ವಿಜ್ಞಾನ ಬೆಳೆದಂತೆ ಮನುಷ್ಯನ ಜೀವನಶೈಲಿ ಬದಲಾಗುತ್ತಾ ಹೋಗುತ್ತದೆ. ಈ ಬದಲಾದ ಜೀವನದಲ್ಲಿ ಮನುಷ್ಯನ ಆರೋಗ್ಯದ ಕಾಳಜಿ ಹೆಚ್ಚುತ್ತಾ ಹೋಗುತ್ತದೆ. ಆ ಕಾಳಜಿಯ ಮಧ್ಯೆ ಎದುರಾಗುವ ಸಣ್ಣ ಸಣ್ಣ ಸಮಸ್ಯೆಗಳಿಗೂ ದೊಡ್ಡ ದೊಡ್ಡ ಆಸ್ಪತ್ರೆಗಳಿಗೆ ಅಲೆಯಬೇಕಾಗಬಹುದು. ಆದರೆ, ಯಾವ ರೋಗಕ್ಕೆ ಯಾವ ಮದ್ದು ಎಲ್ಲಿ ಸಿಗುತ್ತದೆ ಎಂಬುದು ಗೊತ್ತಾಗುವುದೇ ಇಲ್ಲ. ಇಂತಹ ಹೊತ್ತಿನಲ್ಲಿ ಉತ್ತಮ ಆರೋಗ್ಯಕ್ಕೆ ಬೇಕಿರುವ ಸಲಹೆ ಸೂಚನೆಗಳು ಒಂದೇ ಸೂರಿನಡಿ ಸಿಕ್ಕಿದರೆ ಅದಕ್ಕಿಂತ ಖುಷಿ ಇನ್ನೇನಿರುತ್ತದೆ? ಅಂತಹ ವಿಶೇಷ ಮತ್ತು ವಿಭಿನ್ನ ವೇದಿಕೆಯನ್ನು ಒದಗಿಸಿದ್ದು ಪ್ರತಿಧೀ ಆಯುರ್ವೇದ ವೈದ್ಯಕೀಯ ಕೇಂದ್ರ.

ಸ್ವಸ್ಥ ಕರ್ನಾಟಕ ಮೆಗಾ ಹೆಲ್ತ್ ಎಕ್ಸ್ ಪೋ 2024 ಎಂಬ ಅತಿ ದೊಡ್ಡ ಕಾರ್ಯಕ್ರಮವನ್ನು ಇತ್ತೀಚೆಗೆ ಪ್ರತಿಧೀ ಆಯುರ್ವೇದ ವೈದ್ಯಕೀಯ ಕೇಂದ್ರ ಬೆಂಗಳೂರಿನ ಅರಮನೆ ಮೈದಾನದಲ್ಲಿ ಎರಡು ದಿನಗಳ ಕಾಲ ನಡೆಸಿಕೊಟ್ಟಿತು. ಎಕ್ಸ್ ಪೋಗೆ ಆಗಮಿಸಿದ ಸಾವಿರಾರು ಮಂದಿಗೆ ಉಚಿತ ಆರೋಗ್ಯ ತಪಾಸಣೆ, ರಕ್ತದಾನ, ಅಂಗಾಂಗ ದಾನ, ವಿಚಾರ ಸಂಕಿರಣಗಳ ಮೂಲಕ ಅರಿವು, ಉದ್ಯೋಗ ಮೇಳದ ಮಾಹಿತಿ ನೀಡಲಾಯಿತು. ನೂರಕ್ಕೂ ಹೆಚ್ಚು ಉನ್ನತ ಸಲಹೆಗಾರರು, ಸೂಪರ್‌ ಸ್ಪೆಷಾಲಿಟಿ ವೈದ್ಯರು 80ಕ್ಕೂ ಹೆಚ್ಚು ವಿಶ್ವ ದರ್ಜೆಯ ಪ್ರಮುಖ ಆಸ್ಪತ್ರೆಗಳು, ಡಯಾಗ್ನೋಸ್ಟಿಕ್ಸ್, ಫಾರ್ಮಾ ಕಂಪನಿಗಳು, ವೈದ್ಯಕೀಯ ಉಪಕರಣಗಳ ಕಂಪನಿಗಳು ಮತ್ತು ಉದ್ಯಮದ ಇತರರು ಎಕ್ಸ್ ಪೋದಲ್ಲಿ ಪಾಲ್ಗೊಂಡು ಜನರಿಗೆ ಸಲಹೆ ಸೂಚನೆ ನೀಡಿದರು.

ಇಸಿಜಿ, ಇಕೋ, ನುರಿತ ಹೃದಯ ತಜ್ಞರಿಂದ ಸಮಾಲೋಚನೆ, ಮೂಳೆ ಸಾಂದ್ರತೆ ಸ್ಕ್ಯಾನಿಂಗ್‌, ಮೂಳೆ ತಜ್ಞರಿಂದ ತಪಾಸಣೆ, ಸ್ತನ ಕ್ಯಾನ್ಸರ್‌ಪತ್ತೆ ಹಚ್ಚಲು ಸ್ತನ ಸ್ಕ್ಯಾನಿಂಗ್‌, ಗುದದ್ವಾರದ ತೊಂದರೆಗಳ ಪರೀಕ್ಷೆ ಮತ್ತು ಚಿಕಿತ್ಸೆ, ಇನ್‌ ಫರ್ಟಿಲಿಟಿ ತಪಾಸಣೆ ಮತ್ತು ಚಿಕಿತ್ಸೆ, ಮಕ್ಕಳ ತಜ್ಞರು ಮತ್ತು ನರರೋಗ ತಜ್ಞರ ಜೊತೆ ಸಮಾಲೋಚನೆ, ರಕ್ತ  ಪರೀಕ್ಷೆ, ಕಣ್ಣಿನ ಪರೀಕ್ಷೆ, ಗರ್ಭಕಂಠದ ಕ್ಯಾನ್ಸರ್‌ ಪರೀಕ್ಷೆಗಳೆಲ್ಲ ಶಸ್ತ್ರಚಿಕಿತ್ಸೆಗಳ ಅಗತ್ಯತೆಯನ್ನು ತಿಳಿಸಲಾಯಿತು.

ಮತ್ತೊಂದು ವಿಶೇಷವೆಂದರೆ ಆರೋಗ್ಯ ಕ್ಷೇತ್ರದಲ್ಲಿ ಇತ್ತೀಚಿನ ಬೆಳವಣಿಗೆ ಕುರಿತು ಶೈಕ್ಷಣಿಕ ಸಮ್ಮೇಳನಗಳಿಗೆ ಇದು ವೇದಿಕೆಯಾಗಿತ್ತು. ಸಾಂಪ್ರದಾಯಿಕ ಶಸ್ತ್ರಚಿಕಿತ್ಸೆ/ ಲ್ಯಾಪರೋಸ್ಕೋಪಿಕ್‌ ಶಸ್ತ್ರಚಿಕಿತ್ಸೆಯ ವಿರುದ್ಧ ರೋಬೋಟ್‌ ನೆರವಿನ ಶಸ್ತ್ರಚಿಕಿಕ್ಸೆಯ ಅನುಕೂಲಗಳು ಮತ್ತು ಅನಾನುಕೂಲಗಳು, ಆರೋಗ್ಯ ರಕ್ಷಣೆಯಲ್ಲಿ ರೋಬೋಟಿಕ್ಸ್ ನ ಸವಾಲುಗಳ ಕುರಿತು ಚರ್ಚೆಗಳು ನಡೆದ. ಕ್ಯಾನ್ಸರ್‌ ಸ್ಕ್ಯಾನಿಂಗ್‌ ಮತ್ತು ತಡೆಗಟ್ಟುವಿಕೆ, ವಯಸ್ಕರಿಗೆ ಆರಂಭಿಕ ಕ್ಯಾನ್ಸರ್‌, ಸೆಲ್ಯುಲಾರ್‌ ಚಿಕಿತ್ಸೆಗಳು, ಶಸ್ತ್ರಚಿಕಿತ್ಸೆ ಮತ್ತು ವಿಕಿರಣ ಆಂಕಾಲಜಿ ನವೀಕರಣಗಳು ಸೇರಿದಂತೆ ಕ್ಯಾನ್ಸರ್‌ ಸಂಶೋಧನೆ ಮತ್ತು ಚಿಕಿತ್ಸೆಯಲ್ಲಿ ಹೊಸ ಆವಿಷ್ಕಾರಗಳು, ಸಪೋರ್ಟಿವ್ ‌ಕೇರ್‌, ಜಾಗತಿಕ ಆರೋಗ್ಯ ರಕ್ಷಣೆ ಮತ್ತು ಕಾರ್ಯತಂತ್ರಗಳಲ್ಲಿ ನಾವೀನ್ಯತೆಗಳು ತುಂಬಿದ್ದವು.

ಆಸ್ಪತ್ರೆಯ ಅಭಿವೃದ್ಧಿಗಾಗಿ ಕಾರ್ಯಾಚರಣೆಗಳು, ನೀತಿಗಳು ಮತ್ತು ಅಭ್ಯಾಸಗಳು, ಮಾನಸಿಕ ಆರೋಗ್ಯ ಮತ್ತು ಸಾರ್ವಜನಿಕ ಆರೋಗ್ಯ ನಡುವಿನ ವ್ಯತ್ಯಾಸ, ಆರೋಗ್ಯ ಸೇವೆಗಳಲ್ಲಿ ಮಾನಸಿಕ ಆರೋಗ್ಯವನ್ನು ಸಂಯೋಸುವ ಸವಾಲುಗಳು.

Swastha-karnataka--Sowmy-Raghu

ಗಂಡು ಮತ್ತು ಹೆಣ್ಣು ಬಂಜೆತನ : ವಿಧಗಳು, ಕಾರಣಗಳು, ಲಕ್ಷಣಗಳು, ರೋಗ ನಿರ್ಣಯ ಮತ್ತು ಚಿಕಿತ್ಸೆ, ಸರ್ಕಾರದ ಆರೋಗ್ಯ ಯೋಜನೆಗಳು, ಕ್ಯಾನ್ಸರ್‌ ಗೆದ್ದವರ ಕಥೆಗಳು ಹೀಗೆ ವಿವಿಧ ವಿಷಯಗಳ ಕುರಿತು ವಿಚಾರ ಸಂಕಿರಣಗಳು ನಡೆದ. ಎಕ್ಸ್ ಪೋ ಆಕಷಣೆಗಳಲ್ಲಿ ಒಂದಾದ ಇನ್‌ ಫೆಕ್ಷನ್‌ ಕಂಟ್ರೋಲ್ ವಿಶೇಷ ಎನಿಸಿತು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌, “ವೈದ್ಯಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವವರು ತಮ್ಮ ಕೆಲಸದ ಜೊತೆಗೆ ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು,” ಎಂದು ಕರೆ ನೀಡಿದರು. ಇದೇ ವೇಳೆ, ಸೀನಿಯರ್‌ ರೋಬೋಟಿಕ್‌ ಸರ್ಜನ್‌ ಜಗನ್ನಾಥ್ ದೀಕ್ಷಿತ್‌, ರೋಬೋಟಿಕ್‌ ಸರ್ಜರಿ ಬಗ್ಗೆ ರಾಮಯ್ಯ ಆಸ್ಪತ್ರೆಯ ಡಾ. ಜಾನಕಿ ಕ್ಯಾನ್ಸರ್‌ ಕುರಿತು ಮತ್ತು ಮಾನಸಿಕ ಆರೋಗ್ಯದ ಬಗ್ಗೆ ಡಾ. ಸಿ.ಆರ್‌. ಚಂದ್ರಶೇಖರ್‌. ಡಾ. ಜಮುನಾ, ಡಾ. ಶಶಿಧರ್‌ ಸೇರಿದಂತೆ ವಿವಿಧ ತಜ್ಞ ವೈದ್ಯರು ನಡೆಸಿಕೊಟ್ಟ ವಿಚಾರ ಸಂಕಿರಣದಲ್ಲಿ ನೂರಾರು ಮಂದಿ ಭಾಗಿಯಾದರು. ನಿಸ್ವಾರ್ಥ ಸೇವೆಯಲ್ಲಿ ಪ್ರತಿಧೀ ಡಾ. ಪ್ರಜ್ವಾ ರಾವ್ ‌ಸಮಾನಮನಸ್ಕ ಸ್ನೇಹಿತರ ಜೊತೆಗೂಡಿ ಆರಂಭಿಸಿದ ಸಂಸ್ಥೆಯೇ ಪ್ರತಿಧೀ ಫೌಂಡೇಶನ್‌. ಈ ಫೌಂಡೇಶನ್‌ ಕ್ಯಾನ್ಸರ್‌ ರೋಗಿಗಳಿಗೆ ಅಗತ್ಯ ಸೌಲಭ್ಯಗಳನ್ನು ಒದಗಿಸುತ್ತಿದೆ. ವಿಶೇಷವಾಗಿ ಗ್ರಾಮೀಣ ಪ್ರದೇಶಗಳ ಶಾಲೆಗಳು, ಸ್ತ್ರೀಶಕ್ತಿ ಸ್ವಸಹಾಯ ಸಂಘಗಳಿಗೆ ತೆರಳಿ ಕ್ಯಾನ್ಸರ್‌ ತಡೆಗುಟ್ಟುವಿಕೆ, ಕ್ಯಾನ್ಸರ್‌ ಆರಂಭಿಕ ಪತ್ತೆ ಮತ್ತು ರೋಗ ನಿರ್ಣಯದ ಬಗ್ಗೆ ಅರಿವು ಮೂಡಿಸಲಾಗುತ್ತದೆ. ಆ ಎಲ್ಲಾ ಮಾಹಿತಿ ಪಡೆದ ನಂತರ, ಅಲ್ಲಿನ ಜನರಿಗೆ ಸ್ಕ್ಯಾನಿಂಗ್‌ ಮಾಡಲಾಗುತ್ತದೆ. ಕ್ಯಾನ್ಸರ್‌ ಲಕ್ಷಣಗಳು ಕಂಡುಬಂದರೆ, ಅವರನ್ನು ಉನ್ನತ ಕೇಂದ್ರಗಳಿಗೆ ಕರೆತರಲಾಗುತ್ತದೆ. ರಕ್ತ ಪರೀಕ್ಷೆ, ಸ್ಕ್ಯಾನಿಂಗ್‌, ಡಯಾಗ್ನಸಿಸ್‌ ಮಾಡಲಾಗುತ್ತದೆ. ಕರ್ನಾಟಕದ ಹಲವು ಪ್ರಮುಖ ವೈದ್ಯಕೀಯ ಕಾಲೇಜುಗಳಲ್ಲಿ ಈ ರೋಗಿಗಳಿಗೆ ಚಿಕಿತ್ಸೆ ದೊರಕುವಂತೆ ಅನುಕೂಲ ಮಾಡಿಕೊಡಲಾಗಿದೆ. ಇದಕ್ಕಾಗಿ ಅಗತ್ಯವಿದ್ದಾಗ ಪ್ರತಿಧೀ ಫೌಂಡೇಶನ್‌ ಹಣಕಾಸಿನ ನೆರವನ್ನೂ ನೀಡುತ್ತದೆ.

ಮಕ್ಕಳ ದತ್ತು ಕ್ಯಾನ್ಸರ್‌ ಪೀಡಿತ ವ್ಯಕ್ತಿ ಮೃತಪಟ್ಟರೆ, ಆ ವ್ಯಕ್ತಿಯ ಮಕ್ಕಳ ಜವಾಬ್ದಾರಿಯನ್ನು ಫೌಂಡೇಶನ್‌ ವಹಿಸಿಕೊಳ್ಳುತ್ತದೆ. ಆ ಕುಟುಂಬದ ಮಕ್ಕಳನ್ನು ದತ್ತು ತೆಗೆದುಕೊಂಡು, ಅವರ ಶಿಕ್ಷಣ ಮತ್ತು ಆರೋಗ್ಯದ ಜವಾಬ್ದಾರಿಯನ್ನೂ ನೋಡಿಕೊಳ್ಳುತ್ತದೆ.

Swastha-karnataka--5

ಅಬಲೆಯರಿಗೆ ಆರ್ಥಿಕ ಅಭಯ

ಕುಟುಂಬಕ್ಕೆ ಆಧಾರವಾಗಿದ್ದ ಕ್ಯಾನ್ಸರ್‌ ಪೀಡಿತ ವ್ಯಕ್ತಿ ಮೃತಪಟ್ಟರೆ, ಕುಟುಂಬದ ಮಹಿಳಾ ಸದಸ್ಯೆಯರಿಗೆ ಆರ್ಥಿಕವಾಗಿ ಸ್ವತಂತ್ರರಾಗಲು ಅನುವು ಮಾಡಿಕೊಡಲಾಗುತ್ತದೆ. ಅವರಿಗೆ ಟೇಲರಿಂಗ್‌, ಕಂಪ್ಯೂಟರ್‌, ಬ್ಯೂಟಿಷಿಯನ್‌ ತರಬೇತಿ ಹೀಗೆ ವಿವಿಧ ಉಚಿತ ತರಬೇತಿಗಳನ್ನು ನೀಡಿ ಮಹಿಳೆಯರು ಆರ್ಥಿಕವಾಗಿ ಸಬಲರಾಗುವಂತೆ ಮಾಡುವಲ್ಲಿ ಸಹಾಯಹಸ್ತ ಚಾಚಲಾಗುತ್ತದೆ.

ಸಾಧಕಿ ಡಾ. ಪ್ರಜ್ವಲಾ ಪ್ರತಿಧೀ ಆಯುರ್ವೇದ ಕೇಂದ್ರದ ಸಂಸ್ಥಾಪಕಿ ಆಗಿರುವ ಡಾ. ಪ್ರಜ್ವಲಾ ರಾಜ್‌, ಪ್ರಾಚೀನ ಆಯುರ್ವೇದ ವಿಜ್ಞಾನ ಕ್ಷೇತ್ರದಲ್ಲಿ ಸುಮಾರು 20 ವರ್ಷಗಳ ಅನುಭವ ಹೊಂದಿದ್ದಾರೆ. ಅತ್ತಿಗುಪ್ಪೆ, ಚಂದ್ರಾಲೇಔಟ್‌ ಹಾಗೂ ರಾಜಾಜಿನಗರಗಳಲ್ಲಿ ಆಯುರ್ವೇದ ಕೇಂದ್ರಗಳನ್ನು ಸ್ಥಾಪಿಸಿ ಕಸ್ಟಮೈಸ್ಡ್ ಮೆಡಿಸನ್‌ ಕೊಡುತ್ತಾ ಬಂದಿದ್ದಾರೆ.

ಔಷಧೀಯ ಗಿಡಮೂಲಿಕೆಗಳ ಬಗ್ಗೆ ಸಂಶೋಧನೆ, ಅಧಿಕೃತ ಆಯುರ್ವೇದ ಚಿಕಿತ್ಸೆಯನ್ನು ಒದಗಿಸುವ ಏಕೈಕ ಉದ್ದೇಶದಿಂದ ಇವರು ಆಸ್ಪತ್ರೆಯನ್ನು ಆರಂಭಿಸಿದರು. ವೃತ್ತಿಯಲ್ಲಿ ಆಯುರ್ವೇದ ತಜ್ಞೆಯಾಗಿರುವ ಡಾ. ಪ್ರಜ್ವಲಾ ರಾಜ್‌, ಕೇವಲ ತಮ್ಮ ಆಸ್ಪತ್ರೆ ಕೆಲಸಗಳಿಗೆ ಮಾತ್ರ ಸೀಮಿತರಾಗಿರದೆ, ಹಲವಾರು ಸಮಾಜಮುಖ ಕಾರ್ಯಗಳಲ್ಲೂ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.

ಕ್ಯಾನ್ಸರ್ತಡೆಗೆ ಪ್ರತಿಜ್ಞೆ

ಸಾಮಾನ್ಯವಾಗಿ ಎಲ್ಲಿಂದಲೋ ಆಯುರ್ವೇದ ಔಷಧಿ ಅಂತ ತರಿಸಿ ಕೊಡುವ ಇವತ್ತಿನ ಪರಿಸ್ಥಿತಿಯಲ್ಲಿ ತಾವೇ ಖುದ್ದು ರೋಗಕ್ಕೆ ತಕ್ಕ ಗಿಡಮೂಲಿಕೆಗಳ ಮದ್ದನ್ನು ತಯಾರಿಸಿ ಕೊಡುತ್ತಿರುವ ಡಾ. ಪ್ರಜ್ವಲಾ ರಾಜ್‌ ಈ ನಿಟ್ಟಿನಲ್ಲಿ ವಿಶೇಷ ಸ್ಥಾನದಲ್ಲಿ ನಿಲ್ಲುತ್ತಾರೆ.

ಸ್ವಸ್ಥ ಕರ್ನಾಟಕ ಹೆಲ್ತ್ ಎಕ್ಸ್ ಪೋ ಯಶಸ್ಸಿನ ಬಳಿಕ ಗೃಹಶೋಭಾ ಜೊತೆ ಮಾತನಾಡಿದ ಡಾ. ಪ್ರಜ್ವಲಾ ರಾಜ್‌, “ಒಬ್ಬ ಮನುಷ್ಯ ಸದೃಢವಾಗಿ ಇರಬೇಕಾದರೆ ದೈಹಿಕ, ಮಾನಸಿಕ, ಆಧ್ಯಾತ್ಮಿಕವಾಗಿ ಆರೋಗ್ಯವಂತನಾಗಬೇಕು ಎಂಬುದೇ ಮೆಗಾ ಹೆಲ್ತ್ ಎಕ್ಸ್ ಪೋ 2024ರ ಉದ್ದೇಶ. 2025ರ ಏಪ್ರಿಲ್ ‌ನಲ್ಲಿ ರಾಜ್ಯ ಮಟ್ಟದ ಆಯುಷ್‌ ಎಕ್ಸ್ ಪೋ ಮಾಡುವ ಉದ್ದೇಶವಿದ್ದು, ಆಯುರ್ವೇದ, ಯುನಾನಿ, ಯೋಗ, ಸಿದ್ಧ, ಹೋಮಿಯೋಪತಿ ಸೇರಿಸಿ ಈ ಎಕ್ಸ್ ಪೋ ಮಾಡಲಾಗುವುದು,” ಎಂದು ಹೇಳಿದರು.

ಪ್ರತಿನಿಧಿ

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ