‘ವಡಾ ಪಾವ್ ಗರ್ಲ್’ ಖ್ಯಾತಿಯ ಚಂದ್ರಿಕಾ ದೀಕ್ಷಿತ್ ಮತ್ತೊಮ್ಮೆ ವಿವಾದಕ್ಕೆ ಸಿಲುಕಿದ್ದಾರೆ. ಅವರ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಅದರಲ್ಲಿ ಅವರು ಅತ್ಯಂತ ಆಕ್ಷೇಪಾರ್ಹ ಹೇಳಿಕೆ ನೀಡಿದ್ದಾರೆ. ಚಂದ್ರಿಕಾ ತನ್ನ ಮಗುವನ್ನು ಬೆಳೆಸಲು ಯಾವುದೇ ಮಟ್ಟಕ್ಕೆ ಹೋಗಲು ಸಿದ್ಧ ಎಂದು ಹೇಳಿದ್ದಾರೆ. ಶಲ್ಲು ನಿಶಾ ಪಾಡ್‌ಕ್ಯಾಸ್ಟ್ ಯೂಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ, ಚಂದ್ರಿಕಾ ದೀಕ್ಷಿತ್ ತಮ್ಮ ಮಗುವಿನ ಪಾಲನೆ ಮತ್ತು ಆರ್ಥಿಕ ತೊಂದರೆಗಳ ಬಗ್ಗೆ ಚರ್ಚಿಸಿದ್ದಾರೆ. ಇಲ್ಲಿ ಎಲ್ಲರಿಗೂ ಆಘಾತವನ್ನುಂಟುಮಾಡುವ ಒಂದು ವಿಷಯವನ್ನು ಹೇಳಿದ್ದಾರೆ.
‘ವಡಾ ಪಾವ್ ಗರ್ಲ್’ ಎಂದೇ ಹೆಸರುವಾಸಿಯಾಗಿರುವ ಚಂದ್ರಿಕಾ ದೀಕ್ಷಿತ್, ನನಗೆ ಯಾವುದೇ ನಾಚಿಕೆ ಇಲ್ಲ. ತಾಯಿಯಾಗಿ ನಾನು ತುಂಬಾ ಗಂಭೀರವಾದ ವಿಷಯವನ್ನು ಹೇಳುತ್ತಿದ್ದೇನೆ. ಜನರು ಹೇಗೆ ನಿರ್ಣಯಿಸುತ್ತಾರೆಂದು ನನಗೆ ತಿಳಿದಿಲ್ಲ. ಆದರೆ ನನ್ನ ಮಗುವನ್ನು ಬೆಳೆಸಲು ನಾನು ಯಾರ ಜೊತೆಗೆ ಬೇಕಾದರೂ ಮಲಗುತ್ತೇನೆ ಎಂದರು ಹೇಳಿದ್ದಾರೆ.
ಈಗ ಚಂದ್ರಿಕಾ ದೀಕ್ಷಿತ್ ಹಣ ಸಂಪಾದಿಸಲು ಮತ್ತು ತನ್ನ ಮಗುವನ್ನು ಬೆಳೆಸಲು ಯಾರೊಂದಿಗೂ ಮಲಗಲು ಸಿದ್ಧರಾಗಿದ್ದಾರೆ. ಈ ಕ್ಲಿಪ್ ಆನ್‌ಲೈನ್‌ನಲ್ಲಿ ಕಾಣಿಸಿಕೊಂಡ ತಕ್ಷಣ, ಇಂಟರ್ನೆಟ್ ಬಳಕೆದಾರರು ಅದಕ್ಕೆ ತೀವ್ರವಾಗಿ ಪ್ರತಿಕ್ರಿಯಿಸಿದ್ದಾರೆ. ನೆಟ್ಟಿಗರು ಅಂತಹ ಹೇಳಿಕೆಗಳು ಸಮಾಜಕ್ಕೆ ತಪ್ಪು ಸಂದೇಶ ನೀಡುತ್ತದೆ ಮತ್ತು ಯಾವುದೇ ಸಂದರ್ಭದಲ್ಲೂ ‘ಸಾಮಾನ್ಯ’ ಎಂದು ಪರಿಗಣಿಸಬಾರದು ಎಂದು ಪೋಸ್ಟ್ ಮಾಡಿದ್ದಾರೆ.





