ಪ್ರ : ನನ್ನ ವಯಸ್ಸು 25. ನನಗೆ ಲೈನರ್ಹಚ್ಚು ಶೋಕಿ ಇದೆ. ನಾನು ಯಾವ ಬಣ್ಣದ ಲೈನರ್ಬಳಸಿದರೆ ಸೂಕ್ತ?

ಉ : ನಿಮ್ಮ ವಯಸ್ಸಿನವರು ಕೇವಲ ಕಪ್ಪು ಬಣ್ಣ ಒಂದನ್ನೇ ಅವಲಂಬಿಸದೆ, ಎಲ್ಲಾ ಬಣ್ಣದ ಲೈನರ್‌ ಗಳನ್ನೂ ಬಳಸಬಹುದು. ಬಳಸುವಾಗ ಮೊದಲು 1 ಲೈನ್‌ ಕಪ್ಪು, ನಂತರ ನಿಮ್ಮ ಆಯ್ಕೆಯ ಮತ್ತೊಂದು ಬಣ್ಣ ಅದಕ್ಕೆ ಅಂಟಿಕೊಳ್ಳುವಂತೆ ಲೈನ್ ಎಳೆಯಬೇಕು. ಆಗ ನೋಡಲು ಇದು ಮತ್ತಷ್ಟು ಸುಂದರವಾಗಿರುತ್ತದೆ. ಇತ್ತೀಚೆಗೆ ಮಾರುಕಟ್ಟೆಯಲ್ಲಿ ಎಲ್ಲಾ ಬಗೆಯ ಬಣ್ಣದ ಐ ಲೈನರ್‌ ಪೆನ್ಸಿಲ್ ‌ಲಭ್ಯ. ಅದನ್ನು ಬಳಸಿಕೊಂಡು ನೀವು ಸುಲಭವಾಗಿ ಐ ಲೈನರ್‌ ತೀಡಿಕೊಳ್ಳಬಹುದು. ಇವು ಸ್ಮಜ್‌ ಪ್ರೂಫ್ ವಾಟರ್‌ ಪ್ರೂಫ್‌ ಆಗಿರುತ್ತವೆ. ಜೊತೆಗೆ ನೀವು ಬಯಸಿದರೆ ಲಿಕ್ವಿಡ್‌ ಲೈನರ್‌ ಕೂಡ ಬಳಸಬಹುದು, ಒಂದು ಚೇಂಜ್‌ ಇರುತ್ತದೆ. ಹಾಗೆಯೇ ಕಲರ್‌ ಫುಲ್ ಐ ಲೈನರ್‌ ಪೆನ್‌ ಸಹ ಲಭ್ಯ. ಇದರ ಬಳಕೆ ಸಹ ಸಲೀಸಾದುದು. ಈವ್ನಿಂಗ್‌ ಪಾರ್ಟಿಗೆ ಹೊರಟಾಗ, ಗ್ಲಿಟರಿಂಗ್‌ ಐ ಲೈನರ್‌ ಬಳಸಲು ಮರೆಯದಿರಿ.

ಪ್ರ : ಕೆಲವು ವರ್ಷಗಳ ಹಿಂದಿ ನನಗೆ ಸಿಗರೇಟ್ಸೇದುವ ಕೆಟ್ಟ ಚಟವಿತ್ತು. ದುರಭ್ಯಾಸವನ್ನು ಮಧ್ಯೆ ನಿಲ್ಲಿಸಿಬಿಟ್ಟರೆ ಬಹಳ ದಪ್ಪ ಆಗಿಹೋಗುತ್ತಾರಂತೆ. ಇದು ನಿಜವೇ?

ಉ : ಧೂಮಪಾನ ನಿಲ್ಲಿಸುವುದು ನಿಮ್ಮ ಆರೋಗ್ಯ, ಸೌಂದರ್ಯ ಎರಡಕ್ಕೂ ಒಳ್ಳೆಯದು. ಇದನ್ನು ಬಿಟ್ಟು ಆರಂಭದಲ್ಲಿ ದೇಹ ತುಸು ದಪ್ಪ ಆಗುತ್ತದೆ ಎಂಬುದು ನಿಜ, ಏಕೆಂದರೆ ಸಿಗರೇಟ್‌ ಬಿಟ್ಟ ನಂತರ ಏನಾದರೊಂದನ್ನು ಬಾಯಿಗೆ ಹಾಕಿಕೊಂಡು ತಿನ್ನುತ್ತಲೇ ಇರುತ್ತೇವೆ. ಮಾನಸಿಕವಾಗಿ ಇದರಿಂದ ಹೆಚ್ಚಿನ ಆನಂದ ಸಿಗುತ್ತದೆ. ಹೀಗಾಗಿ ಏನಾದರೂ ಜಗಿಯಬೇಕೆಂದರೆ ಬಾಯಿಗೆ ಏಲಕ್ಕಿ, ಲವಂಗ ಹಾಕಿಕೊಳ್ಳಿ. ಇದು ಸಾಕಾದಾಗ ಪಾಪ್‌ ಕಾರ್ನ್‌ ಯಾ ಕಡಲೆಪುರಿ ಬಾಯಿಗೆ ಹಾಕಿಕೊಳ್ಳುತ್ತಿರಿ. ಚೂಯಿಂಗ್‌ ಗಮ್ ಸಹ ಟ್ರೈ ಮಾಡಬಹುದು. ತಾಜಾ ಹಸಿ ತರಕಾರಿ ಸಲಾಡ್‌, ಹಣ್ಣುಗಳ ಸೇವನೆ ಹೆಚ್ಚು ಲಾಭಕರ. ಹಸಿವು ಎನಿಸಿದ ತಕ್ಷಣ ಬೋಂಡಾ, ಬಜ್ಜಿ, ಪಕೋಡ ಎಂದು ಬಯಸದಿರಿ. ಹೀಗಾಗಿ ಸಿಗರೇಟ್‌ ಚಟ ಬಿಡುವುದರಲ್ಲಿ ನಿಮ್ಮ ಹಿತ ಅಡಗಿದೆ.

ಪ್ರ : ನನ್ನ ಹುಬ್ಬು ಬಹಳ ದಟ್ಟಾಗಿದೆ. ನನಗೆ ಥ್ರೆಡಿಂಗ್ಮಾಡಿಸುವಾಗ ಬಹಳ ನೋವಾಗುತ್ತದೆ. ನಾನು ಇದಕ್ಕೆ ಏನು ಮಾಡಲಿ?

ಉ : ನೀವು ಪಾರ್ಲರ್‌ ಗೆ ಹೋಗಿ ಐ ಬ್ರೋಸ್‌ ಮಾಡಿಸುವಾಗ, ಅವರು ಅದಕ್ಕೆ ಮೊದಲು ನಿಮ್ಮ ಹುಬ್ಬಿಗೆ ಐಸ್‌ ನಿಂದ ತೀಡಲು ಹೇಳಿ. ಇದರಿಂದ ಐ ಬ್ರೋಸ್‌ ತುಸು ಮರಗಟ್ಟಿದಂತಾಗುತ್ತದೆ, ಆಗ ನಿಮಗೆ ನೋವು ಗೊತ್ತಾಗುವುದಿಲ್ಲ. ಆಗ ಇದು ಥ್ರೆಡ್‌ ನ್ನು ಸಹ ಒದ್ದೆ ಮಾಡಬಲ್ಲದು, ಆಗ ಇದರಿಂದ ಥ್ರೆಡಿಂಗ್‌ ಮಾಡಿದರೆ ಕಷ್ಟ ಆಗುವುದಿಲ್ಲ. ಥ್ರೆಡಿಂಗ್‌ ಮಾಡುವಾಗ ನೀವು ನಿಮ್ಮ ಹುಬ್ಬಿನ ಭಾಗದ ಚರ್ಮವನ್ನು ಚೆನ್ನಾಗಿ ಸ್ಟ್ರೆಚ್‌ ಮಾಡಿಕೊಳ್ಳಿ. ಇದರಿಂದ ನೋವಿನ ಬಾಧೆ ಎಷ್ಟೋ ತಗ್ಗುತ್ತದೆ. ಹೀಗೆ ಮಾಡುವುದಕ್ಕಾಗಿ ಇತರರ ಸಹಾಯ ಪಡೆದುಕೊಳ್ಳಿ, ಆಗ ಅದು ಚೆನ್ನಾಗಿ ಸ್ಟ್ರೆಚ್‌ ಆಗಲು ಸಾಧ್ಯವಾಗುತ್ತದೆ. ನೋವಿನ ಬಾಧೆ ಹೆಚ್ಚು ಎನಿಸುವುದಿಲ್ಲ. ನೀವು ಬಯಸಿದರೆ ಲೇಸರ್‌ ಟ್ರೀಟ್‌ ಮೆಂಟ್‌ ಪಡೆದು, ಐ ಬ್ರೋಸ್‌ ಗೆ ಶಾಶ್ವತ ಶೇಪ್‌ ಕೊಡಿಸಬಹುದು.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ