Mysore Sandal Soap ಒಂದು ಎಮೋಷನ್ ಎಂದ ತಮನ್ನಾಮೈಸೂರು ಸ್ಯಾಂಡಲ್ ಗೆ ತಮನ್ನಾ ರಾಯಭಾರಿ.

Mysore Sandal Soap ಹೊಸ ರೂಪವನ್ನ ಬಿಡುಗಡೆ ಮಾಡಿದ ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ
ರಾಘವೇಂದ್ರ ಅಡಿಗ ಎಚ್ಚೆನ್.

ತಾಜ್‌ ವೆಸ್ಟ್‌ ಎಂಡ್‌ ಹೋಟೆಲಿನ ಝಗಮಗಿಸುವ ಸಭಾಂಗಣದಲ್ಲಿ ಬಹುಭಾಷಾ ನಟಿ ತಮನ್ನಾ ಅವರು ಶತಮಾನಕ್ಕೂ ಹೆಚ್ಚಿನ ಇತಿಹಾಸವಿರುವ ಕೆಎಸ್‌ಡಿಎಲ್‌ ಸಂಸ್ಥೆಯ ಪ್ರಚಾರ ರಾಯಭಾರಿಯಾಗಿ ಹೊಸ ಅಧ್ಯಾಯವನ್ನು ವಿಧ್ಯುಕ್ತವಾಗಿ ಆರಂಭಿಸಿದರು. ಬೃಹತ್‌ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ಹಾಗೂ ಅಧ್ಯಕ್ಷ ಸಿ.ಎಸ್.ನಾಡಗೌಡ ಅವರ ನೇತೃತ್ವದಲ್ಲಿ ಕೆಎಸ್‌ಡಿಎಲ್‌ ಹೊಸ ಯುಗಕ್ಕೆ ಕಾಲಿಟ್ಟಿದೆ. ಬೆಂಗಳೂರಿನ ಖಾಸಗಿ ಹೋಟೆಲ್ ಒಂದರಲ್ಲಿ ಜರುಗಿದ ಸಮಾರಂಭದಲ್ಲಿ ಮೈಸೂರು ಸ್ಯಾಂಡಲ್ ಸೋಪ್ ಬೆಳೆದು ಬಂದ ಹಾದಿಯನ್ನು ಬಿಂಬಿಸುವ ಸುಗಂಧ ಸಿರಿ ಹೊತ್ತಗೆಯನ್ನು ಬಿಡುಗಡೆ ಮಾಡಲಾಯಿತು. ಮುದ್ದೇಬಿಹಾಳದ ಶಾಸಕರು ಹಾಗೂ KSDL ಅಧ್ಯಕ್ಷರಾದ ಶ್ರೀ ಸಿ.ಎಸ್‌‍ ಅಪ್ಪಾಜಿ ನಾಡಗೌಡ, ಕೈಗಾರಿಕಾ ಇಲಾಖೆ, KSDL, MSIL ಅಧಿಕಾರಿಗಳು ಸೇರಿದಂತೆ ಹಲವಾರು ಗಣ್ಯರು ಇಂದಿನ ಸಮಾರಂಭದಲ್ಲಿ ಉಪಸ್ಥಿತರಿದ್ದರು.
ಮೈಸೂರು ಸ್ಯಾಂಡಲ್‌ ಸೋಪ್‌ನ ಪ್ಯಾಕೆಟ್‌ ಹೊಚ್ಚಹೊಸ ರೂಪ ತಾಳಿದೆ ಜೊತೆಗೆ ಮೈಸೂರು ಸ್ಯಾಂಡಲ್‌ ಸೋಪ್‌ ಜತೆಗೆ ಸಂಸ್ಥೆಯ 57 ಉತ್ಪನ್ನಗಳನ್ನು ನಟಿ ತಮನ್ನಾ ಸೇರಿದಂತೆ ಗಣ್ಯರು ಬಿಡುಗಡೆ ಮಾಡಿದರು. ಹೀಗೆ ನವನವೀನ ಪ್ಯಾಕಿಂಗ್‌ ಪಡೆದುಕೊಂಡಿರುವ ಉತ್ಪನ್ನಗಳಲ್ಲಿ ಗಂಧದ ಎಣ್ಣೆ, ಮಲ್ಲಿಗೆ (ಜಾಸ್ಮೀನ್)‌ ಪರಿಮಳದ ಸೋಪು, ಸುಗಂಧದ್ರವ್ಯ, ಟೂತ್‌ ಪೇಸ್ಟ್‌, ಕೊಬ್ಬರಿ ಎಣ್ಣೆ, ಪೆಟ್ರೋಲಿಯಂ ಜೆಲ್ಲಿ, ಸಾವಯವ ಉತ್ಪನ್ನಗಳವರೆಗೆ 60 ಉತ್ಪನ್ನಗಳಿವೆ. ಜೊತೆಗೆ ತಮನ್ನಾ, ಸಂಸ್ಥೆಯ ಪರವಾಗಿ ನಡೆಸಿರುವ ಪ್ರಚಾರದ ಹತ್ತಾರು ಜಾಹೀರಾತುಗಳು ಕೂಡ ಬಿಡುಗಡೆಯಾದವು. ಇದೇ ಸಂದರ್ಭದಲ್ಲಿ ಸಂಸ್ಥೆಯ ಇತಿಹಾಸವನ್ನು ಕಟ್ಟಿಕೊಡುವ ʻಸುಗಂಧ ಸಿರಿʼ ಮತ್ತು ʻಅರೋಮ್ಯಾಟಿಕ್‌ ಜರ್ನೀಸ್ʼ ಕಾಫಿ ಟೇಬಲ್‌ ಪುಸ್ತಕಗಳ ಲೋಕಾರ್ಪಣೆಯೂ ನೆರವೇರಿತು.

sandalsoap

ನಟಿ ತಮನ್ನಾ ಮಾತನಾಡಿ, ಮೈಸೂರು ಸ್ಯಾಂಡಲ್‌ ಸೋಪು ಕೇವಲ ಒಂದು ಸಾಬೂನಲ್ಲ. ಇದರೊಂದಿಗೆ ಭಾವನೆಗಳು, ಬಾಲ್ಯ ಮತ್ತು ಸುಮಧುರ ನೆನೆಪುಗಳೆಲ್ಲ ಹೆಣೆದುಕೊಂಡಿವೆ. ಇದು ಪರಿಪೂರ್ಣತೆ ಮತ್ತು ಸತ್ಯಗಳ ಸಂಗಮ. ಮಾರುಕಟ್ಟೆಯಲ್ಲಿ ಇದಕ್ಕೆ ಸಾಟಿಯಾದ ಇನ್ನೊಂದು ಸೋಪ್‌ ಇಲ್ಲ. ಮೈಸೂರು ಸ್ಯಾಂಡಲ್‌ ಸೋಪ್‌ಗೆ ನನ್ನ ಹೃದಯದಲ್ಲಿ ವಿಶೇಷ ಸ್ಥಾನವಿದೆ. ಮುಂದಿನ ಎರಡು ವರ್ಷ ನಾನು ಈ ಗುಣಮಟ್ಟದ ಉತ್ಪನ್ನಗಳ ರಾಯಭಾರಿಯಾಗಿ ಕೆಲಸ ಮಾಡಲಿದ್ದೇನೆ ಎಂದು ಬಣ್ಣಿಸಿದರು
ಬಳಿಕ ಮಾತನಾಡಿದ ಸಚಿವ ಎಂ ಬಿ ಪಾಟೀಲ, ಮಾತನಾಡಿ ನಾಲ್ವಡಿ ಕೃಷ್ಣರಾಜ ಒಡೆಯರ್ ನೂರಾ ಎಂಟು ವರ್ಷದ ಹಿಂದೆ ಮೈಸೂರ್ ಸ್ಯಾಂಡಲ್ ಸೋಪ್ ತಯಾರಿಕೆಯನ್ನು ಪ್ರಾರಂಭಿಸಿದರು. ಆಗ ವಿಶ್ವೇಶ್ವರಯ್ಯ ಅವರು ಶಾಸ್ತ್ರಿಅವರಿದ್ದರು. ಆ ವೇಳೆ ನಡೆಯುತ್ತಿದ್ದ ದ್ವಿತೀಯ ಮಹಾಯುದ್ಧದ ಕಾರಣ ಶ್ರೀಗಂಧಕ್ಕೆ ಬೇಡಿಕೆ ಕುಸಿದಿತ್ತು. ಆ ವೇಳೆಗೆ ಶಾಸ್ತ್ರಿಯವರನ್ನು ಲಂಡನ್ ಗೆ ಕಳಿಸಿ ಅಲ್ಲಿ ಶ್ರೀಗಂಧದ ಎಣ್ಣೆ ತೆಗೆಯುವ ಕುರಿತಂತೆ ಅದ್ಯಯನಕ್ಕೆ ಮುಂದಾದರು. ಈ ಸೋಪ್ ಹಾಗೂ ಮೈಸೂರ್ ಸ್ಯಾಡಲ್ ಗೆ ನೂರಾ ಎಂಟು ವರ್ಷ ಇತಿಜಾಸ ಇದ್ದು ನಾನು ಸಚಿವನಾದ ನಂತರ ಇದಕ್ಕೆ ಹೊಸ ರೂಪ ಕೊಡಬೇಕೆಂದು ಬಯಸಿಸೆ. ಇದಕ್ಕೆ ಮುನ್ನ ೧೩ ಕೋಟಿ ವಹಿವಾಟು ನಡೆಸುತ್ತಿದ್ದ ಈ ಕಂಪನಿ ಈಗ ೧೮೦೦ ಕೋಟಿ ರೂ. ವಹಿವಾಟು ತಲುಪಿದೆ. ಅಲ್ಲದೆ ಈ ಹಿಂದೆ ೧೮೨ ಕೋಟಿ ಲಾಭವಿದ್ದದ್ದು ಈಗ ೪೫೦ ಕೋಟಿ ರೂ ಲಾಭ ಬರುತ್ತಿದೆ. ಎಫ್.ಎಂ.ಸಿ.ಸಿ.ಗಳಲ್ಲಿ ಕಾರ್ಪೋರೇಟ್ ಕಂಪನಿಗಳ ಜೊತೆಗೆ ಸ್ಪರ್ಧಿಸಿ ನಾವಿಂದು ನಂಬರ್ ಒನ್ ಆಗಿದ್ದೇವೆ. ಪಿ.ಎಸ್.ಯು. ಆಗಿ ನಾವು ದೊಡ್ಡ ದೊಡ್ಡ ಕಂಪನಿಗಳ ಜೊತೆಗೆ ಸ್ಪರ್ಧಿಸಿ ನಂಬರ್ ಒನ್ ಸ್ಥಾನ ಗಳಿಸಿದ್ದೇವೆ.

sandalsoap 1

ಬಹುಭಾಷಾ ನಟಿ ತಮನ್ನಾ ಭಾಟಿಯಾ ಅವರನ್ನು ಮೈಸೂರು ಸ್ಯಾಂಡಲ್ ಕಂಪನಿಯ ನೂತನ ರಾಯಭಾರಿಯನ್ನಾಗಿ ನಾವಿಂದು ಮಾಡಿದ್ದೇವೆ. ಇದನ್ನು ಒಂದು ಕಮಿಟಿ ರಚಿಸಿ ಬಹಳ ಆಲೋಚಿಸಿ ತೀರ್ಮಾನಿಸಲಾಗಿದೆ. ರಜನಿಕಾಂತ್ ಅವರುಈ ಕಮಿಟಿಯ ಅಧ್ಯಕ್ಷರಾಗಿದ್ದು ಅವರು ಏಳೆಂಟು ಜನರ ಹೆಸರು ಸೂಚಿಸಿದ್ದರು.ಅದರ ಪೈಕಿ ಇಬ್ಬರು-ಮೂವರು ನಮ್ಮ ರಾಜ್ಯದವರಿದ್ದರು. ಅದರಲ್ಲಿ ಒಬ್ಬರು ಬೇರೆ ಉತ್ಪನ್ನವೊಂದರ ರಾಯಭಾರಿಯಾಗಿದ್ದರು. ಇನ್ನೊಬ್ಬರಿಗೆ ಅವರದೇ ಉತ್ಪನ್ನ ಇತ್ತು. ಹಾಗಾಗಿ ಇದೆಲ್ಲವನ್ನೂ ಅಳೆದು ತೂಗಿ ೨೮.೩ ಕೋಟಿ ಫಾಲೋವರ್ಸ್ ಇದ್ದತಮನ್ನಾ ಅವರನ್ನು ರಾಯಭಾರಿಯಾಗಿ ಮಾಡಿದ್ದೇವೆ.
ಮೈಸೂರು ಸ್ಯಾಂಡಲ್ ಕೇವಲ ಕರ್ನಾಟಕದಲ್ಲಿ ಮಾತ್ರವಲ್ಲ ಭಾರತದಾದ್ಯಂತ ಮಾರಾಟವಾಗುತ್ತಿದೆ. ಇದನ್ನು ಮುಂದಿನ ದಿನಗಳಲ್ಲಿ ವಿಶ್ವಮಟ್ಟಕ್ಕೆ ಒಯ್ಯಬೇಕೆಂದು ನಾವು ತೀರ್ಮಾನಿಸಿ ಅದಕ್ಕಾಗಿ ಇಂಟರ್ನ್ಯಾಷನಲ್ ಬ್ರ್ಯಾಂಡಿಂಗ್ ಕೊಡಲಾಗಿದೆ.

sandalsoap 2

ಈ ಮುನ್ನ ಮೈಸೂರು ಸ್ಯಾಂಡಲ್ ಕಂಪನಿಯಲ್ಲಿ ೩೬ ಉತ್ಪನ್ನಗಳಿದ್ದವು. ಇದಕ್ಕೀಗ ಹೊಸತಾಗಿ ೫೭ ಉತ್ಪನ್ನಗಳನ್ನು ಸೇರಿಸಲಾಗಿದೆ. ಅದರಲ್ಲಿ ಪರ್ಫ್ಯೂಮ್ಸ್ ಗಳಿದೆ, ಮೂರು ವಿಧದ ಪರ್ಫ್ಯೂಮ್ ಗಳಿದೆ.  ನಾವೀಗ ಜಾಸ್ಮೀನ್‌ ಪರಿಮಳದ ಐಷಾರಾಮಿ ಸೋಪನ್ನೂ ತಯಾರಿಸುತ್ತಿದ್ದೇವೆ. ಮಲ್ಲಿಗೆಯ ತೈಲ ಲೀಟರಿಗೆ 4 ಲಕ್ಷ ರೂಪಾಯಿಗೂ ಜಾಸ್ತಿ ಇದೆ. ನಮ್ಮಲ್ಲಿ ತಯಾರಾಗುವ ಈ ಸೋಪ್‌ಗೆ 400 ರೂಪಾಯಿ ಇಟ್ಟಿದ್ದೇವೆ. ಯೂರೋಪಿನ ಮಾರುಕಟ್ಟೆಯಲ್ಲಿ ಈ ತರಹದ ಸಾಬೂನಿಗೆ ಭಾರೀ ಬೇಡಿಕೆ ಇದೆ. ಇದೇ ರೀತಿಯಲ್ಲಿ ಸುಗಂಧ ದ್ರವ್ಯಗಳ ವಲಯವನ್ನೂ ಪ್ರವೇಶಿಸಿದ್ದೇವೆ. ಇದಕ್ಕಾಗಿ ಸಂಸ್ಥೆಯ ಉನ್ನತಾಧಿಕಾರಿಗಳು ಕೊಯಮತ್ತೂರು, ಕನೌಜ್‌ಗೆ ತೆರಳಿ, ಒಡಂಬಡಿಕೆ ಮಾಡಿಕೊಂಡು ಬಂದಿದ್ದಾರೆ ಜತೆಗೆ, ಕೆಎಸ್‌ಡಿಎಲ್‌ ಉತ್ಪನ್ನಗಳ ಪೈಕಿ ಸದ್ಯಕ್ಕೆ ಶೇಕಡ 1ರಷ್ಟು ಮಾತ್ರ ರಫ್ತಾಗುತ್ತಿದೆ. ಇದನ್ನು ಹೆಚ್ಚು ಮಾಡಲು ನೀಲನಕ್ಷೆ ಸಿದ್ಧಪಡಿಸಲಾಗಿದೆ. ಹೊಸ ಉತ್ಪನ್ನಗಳಲ್ಲಿ ಮಹಾರಾಜ ಮತ್ತು ಮಹಾರಾಣಿ ಸೀರೀಸ್‌ ಇವೆ. ಪರಂಪರೆಯ ಮಹತ್ವವನ್ನು ಬಿಟ್ಟುಕೊಡದೆ ಸಮಕಾಲೀನ ಅಭಿರುಚಿಯನ್ನು ಇಲ್ಲಿ ಬೆಸೆದಿದ್ದೇವೆಎಂದು ವಿವರಿಸಿದರು.

sandalsoap 4

ಸಂಸ್ಥೆಯ ಅಧ್ಯಕ್ಷ ಸಿ ಎಸ್‌ ಅಪ್ಪಾಜಿ ನಾಡಗೌಡ ಮಾತನಾಡಿ, ಈ ಸಾಲಿನಲ್ಲಿ ಸಂಸ್ಥೆಯ ವಹಿವಾಟು 2,000 ಕೋಟಿ ರೂ. ಮುಟ್ಟಲಿದ್ದು, ಲಾಭವು 500 ಕೋಟಿ ರೂ. ದಾಟಲಿದೆ. ಇದಕ್ಕಾಗಿ ಆಧುನಿಕ ವಹಿವಾಟು ತಂತ್ರಗಳನ್ನು ಅಳವಡಿಸಿಕೊಳ್ಳಲಾಗಿದೆ. ಸೋಶಿಯಲ್‌ ಮೀಡಿಯಾದಲ್ಲಿ 3 ಕೋಟಿ ಫಾಲೋಯರ್ಸ್‌ ಹೊಂದಿರುವ, ಅಂತರಾಷ್ರೀಯ ಮಟ್ಟದ ವರ್ಚಸ್ಸಿರುವ ತಮನ್ನಾ ಅವರನ್ನು ಬ್ರ್ಯಾಂಡ್‌ ಅಂಬಾಸಿಡರ್‌ ಆಗಿ ನೇಮಿಸಿಕೊಂಡಿರುವುದು ಇದರ ಒಂದು ಭಾಗವಾಗಿದೆ ಎಂದಿದ್ದಾರೆ.
ಕೆಎಸ್ ಡಿಎಲ್ ವ್ಯವಸ್ಥಾಪಕ ನಿರ್ದೇಶಕ ಕೆ.ಪಿ.ಎಂ. ಪ್ರಶಾಂತ್‌ ಪ್ರಾಸ್ತಾವಿಕವಾಗಿ‌ ಮಾತನಾಡಿದರು. ಕಾರ್ಯಕ್ರಮದಲ್ಲಿ ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್‌, ಸ್ವತಂತ್ರ ನಿರ್ದೇಶಕ ಅರವಿಂದ ಗಲಗಲಿ, ತಾಂತ್ರಿಕ ಸಲಹೆಗಾರ ರಜನೀಕಾಂತ್‌, ಶಿವಕುಮಾರ್‌, ಪ್ರತಿಮಾ ವಂದಗಾರು, ಎಂಎಸ್ಐಎಲ್ ವ್ಯವಸ್ಥಾಪಕ ನಿರ್ದೇಶಕ ಮನೋಜ, ಸ್ವತಂತ್ರ ನಿರ್ದೇಶಕ ಶಾಮರಾಜು ಮುಂತಾದವರು ಉಪಸ್ಥಿತರಿದ್ದರು.

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ