ರಾಘವೇಂದ್ರ ಅಡಿಗ ಎಚ್ಚೆನ್.
ಚಿತ್ರ: ಸರಳ ಸುಬ್ಬರಾವ್
ನಿರ್ದೇಶನ:  ಮಂಜು ಸ್ವರಾಜ್
ನಿರ್ಮಾಣ:  ರಿಯಾನ್ ಕ್ರಿಯೇಷನ್ಸ್ಲೋಹಿತ್ ನಂಜುಂಡಯ್ಯ
ತಾರಾಗಣ: ಅಜಯ್ರಾವ್, ಮಿಶಾ ನಾರಂಗ್, ರಂಗಾಯಣ ರಘು, ಚಿತ್ಕಳಾ ಬಿರಾದರ್, ರಘು ರಾಮನಕೊಪ್ಪ, ವಿಜಯ್ಚೆಂಡೂರು, ರಾಮಕೃಷ್ಣ, ಪ್ರೊ. ಕೃಷ್ಣೇಗೌಡ ಮೊದಲಾದವರು
ರೇಟಿಂಗ್: 3/5

ಕಾಲೇಜಿನಲ್ಲಿ ಇಂಗ್ಲಿಷ್‌ ಪ್ರೊಫೆಸರ್‌ ಆಗಿರುವ ಸುಬ್ಬರಾವ್‌ಗೆ (ಅಜಯ್‌ ರಾವ್‌) ಗೆ ಮದುವೆ ವಯಸ್ಸು ಬಂದಿದೆ. ಆಗಲೇ  ಸರಳ (ಮಿಶಾ)  ಸಿಕ್ಕುತ್ತಾಳೆ. ಅವಳ ಮೇಲೆ ಸುಬ್ಬರಾವ್ ಗೆ ಪ್ರೀತಿಯಾಗುತ್ತದೆ. ಅದರ ನಂತರ ಅವರಿಬ್ಬರ ಕುಟುಂಬ ಒಪ್ಪಿ ಮದುವೆಯೂ ನೆರವೇರುತ್ತದೆ. ಮುಂದೆ ಈ ಸರಳ ಸುಬ್ಬರಾವ್ ಸುಂದರ ಸಂಸಾರದ ನೌಕೆ ಸಾಗುತ್ತಿರುವಾಗಲೇ ಕೆಲವೊಂದು ತಿರುವು ಎದುರಾಗುತ್ತದೆ. ಆದರೆ ಈ ದಂಪತಿ ಅದೆಲ್ಲಾ ಕಠಿಣ ಪರಿಸ್ಥಿತಿಯನ್ನು ಹೇಗೆ ಹೊಂದಾಣಿಕೆಯಿಂದ ಪರಿಹರಿಸಿಕೊಳ್ಳುತ್ತಾರೆ ಎನ್ನುವುದು ಈ ವಾರ ಬಿಡುಗಡೆ ಆಗಿರುವ “ಸರಳ ಸುಬ್ಬರಾವ್” ಚಿತ್ರದ ಕಥಾ ಸಾರಾಂಶ.
ಸರಳ ಸುಬ್ಬರಾವ್ ಚಿತ್ರ ತ್ರಿವೇಣಿಯವರ ಕಾದಂಬರಿ ಆಧಾರಿಸಿ ತಯಾರಾದ ಚಿತ್ರ. ಅಲ್ಲದೆ . 70ರ ದಶಕದ ಕಾಲಘಟ್ಟವನ್ನು ಕಟ್ಟಿಕೊಡುವ ಚಿತ್ರ ಇದಾಗಿದೆ. ಇಲ್ಲಿ ಸರಳ ಹಾಗೂ ಸುಬ್ಬರಾವ್ ಈ ಎರಡೇ ಪಾತ್ರಗಳು ಹೆಚ್ಚು ಪ್ರಾಮುಖ್ಯತ್ರ್ ಇದೆ. ಇದೊಂದು ಪರಿಪೂರ್ಣ ರೊಮ್ಯಾಂಟಿಕ್‌ ಡ್ರಾಮಾ ಎನ್ನಬಹುದು. ಇಲ್ಲಿ ಯಾವ ಅನಗತ್ಯ ಆಕ್ಷನ್, ಬಿಲ್ಡಪ್ ಗಳಿಲ್ಲ. ಈ ಹಿಂದೆ ಶ್ರಾವಣಿ ಸುಬ್ರಮಣ್ಯ ಚಿತ್ರ ನಿರ್ದೇಶನ ಮಾಡಿ ಗೆದ್ದಿದ್ದ ಮಂಜು ಸ್ವರಾಜ್ ಈ ಬಾರಿಯೂ ಸಹ ಅಷ್ಟೇ ಉತ್ತಮ ಕಥೆ ಕೊಟ್ಟಿದ್ದಾರೆ. ಸಿಂಪಲ್‌ ಮೇಕಿಂಗ್‌ನಲ್ಲಿ ಅರ್ಥಪೂರ್ಣ ಸಂಭಾಷಣೆ ಜೊತೆಗೆ ಅಜನೀಶ್‌ ಲೋಕನಾಥ್‌ ಅವರ ಸಂಗೀತದ ಇಂಪು ಚಿತ್ರದಲ್ಲಿದೆ.
ಅಜಯ್‌ ರಾವ್‌ ಅವರು ಸುಬ್ಬರಾವ್‌ ಆಗಿ ಮೆಚ್ಚುಗೆ ಗಳಿಸಿದರೆ ನಾಯಕಿ ಮಿಶಾ ನಾರಂಗ್‌ ತಮ್ಮ ಮೊದಲ ಚಿತ್ರದಲ್ಲೇ ಪಾತ್ರವನ್ನು ಬಹಳ ಅಚ್ಚುಕಟ್ತಾಗಿ ನಿರ್ವಹಿಸಿದ್ದಾರೆ. ಭಾವಪ್ರಧಾನ ದೃಶ್ಯಗಳಲ್ಲಿ ಉತ್ತಮವಾಗಿ ಕಾಣಿಸಿಕೊಂಡಿರುವ ಈ ಮುದ್ದಾದ ನಟಿಗೆ ಕನ್ನಡ ಚಿತ್ರರಂಗದಲ್ಲಿ ಭವಿಷ್ಯವಿದೆ.  ಇವರ ಹೊರತಾಗಿ ರಂಗಾಯಣ ರಘು, ವೀಣಾ ಸುಂದರ್‌, ರಾಮಕೃಷ್ಣ ,  ರಘು ರಾಮನಕೊಪ್ಪ, ವಿಜಯ್‌ ಚೆಂಡೂರ್‌ ಎಲ್ಲರದೂ ಕಥೆಗೆ ಪೂರಕವಾದ ಪಾತ್ರವಾದರೆ ನಟ ಶ್ರೀ ಮಹಾದೇವ್‌ ಅತಿಥಿ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಒಟ್ತಾರೆ ಒಂದಿಡೀ ಕುಟುಂಬ ಯಾವ ಮುಜುಗರವಿಲ್ಲದೆ ಕುಳಿತು ನೋಡಬಹುದಾದ ಚಿತ್ರ “ಸರಳ ಸುಬ್ಬರಾವ್” ಎನ್ನಬಹುದು.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ