ಸಾಮಗ್ರಿ : 1 ಮೊಟ್ಟೆ, 1 ಕಪ್‌ ಗೋದಿಹಿಟ್ಟು, ಒಂದಿಷ್ಟು ಹೆಚ್ಚಿದ ಈರುಳ್ಳಿ, ಬೆಳ್ಳುಳ್ಳಿ, ಹಸಿ ಮೆಣಸು, ಕೆಂಪು/ಹಳದಿ/ಹಸಿರು ಕ್ಯಾಪ್ಸಿಕಂ, ಕೊ.ಸೊಪ್ಪು, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಧನಿಯಾಪುಡಿ, ಜೀರಿಗೆ ಪುಡಿ, ಗರಂಮಸಾಲ, ಅಗತ್ಯವಿದ್ದಷ್ಟು ತುಪ್ಪ, ಬೆಚ್ಚಗಿನ ಬಿಸಿ ನೀರು.

ವಿಧಾನ : ಒಂದು ಬಟ್ಟಲಿಗೆ ಮೊಟ್ಟೆ ಒಡೆದು ಹಾಕಿ, ತುಸು ಉಪ್ಪು, ಮೆಣಸು ಹಾಕಿ ಚೆನ್ನಾಗಿ ಗೊಟಾಯಿಸಿ. ಒಂದು ಬಾಣಲೆಯಲ್ಲಿ ತುಸು ಎಣ್ಣೆ ಬಿಸಿ ಮಾಡಿ ಹೆಚ್ಚಿದ ಎಲ್ಲಾ ಪದಾರ್ಥಗಳನ್ನೂ ಒಂದೊಂದಾಗಿ ಹಾಕಿ ಬಾಡಿಸಿ. ಕೊನೆಯಲ್ಲಿ ಉಪ್ಪು, ಮಸಾಲೆ, ಮೊಟ್ಟೆ ಮಿಶ್ರಣ ಸಹ ಹಾಕಿ ಬೇಗ ಬೇಗ ಕೈಯಾಡಿಸಿ ಪಲ್ಯದಂತೆ ಮಾಡಿ ಕೆಳಗಿಳಿಸಿ. ಗೋದಿಹಿಟ್ಟಿಗೆ ತುಸು ಉಪ್ಪು, ಬಿಸಿ ನೀರು ಬೆರೆಸಿ ಚಪಾತಿ ಹಿಟ್ಟಿನಂತೆ ಕಲಸಿ, ಅದನ್ನು ಲಟ್ಟಿಸಿ, 2-3 ಚಮಚ ಪಲ್ಯ ಹರಡಿ, ಮತ್ತೆ ಮಡಿಸಿ ಲಟ್ಟಿಸಿ. ಇದನ್ನು ತವಾ ಮೇಲೆ ಹಾಕಿ, ತುಪ್ಪ ಬಿಡುತ್ತಾ ಎರಡೂ ಬದಿ ಬೇಯಿಸಿ. ಈ ರೀತಿ ಎಲ್ಲವನ್ನೂ ಸಿದ್ಧಪಡಿಸಿ.

ರವೆ ಸಬ್ಬಕ್ಕಿಯ ಇಡ್ಲಿ

ಸಾಮಗ್ರಿ : 2 ಕಪ್‌ ಹುಳಿ ಮೊಸರು, ಅರ್ಧ ಕಪ್‌ ಸಬ್ಬಕ್ಕಿ (ಸಾಬೂದಾಣಿ), 1 ಕಪ್‌ ಹುರಿದ ಸಣ್ಣ ರವೆ, ಅಗತ್ಯವಿದ್ದಷ್ಟು ಉಪ್ಪು, ಸೋಡಿಯಂ ಬೈಕಾರ್ಬೋನೇಟ್‌ (ಅಡುಗೆ ಸೋಡ), ಬೆಚ್ಚನೆಯ ಬಿಸಿ ನೀರು.

ವಿಧಾನ : ಮೊದಲು ಸಬ್ಬಕ್ಕಿಯನ್ನು ತೊಳೆದು ಶುಚಿಗೊಳಿಸಿ. ನಂತರ 1 ಬಟ್ಟಲಿಗೆ ಮೊಸರು ಹಾಕಿ, ಉಪ್ಪು ಬೆರೆಸಿ ಚೆನ್ನಾಗಿ ಗೊಟಾಯಿಸಿ. ನಂತರ ಇದಕ್ಕೆ ಉಳಿದೆಲ್ಲ ಸಾಮಗ್ರಿಗಳನ್ನೂ ಬೆರೆಸಿ ಚೆನ್ನಾಗಿ ಮಿಶ್ರ ಮಾಡಿಕೊಳ್ಳಿ. ಇದನ್ನು ಇಡೀ ರಾತ್ರಿ ನೆನೆಯಲು ಬಿಡಿ, ಮಾರನೇ ಬೆಳಗ್ಗೆ ಹೊತ್ತಿಗೆ ಚೆನ್ನಾಗಿ ಹುದುಗು ಬಂದಿರುತ್ತದೆ. ನಂತರ ಇದಕ್ಕೆ ತುಸು ಅಡುಗೆ ಸೋಡ ಬೆರೆಸಿ ಗೊಟಾಯಿಸಿ. ನಂತರ ಇಡ್ಲಿ ಪ್ಲೇಟುಗಳಿಗೆ ಎಣ್ಣೆ ಸವರಿ, 1-1 ಸೌಟು ಹಿಟ್ಟು ತುಂಬಿಸಿ, ಆವಿಯಲ್ಲಿ ಹದನಾಗಿ ಇಡ್ಲಿ ಬೇಯಿಸಿ. ಬಿಸಿ ಬಿಸಿ ಇರುವಾಗಲೇ ಇದಕ್ಕೆ ತುಪ್ಪ ಹಾಕಿ, ಕಾಯಿ ಚಟ್ನಿ ಜೊತೆ ಸವಿಯಲು ಕೊಡಿ.

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ