– ರಾಘವೇಂದ್ರ ಅಡಿಗ ಎಚ್ಚೆನ್.
ಚಾಲೆಂಜಿಂಗ್ ಸ್ಟಾರ್ ದರ್ಶನ್ ಮನೆ ಮುಂದೆಯೆ ನವಜೋಡಿ ವಿವಾಹವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಸ್ಯಾಂಡಲ್‌ವುಡ್‌ನ ಸುಲ್ತಾನ ದರ್ಶನ್ ರೇಣುಕಾಸ್ವಾಮಿ ಕೊಲೆ ಆರೋಪದಲ್ಲಿ ಪರಪ್ಪನ ಅಗ್ರಹಾರ ಸೇರಿದ್ದು ಅದೆಷ್ಟೋ ಮಂದಿ ತಮ್ಮ ನೆಚ್ಚಿನ ನಟ ಆದಷ್ಟು ಬೇಗ ಹೊರಬರಲಿ ಅಂತಾ ಹರಸುತ್ತಿದ್ದಾರೆ..ಈ ನಡುವೆ ದರ್ಶನ್ ಅಭಿಮಾನಿಯೊಬ್ಬ ಅವರನ್ನು ನೋಡಲು ಸಾಧ್ಯವಿಲ್ಲ ಹಾಗಾಗಿ ಅವರ ನಿವಾಸದ ಬಳಿಕ ಫೋಟೋಗೆ ವಿಶೇಷ ಪೂಜೆ ಸಲ್ಲಿಸಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ಕಂಟೆಂಟ್‌ಕ್ರಿಯೇಟರ್ ಆಗಿರುವ ಕಾಲ್ ಮಿ ದಚ್ಚು ಅನ್ನೋ ಆತ ದರ್ಶನ್ ಅವರ ಅಪ್ಪಟ್ಟ ಅಭಿಮಾನಿ ಆಗಿದ್ದು,ದರ್ಶನ್ ಅವರ ತೂಗುದೀಪ ನಿಲಯದ ಬಳಿ ಪೂಜೆಸಲ್ಲಿಸಿದಲ್ಲದೆ ದರ್ಶನ್ ಅವರ ಭಾವಚಿತ್ರಕ್ಕೂ ವಿಶೇಷ ಪೂಜೆ ಸಲ್ಲಿಸಿ ಹಾರ ಬದಲಿಸಿಕೊಂಡು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ದರ್ಶನ್ ಮನೆ ಅವರು ಮನೆಯ ಬಳಿ ಇಲ್ಲದಿದ್ದರೂ ಕೂಡ ಭಾವಚಿತ್ರಕ್ಕೂ ವಿಶೇಷ ಪೂಜೆ ಸಲ್ಲಿಸಿ ಅವರಿಂದಲ್ಲೇ ಆರ್ಶಿವಾದ ಪಡೆದ ಖುಷಿಯಲ್ಲೇ ನವಜೋಡಿ ವಿವಾಹ ಆಗಿದ್ದು,ಈ ವಿಶೇಷ ಅಭಿಮಾನಿಗಳ ವಿಡೀಯೋ ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗ್ತಿದೆ..





