ಸರ್ಜಿಕಲ್ ಸ್ಟ್ರೈಕ್, ಸಾರಿಗೆ ಸ್ಟ್ರೈಕ್, ರೈತರ ಸ್ಟ್ರೈಕ್ ಕೇಳಿದ್ದಿವಿ ಇದೇನು ಹೊಸಾ ಶ್ರೀರಾಮ ನವಮಿ ಸ್ಟ್ರೈಕ್ ಅಂತಾ ಯೋಚನೆ ಮಾಡ್ತಿರ್ತೀರಿ ಅಂತ ನನಗೆ ಚೆನ್ನಾಗಿ ಗೊತ್ತು. ಇದುವರೆಗೂ ಯಾರಿಗೂ ಹೇಳಿದಿದ್ದ ಶ್ರೀರಾಮ ನವಮಿ ಸ್ಟ್ರೈಕ್ ಅಂತಹ ರೋಚಕ ಅನುಭವವನ್ನು ನಿಮ್ಮೊಂದಿಗೆ ಹಂಚಿಕೊಳ್ತೀನಿ.

ಸುಮಾರು ವರ್ಷಗಳ ಹಿಂದೆ ಬೆಂಗಳೂರಿನಲ್ಲಿ ಆಗ ತಾನೆ ಶುರುವಾಗಿದ್ದ ಸ್ಟಾರ್ಟಪ್ ಕಂಪನಿಯೊಂದರ ಎರಡನೇ ಉದ್ಯೋಗಿಯಾಗಿ ಸೇರಿಕೊಂಡಿದ್ದೆ. ಭಾರತೀಯರೊಬ್ಬರೇ ಅಮೇರಿಕಾದಲ್ಲಿ ಆರಂಭಿಸಿದ ಕಂಪನಿಯೊಂದರ ಶಾಖೆಯನ್ನು ಐಟಿ ಹಬ್ ಎಂದೇ ಖ್ಯಾತಿ ಪಡೆದಿರುವ ಬೆಂಗಳೂರಿನಲ್ಲಿ ಆರಂಭಿಸಿದ್ದರು. ಬೆಂಗಳೂರು ಶಾಖೆಯ ಎರಡನೇ ಉದ್ಯೋಗಿ ಎಂದರೆ ಎಲ್ಲರಿಗೂ ಗೊತ್ತಿರುವ ಹಾಗೆ ಬಹಳ ಜವಾಬ್ಧಾರಿಯುತವಾಗಿ ಎಲ್ಲವನ್ನೂ ಹೊಸದರಿಂದಲೇ ಆರಂಭಿಸಿ ಕಂಪನಿ ದೊಡ್ಡದಾಗಿ ಬೆಳೆಯುವಂತೆ ಮಾಡುವ ಗುರುತರ ಜವಾಬ್ಧಾರಿ ನನ್ನ ಮೇಲಿತ್ತು.

ಹಾಗಾಗಿ ಪ್ರತಿಯೊಂದುಕ್ಕೂ ಅಳೆದೂ ತೂಗಿ ಹೆಚ್ಚು ಹಣ ಪೋಲು ಮಾಡದೇ, ಎಷ್ಟು ಬೇಕೋ ಅಷ್ಟನ್ನೇ ಖರ್ಚು ಮಾಡಿ ಅಗತ್ಯವಿದ್ದ Laptops, Desktops, Switches & Servers ಖರೀದಿಸಿ ಕಂಪನಿಯನ್ನು ಆರಂಭಿಸಿದ್ದ ದಿನಗಳು. ನಮ್ಮ ಕಂಪನಿಯ ಮಾಲಿಕರು ಭಾರತೀಯ ಹಿಂದೂಗಳು ಅದರಲ್ಲೂ ಮಾಜೀ ಸೈನ್ಯಾಧಿಕಾರಿಗಳೇ ಆಗಿದ್ದರೂ ಅಮೇರಿಕಾದಲ್ಲಿ ಮೊದಲು ಕಂಪನಿ ಆರಂಭಿಸಿದ್ದ ಕಾರಣ ಅವರು ನಮ್ಮ ಕಂಪನಿಯನ್ನು ಬಹುರಾಷ್ಟ್ರೀಯ ಕಂಪನಿಯೆಂದೇ ಕರೆಯಲು ಇಚ್ಚಿಸುತ್ತಿದ್ದಲ್ಲದೇ ಆಗ್ರಹ ಪಡಿಸುತ್ತಿದ್ದರು. ಇನ್ನು ನನ್ನದೋ ಅಪ್ಪಟ ಕನ್ನಡಿಗ ಮತ್ತು ಹಿಂದೂ ಮನಸ್ಥಿತಿಯವನಾಗಿದ್ದ ಕಾರಣ ಕೆಲಸದಲ್ಲಿಯೂ ಸಾಧ್ಯವಾದ ಕಡೆಯಲೆಲ್ಲಾ ನಮ್ಮ ತನವನ್ನು ಎತ್ತಿ ತೋರಿಸುತ್ತಿದ್ದೆ. ಹಾಗಾಗಿಯೇ ನಮ್ಮ Servers ಗಳಿಗೆ ಭೀಮಾ, ಕರ್ಣ, ಅಶ್ವಿನಿ, ಭರಣಿ, ಗಂಗಾ, ಯಮುನಾ ಸರಸ್ವತಿ ಕಾವೇರಿ, ನರ್ಮದಾ, ಮಲ್ಲಿಗೆ, ಸಂಪಿಗೆ, ಕೇದಿಗೆ, ಎಂದಿದ್ದರೆ, ಹೊಸದೊಂದು ಪ್ರಾಜೆಕ್ಟಿಗೆ ಕೊಟ್ಟಿದ್ದ ಎರಡು ಸರ್ವರ್ಗಳಿಗೆ ಲವ-ಕುಶ ಎಂದು ಹೆಸರು ಇಟ್ಟಿದ್ದೆ. ಇನ್ನು ನಮ್ಮ Conference Roomಗಳಿಗೆ ಅಜಂತಾ, ಎಲ್ಲೋರ, ಐಹೊಳೆ, ಬಾದಾಮಿ ಎಂದು ನಾಮಕರಣ ಮಾಡಲು ಸಫಲನಾಗಿ, ಇಲ್ಲಿನ ಮಣ್ಣಿನ ದೇಸೀ ಸೊಗಡನ್ನು ಹರಡಿಸಲು ಸಫಲನಾಗಿದ್ದೆ.

ನಮ್ಮ ಕಂಪನಿಗೆ ಹೊಸದಾಗಿ ಸೇರಿಕೊಳ್ಳುತ್ತಿದ್ದ ಸಹೋದ್ಯೋಗಿಗಳಿಗೂ ಈ ಹೆಸರುಗಳು ಬಲು ಅಪ್ಯಾಯಮಾನವಾಗಿದ್ದರೂ ನಮ್ಮ ಕಂಪನಿಯ ಮಾಲಿಕರಿಗೆ ಇದೇಕೋ ಅಷ್ಟಾಗಿ ಹಿಡಿಸುತ್ತಿರಲಿಲ್ಲ. ಹಾಗಾಗಿಯೇ ಆಯುಧಪೂಜೆ ಮಾಡುವುದಕ್ಕೂ ಬಿಟ್ಟಿರಲಿಲ್ಲ. ನಮ್ಮದು MNC ಕಂಪನಿ ಹಾಗಾಗಿ ಇಲ್ಲಿ ಯಾವುದೇ ಧಾರ್ಮಿಕ ಆವರಣೆಗೆ ಅವಕಾಶವಿಲ್ಲ ಹಾಗಾಗಿ ಆಯುಧ ಪೂಜೆಗೆ ಖರ್ಚು ಮಾಡಲಾಗದು ಎಂದಿದ್ದರು. ಹೇಗೂ ಆಯುಧ ಪೂಜೆ ಮಾಡಲು ಈ ಮೊದಲೇ ನಿರ್ಧರಿಸಿದ್ದರಿಂದ ನಾನೇ ಸ್ವಂತ ಖರ್ಚಿನಲ್ಲಿಯೇ ಸರಳವಾಗಿಯಾದರೂ ಅರ್ಥಪೂರ್ಣವಾಗಿ ಆಯುಧ ಪೂಜೆ ಮಾಡಿ ಮುಗಿಸಿದ್ದೆ.

ಇದಾಗಿ ಡಿಸೆಂಬರ್ ಎರಡನೇ ವಾರದಲ್ಲಿ ಬೆಳ್ಳಂಬೆಳಿಗ್ಗೆ ಕಛೇರಿ ಒಳಗೆ ಪ್ರವೇಶಿಸುತ್ತಿದ್ದಂತೆಯೇ ಝಗಮಗಿಸುವ ಬಣ್ಣ ಬಣ್ಣದ ವಿದ್ಯುತ್ ದೀಪಗಳ ಕ್ರಿಸ್ಮಸ್ ಗಿಡ ನೋಡುತ್ತಿದ್ದಂತೆ ಎದೆ ಝಲ್ ಎಂದಿದ್ದಂತೂ ಸುಳ್ಳಲ್ಲ. ನಮ್ಮ ಸ್ವಾಗತಕಾರಿಣಿ ಬಳಿ ಇದನ್ನು ಹಾಕಿದವರು ಯಾರು ಎಂದು ಕೇಳಿದೆ. ಅಕೆ ಅಷ್ಟೇ ಮುಗ್ಧವಾಗಿ ನೆನ್ನೆ ಸಂಜೆ ಅಡ್ಮಿನ್ ಡಿಪಾರ್ಟ್ಮೆಂಟಿನವರು ಇದನ್ನು ಮಾಡಿಹೋದರು ಎಂದಳು. ಛೇ!! ನಾವು ಇಲ್ಲಿನ ಸಂಪ್ರದಾಯದ ಅನುಗುಣವಾಗಿ ಆಯುಧಪೂಜೆ ಮಾಡ್ತೀವಿ ಅಂದಾಗ ಇಲ್ಲಾ ಎಂದವರು ಇದಕ್ಕೇ ಹೇಗೆ ಅನುವು ಮಾಡಿಕೊಟ್ಟಿದ್ದೀರಿ? ಎಂದು ಆಕೆಯನ್ನು ದಬಾಯಿಸಿದ್ದಕ್ಕೆ ಆಕೆ ಒಂದು ಚೂರು ಮಾತನಾಡದೇ ಸುಮ್ಮನಿದ್ದಳು. ಇದನ್ನೇ ಅಡ್ಮಿನ್ ಡಿಪಾರ್ಟ್ಮೆಂಟ್ ಬಳಿ ಹೋಗಿ ಅಲ್ಲಿಯೂ ಗಲಾಟೆ ಮಾಡಿದ್ದೆ. ಮಧ್ಯಾಹ್ನ ಊಟದ ಸಮಯದಲ್ಲಿ ನಮ್ಮ ಸಹೋದ್ಯೋಗಿಗಳ ಬಳಿ ಇದೇ ಕುರಿತಂತೆ ಚರ್ಚೆ ನಡೆಸುತ್ತಿದ್ದ ಸಮಯದಲ್ಲಿ ತಿಳಿದು ಬಂದ ವಿಷಯವೇನೆಂದರೆ ನಮ್ಮ ಸ್ವಾಗತಕಾರಣಿಯೂ ರೋಮನ್ ಕ್ಯಾಥೋಲಿಕ್ ಎಂದು ತಿಳಿಯುತಾದರೂ ಆಕೆ ತನ್ನ ಮೇಲಧಿಕಾರಿಯ ಆಜ್ಞೆಯನ್ನು ಪಾಲಿಸಿದ್ದಳು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ