ಇಲ್ಲಿ ಫೋಟೋದತ್ತ ಮಾತ್ರ ಗಮನ ಕೊಡಿ : ದ. ಅಮೆರಿಕಾದಿಂದ ಬಂದಂಥ ಲೀಗಲ್ ಇಲ್ಲೀಗಲ್ ರೆಸಿಡೆಂಟ್ಸ್ ಲ್ಯಾಟಿನೋ, ಇತ್ತೀಚೆಗೆ ರಾಜಕೀಯ ಮೊಹರೆ ಆಗುತ್ತಿದ್ದಾರೆ. ಡೊನಾಲ್ಡ್ ಟ್ರಂಪ್ ಇವರನ್ನು ರಾಜಕೀಯದಿಂದ ಉಚ್ಛಾಟಿಸುವ ಘೋಷಣೆ ಮಾಡುತ್ತಾ, ಪ್ರೆಸಿಡೆಂಟ್ ರ ಚುನಾವಣೆಯಲ್ಲಿ ಗೆಲ್ಲುವ ಉಮೇದಿನಲ್ಲಿದ್ದಾರೆ. ಆದರೆ ಲಕ್ಷಾಂತರ ಲ್ಯಾಟಿನೋ ಮಂದಿ ಅಲ್ಲಿನ ಫ್ಯಾಕ್ಟರಿ, ಆಫೀಸುಗಳಲ್ಲಿ ಕೆಲಸ ಮಾಡುತ್ತಿದ್ದಾರೆ, ಆ ದೇಶದ ಪೌರತ್ವ ಪಡೆದಿದ್ದಾರೆ. ಇಷ್ಟೆಲ್ಲ ಆದರೂ ಟ್ರಂಪಣ್ಣನ ಕಾಟದಿಂದ ಅವರು ತಮ್ಮದೇ ಬೇರೆ ಸಮುದಾಯ ಮಾಡಿಕೊಂಡಿದ್ದಾರೆ. ಹೀಗಾಗಿ ಇಂಥ ಸೆಕ್ಸಿ ಸಿಂಡಿ ಬರ್ಬಾನೋ ಮೀಡಿಯಾದಲ್ಲಿ ತನ್ನದೇ ಆದ ಛಾಪನ್ನೊತ್ತಿದಾಗ, ಎಲ್ಲೆಲ್ಲೂ ಕ್ಯಾಮೆರಾ ಕಣ್ಣು ಕ್ಲಿಕ್ಕಿಸಿತು. ಲ್ಯಾಟಿನ್ ಹುಡುಗಿಯರು ಭಲೇ ಬಿಂದಾಸ್ ಮಾತ್ರವಲ್ಲದೆ ಉನ್ಮುಕ್ತ ಜೀವನಕ್ಕಾಗಿ ಹಾತೊರೆಯುವರು.

ಪ್ರವಾಸ ಮಾತ್ರವಲ್ಲ ಮೋಜು ಮಸ್ತಿ ಸಹ : ಡೆಸ್ಟಿನೇಶನ್ ಮ್ಯಾರೇಜ್ ಯಾ ಕೇವಲ ಎಂಗೇಜ್ ಮೆಂಟ್ ಇರಲಿ, ಇಂದಿನ ಎಲ್ಲ ಆಧುನಿಕ ಯಂಗ್ ಸ್ಟರ್ಸ್ ಗೂ ದುಬೈ ಫೇವರಿಟ್ ಸ್ಪಾಟ್ ಆಗಿಹೋಗಿದೆ! ಅಲ್ಲಿ ಹೆಲಿಕಾಪ್ಟರ್ ಸರ್ವೀಸ್ ಸಹ ಈಝಿ ಲಭ್ಯ. ಅವ ನೇರ ಬಂದು ನೀವು ತಂಗಬಯಸುವ ಹೋಟೆಲ್ ನ ಮಹಡಿ ಮೇಲೆ ಇಳಿಸುತ್ತವೆ. ರೋಡ್ ಟ್ರಾಫಿಕ್ ನ ಕಿರಿಕಿರಿಯೇ ಇಲ್ಲ! ಬೆಂಗಳೂರಿನ ರಿಂಗ್ ರೋಡ್ ನ ಒಂದು ತುದಿಯಿಂದ ಇನ್ನೊಂದು ತುದಿ ಮುಟ್ಟುವಷ್ಟರಲ್ಲಿ ನೀವು ಅಲ್ಲಿಗೆ ತಲುಪಿರುತ್ತೀರಿ! ಬುರ್ಜ್‌ಖಲೀಫಾದ ಎಲ್ಲಾ ಕಡೆ ಇಂಥ ಸೇವೆ ಒದಗಿಸುವ ಹೋಟೆಲ್ಸ್ ಇದ್ದೇ ಇವೆ. ತಕ್ಷಣ ಜೇಬು ಭರ್ತಿ ಮಾಡಿಕೊಂಡು ಇಂಥ ಮಜಾ ಪಡೆಯಲು ದುಬೈಗೆ ಹಾರಿಬಿಡಿ.

ಮಜವಾದ ಆಟ : ಅಮೆರಿಕಾದ ಸಮಾಜದಲ್ಲಿ ಇಂದಿಗೂ ಕೌಬಾಯ್ಸ್ ನ ಸಿನಿಮಾ ಅಂದ್ರೆ ಎಲ್ಲರಿಗೂ ಇಷ್ಟ. ಇದಕ್ಕೆ ಸಂಬಂಧಿಸಿದ ಲೈವ್ ಇವೆಂಟ್ಸ್ ನ್ನು ಗಮನಿಸಲು, ಆ ಸುತ್ತಮುತ್ತಲ ಹೊಲದ ಮಾಲೀಕರೆಲ್ಲ ಜಮೆಗೊಳ್ಳುತ್ತಾರೆ. ಪ್ರಾಯಶಃ ನಗರವಾಸಿಗಳು ಈ ಆಟ ಮರೆತಿರಬಹುದು, ಆದರೆ ನಮ್ಮ ತಮಿಳುನಾಡಿನಲ್ಲಿ ಇಂದಿಗೂ ಜಲಿಕಟ್ಟು ಇರುವಂತೆ ಅಲ್ಲಿ ಬುಲ್ ಫೈಟ್ ನಡೆಯುತ್ತದೆ. ಇದು ಆ ಹಳ್ಳಿಯ ಹಮ್ಮೀರನ ಮರ್ಯಾದೆ ಪ್ರಶ್ನೆ ಆಗಿಬಿಡುತ್ತದೆ. ಅಮೆರಿಕಾದ ದಕ್ಷಿಣ ರಾಜ್ಯಗಳಲ್ಲಿ ಈ ಆಟ ಮತ್ತೆ ಜನಪ್ರಿಯತೆ ಗಳಿಸುತ್ತಿದೆ. ಆದರೆ ಇದನ್ನು ಸಹಿಸದ ಅಲ್ಲಿನ ಚರ್ಚುಗಳ ಕಂದಾಚಾರಿಗಳು ಅಡೆತಡೆ ಒಡ್ಡುತ್ತಿದ್ದರೂ, ಆಧುನಿಕರು ವಿರೋಧಿಸುತ್ತಲೇ ಇರುತ್ತಾರೆ.

ಖರೀದಿಸಿ ತಕ್ಷಣ ಧರಿಸಿರಿ : ಈ ಮೇಡಂ ಧರಿಸಿರುವ ಕೋಟ್ ನಿಮಗೆ ಮಾಮೂಲಿ ಎನಿಸಿದರೆ ಆಶ್ಚರ್ಯವಿಲ್ಲ. ಆದರೆ ಇದರ ಡಿಸೈನರ್ ಹೇಳುವುದೆಂದರೆ, ಆಕೆ ಸುಮಾರು 1200 ಮಂದಿಯ ಅಭಿಪ್ರಾಯ ಸಂಗ್ರಹಿಸಿ ಇದನ್ನು ತಯಾರಿಸಿದ್ದಾಳಂತೆ! ನಿಮ್ಮೂರಲ್ಲಿ ಇಂಥದ್ದನ್ನು ಕಂಡ ತಕ್ಷಣ ಕೊಂಡು ಧರಿಸಿಬಿಡಿ, ನೀವು ಯೋಚಿಸುತ್ತಾ ಇದ್ದುಬಿಟ್ಟರೆ ಅದು ಔಟ್ ಆಫ್ ಫ್ಯಾಷನ್ ಆದೀತು.

ಬಣ್ಣ ಅಲ್ಲ ಮೋಡಿ ನೋಡಿ : ಇಲ್ಲಿನ ಫ್ಯಾಷನ್ ಶೋನಲ್ಲಿ ಕರಿಯರು ಡುಮ್ಮಿ ಮಾತ್ರವಲ್ಲ, ವಯಸ್ಸಾಗಿಯೂ ಕಾಣುತ್ತಾರೆ. ಆದರೂ ಇದರ ಆಕರ್ಷಣೆ ಮಾತ್ರ ತಪ್ಪಿಲ್ಲ. ಇದನ್ನೇ ಬಿಂದಾಸ್ ಗುಣ ಅಂತಾರೆ. ನಮ್ಮ ದೇಶದಲ್ಲಿ ಮಾತ್ರ ಹೆಣ್ಣುಮಕ್ಕಳು ಇಂದಿಗೂ ಗೌರವರ್ಣಕ್ಕಷ್ಟೇ ಪ್ರಾಧಾನ್ಯತೆ ಕೊಡುತ್ತಾರೆ, ಅಸಲಿಗೆ ಇವರು ತಮ್ಮ ಆತ್ಮವಿಶ್ವಾಸವನ್ನೇ ಕಳೆದುಕೊಂಡಿರುತ್ತಾರೆ. ಬ್ಲ್ಯಾಕ್ ಬ್ಯೂಟಿ ಎಂದಿದ್ದರೂ ಆಕರ್ಷಕವೇ! ನಮ್ಮ ದೇಶಕ್ಕೆ ಬಿಳಿಯರು ಬಂದ ನಂತರ, ಗೌರವರ್ಣ ಅಟ್ಟ ಹತ್ತಿಬಿಟ್ಟಿದೆ! ಇಲ್ಲಿ ಕ್ಯಾಟ್ ವಾಕ್ ಮಾಡುತ್ತಿರುವವಳ ಡ್ರೆಸ್ ನೋಡಿ ದಂಗಾಗದಿರಿ.

ಇಷ್ಟು ಮಾತ್ರಕ್ಕೆ ಯೌವನ ಮುಗಿದು ಹೋಗುತ್ತದೆಯೇ? : ಇಲ್ಲಿನ ಲೋರಾ ಬೇಲ್ ಬೂಂದೀ, ಮಾರಿಸಾ ಜರೆಟ್ ವಿನೋಕೂರ್, ಕೆರೀ ಬಟ್ಲರ್ ಮೊದಲಾದವರು ಸುಮಾರು 20 ವರ್ಷಗಳ ಹಿಂದೆ ನ್ಯೂಯಾರ್ಕ್ ನ ಬ್ರಾಡ್ ವೇಗಳ ಥಿಯೇಟರ್ ಗಳಲ್ಲಿ ಪ್ರತಿ ಸಂಜೆ ರಂಗುರಂಗಿನ ಕ್ಯಾಬರೆ, ಮ್ಯೂಸಿಕ್, ಡ್ಯಾನ್ಸ್, ಡ್ರಾಮಾ ಶೋಗಳಲ್ಲಿ ಮಿಂಚುತ್ತಿದ್ದರು. 20 ವರ್ಷಗಳ ನಂತರ ಈ ಮೂವರು ನಟಿಯರೂ ಮತ್ತೆ ಒಂದೆಡೆ ಕಲೆತು ಶೋ ನೀಡುವಂತಾಗಿದೆ! ಇದರಿಂದ ತಿಳಿಯುವುದೇನೆಂದರೆ ಯೌವನ 25-30ಕ್ಕೇ ಮುಗಿಯುವುದಿಲ್ಲ, 50-55ರವರೆಗೂ ಮಿಂಚುತ್ತಿರುತ್ತದೆ ಅಂತ! ನಿಮ್ಮ ಫಿಗರ್ ಮೇಂಟೆನೆನ್ಸ್ ಕಡೆ ಗಮನ ಕೊಡಿ, ಜೀವನ ತಾನಾಗಿ ರಂಗು ರಂಗಾಗುತ್ತದೆ. ನಮ್ಮ ಕಾಲ ಮುಗೀತು ಬಿಡಿ ಎಂದು ಹತಾಶರಾಗಬೇಡಿ.

ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳಿ : ಬೆಟ್ಟಕ್ಕೆ ಚಾರಣ ಹೊರಡುವುದು ನಿಜಕ್ಕೂ ಒಂದು ಟೆಕ್ನಿಕ್ ಪ್ರತಿಭೆ. ಇದರಲ್ಲಿ ಜೀವಕ್ಕೆ ಯಾವ ಗ್ಯಾರಂಟಿಯೂ ಇಲ್ಲ, ಅಖಂಡ ಧೈರ್ಯ, ಆತ್ಮವಿಶ್ವಾಸ ಬೇಕೇಬೇಕು. ಹೀಗಾಗಿಯೇ ಇದು ಅನಾದಿ ಕಾಲದಿಂದ ಗಂಡಸರ ಹವ್ಯಾಸ ಆಗಿತ್ತು. ಆದರೆ ನಿಧಾನವಾಗಿ ಹೆಂಗಸರೂ ಇದರಲ್ಲಿ ಅಭಿರುಚಿ ಬೆಳೆಸಿಕೊಂಡರು. ಪೋರ್ಚುಗೀಸ್ ನ ಮರಿಯಾ ಕನ್ಸೆರಿಗ್ ಇದೀಗ ಇಂಡೋನೇಷ್ಯಾದ ಪುನಕ್ ಜಾಯಾ ಎಂಬ ಪರ್ವತದ ಶಿಖರಾಗ್ರ ತಲುಪುವ ತಯಾರಿ ನಡೆಸಿದ್ದಾಳೆ. ಗಿನಿಸ್ ಬುಕ್ಸ್ ತರಹದ ಎಕ್ಸ್ ಪ್ಲೋರರ್ಸ್ ಗ್ರಾಂಡ್ ಸ್ಲಾಮ್ ನಲ್ಲಿ ತನ್ನ ಹೆಸರು ಪ್ರಕಟಗೊಳ್ಳಬೇಕೆಂಬುದೇ ಈಕೆಯ ಆಸೆ. 7 ಮಹಾದ್ವೀಪಗಳ ಎಲ್ಲಕ್ಕೂ ಅತಿ ಎತ್ತರದ ಶಿಖರ ತಲುಪಿದರ ಹೆಸರು ಮಾತ್ರವೇ ಇದರಲ್ಲಿ ದಾಖಲಾಗುತ್ತದೆ. ಇದುವರೆಗೂ ಸುಮಾರು 75 ಮಂದಿ ಈ ಸಾಧನೆ ಮಾಡಿದ್ದಾರೆ. ಇರಲ್ಲಿ ಹೆಂಗಸರ ಸಂಖ್ಯೆ 15. ಈಕೆ 16ನೆಯವಳಾಗಲು ಹೊರಟಿದ್ದಾಳೆ, ಆಲ್ ದಿ ಬೆಸ್ಟ್!





