ಮೊಟ್ಟೆ ಮಿಕ್ಸ್ ಚರ್ಗಾಗಿ ಸಾಮಗ್ರಿ : 1 ಮೊಟ್ಟೆ, ಅರ್ಧ ಗ್ಲಾಸ್‌ ಹಾಲು, ಅರ್ಧ ಕಪ್‌ ಸಕ್ಕರೆ, 1 ಸಣ್ಣ ಚಮಚ ವೆನಿಲಾ ಎಸೆನ್ಸ್.

ವಿಧಾನ : ಒಂದು ದೊಡ್ಡ ಬಟ್ಟಲಿಗೆ ಮೇಲಿನ ಎಲ್ಲಾ ಸಾಮಗ್ರಿ ಬೆರೆಸಿ, ಚೆನ್ನಾಗಿ ಗೊಟಾಯಿಸಿ.

ಕ್ಯಾರಾಮೆಲ್ ಸಾಸ್ಗಾಗಿ ಸಾಮಗ್ರಿ : ಅರ್ಧ ಕಪ್‌ ಸಕ್ಕರೆ, ತುಸು ನೀರು, 1 ಚಮಚ ಬೆಣ್ಣೆ, ಅರ್ಧ ಕಪ್‌ ಕ್ರೀಂ.

ವಿಧಾನ : ಒಂದು ಮೀಡಿಯಂ ಭಾರಿ ತಳವುಳ್ಳ ಸಾಸ್‌ ಪ್ಯಾನ್‌ ನ್ನು ಮೀಡಿಯಂ ಉರಿಯಲ್ಲಿ ಬಿಸಿ ಮಾಡಿ. ಇದಕ್ಕೆ ಸಕ್ಕರೆ, ನೀರು ಬೆರೆಸಿ ಚೆನ್ನಾಗಿ ಮಿಶ್ರಗೊಳಿಸಿ. ನಂತರ ಕೈಯಾಡಿಸದೆ ಹೊಂಬಣ್ಣ ಬರುವವರೆಗೂ ಇದನ್ನು ಮಂದ ಉರಿಯಲ್ಲಿ ಬಿಸಿ ಮಾಡಿ. ನಂತರ ಒಲೆಯಿಂದ ಇಳಿಸಿ, ತಕ್ಷಣ ಬೆಣ್ಣೆ ಬೆರೆಸಿ, ಚೆನ್ನಾಗಿ ಗೊಟಾಯಿಸಿ. ನಂತರ ಇದಕ್ಕೆ ಕ್ರೀಂ ಬೆರೆಸಿ ಚೆನ್ನಾಗಿ ಗೊಟಾಯಿಸಿ, ಸಾಸ್‌ ಸ್ಮೂಥ್‌ ಆಗುವಂತೆ ಮಾಡಿ. ನಂತರ ಈ ಕ್ಯಾರಾಮೆಲ್ ‌ಸಾಸ್‌ ನ್ನು ತಂಪುಗೊಳಿಸಿ.

37340-banana-stuffed-french-toast-28705-4x3-fdf6ec3cbd3041acb2a269a422d01cb1

ಇತರ ಸಾಮಗ್ರಿ : 4 ಬೆಲ್ ರಿಡ್‌ ಪೀಸ್‌, 1 ಬಾಳೆಹಣ್ಣು, 2 ಚಮಚ ಬೆಣ್ಣೆ.

ವಿಧಾನ : ಎಲ್ಲಕ್ಕೂ ಮೊದಲು 4 ಬ್ರೆಡ್‌ ತುಂಡು ತೆಗೆದುಕೊಳ್ಳಿ. ನಂತರ 2 ತುಂಡಿನ ಮೇಲೆ ಚೀಸ್‌ ಸ್ಲೈಸ್‌ ಇರಿಸಿ. ಈಗ ಮಾಗಿದ  ಬಾಳೆಹಣ್ಣಿನ ತುಂಡುಗಳನ್ನು ಚೀಸ್‌ ಮೇಲೆ ಸೆಟ್‌ ಮಾಡಿ. ನಂತರ ಈ ಬಿಲ್ಲೆ ಗಳ ಮೇಲೆ ಕ್ಯಾರಾಮೆಲ್ ‌ಸಾಸ್‌ ಬರಲಿ. ನಂತರ ಇದರ ಮೇಲೆ ಬ್ರೆಡ್‌ ತಂಡು ಇರಲಿ. ಇದೀಗ 2 ಸ್ಟಫ್ಟ್ ಸ್ಯಾಂಡ್‌ ವಿಚ್‌ ರೆಡಿ ಆಯ್ತು. ನಂತರ ಈ ಸ್ಯಾಂಡ್‌ ವಿಚ್‌ ನ್ನು ಮೊಟ್ಟೆ ಮಿಶ್ರಣದಲ್ಲಿ ಅದ್ದಿ ಸ್ವಲ್ಪ ಹೊತ್ತು ಹಾಗೇ ಬಿಡಿ. ನಂತರ ದೊಡ್ಡ ತವಾ ತೆಗೆದುಕೊಂಡು, ಮಧ್ಯಮ ಉರಿಯಲ್ಲಿ ಇದಕ್ಕೆ ಬೆಣ್ಣೆ ಹಾಕಿ ಬಿಸಿ ಮಾಡಿ. ನಂತರ ಸ್ಯಾಂಡ್‌ ವಿಚ್‌ ನ್ನು ಎರಡೂ ಬದಿ ಹೊಂಬಣ್ಣ ಬರುವಂತೆ ಬೇಯಿಸಿ. ಹೀಗೆ ಎಲ್ಲಾ ಸಿದ್ಧಪಡಿಸಿ, ತಕ್ಷಣ ಕ್ಯಾರಾಮೆಲ್ ಸಾಸ್‌ಬಾಳೆ ಬಿಲ್ಲೆಗಳ ಜೊತೆ ಅಲಂಕರಿಸಿ ಸವಿಯಲು ಕೊಡಿ.

 

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ