ಕನ್ನಡ, ತಮಿಳು, ತೆಲುಗು ಸೇರಿ ಬಹು ಭಾಷಾ ಚಿತ್ರರಂಗದಲ್ಲಿ ಮಿಂಚುತ್ತಿರುವ ನಟಿ ಕಾಶಿಮಾ ರಫಿ ಈಗ ಕನ್ನಡದ ಮತ್ತೊಂದು ಚಿತ್ರದಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳಲು ಸಿದ್ಧವಾಗಿದ್ದಾರೆ. ಬೆಂಗಳೂರಿನಲ್ಲೇ ಹುಟ್ಟಿ ಬೆಳೆದಿರುವ ಅಪ್ಪಟ ಕನ್ನಡ ಪ್ರತಿಭೆ ಕಾಶಿಮಾ `ನೀ ನಂಗೆ ಅಲ್ವಾ’ ಚಿತ್ರದ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.

ರೋರಿಂಗ್‌ಸ್ಟಾರ್‌ಶ್ರೀಮುರಳಿ ಹಾಗೂ ವಿದ್ಯಾ ಶ್ರೀಮುರಳಿ ಈ ಚಿತ್ರವನ್ನು ಪ್ರೆಸೆಂಟ್‌ಮಾಡುತ್ತಿದ್ದರೆ, `ಮ್ಯಾಟ್ನಿ’ ಚಿತ್ರದ ಖ್ಯಾತಿ ನಿರ್ಮಾಪಕರಾದ ಎಸ್. ಪಾರ್ವತಿ ಗೌಡ, ಪವನ್‌ಪರಮಶಿವಂ ಹಾಗೂ ಮನೋಹರ್‌ಕಾಂಪಲ್ಲಿ ಈ ಚಿತ್ರದ ನಿರ್ಮಾಣ ಮಾಡುತ್ತಿದ್ದಾರೆ. ಮನೋಜ್‌ಪಿ. ನಡಲುಮನೆ ನಿರ್ದೇಶನ ಈ ಸಿನಿಮವಾಗಿದೆ.

ಕಾಶಿಮಾ ರಫಿ ಇದಕ್ಕೆ ಮುನ್ನ `ಸೌತ್‌ಇಂಡಿಯನ್‌ಹೀರೋ’ ಸಿನಿಮಾದ ಮೂಲಕ ಕನ್ನಡ ಚಿತ್ರೋದ್ಯಮದಲ್ಲಿ ಮಿಂಚಿದ್ದರು. ಅಲ್ಲದೆ, `ಟೆಂಪರ್, ಕಸ್ತೂರಿ ಮಹಲ್’ನಲ್ಲಿ ಸಹ ಕಾಣಿಸಿಕೊಂಡಿದ್ದರು. ಕಾಶಿಮಾರ ತಂದೆ ರಫಿ ನಿರ್ಮಾಣ ಮತ್ತು ಗುತ್ತಿಗೆ ಕ್ಷೇತ್ರದ ಉದ್ಯಮಿಯಾಗಿದ್ದು ಕಾಶಿಮಾ ತಾವು ಮಾಡೆಲಿಂಗ್‌ಕ್ಷೇತ್ರದಿಂದ ಸಿನಿಮಾ ರಂಗಕ್ಕೆ ಬಂದರು, ಅವರು ಈ ಮುನ್ನ ಮಿಸ್ ಬೆಂಗಳೂರು ಸೌಂದರ್ಯ ಸ್ಪರ್ಧೆಯಲ್ಲಿ ರನ್ನರ್‌ಅಪ್‌ಆಗಿದ್ದರು.

ಗಾಡ್ವಿನ್‌ಪಬ್ಲಿಕ್‌ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ, ಬೆಂಗಳೂರಿನ ಸಿಂಧಿ ಕಾಲೇಜಿನಲ್ಲಿ ಪದವಿ ಶಿಕ್ಷಣ ಮುಗಿಸಿದ ಕಾಶಿಮಾ `ಕಳಾಪುರಂ’ ಎನ್ನುವ ತೆಲುಗು ಸಿನಿಮಾದಲ್ಲಿ ಹಾಗೂ `ಕಾದಂಬರಿ’ ಎನ್ನುವ ತಮಿಳು ಸಿನಿಮಾಗಳಲ್ಲಿ ಸಹ ಅಭಿನಯಿಸಿದ್ದಾರೆ.

`ನೀ ನಂಗೆ ಅಲ್ವಾ’ ಚಿತ್ರದ ಮೂಲಕ ರಾಹುಲ್‌ಅರ್ಕಾಟ್‌ಎಂಬ ನೂತನ ಪ್ರತಿಭೆ ಈ ಚಿತ್ರದ ಮೂಲಕ ನಾಯಕನಾಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ಚಿತ್ರತಂಡ, ಈಗ ಚಿತ್ರದ ನಾಯಕಿಯ ಬಗ್ಗೆ ಮಾಹಿತಿ ನೀಡಿದೆ. ಬೆಡಗಿ ಕಾಶಿಮಾ `ನೀ ನಂಗೆ ಅಲ್ವಾ’ ಚಿತ್ರದ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ನೂತನ ಪೋಸ್ಟರ್‌ಬಿಡುಗಡೆ ಮಾಡುವ ಮೂಲಕ ನಾಯಕಿ ಕಾಶಿಮಾರಿಗೆ ಚಿತ್ರ ತಂಡ ಸ್ವಾಗತ ಹೇಳಿದೆ.
– ರಾಘವೇಂದ್ರ ಅಡಿಗ ಎಚ್ಚೆನ್





