ರಾಘವೇಂದ್ರ ಅಡಿಗ ಎಚ್ಚೆನ್.

ಬಿಗ್ ಬಾಸ್ 12 ಮುಗಿದು ಸಾಕಷ್ಟು ದಿನಗಳಾದರೂ ಆ ಸೀಸನ್‌ನ ಕ್ರೇಜ್ ಇನ್ನೂ ಕಡಿಮೆಯಾಗಿಲ್ಲ. ಈಗ ಕಲರ್ಸ್ ಕನ್ನಡ ವಾಹಿನಿಯು ಮತ್ತೊಮ್ಮೆ ಎಲ್ಲ ಸ್ಪರ್ಧಿಗಳನ್ನು ಒಟ್ಟಿಗೆ ತಂದು ‘ದೊಡ್ಮನೆ ಹಬ್ಬ’ ಎಂಬ ವಿಶೇಷ ಪುನರ್ಮಿಲನ ಕಾರ್ಯಕ್ರಮವನ್ನು ಪ್ರಸಾರ ಮಾಡಲಿದೆ. ಈ ಕಾರ್ಯಕ್ರಮದಲ್ಲಿ ಜೋಡಿ ಹಕ್ಕಿಗಳ ಮಿಲನದಿಂದ ಹಿಡಿದು ಹಳೆಯ ಸಿಟ್ಟು-ಕೋಪಗಳನ್ನು ಎಲ್ಲಾ ಮರೆತು ಮತ್ತೆ ಮುಖಾಮುಖಿ, ಡಾನ್ಸ್, ಕಾಮಿಡಿ ಮತ್ತು ಮನರಂಜನೆಯ ರಸದೌತಣ ಎಲ್ಲವೂ ಇರಲಿದೆ. ಜೋಡಿ ಹಕ್ಕಿಗಳ ಮಿಲನ ಈ ಸೀಸನ್‌ನಲ್ಲಿ ಫ್ಯಾನ್ ಫಾಲೋಯಿಂಗ್ ಪಡೆದ ಜೋಡಿಗಳಾದ ರಾಶಿಕಾ ಶೆಟ್ಟಿ – ಸೂರಜ್ ಸಿಂಗ್, ಗಿಲ್ಲಿ ನಟ್ – ಕಾವ್ಯಾ ಶೈವ ಇವರನ್ನು ಮತ್ತೊಮ್ಮೆ ಒಟ್ಟಿಗೆ ನೋಡುವ ಅವಕಾಶ ಇದೇ ಕಾರ್ಯಕ್ರಮದಲ್ಲಿ ಸಿಗಲಿದೆ. ಫ್ಯಾನ್ಸ್ ಈ ಜೋಡಿಗಳ ಮಿಲನಕ್ಕಾಗಿ ಭಾರೀ ಕಾಯುತ್ತಿದ್ದಾರೆ.

habba

ಹಳೆಯ ಸಿಟ್ಟುಗಳ ಮುಖಾಮುಖಿ
ಬಿಗ್ ಬಾಸ್ ಮನೆಯಿಂದ ಹೊರಬಂದ ನಂತರ ಹಲವು ಸ್ಪರ್ಧಿಗಳು ಗಿಲ್ಲಿ ನಟ ವಿಜಯಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದರು. ಸಾಮಾಜಿಕ ಜಾಲತಾಣಗಳಲ್ಲಿ ಕೋಪ-ಕಿಡಿ ತೋರಿಸಿದ್ದರು. ಈಗ ಈ ಸ್ಪರ್ಧಿಗಳು ಮತ್ತೊಮ್ಮೆ ಗಿಲ್ಲಿ ನಟ ಮುಂದೆ ಕುಳಿತು ಮಾತನಾಡಿದರೆ ಏನಾಗುತ್ತದೆ ಎಂಬ ಕುತೂಹಲ ಎಲ್ಲರಲ್ಲೂ ಇದೆ. ಈ ಕಾರ್ಯಕ್ರಮದ ಮೂಲಕ ಮುಖಾಮುಖಿಯಾಗಲ್ಲಿರುವ ಬಿಗ್ ಬಾಸ್ ಮನೆ ಸ್ಪರ್ಧಿಗಳು.
ಕಾಮಿಡಿ, ಡಾನ್ಸ್ ಮತ್ತು ಮೋಜು ಮಸ್ತಿ, ಸುಷ್ಮಾ ಕೆ. ರಾವ್ ನಿರೂಪಣೆಯಲ್ಲಿ ಕಾಮಿಡಿ ಫುಲ್ ಜೋರಾಗಿರಲಿದೆ. ಮಲ್ಲಮ್ಮ ಅವರಿಗೆ “ಗಾಸಿಪ್ ಅಂದ್ರೆ ಏನು?” ಎಂದು ಕೇಳಿದಾಗ “ತೆಂಗಿನ ಚಿಪ್ಪು” ಎಂದು ಉತ್ತರಿಸಿದ್ದು ವೈರಲ್ ಆಗಿತ್ತು. ಇಂತಹ ಫನ್ ಮೊಮೆಂಟ್‌ಗಳು ಇರಲಿವೆ. ಸ್ಪರ್ಧಿಗಳ ಕುಟುಂಬಸ್ಥರ ಜೊತೆಗಿನ ಮೋಜು ಮಸ್ತಿ, ಡಾನ್ಸ್ ಪರ್ಫಾರ್ಮೆನ್ಸ್‌ಗಳೂ ಇರಲಿವೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ