ಸ್ಯಾಂಡಲ್ ವುಡ್ ಡಿಂಪಲ್ ಕ್ವೀನ್, ಕನ್ನಡಿಗರ ಫೇವರಿಟ್ ಬುಲ್ ಬುಲ್, ಬ್ಯಾಕ್ ಟು ಬ್ಯಾಕ್ ಹಿಟ್ ಸಿನಿಮಾ ಕೊಟ್ಟ ಟಾಪ್ ಹೀರೋಯಿನ್ ರಚಿತಾ ರಾಮ್, ಕನ್ನಡ ಚಿತ್ರರಂಗದ ಸ್ಟಾರ್ ನಟರೆಲ್ಲರ ಜೊತೆ ನಟಿಸಿ ಸೈ ಎನಿಸಿಕೊಂಡ ರಚ್ಚು, ಸ್ಟೈಲ್ ಕೊಟ್ರೆ ಸಾಕು ಫ್ಯಾನ್ಸ್ ಗೆ ಅದೇ ಸ್ವರ್ಗ. ಹೈಟ್ ಸ್ವಲ್ಪ ಕಡಿಮೆ ಆದ್ರೂ ಕೂಡ ಈ ಅಟ್ರಾಕ್ಟಿವ್ ಕಣ್ಣೋಟಕ್ಕೆ ಬಿದ್ದು ಹೋಗದವರೇ ಇಲ್ಲ. ಅದೆಂಥದ್ದೇ ಪಾತ್ರ ಕೊಟ್ಟರೂ ಪರಕಾಯ ಪ್ರವೇಶ ಮಾಡೋ ಈ ಗುಳಿ ಕೆನ್ನೆಯ ಚೆಲುವೆ ಈಗಂತೂ ಸಿಕ್ಕಾಪಟ್ಟೆ ಬ್ಯುಸಿ. ಹೀಗಾಗೇ ಅದೆಷ್ಟೋ ಜನ ಲವ್ ಯು ರಚ್ಚು ಅಂತಾ ಹೇಳಿದ್ರೂ, `ನೋ ಲವ್…. ನೋ ಮ್ಯಾರೇಜ್’ ಅಂತ ಸಿಂಗಲ್ ಆಗೇ ಹ್ಯಾಪಿ ಆಗಿದ್ದಾರೆ. ಸದ್ಯಕ್ಕೀಗ `ಶಬರಿ ಸರ್ಚಿಂಗ್ ಫಾರ್ ರಾವಣ, ಲವ್ ಮೀ ಆರ್ ಹೇಟ್ ಮೀ, ಅಯೋಗ್ಯ-2, ಸಂಜು ವೆಡ್ಸ್ ಗೀತಾ-2, ಕಲ್ಟ್, ರಾಚಯ್ಯ ಹಾಗೂ ಕೂಲಿ’ ಸಿನಿಮಾಗಳಲ್ಲಿ ರಚಿತಾ ರಾಮ್ ನಟಿಸುತ್ತಿದ್ದಾರೆ.
ತುಪ್ಪದ ಬೆಡಗಿ ರಾಗಿಣಿ ಈಗ ವ್ಯಾಂಪಾ?
ಕನ್ನಡ ಚಿತ್ರರಂಗದ ಹಾಟ್ ಬ್ಯೂಟಿ ರಾಗಿಣಿ ದ್ವಿವೇದಿ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಹೈಪ್ ಕ್ರಿಯೇಟ್ ಮಾಡುತ್ತಿದ್ದಾರೆ. ತಮ್ಮ ಬೋಲ್ಡ್ ಅವತಾರದಿಂದಲೇ ಸ್ಯಾಂಡಲ್ ವುಡ್ ನಲ್ಲಿ ರಾಗಿಣಿಗೆ ಸಖತ್ ಡಿಮ್ಯಾಂಡ್ ಶುರುವಾಗಿದೆ. ಇತ್ತೀಚೆಗಂತೂ ರೆಡ್ ಗೌನ್, ಹಾಫ್ ಟಾಪ್ ಬಾಟಮ್ ಜೀನ್ಸ್ ಮತ್ತು ಬ್ಲ್ಯಾಕ್ ಡ್ರೆಸ್ ನಲ್ಲಿ ತಮ್ಮ ಡಿಫರೆಂಟ್ಫೋಟೋ ಶೂಟ್ ನಿಂದೀ ಪಡ್ಡೆ ಹೈಕಳ ಮೈ ಬಿಸಿ ಮಾಡುತ್ತಿದ್ದಾರೆ. ಸ್ಯಾಂಡಲ್ ವುಡ್ ನ `ತುಪ್ಪದ ಬೆಡಗಿ’ ಅಂತಾನೇ ಕರೆಸಿಕೊಳ್ಳೋ ನಟಿ ರಾಗಿಣಿ ಸದ್ಯ ಕನ್ನಡ ಹಾಗೂ ಪರಭಾಷಾ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. 2009ರಲ್ಲಿ `ವೀರ ಮದಕರಿ’ ಮೂಲಕ ಕನ್ನಡಕ್ಕೆ ಎಂಟ್ರಿ ಕೊಟ್ಟು ಸುಮಾರು 30ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ಸದ್ಯದಲ್ಲೇ ರಿಲೀಸ್ ಆಗಲಿರುವ `ಸಂಜು ವೆಡ್ಸ್ ಗೀತಾ-2′ ನಲ್ಲಿ ನಟ ಶ್ರೀನಗರ ಕಿಟ್ಟಿಗೆ ವ್ಯಾಂಪ್ ಆಗಿ ಕಾಣಿಸಿಕೊಂಡಿದ್ದಾರೆ.

ಕನ್ನಡದಿಂದ ತೆಲುಗಿಗೆ ಹಾರಿದ ಶ್ರೀಲೀಲಾ
ಕನ್ನಡದ `ಕಿಸ್’ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಪಾದಾರ್ಪಣೆ ಮಾಡಿದ ಯುವನಟಿ ಶ್ರೀಲೀಲಾ ಸದ್ಯ ಬಹುಬೇಡಿಕೆಯ ನಟಿ. `ಕಿಸ್’ ಜೊತೆ ನಟ ಶ್ರೀಮುರಳಿಯ `ಭರಾಟೆ’ ಮತ್ತು `ಬೈಟು ಲವ್’ ಚಿತ್ರಗಳಲ್ಲಿ ನಟಿಸಿದ ಬಳಿಕ ಶ್ರೀಲೀಲಾ ಅಬ್ಬರಿಸಿದ್ದು, ಮಿಂಚಿದ್ದು ತೆಲುಗು ಚಿತ್ರರಂಗದಲ್ಲಿ. ಮಾಸ್ ರಾಜ ರವಿತೇಜ ಜೊತೆ `ಧಮಾಕಾ’ ಮಾಡಿದ ಈ ಸುಂದರಿಯ ನಟನೆಗೆ ಹಾಗೂ ನೃತ್ಯಕ್ಕೆ ಅಭಿಮಾನಿಗಳು ಫಿದಾ ಆಗೋಗಿದ್ದಾರೆ. ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬು ನಟನೆಯ `ಗುಂಟೂರು ಕಾರಂ’ ಚಿತ್ರದ ಹಾಡಿನಲ್ಲಿ ಮೈಚಳಿ ಬಿಟ್ಟು ಕುಣಿದಿದ್ದೇ ತಡ, ಬ್ಯಾಕ್ ಟು ಬ್ಯಾಕ್ ಅಂಥದ್ದೇ ಆಫರ್ ಗಳು ಬಂದವು. ಇದೀಗ ನಟ ಅಲ್ಲು ಅರ್ಜುನ್ ನಟನೆಯ `ಪುಷ್ಪ-2′ ಚಿತ್ರದ ಕಿಸ್ಸಿಕ್ ವಿಶೇಷ ಹಾಡಿನ ಅಬ್ಬರದಿಂದ ಟಾಲಿವುಡ್ ನಲ್ಲಿ ಶ್ರೀಲೀಲಾಳ ಹಾವಾ ಜೋರಾಗಿದೆ. ಬೆಂಗಳೂರಿನಲ್ಲೇ ಎಂಬಿಬಿಎಸ್ ಮಾಡಲು ಸಣ್ಣ ಗ್ಯಾಪ್ ತೆಗೆದುಕೊಂಡ ಬಳಿಕ ಸಖತ್ ಸ್ಪೀಡ್ ನಲ್ಲಿದ್ದಾರೆ. ಇದೀಗ ನಟ ನಾಗಚೈತನ್ಯರ ಮಾಸ್ ಸಿನಿಮಾಗೆ ನಾಯಕಿ ಆಗಿದ್ದು, ಸಾಲು ಸಾಲು ಸಿನಿಮಾಗಳಿಗೆ ಸಹಿ ಹಾಕುತ್ತಿದ್ದಾರೆ. ಮಾದಕತೆಯ ಕಣ್ಣುಗಳು, ಮುಗ್ಧತೆಯ ನಗುವಿನಿಂದಲೇ ಅಟ್ರ್ಯಾಕ್ಟ್ ಮಾಡ್ತಿರೋ ಶ್ರೀಲೀಲಾ ಸೌತ್ ಇಂಡಿಯಾದ ನಂಬರ್ ಒನ್ ನಟಿ ಆಗಿದ್ದಾರೆ.

ಗುಲಾಬ್ ಜಾಮೂನ್ ಸಾನ್ಯಾ ಅಯ್ಯರ್
`ಪುಟ್ಟ ಗೌರಿ ಮದುವೆ’ ಸೀರಿಯಲ್ ನಲ್ಲಿ ಬಾಲನಟಿಯಾಗಿ ಬಣ್ಣ ಹಚ್ಚಿದ ನಟಿ ಸಾನ್ಯಾ ಅಯ್ಯರ್ ಕನ್ನಡ ಚಿತ್ರರಂಗದ ದಂತದ ಗೊಂಬೆ, ಕಿರುತೆರೆ ನಟಿ ದೀಪಾ ಅಯ್ಯರ್ ಪುತ್ರಿ. ಸಾನ್ಯಾ ಕೂಡ ಕಿರುತೆರೆ ಹಾಗೂ ಹಿರಿತೆರೆಯಲ್ಲೂ ನಟಿಸುತ್ತಿದ್ದಾರೆ. `ಗುಲಾಬ್ಜಾಮೂನ್’ ಚಿತ್ರದ ಬಳಿಕ ಇಂದ್ರಜಿತ್ ಲಂಕೇಶ್ ರ `ಗೌರಿ’ ಸಿನಿಮಾದಲ್ಲಿ ನಾಯಕಿ ಆಗಿದ್ದರು. ಇಂಟರೆಸ್ಟಿಂಗ್ ವಿಷಯ ಅಂದ್ರೆ `ಗಜ’ ಸಿನಿಮಾದಲ್ಲಿ ಬಾಲನಟಿಯಾಗಿ ನಟಿಸಿದ್ದ ಸಾನ್ಯಾ ಅಯ್ಯರ್ ಅಂದು ನಟ ದರ್ಶನ್ ಕೆನ್ನೆಗೆ ಹೊಡೆದಿದ್ದರಂತೆ. ಇದೀಗ ಮೋಹಕ ಬೆಡಗಿಯಾಗಿ ಮಿಂಚುತ್ತಿದ್ದು, ಬಿಗ್ ಬಾಸ್ ಕನ್ನಡ ಸೀಸನ್ ರಲ್ಲಿ ಸ್ಪರ್ಧಿಯಾಗಿದ್ದ ಸಾನ್ಯಾ ತಮ್ಮ ಮೋಹಕ ವದನದಿಂದಲೇ ಯುವಜನರ ಅಟ್ರ್ಯಾಕ್ಟ್ ಆಗಿದ್ದಾರೆ. ಆ್ಯಪಲ್ ಥರ ಕೆನ್ನೆ, ರಸಗುಲ್ಲಾ ರೀತಿಯ ತುಟಿ, ಮಾದಕ ಮೈಮಾಟ ಹೊಂದಿರುವ ಸಾನ್ಯಾ ಅಯ್ಯರ್ ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡಿಂಗ್ ಸೆಲೆಬ್ರಿಟಿ. ಪ್ರತಿ ಫೋಟೋ ಶೂಟ್ ಮಾಡಿಸಿದಾಗ ಸಾನ್ಯಾ ಫ್ಯಾನ್ಸ್ ಹಾಲಿವುಡ್ ಹೀರೋಯಿನ್ ಗಳಿಗೆ ಹೋಲಿಕೆ ಮಾಡುತ್ತಿರುತ್ತಾರೆ. ಸದ್ಯ ಸಾನ್ಯಾ ಅಯ್ಯರ್ ಹೊಸ ಸಿನಿಮಾ ಘೋಷಣೆ ಮಾಡಲಿ ಅಂತ ಫ್ಯಾನ್ಸ್ ಕಾಯುತ್ತಿದ್ದಾರೆ. ಜೊತೆಗೆ ಮತ್ತೆ ಕಿರುತೆರೆ ಲೋಕದಲ್ಲಿ ಮಿಂಚಬೇಕು ಅನ್ನೋದು ಅವರ ಅಭಿಮಾನಿಗಳ ಕೋರಿಕೆಗಳಲ್ಲಿ ಒಂದು.

ತಲೆಕೆಡಿಸಿಕೊಳ್ಳದ ರುಕ್ಮಿಣಿ ವಸಂತ್
ಕನ್ನಡ ಫಿಲ್ಮ್ ಇಂಡಸ್ಟ್ರಿಯಲ್ಲಿ ಬರೀ ರುಕ್ಕು ರುಕ್ಕು ಅನ್ನೋ ಸೌಂಡೇ ಜಾಸ್ತಿ. `ಸಪ್ತಸಾಗರದಾಚೆ ಎಲ್ಲೋ….’ದಲ್ಲೂ ಅವನಿಗೆ ಸಿಗಲಿಲ್ಲ…. `ಬಘೀರ’ ದಲ್ಲೂ ಸಿಗಲಿಲ್ಲ…. `ರಣಗಲ್’ ನಲ್ಲೂ ಸಿಗಲಿಲ್ಲ…. `ಅಪ್ಪುಡೋ ಇಪ್ಪುಡೋ ಎಪ್ಪುಡೋ’ದಲ್ಲಾದರೂ ಹೀರೋಗೆ ಸಿಕ್ಕಿದ್ರಾ ಅಂತ ಸೋಶಿಯಲ್ ಮೀಡಿಯಾದಲ್ಲಿ ನಟಿ ರುಕ್ಮಿಣಿ ವಸಂತ್ ಗೆ ಫ್ಯಾನ್ಸ್ ಕಾಲೆಳೆಯುತ್ತಿದ್ದಾರೆ. 2019 ತೆರೆಕಂಡ `ಬೀರಬಲ್ ಟ್ರಯಾಲಜಿ’ ಸಿನಿಮಾ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ರುಕ್ಮಿಣಿ, ರಕ್ಷಿತ್ ಶೆಟ್ಟಿ ಜೊತೆ `ಸಪ್ತಸಾಗರದಾಚೆ ಎಲ್ಲೋ….ಸೈಡ್ ಎ ಮತ್ತು ಸೈಡ್ ಬಿ’ಯಲ್ಲಿ ಎಲ್ಲರ ಹೃದಯ ಗೆದ್ದರು. ಮುದ್ದು ಮುಖ ಹಾಗೂ ಅದ್ಭುತ ಅಭಿನಯದಿಂದ ಅಭಿಮಾನಿಗಳ ಹೃದಯ ಕದ್ದ ಈ ಕುರಿ ನಟ ಗಣೇಶ್ ಜೊತೆ `ಬಾನ ದಾರಿಯಲ್ಲಿ’ ಸಿನಿಮಾ ಮಾಡಿದ್ರು. ಬಳಿಕ ಶಿವಣ್ಣ ಜೊತೆ `ಭೈರತಿ ರಣಗಲ್’ ಸಿನಿಮಾದಲ್ಲೂ ಮಿಂಚಿದ್ರು. ಜೊತೆಗೆ ಶ್ರೀಮುರಳಿ ನಟನೆಯ, ಹೊಂಬಾಳೆ ಫಿಲಂಸ್ ನಿರ್ಮಾಣದ `ಬಘೀರ’ ಸಿನಿಮಾದಲ್ಲಿ ಡಾಕ್ಟರ್ ಪಾತ್ರದಲ್ಲಿ ನಟಿಸಿದ್ದಾರೆ. ತುಂಬಾ ಡೀಸೆಂಟ್ ಆಗಿರೋ ಬಟ್ಟೆ ತೊಡುವ ರುಕ್ಮಿಣಿ ವಸಂತ್ ಗೆ, ನೀವು ಮಾಡರ್ನ್ ಆಗ್ರಿ ಅಂತಾ ಕೆಲವರು ಹೇಳಿದ್ರೆ, ಇನ್ನು ಕೆಲವರು ನೀವು ನಟಿ ಚೈತ್ರಾ ಆಚಾರ್ ಥರ ಆಗ್ಲೇಬೇಡಿ…. ಹೀಗೆ ಮೈತುಂಬಾ ಬಟ್ಟೆ ಹಾಕಿ ಅಂತ ಕೊಂಡಾಡ್ತಿದ್ದಾರೆ. ಫ್ಯಾನ್ಸ್ ಹೀಗೆಲ್ಲಾ ಹೇಳ್ತಿದ್ರೂ ತಲೆಕೆಡಿಸಿಕೊಳ್ಳದ ರುಕ್ಕು, ಡಿಸೆಂಬರ್ 9ಕ್ಕೆ ಬರ್ತ್ ಡೇ ಮಾಡ್ಕೊಂಡು ಬಿಂದಾಸ್ ಆಗಿ ಫೋಟೋಸ್ ಗೆ ಬೋಲ್ಡ್ ಪೋಸ್ ಕೊಟ್ಟು ಅಪ್ ಲೋಡ್ ಮಾಡ್ತಾನೇ ಇದ್ದಾರೆ.

ಸಿನಿರಸಿಕರ ಫೇವರಿಟ್ ಆಶಿಕಾ ರಂಗನಾಥ್
ಈಕೆಯನ್ನು ನೋಡಿ ಪಡ್ಡೆ ಹುಡುಗರೆಲ್ಲಾ `ಚುಟು ಚುಟು ಅಂತೈತೆ….’ ಅಂತ ಉಯಿಲಿಟ್ಟುಕೊಳ್ತಾರೆ. ಅಷ್ಟರಮಟ್ಟಿಗೆ ಸೌಂದರ್ಯದ ಖನಿ ಈಕೆ. ನೋಡೋಕೆ ಒಳ್ಳೇ ಹಾಲ್ಖೋವಾ ಥರ ಕಾಣೋ ನಟಿ ಆಶಿಕಾ ರಂಗನಾಥ ಇವತ್ತಿಗೂ ಸಖತ್ ಡಿಮ್ಯಾಂಡ್ ಇರೋ ನಟಿ. ಇತ್ತೀಚೆಗೆ ತನ್ನ ಬಾಲ್ಯದ ಫೇವರಿಟ್ ಹೀರೋ ತೆಲುಗಿನ ಸಿದ್ಧಾರ್ಥ ಜೊತೆ `ಮಿಸ್ ಯೂ’ಗೆ ಜೋಡಿ ಆಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ಈಕೆಯದ್ದೇ ಫುಲ್ ಟಾಕ್. 1996ರ ಬರ್ತ್ ಇಯರ್ ಇರೋ ಆಶಿಕಾ ಕನ್ನಡದ ಟಾಪ್ ಹೀರೋಗಳ ಜೊತೆ ತೆರೆ ಹಂಚಿಕೊಂಡಿದ್ದಾರೆ. ಅದರಲ್ಲೂ ನಟ ಶರಣ್ ಜೊತೆಗಿನ `ರಾಂಬೋ-2’ನಲ್ಲಿ ಚುಟು ಚುಟು ಅಂತ ಮೈ ಬಳುಕಿಸಿದ್ದು ಇವತ್ತಿಗೂ ಸಿನಿರಸಿಕರ ಫೇವರಿಟ್ ಡ್ಯಾನ್ಸ್. ಮೊನ್ನೆ ಮೊನ್ನೆಯಷ್ಟೇ ಚೆನ್ನೈ ಬೀಚ್ ನಲ್ಲಿ ಸರ್ಫ್ ಮಾಡಿ ಎಂಜಾಯ್ ಮಾಡಿರೋ ಆಶಿಕಾ, ಆಗಾಗ ಗರ್ಲ್ಸ್ ಗ್ಯಾಂಗ್ ಜೊತೆ ಟೆಂಪಲ್, ಹೋಟೆಲ್ ಅಂತ ರೌಂಡ್ ಹಾಕ್ತಾ ಇರುತ್ತಾರೆ. ತಮ್ಮ ಇನ್ ಸ್ಟಾದಲ್ಲಿ ಅಪ್ ಲೋಡ್ ಮಾಡುವ ಈ ವೈಯಾರಿಯ ಫೋಟೋಸ್ ನೋಡಿದ ಫ್ಯಾನ್ಸ್ ಸ್ಟನ್ ಆಗೋಗಿದ್ದಾರೆ. ಸದ್ಯಕ್ಕೀಗ ತೆಲುಗಿನ ಕಡೆ ವಾಲಿರುವ ಆಶಿಕಾ, ಮೆಗಾಸ್ಟಾರ್ ಚಿರಂಜೀವಿ ಅಭಿನಯದ ಫ್ಯಾಂಟಸಿ ಸಿನಿಮಾ `ವಿಶ್ವಂಭರ’ದಲ್ಲಿ ಕಾಣಿಸಿಕೊಳ್ತಿದ್ದಾರೆ.

ಚಂದನವನದ ಚೆಲುವೆ ಅದಿತಿ ಪ್ರಭುದೇವ್
ಬೆಣ್ಣೆ ನಗರಿಯ ಬೆಣ್ಣೆಯಂತಹ ಹುಡುಗಿ. ಮದುವೆ ಆಗಿ ಮಗು ಆಗಿದ್ದರೂ ಮಾದಕತೆ ಮಾತ್ರ ಮಾಗಿಲ್ಲ. ಈಕೆ ಮಗುವಾಗಿದ್ದಾಗ ಆ ಮನ್ನಥನೇ ಬಂದು ತಿದ್ದಿ ತೀಡಿ ಬ್ಯೂಟಿ ಅನ್ನೋ ವರವಿತ್ತಂತಿದೆ. ದಾಣಗೆರೆಯಲ್ಲೇ ಎಂಬಿಎ ಮುಗಿಸಿಕೊಂಡು `ಧೈರ್ಯಂ’ ಫಿಲ್ಮಂ ಮೂಲಕ ಫೀಲ್ಡ್ ಗೆ ಎಂಟ್ರಿ ಕೊಟ್ಟು ಚಂದನವನದ ಚೆಲುವೆ ಎನಿಸಿಕೊಂಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಫುಲ್ ಆ್ಯಕ್ಟಿವ್ ಆಗಿ ಲೈಫ್ ಹೇಗಿರಬೇಕು ಅಂತೆಲ್ಲಾ ಟಿಪ್ಸ್ ಕೊಡುತ್ತಿರುತ್ತಾರೆ. ಜಗ್ಗೇಶ್ ಜೊತೆಗಿನ `ತೋತಾಪುರಿ,’ ಡಾಲಿ ಧನಂಜಯರ `ಜಮಾಲಿ ಗುಡ್ಡ’ದ ಬಳಿಕ ಸಣ್ಣ ಬ್ರೇಕ್ ತಗೊಂಡಿರೋ ಅದಿತಿ ಸದ್ಯಕ್ಕೀಗ ಮನೆಗೆ ಬಂದಿರುವ ಪುಟ್ಟ ಮಹಾಲಕ್ಷ್ಮಿಯನ್ನು ನೋಡಿಕೊಳ್ತಿದ್ದಾರೆ.

ಬಲು ನಾಚಿಕೆ ಆಗತ್ತೈತೆ ಎನ್ನುವ ನಿಶ್ವಿಕಾ ನಾಯ್ಡು
ಹಿತಲಕಾ ಕರಿಬೇಡ ಮಾವ ಅಂತ ಸೊಂಟ ಬಳುಕಿಸಿದ ನಟಿ ನಿಶ್ವಿಕಾ ನಾಯ್ಡು ಸೋಶಿಯಲ್ ಮೀಡಿಯಾದಲ್ಲಿ ಡಿಫರೆಂಟ್ ಡಿಂಫರೆಂಟ್ ಫೋಟೋಸ್ ಮೂಲಕವೇ ಹೊಸ ಹಲ್ಚಲ್ ಕ್ರಿಯೇಟ್ ಮಾಡ್ತಿದ್ದಾರೆ. `ಕರಟಕ ದಮನಕ’ದಲ್ಲಿ ಡ್ಯಾನ್ಸ್ ಕಿಂಗ್ ಪ್ರಭುದೇವ್ ಜೊತೆ ಸಖತ್ತಾಗೇ ಸ್ಟೆಪ್ಸ್ ಹಾಕಿದ ನಿಶ್ವಿಕಾ, ಏನಪ್ಪಾ ಈಕೆ ಬಾಡೀಲಿ ಬರೀ ಸ್ಪ್ರಿಂಗ್ ಇದ್ಯಾ ಅಂತ ಎಲ್ಲರೂ ಪ್ರಶ್ನೆ ಕೇಳೋ ಹಾಗಾಗಿದೆ. ಬೆಂಗಳೂರಿನ ಮೌಂಟ್ ಕಾರ್ಮೆಲ್ ಸ್ಕೂಲ್ ನಲ್ಲಿ ಓದಿ ಫ್ಯಾಷನ್ ಅಂತ ಓಡಾಡಿ 2018ರಲ್ಲಿ `ಅಮ್ಮ ಐ ಲವ್ ಯು’ ಸಿನಿಮಾ ಮೂಲಕ ಎಂಟ್ರಿ ಕೊಟ್ಟ ನಿಶ್ವಿಕಾ ಅಷ್ಟೇನೂ ಸೌಂಡ್ ಮಾಡಿರಲಿಲ್ಲ. ಆದ್ರೆ `ಗುರು ಶಿಷ್ಯರು’ ಸಿನಿಮಾದಲ್ಲಿ ಸಿನಿರಸಿಕರ ಗಮನ ಸೆಳೆದು, `ಕರಟಕ ದಮನಕ’ದಲ್ಲಿ ಬಲು ನಾಚಿಕೆ ಆಗತ್ತೈತೆ ಅಂತಾನೇ ಮೈಚಳಿ ಬಿಟ್ಟು ಕುಣಿದಿದ್ದರು. ತಮ್ಮ ಇನ್ ಸ್ಟಾದಲ್ಲಂತೂ ಇವರ ಫೋಟೋ ಶೂಟ್ ನೋಡಿದ ಫ್ಯಾನ್ಸ್ ಮತ್ತೆ ಯಾವಾಗಾ ಹಿತ್ಲಕ್ಕೆ ಹೋಗ್ತೀಯಮ್ಮಾ ಅಂತಾ ಕೇಳ್ತಾನೇ ಕಾಲೆಳೆತಿದ್ದಾರೆ.





