SJ*

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ನಟನೆಯ ಮಾರ್ಕ್ ಸಿನಿಮಾ ಸೂಪರ್ ಸಕ್ಸಸ್ ಕಂಡಿದೆ. ಅದರಲ್ಲೂ ಚಿತ್ರದ ಮಸ್ತ್ ಮಲೈಕಾ ಹಾಡು ಸಖತ್ ಕ್ರೇಜ್ ಕ್ರಿಯೇಟ್ ಮಾಡಿದೆ. ಮಿಲಿಯನ್ ಗಟ್ಟಲೇ ವೀವ್ಸ್ ಕಂಡಿರುವ ಈ ಗೀತೆಗೆ ಧ್ವನಿಯಾದವರು ಕಿಚ್ಚನ ಮುದ್ದಿನ ಪುತ್ರಿ ಸಾನ್ವಿ ಸುದೀಪ್.

malaika

ಸಾನ್ವಿ ಸುದೀಪ್ ಕಂಠ ಸಿರಿಯಲ್ಲಿ ಬಂದ ಮಸ್ತ್ ಮಲೈಕಾ ಹಾಡನ್ನು ಬಾಲಿವುಡ್ ಭಾಯಿಜಾನ್ ಮೆಚ್ಚಿಕೊಂಡಿದ್ದಾರೆ. ಸಲ್ಮಾನ್ ಖಾನ್ ಹಾಡಿನ ಲಿಂಕ್​ ಅನ್ನು ಇನ್​ಸ್ಟಾಗ್ರಾಮ್ ಸ್ಟೋರಿಯಲ್ಲಿ ಪೋಸ್ಟ್ ಮಾಡಿದ್ದಾರೆ. ‘ಸುಂದರವಾದ ಹಾಡು, ಒಳ್ಳೆಯದಾಗಲಿ’ ಎಂದು ಸಲ್ಲು ಬರೆದುಕೊಂಡಿದ್ದಾರೆ. ಈ ಸ್ಟೋರಿಯಲ್ಲಿ ಕಿಚ್ಚ ಸುದೀಪ್ ಹಾಗೂ ಸಾನ್ವಿಯನ್ನು ಟ್ಯಾಗ್ ಮಾಡಿದ್ದಾರೆ.

ಸಲ್ಮಾನ್ ಖಾನ್ ಕೊಟ್ಟ ಈ ಮೆಚ್ಚುಗೆಗೆ ಸಾನ್ವಿ ಫುಲ್ ಖುಷ್ ಆಗಿದ್ದಾರೆ. ‘ಎಂತಹ ಅದ್ಭುತ ಗೌರವ. ಧನ್ಯವಾದಗಳು ಸಲ್ಮಾನ್ ಸರ್’ ಎಂದು ಸಾನ್ವಿ ತಮ್ಮ ಸ್ಟೋರಿಯಲ್ಲಿ ಹಂಚಿಕೊಂಡಿದ್ದಾರೆ. ಸಲ್ಲು ಹಾಗೂ ಕಿಚ್ಚ ಸುದೀಪ್ ಆಪ್ತ ಗೆಳೆಯರು. ಇವರಿಬ್ಬರೂ ದಬಾಂಗ್ 3 ಚಿತ್ರದಲ್ಲಿ ಒಟ್ಟಿಗೆ ನಟಿಸಿದ್ದರು. ಸಲ್ಮಾನ್ ಹಾಗೂ ಸುದೀಪ್ ಎರಡು ಕುಟುಂಬದ ನಡುವೆ ಒಳ್ಳೆ ಒಡನಾಟವಿದೆ. ಈಗ ಕಿಚ್ಚನ ಮಗಳ ಧ್ವನಿಗೆ ಸಲ್ಲುಮೀಯಾ ಮೆಚ್ಚುಗೆ ವ್ಯಕ್ತಪಡಿಸಿದ್ದು, ಸುದೀಪ್ ಪುತ್ರಿ ಸಾನ್ವಿ ಖುಷಿಯಾಗಿದ್ದಾರೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ