ಕಡಾಯಿ ಪನೀರ್

ಸಾಮಗ್ರಿ : ಒಂದಿಷ್ಟು ಹೆಚ್ಚಿದ 3 ಬಗೆಯ ಕ್ಯಾಪ್ಸಿಕಂ ತುಂಡು, ಈರುಳ್ಳಿ, ಬೆಳ್ಳುಳ್ಳಿ, ಟೊಮೇಟೊ, 250 ಗ್ರಾ ತುಂಡರಿಸಿದ ಪನೀರ್‌, ರುಚಿಗೆ ತಕ್ಕಷ್ಟು ಅರಿಶಿನ, ಉಪ್ಪು, ಖಾರ, ಗರಂಮಸಾಲ, ಚಾಟ್‌ ಮಸಾಲ, ರೆಡಿ ಚಿಲೀ ಫ್ಲೇಕ್ಸ್, ಬೆಣ್ಣೆ, ಧನಿಯಾಪುಡಿ, ರೆಡಿಮೇಡ್ ಮಖನಿ ಗ್ರೇವಿ, ಕಸೂರಿಮೇಥಿ, ನಿಂಬೆರಸ, ಅಲಂಕರಿಸಲು ಹೆಚ್ಚಿದ ತುಸು ಕೊ.ಸೊಪ್ಪು, ತುರಿದ ಪನೀರ್‌.

ವಿಧಾನ : ಬಾಣಲೆಯಲ್ಲಿ ಬೆಣ್ಣೆ ಬಿಸಿ ಮಾಡಿಕೊಂಡು ಹೆಚ್ಚಿದ ಬೆಳ್ಳುಳ್ಳಿ, ಈರುಳ್ಳಿ ಹಾಕಿ ಬಾಡಿಸಿ. ನಂತರ ಕ್ಯಾಪ್ಸಿಕಂ, ಆಮೇಲೆ ಟೊಮೇಟೊ ಹಾಕಿ ಬಾಡಿಸಿ. ನಂತರ ಒಂದೊಂದಾಗಿ ಎಲ್ಲಾ ಮಸಾಲೆ, ರೆಡಿಮೇಡ್‌ ಗ್ರೇವಿ, ಉಪ್ಪು ಸೇರಿಸಿ ಮಂದ ಉರಿಯಲ್ಲಿ ಕೈಯಾಡಿಸಿ. ಕೊನೆಯಲ್ಲಿ (ಪಕ್ಕದ ಬಾಣಲೆಯಲ್ಲಿ ತುಪ್ಪದಲ್ಲಿ ಹುರಿದ) ಪನೀರ್‌ ತುಂಡು ಸೇರಿಸಿ ಬಾಡಿಸಿ. ಕೆಳಗಿಳಿಸಿದ ನಂತರ ಕೊ.ಸೊಪ್ಪು ಉದುರಿಸಿ, ನಿಂಬೆಹಣ್ಣು ಹಿಂಡಿಕೊಳ್ಳಿ. ಇದು ಚಪಾತಿ, ಪೂರಿಗಳಿಗೆ ಸೊಗಸಾಗಿ ಹೊಂದುತ್ತದೆ.

Mughlai-Biryani

ಸ್ಪೆಷಲ್ ಪುದೀನಾ ಪಲಾವ್

ಸಾಮಗ್ರಿ : ಒಂದಿಷ್ಟು ಹೆಚ್ಚಿದ ಬೀನ್ಸ್, ಕ್ಯಾರೆಟ್‌, ಆಲೂ, ಹಸಿ ಬಟಾಣಿ, ಬ್ಲಾಂಚ್‌ ಗೊಳಿಸಲಾದ ಹೂಕೋಸಿನ ತುಂಡು, ತಾಜಾ ಪುದೀನಾ, ಕೊ.ಸೊಪ್ಪು, ಹಸಿ ಶುಂಠಿ, ಹಸಿಮೆಣಸು, ಈರುಳ್ಳಿ, ಬೆಳ್ಳುಳ್ಳಿ, 300 ಗ್ರಾಂ ಬಾಸುಮತಿ ಅಕ್ಕಿ, ಸ್ಪೆಷಲ್ ಬಿರಿಯಾನಿ ಮಿಕ್ಸ್, ತುಸು ಕೇವ್ರಾ ವಾಟರ್‌, ರುಚಿಗೆ ತಕ್ಕಷ್ಟು ಉಪ್ಪು, ಖಾರ, ತುಪ್ಪ, ರಿಚ್‌ ಕ್ರೀಂ, ರೆಡಿಮೇಡ್‌ಬ್ರೌನ್‌ ಗ್ರೇವಿ, ಜೀರಿಗೆ.

ವಿಧಾನ : ಮೊದಲು ಹೆಚ್ಚಿದ ತರಕಾರಿಯನ್ನು ಬೇಯಿಸಿ. ಒಂದು ಕುಕ್ಕರ್‌ ನಲ್ಲಿ ತುಸು ತುಪ್ಪ ಬಿಸಿ ಮಾಡಿ, ಇದಕ್ಕೆ ಒಂದೊಂದಾಗಿ ಎಲ್ಲಾ ಮಸಾಲೆ, ಬ್ರೌನ್‌ ಗ್ರೇವಿ, ಹೆಚ್ಚಿದ ಪದಾರ್ಥ, ಕೇವ್ರಾ ವಾಟರ್‌ ಇತ್ಯಾದಿ ಎಲ್ಲಾ ಬೆರೆಸಿ ಕೈಯಾಡಿಸಿ. ಮಂದ ಉರಿಯಲ್ಲಿ 2 ನಿಮಿಷ ಕೆದಕಿರಿ. ಮೊದಲೇ ಬೇಯಿಸಿಕೊಂಡಿದ್ದ ಬಾಸುಮತಿ ಅಕ್ಕಿಯ ಅನ್ನ ಇದಕ್ಕೆ ಬೆರೆಸಿ, 2-3 ನಿಮಿಷ ಮಂದ ಉರಿಯಲ್ಲಿ ಹಾಗೇ ಬಿಡಿ. ಕೊನೆಯಲ್ಲಿ ಮತ್ತಷ್ಟು ಕೊ.ಸೊಪ್ಪು ಉದುರಿಸಿ, ಈರುಳ್ಳಿ, ಟೊಮೇಟೊ ರಾಯ್ತಾ ಜೊತೆ ಸವಿಯಲು ಕೊಡಿ.

ಸ್ಪೆಷಲ್ ಬಿರಿಯಾನಿ ಮಿಕ್ಸ್ ಗಾಗಿ ಸಾಮಗ್ರಿ : 100 ಗ್ರಾಂ ರಿಚ್‌ ಕ್ರೀಂ, ತುಸು ಬೆಣ್ಣೆತುಪ್ಪ, ಏಲಕ್ಕಿ ಪುಡಿ, ಗಸಗಸೆ, ವೆಟಿವೀರ್ ರೂಟ್‌ ಪೌಡರ್‌, ಜಾಪತ್ರೆ ಪುಡಿ, ತೇದ ಜಾಯಿಕಾಯಿ, ಲವಂಗ, ಚಕ್ಕೆ, ಮೊಗ್ಗು, ತುಸು ರೋಸ್‌ ವಾಟರ್‌, ರೋಹ್‌ ಕೇವ್ರಾ ವಾಟರ್‌, ವೈಟ್‌ ಪೆಪ್ಪರ್‌ ಪುಡಿ, ನಿಂಬೆರಸ, ಹೆಚ್ಚಿದ ಕೊ.ಸೊಪ್ಪು, ಪುದೀನಾ, ಶುಂಠಿ, ಲವಂಗದ ಎಲೆ, ತುಸು ಉಪ್ಪು, ಬಿಸಿ ನೀರು.

ವಿಧಾನ : ಪ್ಯಾನಿನಲ್ಲಿ ತುಸು ತುಪ್ಪ ಬಿಸಿ ಮಾಡಿಕೊಂಡು ಅದಕ್ಕೆ ಎಲ್ಲಾ ಮಸಾಲೆ ಸೇರಿಸಿ, ಮಂದ ಉರಿಯಲ್ಲಿ ಕೈಯಾಡಿಸಿ. ನಂತರ ಉಳಿದ ಸಾಮಗ್ರಿ ಬೆರೆಸಿ 1-2 ಕುದಿ ಬರಿಸಿ, ನೀರಿನ ಪ್ರಮಾಣ ಹಿಂಗುತ್ತಾ ಕ್ರೀಮೀ ಟೆಕ್ಸ್ ಚರ್‌ ಬರುವವರೆಗೂ ಕೆದಕಿ ಕೆಳಗಿಳಿಸಿ. ಇದೀಗ ಸ್ಪೆಷಲ್ ಬಿರಿಯಾನಿ ಮಿಕ್ಸ್ ರೆಡಿ!

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ