುನಿಪುಂಗ ಮತ್ತು ಮಹಾತೇಜಸ್ವಿ ಸಿಷ್ಠರು ಹವನವನ್ನು ಪ್ರಾರಂಭಿಸಿದರು.
ಇಷ್ಟೆಲ್ಲಾ ಮಾಡಿದ ನಂತರ ಮದುವೆಯಾದ ದಂಪತಿಗಳು ಸಂತೋಷವನ್ನು ಕಂಡುಕೊಂಡರೇ…..? ಅವರ ಮದುವೆಯನ್ನು ಯಶಸ್ವಿ ಮದುವೆ ಎಂದು ಕರೆಯಲಾಗುವುದಿಲ್ಲ. ಜಾನಕಿ ಮದುವೆಯಾದ ನಂತರ ಎಷ್ಟು ಸಂಕಟವನ್ನು ಸಹಿಸಬೇಕಾಯಿತು. ಅವರಿಬ್ಬರೂ ವರ್ಷಗಳ ಕಾಲ ಕಾಡಿನಲ್ಲಿ ಬದುಕಬೇಕಾಯಿತು. ನಂತರ ಎರಡು ಬಾರಿ ವಿರಹದ ನೋವನ್ನು ಸಹಿಸಬೇಕಾಯಿತು. ಅಂತಿಮವಾಗಿ ಒಬ್ಬರು ತಮ್ಮ ಪ್ರಾಣ ತ್ಯಾಗ ಮಾಡಿದರು. ರಾಮಾಯಣದ ಪ್ರಕಾರ, ಅವರಿಬ್ಬರೂ ಕೆಲವು ದಿನಗಳನ್ನು ಮಾತ್ರ ಸಂತೋಷದಿಂದ ಕಳೆದರು. ಹಾಗಾದರೆ ಮದುವೆಯ ಆಚರಣೆಗಳನ್ನು ಅನುಸರಿಸುವುದರಿಂದ ಏನು ವ್ಯತ್ಯಾಸವಾಗುತ್ತದೆ?
ವಾಸ್ತವವಾಗಿ ಈ ಆಚರಣೆಗಳು ಧರ್ಮದ ಗುತ್ತಿಗೆದಾರರು ತೆರೆಯುವ ಅಂಗಡಿಗಳಾಗಿವೆ. ಅವರು ದಾನ ತೆಗೆದುಕೊಳ್ಳುವ ಮೂಲಕ ತಮ್ಮ ಜೇಬು ತುಂಬಿಸಿಕೊಳ್ಳಲು ಈ ಮೂಲಕ ವ್ಯಾಪಾರ ಮಾಡುತ್ತಾರೆ. ಆದ್ದರಿಂದ ಅನುಪಯುಕ್ತ ಆಚರಣೆಗಳಲ್ಲಿ ಸಮಯ ಮತ್ತು ಹಣವನ್ನು ವ್ಯರ್ಥ ಮಾಡುವ ಬದಲು, ಮದುವೆಯ ಆಚರಣೆಗಳಲ್ಲಿ ಸಂತೋಷವನ್ನು ಕಂಡುಕೊಳ್ಳಲು ಮತ್ತು ಸಂಬಂಧಗಳನ್ನು ಉಳಿಸಿಕೊಳ್ಳಲು ವ್ಯಯ ಮಾಡಬೇಕು. ಪೌರಾಣಿಕ ಗ್ರಂಥಗಳ ಕಥೆಗಳು ಈ ಸಂತೋಷದ ಸಂದರ್ಭಕ್ಕೆ ಪುರೋಹಿತರೆ ಕಾರಣ ಎಂದು ಹೇಳುತ್ತವೆ. ಆದ್ದರಿಂದ ಇದನ್ನು ಸಂಭವಿಸಲು ಬಿಡಬಾರದು.
ವರದಕ್ಷಿಣೆ ಕೊಡಬೇಡಿ/ತೆಗೆದುಕೊಳ್ಳಬೇಡಿ
ಶತಮಾನಗಳಿಂದ ಇಲ್ಲಿ ವರದಕ್ಷಿಣೆ ಪದ್ಧತಿ ನಡೆದುಕೊಂಡು ಬಂದಿದೆ. ಈ ಕಾರಣದಿಂದಲೇ ಹೆಣ್ಣು ಮಗುವಿನ ಜನನವನ್ನು ಗಂಡು ಮಗು ಹುಟ್ಟಿದ ನಂತರ ಆಚರಿಸುವಷ್ಟು ಮುಕ್ತವಾಗಿ ಆಚರಿಸಲು ಸಾಧ್ಯವಾಗುತ್ತಿಲ್ಲ. ಮಗಳು ಬಂದ ಕೂಡಲೇ ಜನರಿಗೆ ಅದು ಹೊರೆ ಅನ್ನಿಸಿಬಿಡುತ್ತದೆ. ಆ ಹುಡುಗಿಗೆ ವರದಕ್ಷಿಣೆ ಕೊಡಿಸಲು ತಯಾರಿ ನಡೆಯುತ್ತದೆ. ಹುಡುಗರ ಕುಟುಂಬ ಸದಸ್ಯರು ಹುಡುಗಿಯ ಮನೆಯವರು ಹಣದ ಕಾರ್ಖಾನೆ ಇಟ್ಟಿದ್ದಾರೆ ಎಂದೇ ಭಾವಿಸಿಬಿಡುತ್ತಾರೆ.
ಈಗ ಹುಡುಗ ದೊಡ್ಡವನಾದ ನಂತರ ಅವನ ಮದುವೆಯಲ್ಲಿ ಭಾರಿ ವರದಕ್ಷಿಣೆ ತೆಗೆದುಕೊಂಡು ನಮ್ಮ ಹೆಮ್ಮೆಯನ್ನು ತೋರಿಸುತ್ತೇವೆ. ಆದರೆ ಮದುವೆ ಅದ್ಧೂರಿಯಾಗಿ ನಡೆಯಬೇಕೆಂದರೆ ವರದಕ್ಷಿಣೆ ತೋರಿಸಬೇಕಲ್ಲವೇ? ಒಂದು ರೀತಿಯಲ್ಲಿ ಅದು ಕೊಳ್ಳುವ ಮತ್ತು ಮಾರುವ ಆಚರಣೆ ಆಗುತ್ತದೆ. ಈ ಆಚರಣೆ ಇಂದಿನದಲ್ಲ, ಇದು ರಾಮಾಯಣ ಮತ್ತು ಮಹಾಭಾರತದ ಕಾಲಕ್ಕೂ ಮುಂಚೆಯೇ ನಡೆದುಕೊಂಡು ಬಂದಿದೆ. ವಾಲ್ಮೀಕಿ ರಾಮಾಯಣದಲ್ಲಿ ಸೀತಾ ವಿವಾಹದ ಸಂದರ್ಭದಲ್ಲಿ ಜನಕನು ನೀಡಿದ ವರದಕ್ಷಿಣೆಯನ್ನು ಚೆನ್ನಾಗಿ ವಿವರಿಸಲಾಗಿದೆ.
ಇದು ಬಾಲಕಾಂಡದಲ್ಲಿ ದಶರಥನ ಮಗನ ವಿವಾಹ ಎಂಬ 73ನೇ ಶ್ಲೋಕ 😕
ಜನಕಪುರದಿಂದ ಮಹಾರಾಜ ದಶರಥನ ಬೀಳ್ಕೊಡುಗೆ ಮತ್ತು ದಾರಿಯಲ್ಲಿ ಪರುಶುರಾಮರನ್ನು ಭೇಟಿಯಾಗುವುದು)
ರಾತ್ರಿ ಕಳೆದ ನಂತರ, ಬೆಳಗ್ಗೆ ಮಹಾರಾಜ ದಶರಥ ಮತ್ತು ವಿದೇಹರಾಜ ಜನಕರಿಂದ ಅನುಮತಿ ಪಡೆದರು ಮತ್ತು ವಿಶ್ವಾಮಿತ್ರರು ಉತ್ತರ ಪರ್ವತಕ್ಕೆ ಹೋದರು. ಅವರು ಹೋದ ತಕ್ಷಣ ಅದೇಶ ದಶರಥರು ಅಯೋಧ್ಯೆಗೆ ತೆರಳಲು ಜನಕರಾಜರನ್ನು ಅನುಮತಿ ಕೇಳಿದರು.
ಆ ಸಮಯದಲ್ಲಿ ವಿದೇಹ ರಾಜರು ವರದಕ್ಷಿಣೆಯಾಗಿ ಬಹಳಷ್ಟು ಹಣವನ್ನು ನೀಡಿದರು. ಲಕ್ಷಾಂತರ ಗೋವುಗಳು, ಉತ್ತಮವಾದ ಕಂಬಳಿಗಳು, ಸುಂದರವಾಗಿ ಅಲಂಕೃತಗೊಂಡ ಆನೆಗಳು, ರಥರೊಂದಿಗೆ ಹಲವಾರು ಸೈನಿಕರು, ನೂರು ಸುಂದರವಾದ ಕನ್ಯೆಯರು, ಸುಂದರವಾದ ದಾಸದಾಸಿಯರು, ಚಿನ್ನ, ಬೆಳ್ಳಿ ಮತ್ತು ಹವಳ ಇತ್ಯಾದಿಗಳನ್ನು ಬಹಳ ಸಂತೋಷದಿಂದ ನೀಡಿದರು. ಹೀಗೆ ಹಲವಾರು ಬಗೆಯ ವಸ್ತುಗಳನ್ನು ನೀಡಿ, ಬಹಳ ದೂರದವರೆಗೆ ಅವರೊಂದಿಗೆ ತೆರಳಿ, ನಂತರ ರಾಜ ದಶರಥರ ಅನುಮತಿ ಪಡೆದು ಮಿಥಿಲೆಗೆ ಹಿಂದಿರುಗಿದರು.”
ಜನಕ ಶ್ರೀಮಂತ ರಾಜನಾಗಿದ್ದ. ಹಾಗಾಗಿ ಸುಲಭವಾಗಿ ಎಲ್ಲವನ್ನೂ ಸಂಗ್ರಹಿಸಿ ವರದಕ್ಷಿಣೆ ಕೊಟ್ಟ. ಆದರೆ, ಅದು ರೂಢಿಯಾಗಿ ಮುಂದಿನ ಪೀಳಿಗೆಗಳು ಅನುಸರಿಸಿದಾಗ, ಇದು ಅನೇಕ ಸಾಮಾನ್ಯ ಜನರಿಗೆ ಕುಣಿಕೆಯಾಗಿ ಪರಿಣಮಿಸಿತು. ಈ ಕಾರಣದಿಂದಾಗಿ ತಮ್ಮನ್ನು ಅಡಮಾನವಿಡಲು ಒತ್ತಾಯಿಸಲ್ಪಟ್ಟ ಅಂತಹ ಜನರಿಂದ ಸಂಪ್ರದಾಯವನ್ನು ಆವಾಹಿಸಿ, ವರದಕ್ಷಿಣೆಯನ್ನು ಪಡೆಯಲಾಯಿತು. ಜನರು ಮದುವೆಯನ್ನು ಆಚರಣೆಗಳೊಂದಿಗೆ ಸಂಯೋಜಿಸುತ್ತಾರೆ.
ಪ್ರತಿ ಸಂಸ್ಕಾರ ತಾರ್ಕಿಕವಾಗಿ ಇರುವುದು ಅನಿವಾರ್ಯವಲ್ಲ ಎಂಬುದಕ್ಕೆ ರಾಮಾಯಣದ ಈ ಘಟನೆ ಅವರ ಕಣ್ಣು ತೆರೆಸುತ್ತದೆ. ಇಂದು ದಂಪತಿಗಳು ಒಟ್ಟಾಗಿ ಮನೆಯನ್ನು ನಡೆಸುತ್ತಾರೆ ಮತ್ತು ಹಣ ಸಂಪಾದಿಸುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ ವರದಕ್ಷಿಣೆಯ ಹೆಸರಿನಲ್ಲಿ ಆಡಂಬರ ತೋರಿಸುವುದು ಮೂರ್ಖತನವೇ ಹೊರತು ಬೇರೇನೂ ಅಲ್ಲ.
ಒತ್ತಡಕ್ಕೆ ಮಣಿಯಬೇಡಿ
ನಿಮ್ಮ ದಾಂಪತ್ಯದ ಮೇಲೆ ಒತ್ತಡ ಹೇರಲು ಬಿಡದಿರುವುದು ಬಹಳ ಮುಖ್ಯ. ನಿಶ್ಚಿತಾರ್ಥ ಮತ್ತು ಮದುವೆಯ ನಡುವಿನ ಸಮಯ ಕನಸುಗಳ ಸಮಯವಾಗಿರುತ್ತದೆ. ವ್ಯಕ್ತಿಯು ತನ್ನ ಭವಿಷ್ಯದ ಸಂಗಾತಿಯೊಂದಿಗೆ ಪ್ರೀತಿಯ ಕ್ಷಣಗಳನ್ನು ಅನುಭವಿಸಲು ಬಯಸುತ್ತಾನೆ. ಅದರ ಬಗ್ಗೆ ಕೆಲವು ನಿರೀಕ್ಷೆಗಳನ್ನೂ ಇಟ್ಟುಕೊಂಡಿರುತ್ತಾನೆ. ಆದರೆ ಇದು ಆತಂಕದ ಸಮಯ ಎಂಬುದನ್ನೂ ಅಲ್ಲಗಳೆಯುವಂತಿಲ್ಲ. ಮದುವೆಯ ನಂತರ ಅವನ/ಳ ಜೀವನ ಬದಲಾಗುತ್ತದೆ ಎಂದು ಯಾರಾದರೂ ಭಾವಿಸಬಹುದು.
ಈ ಬಗ್ಗೆ ಸ್ವಲ್ಪ ಭಯ ಅಥವಾ ಒತ್ತಡವನ್ನು ಅನುಭವಿಸಬಹುದು. ಸರಿಯಾದ ಜೀವನ ಸಂಗಾತಿ ಸಿಕ್ಕದ್ದಾರೆಯೇ? ಎಂದು ಮನಸ್ಸಿನಲ್ಲಿ ಹಲವು ಅನುಮಾನಗಳಿರಬಹುದು.
ನಿಮ್ಮ ಸಂಗಾತಿಯು ನಿಮ್ಮ ಆಲೋಚನೆಗಳು ಅಥವಾ ನಿರೀಕ್ಷೆಗಳಿಗಿಂತ ಭಿನ್ನಾಗಿ ವರ್ತಿಸಲು ಪ್ರಾರಂಭಿಸಿದಾಗ ನಿಮ್ಮ ಮನಸ್ಸಿನಲ್ಲಿ ಉದ್ಭವಿಸುವ ಈ ಪ್ರಶ್ನೆಗಳು ಆಳವಾಗಲು ಪ್ರಾರಂಭಿಸುತ್ತವೆ. `ಜಿಂದಗಿ ನಾ ಮಿಲೇಗಿ ದೊಬಾರಾ’ ಚಿತ್ರದಲ್ಲಿ ತೋರಿಸಿದಂತೆ, ಇದರಲ್ಲಿ ಕಲ್ಕಿ ತನ್ನ ಭಾವಿ ಪತಿ ಅಭಯ್ ಬಗ್ಗೆ ತುಂಬಾ ಪೊಸೆಸಿವ್ ಆಗಿರುತ್ತಾಳೆ. ಇದರಿಂದಾಗಿ ಅಭಯ್ ಗೆ ಉಸಿರುಗಟ್ಟಿದ ಅನುಭವವಾಗುತ್ತದೆ. ಕಲ್ಕಿ ಕೂಡ ಒತ್ತಡವನ್ನು ಅನುಭವಿಸಲು ಪ್ರಾರಂಭಿಸುತ್ತಾಳೆ. ಅವನೊಳಗಿನ ಉದ್ವೇಗ ಮತ್ತು ಚಂಚಲತೆಯು ಅವನ ನಡವಳಿಕೆಯಲ್ಲಿ ಪ್ರತಿಫಲಿಸಲು ಪ್ರಾರಂಭಿಸುತ್ತದೆ. ಇದು ಪರಿಸ್ಥಿತಿಯನ್ನು ಹದಗೆಡಿಸುತ್ತದೆ ಮತ್ತು ಇಬ್ಬರ ನಡುವೆ ವಾಗ್ವಾದ ಪ್ರಾರಂಭವಾಗುತ್ತದೆ.
ಕಲ್ಕಿಯನ್ನು ಮದುವೆ ಆಗುವುದರಿಂದ ತಾನು ಸಂತೋಷವಾಗಿ ಇರುವುದಿಲ್ಲ ಎಂದು ಅಭಯ್ ಶೀಘ್ರದಲ್ಲೇ ಅರಿತುಕೊಳ್ಳುತ್ತಾನೆ. ಅವನು ಮದುವೆಯಾಗಲು ನಿರಾಕರಿಸುತ್ತಾನೆ. ಈ ರೀತಿಯಾಗಿ ಸುಂದರವಾದ ಸಂಬಂಧ ಸೇರುವ ಮೊದಲೇ ಮುರಿದುಹೋಗುತ್ತದೆ. `ವಿವಾಹ್’ ಸಿನಿಮಾದಲ್ಲಿ ಅಮೃತಾರ ಚಿಕ್ಕಮ್ಮನ ಮದುವೆ ದೊಡ್ಡ ಮನೆಯಲ್ಲಿ ನಡೆಯುತ್ತಿದ್ದರೂ ಅವಳಿಗೆ ಸಂತೋಷವಿರುವುದಿಲ್ಲ. ಮನೆಯಲ್ಲಿ ಒಂದು ರೀತಿಯ ಟೆನ್ಶನ್ ಇರುತ್ತದೆ. ಈ ಉದ್ವಿಗ್ನತೆಯಿಂದಾಗಿ ಮನೆಯಲ್ಲಿ ಅಪಘಾತ ಸಂಭವಿಸಿ, ಅಮೃತಾ ಸುಟ್ಟು ಬದುಕುತ್ತಾಳೆ.
ಈ ರೀತಿ ಏನೂ ಸಂಭವಿಸದಂತೆ ಮತ್ತು ಮದುವೆಯು ಸಂತೋಷದಿಂದ ಕೊನೆಗೊಳ್ಳಲು ಮದುವೆಯ ಮೊದಲು ಸಮಯವನ್ನು ಕಳೆಯುವುದು ಮತ್ತು ಪರಸ್ಪರ ಅರ್ಥ ಮಾಡಿಕೊಳ್ಳಲು ಪ್ರಯತ್ನಿಸುವುದು ಮುಖ್ಯವಾಗಿದೆ. ಈ ಸಮಯದಲ್ಲಿ ಒತ್ತಡ ನಿಮ್ಮನ್ನು ಆರಿಸಲು ಬಿಡಬೇಡಿ.
– ಗಿರಿಜಾ ಭಟ್





