ಸರಸ್ವತಿ*
ನ್ಯಾಚುರಲ್ ಸ್ಟಾರ್ ನಾನಿ ನಟಿಸುತ್ತಿರುವ ಪ್ಯಾನ್ ಇಂಡಿಯಾ ಸಿನಿಮಾ ದಿ ಪ್ಯಾರಡೈಸ್ ಬಿಡುಗಡೆ ದಿನಾಂಕ ಘೋಷಣೆಯಾಗಿದೆ. ಆಗಸ್ಟ್ 21 ರಂದು ಚಿತ್ರ ವಿಶ್ವಾದ್ಯಂತ ಚಿತ್ರಮಂದಿರಕ್ಕೆ ಎಂಟ್ರಿ ಕೊಡಲಿದೆ.
ದಿ ಪ್ಯಾರಡೈಸ್ ಸಿನಿಮಾದ ಶೂಟಿಂಗ್ ಸದ್ಯ ಭರದಿಂದ ಸಾಗುತ್ತಿದೆ. ನಾನಿಯವರ ಇಂಟ್ರೂಡಕ್ಷನ್ ಸಾಂಗ್ ಚಿತ್ರೀಕರಣ ನಡೆಯುತ್ತಿದೆ. ನೂರಾರು ಡ್ಯಾನ್ಸರ್ ಬೃಹತ್ ಸೆಟ್‌ನಲ್ಲಿ ಈ ಹಾಡಿಗೆ ಹೆಜ್ಜೆ ಹಾಕಲಿದ್ದಾರೆ. ರಾಕ್‌ಸ್ಟಾರ್ ಅನಿರುದ್ಧ್ ರವಿಚಂದರ್ ಸಂಗೀತ, ಸುಧನ್ ಮಾಸ್ಟರ್ ನೃತ್ಯ ಸಂಯೋಜನೆಯಲ್ಲಿ ಈ ಹಾಡು ತಯಾರಾಗುತ್ತಿದೆ.
ದಸರಾ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದ ಶ್ರೀಕಾಂತ್ ಒಡೆಲಾ ಸಾರಥ್ಯದಲ್ಲಿ ದಿ ಪ್ಯಾರಡೈಸ್ ತಯಾರಾಗುತ್ತಿದೆ. ಚಿತ್ರದಲ್ಲಿ ಮೋಹನ್ ಬಾಬು, ರಾಘವ್ ಜುಯಾಲ್ ಮತ್ತು ಸಂಪೂರ್ಣೇಶ್ ಬಾಬು ಸೇರಿದಂತೆ ಅದ್ಭುತ ತಾರಾಗಣವನ್ನು ಒಳಗೊಂಡಿದೆ.

ಈ ಹಿಂದೆ ದಸರಾ ಸಿನಿಮಾ ನಿರ್ಮಿಸಿದ್ದ ಸುಧಾಕರ್ ಚೆರುಕುರಿ ಮತ್ತೊಮ್ಮೆ ನಾನಿ ಹಾಗೂ ಶ್ರೀಕಾಂತ್ ಒಡೆಲಾಗೆ ಸಾಥ್ ಕೊಡುತ್ತಿದ್ದಾರೆ. ‘ಶ್ರೀಲಕ್ಷ್ಮೀ ವೆಂಕಟೇಶ್ವರ ಸಿನಿಮಾಸ್’ ಬ್ಯಾನರ್ ನಡಿ ಬಹಳ ಅದ್ಧೂರಿಯಾಗಿ ದಿ ಪ್ಯಾರಡೈಸ್ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ.
ರಾಕ್ ಸ್ಟಾರ್ ಅನಿರುದ್ಧ್ ರವಿಚಂದ್ರರ್ ಸಂಗೀತ ನಿರ್ದೇಶನ, ಜಿ.ಕೆ.ವಿಷ್ಣು ಛಾಯಾಗ್ರಹಣ, ನವೀನ್ ನೂಲಿ ಸಂಕಲನ ದಿ ಪ್ಯಾರಡೈಸ್ ಸಿನಿಮಾಕ್ಕಿದೆ.





