ಅವನು ದೇವನಲ್ಲಾ ಅವನು ರಾಜನಲ್ಲಾ
ಜೊತೆಗಿರುವ ಆತ್ಮಸಖನೇ ಆಗಿಹನಲ್ಲಾ
ಕಷ್ಟವಿರಲಿ ಸುಖವೇ ಇರಲಿ ಅವನೇ ಎಲ್ಲಾ
ಮನೆ ಮನ ಎಲ್ಲವು ಅವನೇ ಆಗಿಹನಲ್ಲಾ
ಭಯದಲ್ಲಿ ಬರುವನವನು ರಕ್ಷಕನಂತೆ
ಕಷ್ಟದಲ್ಲಿ ಜೊತೆಗಿರುವನವನು ಬಂಧುವಂತೆ
ನೋವು ಸಂಕಟದಲ್ಲಿರುವನವನು ವೈದ್ಯನಂತೆ
ಸುಖ ಸಂತೋಷದಲ್ಲಿರುವನವನು ಸ್ನೇಹಿತನಂತೆ
ರಾಮನೆಂದರೆ ಕ್ಲಿಷ್ಟಕರ ಅನಿಸುವುದೇ ಇಲ್ಲಾ
ಸರಳ ಸುಲಭ ಅವನ ಪೂಜೆ ಪುನಸ್ಕಾರವೆಲ್ಲಾ
ರಾಮನಾಮ ಪಠಿಸಿದರೆ ಸಾಕು ಒಲಿಯುವವನು
ಜನಮನದಲ್ಲಿ ಬೆರೆತಿಹುದು ಈ ರಾಮಮಂತ್ರವು
ರಾಮನೆಂದರೆ ಸತ್ಯ ಧರ್ಮ ನಿಷ್ಠೆಯ ಸಂಕೇತ
ಪ್ರಜೆಗಳ ಪ್ರಿಯ ರಾಜ ಪಿತೃ ವಾಕ್ಯ ಪರಿಪಾಲಕ
ದೇವನಾದರು ಎಲ್ಲರೊಳು ಬಂಧುವಂತೆ ಇಹನು,
ರಾಮನೆಂದರೆ ವರ್ಣಿಸಲಾಗದ ಅದ್ಭುತ ಶಕ್ತಿಯು
ಸವಿತಾ ರಮೇಶ
ಶ್ರೀರಾಮ ನವಮಿಯ ಶುಭಾಶಯಗಳು
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ





