ಶ್ರೀರಾಮ ನವಮಿ ಅಂದ್ರೇ ಪೂಜೆ ಜೊತೆ ಪ್ರಸಾದರೂಪದಲ್ಲಿ ಕೊಡುವ ಪಾನಕ, ಕೋಸಂಬರಿ, ನೀರು ಮಜ್ಜಿಗೆಯ ಗಮ್ಮತ್ತೇ ಬೇರೆ. ಇಡೀ ದಿನವೆಲ್ಲಾ ಇದನ್ನೇ ತಿಂದು ಕುಡಿದು ಹೊಟ್ಟೆ ತುಂಬಿಸಿಕೊಳ್ಳಬಹುದಾಗಿದೆ. ರಾಮನವಮಿ ಪಾನಕವೆಂದರೆ ನನಗೆ ಒಂದೆರಡು ರೋಚಕ ಅನುಭವಗಳು ನೆನಪಾಗುತ್ತದೆ. ಅಂತಹ ರಸಾನುಭವ ಇದೋ ನಿಮಗಾಗಿ.

ಆಗಿನ್ನೂ ಎಪ್ಪತ್ತರ ದಶಕ ನಾನಿನ್ನೂ ಸಣ್ಣ ಹುಡುಗ. ರಾಮನವಮಿಯಂದು ಅಮ್ಮಾ ಪಾನಕ, ಕೋಸಂಬರಿ, ಮಜ್ಜಿಗೆ ಎಲ್ಲಾ ಮಾಡಿದ್ದರು. ಪಾನಕಕ್ಕೆ ನಾಲ್ಕೈದು ಹನಿ ಪೈನಾಪಲ್ ಎಶೆನ್ಸ್ ಸೇರಿಸಿದ್ದ ಕಾರಣ ಪಾನಕದ ರುಚಿ ಮತ್ತಷ್ಟು ಹೆಚ್ಚಾಗಿದ್ದದ್ದು ನನಗೆ ಬಹಳ ಸೋಜಿಗವೆನಿಸಿತ್ತು. ಮನೆಗೆ ಮುತೈದೆಯರೆಲ್ಲಾ ಬಂದು ಹೋದ ನಂತರ ಅಡುಗೆ ಮನೆಗೆ ಹೋಗಿ ಮೇಲೆ ಇಟ್ಟಿದ್ದ ಸಣ್ಣದಾದ ಎಶೆನ್ಸ್ ಬಾಟೆಲನ್ನು ತೆಗೆದುಕೊಂಡು ಮುಚ್ಚಳ ತೆಗೆದು ಸೊರ್ ಎಂದು ಒಂದರ್ಧ ಮುಚ್ಚಲದಷ್ಟು ಎಶೆನ್ಸ್ ಹಾಕಿಕೊಳ್ಳುತ್ತಿದ್ದಂತೆಯೇ ಬಾಯಲೆಲ್ಲಾ ಒಂದು ರೀತಿಯ ಕಹಿ ಕಹಿ ಅನುಭವ, ಗಂಟಲು ಬೇರೆ ಉರಿಯ ತೊಡಗಿದಂತೆ ಕಿಟಾರ್ ಎಂದು ಕಿರುಚಿಕೊಂಡು ಬಾಟೆಲ್ ಬೀಳಿಸಿ ಬಾಯಿ ತೊಳೆದುಕೊಳ್ಳಲು ಬಚ್ಚಲು ಮನೆಗೆ ಓಡಿ ಹೋಗಿದ್ದೆ.

ಬಂದವರನ್ನು ವಿಚಾರಿಸಿಕೊಳ್ಳುತ್ತಿದ್ದ ಅಮ್ಮಾ ನಾನು ಕಿರಿಚಿದ್ದು ನೋಡಿ ಅಡುಗೆ ಮನೆಗೆ ಬಂದು ನೋಡಿದರೆ ಯಶೆನ್ಸ್ ಬಾಟಲ್ ಒಡೆದು ಗಾಜೆಲ್ಲಾ ಚೂರು ಚೂರಾಗಿದೆ. ಯಶೆನ್ಸ್ ಘಮಲು ಮನೆಯೆಲ್ಲಾ ಹರಡಿದೆ. ಅಷ್ಟರಲ್ಲಿ ಬಾಯಿ ಬಾಯಿ ಬಡಿದುಕೊಳ್ಳುತ್ತಾ, ಬಚ್ಚಲು ಮನೆಯಲ್ಲಿ ಬಾಯಿ ತೊಳೆದುಕೊಳ್ಳುತ್ತಿದ್ದ ನನ್ನನ್ನು ಗಮನಿಸಿ ಬೆನ್ನ ಮೇಲೆ ಗುದ್ದಿದ್ದರುಈ ಅಮ್ಮಂದಿರೇ ಹೀಗೆ ಮೊದಲು ಮಕ್ಕಳಿಗೆ ಒಂದು ಗುದ್ದು ಕೊಟ್ಟು ನಂತರವೇ ಸಂತೈಸುವುದು. ಸರಿ ಆಗಿದ್ದು ಆಗಿ ಹೋಗೋಯ್ತು ಸರಿಯಾಗಿ ಬಾಯಿ ತೊಳೆಸಿ ಅಡುಗೆ ಮನೆಗೆ ಕರೆದುಕೊಂಡು ಹೋಗಿ ಒಂದು ಸಣ್ಣ ಬಟ್ಟಲಿಗೆ ಜೇನು ತುಪ್ಪ ಹಾಕಿಕೊಟ್ಟು ನಿಧಾನವಾಗಿ ನೆಕ್ಕಲು ಹೇಳಿದರು. ಜೇನುತುಪ್ಪ ಆದಾದ ನಂತರ ಸಕ್ಕರೆ ಸಂಜೆ ಹೊತ್ತಿಗೆ ಬೆಲ್ಲವನ್ನು ಸವಿದರೂ ಇಡೀ ದಿನ ಬಾಯಿಯ ಕಹಿ ಹೋಗಿರಲಿಲ್ಲ. ಇನ್ನು ಅಡುಗೆ ಮನೆಯನ್ನು ಎಷ್ಟೇ ಒರೆಸಿದ್ದರೂ ಮೂರ್ನಾಲ್ಕು ದಿನಗಳ ಕಾಲ ಯಶೆನ್ಸಿನ ಘಮಲು ಇಡೀ ಮನೆಯನ್ನೇ ಅವರಿಸಿ ಬಂದವರೆಲ್ಲರಿಗೂ ನನ್ನ ಪ್ರತಾಪವನ್ನು ಹೇಳುವಂತಾಗಿತ್ತು.

ಮತ್ತೊಂದು ಪ್ರಸಂಗ ನಡೆದದ್ದು ತೊಂಬತ್ತರ ದಶಕದಲ್ಲಿ. ನಾನಾಗ ಕಾಲೇಜಿನಲ್ಲಿದ್ದೆ.  ರಾಮ ನವಮಿ ಹಬ್ಬಕ್ಕೆ ಸರಿಯಾಗಿ ನಮ್ಮ ಕಾಲೇಜಿನಲ್ಲಿ ಪ್ರಿಪರೇಟರಿ ಪರೀಕ್ಷೆಗಳು ನಡೆಯುತ್ತಿದ್ದು  ಬೆಳಿಗ್ಗೆ ಮನೆಯಲ್ಲಿ   ಅಮ್ಮನಿಗೆ ಪಾನಕ, ಕೂಸಂಬರಿ, ರಸಾಯನ ಮತ್ತು ಹುಳಿಯವಲಕ್ಕಿ ತಯಾರು ಮಾಡುವುದರಲ್ಲಿ  ಸಹಾಯ ಮಾಡಿ ರಾಮ ನವಮಿ ಪೂಜೆ ಆದ ಪ್ರಸಾದ ಸ್ವೀಕರಿಸಿದ ನಂತರ ಅವುಗಳನ್ನು ದೊನ್ನೆಗಳಲ್ಲಿ ಹಾಕಿ ನನ್ನ ಪಾಡಿಗೆ ನಾನು ನನ್ನ ಕೋಣೆಯಲ್ಲಿ  ಓದು ಕೊಳ್ಳುತ್ತಿದ್ದೆನಾದರೂ, ಮನೆಗೆ ಬಂದು ಹೋಗುತ್ತಿದ್ದವರ ಮಾತು ನನ್ನ ಕಿವಿಯ ಮೇಲೆ ಬೀಳುತ್ತಿತ್ತು.

ನಮ್ಮ ಮನೆಯ ಹತ್ತಿರ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದ   ದಂಪತಿಗಳು ಮತ್ತವರ ಇಬ್ಬರು ಗಂಡು ಮಕ್ಕಳು ಬಾಡಿಗೆಗೆ ಹೊಸದಾಗಿ ಬಂದಿದ್ದರು.  ಹಬ್ಬದ ದಿನ ಮೇಷ್ಟ್ರು ನಮ್ಮ ಮನೆಯ ರಾಮನವಮಿಗೆ ಬಂದಿದ್ದವರು ಹಾಗೇ ಲೋಕಾಭಿರಾಮವಾಗಿ ಮಾತಾನಾಡುತ್ತಾ ಪ್ರಸಾದ ಎಲ್ಲ ಸ್ವೀಕರಿಸಿದ ನಂತರ ಎಲ್ಲಿ ಮನೆಯಲ್ಲಿ ಯಾರೂ ಕಾಣ್ತಾ ಇಲ್ಲವಲ್ಲಾ?  ಎಂದು ಕೇಳಿದಾಗ, ಮಗ ಒಳಗೆ  ಅವನ ಕೋಣೆಯಲ್ಲಿ ಓದುಕೊಳ್ಳುತ್ತಿದ್ದಾನೆ ಎಂದರು ನಮ್ಮ ಅಮ್ಮ.  ಓ ಹೌದೇ, ಎಂದು ಹೇಳಿ ಧಡಕ್ಕನೆ ನನ್ನ ರೂಮಿನೊಳಗೆ ನುಗ್ಗಿದ ಮೇಷ್ಟ್ರು, ರಾಮ ನವಮಿಯ ಶುಭಾಶಯಗಳು.  ಏನಯ್ಯಾ, ಹಬ್ಬದ ದಿನವೂ ಓದ್ತಾ ಇದ್ದೀಯಾ. ಭೇಷ್ ಭೇಷ್. ಚೆನ್ನಾಗಿ ಓದಬೇಕು ಎಂದು ಹೇಳಿ. ಸರಿ ಬಾ ನಮ್ಮ ಮನೆಯ ರಾಮನನ್ನು ನೋಡಿ ಬರುವಿಯಂತೆ ಎಂದರು.  ಮೇಷ್ಟ್ರೇ,  ಈಗ ಓದುತ್ತಾ ಇದ್ದೀನಿ. ಸ್ವಲ್ಪ ಸಮಯದ ನಂತರ ಬರ್ತೀನಿ ಅಂತಾ ಹೇಳಿದರೂ ಕೇಳದೆ, ಬಾರಯ್ಯಾ,  ನಿನ್ನ ಬಗ್ಗೆ ನನಗೆ ಗೊತ್ತಿಲ್ಲವಾ, ಅಮೇಲೆ ನೀನು ಏನೋ ಸಬೂಬು ಹೇಳಿಕೊಂಡು ಬರುವುದೇ ಇಲ್ಲ. ಬ್ರಹ್ಮಚಾರಿಗಳಿಗೆ ಪ್ರಸಾದ ಕೊಟ್ಟರೆ ಪುಣ್ಯ ಬರುತ್ತದೆ ಎಂದು ಹೇಳಿ ನನ್ನನ್ನು ಬಲವಂತ ಮಾಡಿಕೊಂಡು ಕರೆದು ಕೊಂಡು ಹೊರಟೇ ಬಿಟ್ಟರು. ನಮ್ಮ ಅಮ್ಮನೂ ಕೂಡಾ ವಯಸ್ಸಾದವರ ಹತ್ತಿರ ಅಷ್ಟೊಂದು ಹೇಳಿಸಿಕೊಳ್ಳಬಾರದು. ಬೇಗ ಹೋಗಿ ಬಂದು ಬಿಡು ಎಂದಾಗ. ಸರಿ ಎಂದು ಹಾಕಿಕೊಂಡಿದ್ದ ನಿಕ್ಕರ್ ಮೇಲೆಯೇ ಪಂಚೆ ಉಟ್ಟುಕೊಂಡು ಮೇಷ್ಟ್ರ ಮನೆಗೆ  ಹೋದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ