ಶಾಖದ ಉರಿಬಿಸಿಲಿನ ದಿನಗಳಿಗೆ ಏನಾದರೂ ಒಂದಿಷ್ಟು ಸೊಗಸಾದ ಕೂಲ್ ಡ್ರಿಂಕ್ಸ್, ಡಿಫರೆಂಟ್ಆದ ಸ್ನಾಕ್ಸ್ ಇದ್ದರೆ ಎಂಥ ಮಜಾ ಅಲ್ಲವೇ....?

ಅರಳಿನ ಪಕೋಡ

ಸಾಮಗ್ರಿ : 2 ಕಪ್‌ ಅರಳು (ರೆಡಿಮೇಡ್‌ ಲಭ್ಯ), ಅರ್ಧರ್ಧ ಕಪ್‌ ಕಡಲೆಹಿಟ್ಟು ಆರಾರೂಟ್‌, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಗರಂಮಸಾಲ, ಚಾಟ್‌ ಮಸಾಲ, ವೈಟ್‌ ಪೆಪ್ಪರ್‌, ಬ್ಲ್ಯಾಕ್‌ ಸಾಲ್ಟ್, ಸೋಂಪು, ಇಂಗು, ಅಮ್ಚೂರ್‌ ಪುಡಿ, ಸಣ್ಣಗೆ ಹೆಚ್ಚಿದ ಹಸಿ ಮೆಣಸು, ಶುಂಠಿ, ಕೊ.ಸೊಪ್ಪು, ಪುದೀನಾ, ಕರಿಬೇವು, ಕರಿಯಲು ರೀಫೈಂಡ್‌ ಎಣ್ಣೆ.

ವಿಧಾನ : ಮೇಲಿನ ಎಲ್ಲಾ ಸಾಮಗ್ರಿಗಳನ್ನೂ ಒಂದು ಬೇಸನ್ನಿಗೆ ಹಾಕಿಕೊಂಡು, ಅಗತ್ಯವಿರುವಷ್ಟು ನೀರು ಚಿಮುಕಿಸುತ್ತಾ, ಮಾಮೂಲಿ ಪಕೋಡಾ ಮಿಶ್ರಣದ ಹದಕ್ಕೆ ಕಲಸಿಡಿ. ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ. ನಂತರ ಸ್ವಲ್ಪ ಸ್ವಲ್ಪವೇ ಮಿಶ್ರಣ ತೆಗೆದುಕೊಂಡು, ಅದನ್ನು ಎಣ್ಣೆಗೆ ಬಿಡುತ್ತಾ, ಹೊಂಬಣ್ಣಕ್ಕೆ ತಿರುಗುವಂತೆ ಗರಿಗರಿಯಾಗಿ ಕರಿಯಿರಿ. ಬಿಸಿ ಇರುವಾಗಲೇ ಇದನ್ನು ಪುದೀನಾ ಚಟ್ನಿ ಜೊತೆ ಸವಿಯಲು ಕೊಡಿ.

AA-apple-honey-hot-drink-(6)

ಆ್ಯಪಲ್ ಹನೀ ಹಾಟ್ಡ್ರಿಂಕ್

ಸಾಮಗ್ರಿ : ಮಧ್ಯಮ ಗಾತ್ರದ 2 ಮಾಗಿದ ಸೇಬು, 2 ಲವಂಗ, 1 ಸಣ್ಣ ತುಂಡು ದಾಲ್ಚಿನ್ನಿ, 3 ಕಪ್‌ ನೀರು, 2 ಸಣ್ಣ ಚಮಚ ಗ್ರೀನ್ ಟೀ ಲೀಫ್‌, ರುಚಿಗೆ ತಕ್ಕಷ್ಟು ಸಕ್ಕರೆ, ಜೇನುತುಪ್ಪ, ನಿಂಬೆರಸ, ತುಸು ಪುದೀನಾ.

ವಿಧಾನ : ಸೇಬಿನ ಸಿಪ್ಪೆ ಹೆರೆದು ನೀಟಾಗಿ ತುರಿದಿಡಿ. ಒಂದು ಸ್ಟೀಲ್ ಬಟ್ಟಲಿಗೆ 3 ಕಪ್‌ ನೀರು ಬೆರೆಸಿ ಬಿಸಿ ಮಾಡಿ. ಅದಕ್ಕೆ ಲವಂಗ, ಚಕ್ಕೆ, ತುರಿದ ಸೇಬು ಸೇರಿಸಿ ಹದನಾಗಿ ಬೇಯಿಸಿ. ನಂತರ ಕೆಳಗಿಳಿಸಿ ಸೋಸಿಕೊಂಡು ಸೇಬು ಬೇರ್ಪಡಿಸಿ, ಬೇರೆ ಅಡುಗೆಗೆ ಬಳಸಿರಿ. ಈ ರಸಕ್ಕೆ ಗ್ರೀನ್‌ ಲೀಫ್‌ ಟೀ ಬೆರೆಸಿ ಕುದಿಸಬೇಕು. ಜೊತೆಗೆ ಸಕ್ಕರೆಯನ್ನೂ ಸೇರಿಸಿ. ಇದನ್ನು ಬೇರೆ ಬೇರೆ ಕಪ್‌ ಗಳಿಗೆ ಬಸಿದು, ಅಗತ್ಯವಿದ್ದಷ್ಟು ಜೇನುತುಪ್ಪ ಬೆರೆಸಿರಿ. ಚಿತ್ರದಲ್ಲಿರುವಂತೆ ನಿಂಬೆ ಹೋಳಿನಿಂದ ಅಲಂಕರಿಸಿ, ಮೇಲೆ ತುಸು ಪುದೀನಾ ಉದುರಿಸಿ ಬಿಸಿಯಾಗಿ ಅಥವಾ 1 ಗಂಟೆ ಕಾಲ ಫ್ರಿಜ್‌ ನಲ್ಲಿರಿಸಿ, ನಂತರ ಕೂಲ್ ‌ಕೂಲ್ ‌ಆಗಿ ಸೇವಿಸಿ!

 

ಬಿರು ಬೇಸಿಗೆಯ ದಿನಗಳಿಗೆ ಇಂಥ ಸೊಗಸಾದ ಕೂಲ್ ಡ್ರಿಂಕ್ಸ್ ಇದ್ದರೆ ಎಷ್ಟು ಚೆನ್ನ ಅಲ್ಲವೇ?

AA-amla-honey-herbal-drink-(4)

ನೆಲ್ಲಿಯ ಹರ್ಬಲ್ ಡ್ರಿಂಕ್ಸ್

ಸಾಮಗ್ರಿ : 250 ಗ್ರಾಂ ನೆಲ್ಲಿಕಾಯಿಯ ತುರಿ, ರುಚಿಗೆ ತಕ್ಕಷ್ಟು ಬ್ಲ್ಯಾಕ್‌ ಸಾಲ್ಟ್, ವೈಟ್‌ ಪೆಪ್ಪರ್‌, ಜೀರಿಗೆ ಪುಡಿ, ಜೇನುತುಪ್ಪ, ಬ್ರೌನ್‌ ಶುಗರ್‌ (ಬೆಲ್ಲದ ಪುಡಿ), ತುಸು ಫ್ರಿಜ್‌ ನೀರು, ಪುಡಿ ಐಸ್‌, ಪುದೀನಾ.

ವಿಧಾನ : ನೀಟಾಗಿ ತುರಿದ ನೆಲ್ಲಿಯನ್ನು ಚಿಟಕಿ ಉಪ್ಪಿನೊಂದಿಗೆ ನೀರು ಬೆರೆಸದೆ ಮಿಕ್ಸಿಗೆ ಹಾಕಿ, ನುಣ್ಣಗೆ ಮಾಡಿಕೊಳ್ಳಿ. ಇದನ್ನು ಬಟ್ಟಲಿಗೆ ಹಾಕಿಕೊಂಡು, ಜೇನುತುಪ್ಪ, ಸಕ್ಕರೆ ಬೆರೆಸಿ (ಅರ್ಧ ಕಪ್‌ ನೀರಿನೊಂದಿಗೆ) 1-2 ಕುದಿ ಬರಿಸಿ. ಕೆಳಗಿಳಿಸಿ ಚೆನ್ನಾಗಿ ಕೂಲ್ ಆದ ನಂತರ, ಇದನ್ನು 2-3 ಗ್ಲಾಸುಗಳಿಗೆ ಸಮನಾಗಿ ಸುರಿಯಿರಿ. ಇದರ ಮೇಲೆ ಒಂದಿಷ್ಟು ಜಜ್ಜಿದ ಪುದೀನಾ, ಉಳಿದೆಲ್ಲ ಸಾಮಗ್ರಿ ಸಮನಾಗಿ ಹರಡಿ ಚೆನ್ನಾಗಿ ಕದಡಿಕೊಳ್ಳಿ. ಚಿತ್ರದಲ್ಲಿರುವಂತೆ ಅಲಂಕರಿಸಿ ತಣ್ಣಗೆ ಸವಿಯಲು ಕೊಡಿ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ