ಬಾಲಿವುಡ್ ನಲ್ಲಿ ಈಕೆ ತನ್ನ ಐಡೆಂಟಿಟಿ ಪಡೆದಿದ್ದು ಹೇಗೆ?
ವೀಕ್ಷಕರಿಗೆ ಒಂದು ಬಗೆಯ ವಿಭಿನ್ನ ಚಿತ್ರಗಳಿಂದ ಹೊಸತನ ನೀಡುತ್ತಿರುವ ಜೋಯಾರಿಗೆ, ತನ್ನ ಚಿತ್ರೀಕರಣದ ಸೆಟ್ಟೇ ಮನೆಯಾಗಿ ಹೋಗಿದೆ! ಈ ಘಟ್ಟ ಆಕೆ ತಲುಪಿದ್ದು ಹೇಗೆ….?
ಜೋಯಾ ಅಖ್ತರ್ ತನ್ನ ಬಾಲ್ಯದ ಕುರಿತು ಯೋಚಿಸುವಾಗ, ತಾನು ನೋಡಿದ ಚಿತ್ರಗಳ ಬಗ್ಗೆಯೇ ಮತ್ತೆ ಮತ್ತೆ ನೆನಪಿಸಿಕೊಳ್ಳುತ್ತಾಳೆ. ಯಾವ ಮನೆಯಲ್ಲಿ ಆಕೆಯ ಬಾಲ್ಯ ಕಳೆದಿತ್ತೋ, ಅದು ಸದಾ ಒಂದು ತಾತ್ಕಾಲಿಕ ಥಿಯೇಟರ್ ಆಗಿ ಬದಲಾಗುತ್ತಿತ್ತು. ಅಲ್ಲಿ ಸದಾ ಒಂದು ಪ್ರೊಜೆಕ್ಟರ್ ಇರುತ್ತಿತ್ತು. ಎದುರಿನ ಗೋಡೆಯ ಮೇಲಿನ ಬಿಳಿ ಬಟ್ಟೆಯೇ, ಮಿನಿಪರದೆ ಆಗುತ್ತಿತ್ತು. ಪ್ರತಿ 20 ನಿಮಿಷಕ್ಕೊಮ್ಮೆ ಬ್ರೇಕ್ ಇರುತ್ತಿತ್ತು.
ಬ್ರೇಕ್ ನಲ್ಲಿ ಪ್ರೊಜೆಕ್ಟರ್ ಒದಗಿಸಿದ ಚಿತ್ರದ ರೀಲ್ ಬದಲಾಗುತ್ತಿತ್ತು. ಇಲ್ಲಿಯೇ ಜೋಯಾ ಮೊದಲ ಸಲ ಶಮ್ಮಿ ಕಪೂರ್ ನಿರ್ದೇಶಿತ `ಬ್ಯಾಂಡ್ ಬಾಜ್’ ಚಿತ್ರ ನೋಡಿದ್ದು. ಈಕೆ ಹುಟ್ಟಿದ್ದ ಕೆಲವು ವರ್ಷದ ನಂತರ ಅದು 1976ರಲ್ಲಿ ರಿಲೀಸ್ ಆಯ್ತು. ಇಂಥ ವಾತಾವರಣದಲ್ಲಿ ಹುಟ್ಟಿದ ಜೋಯಾ, ಮುಂದೆ ಅಮೆರಿಕಾದ ಕ್ಲಾಸಿಕ್ ಗ್ಯಾಂಗ್ ಸ್ಟರ್ `ದಿ ಗಾಡ್ ಫಾದರ್’ ಚಿತ್ರ ನೋಡಿದಳು.
ಬಾಲ್ಯದಲ್ಲಿ ಈಕೆ ಈ ಚಿತ್ರದ ಮಹತ್ವ ಗಮನಿಸಿರಲಿಲ್ಲ. ಬಹುಕಾಲದ ನಂತರ ಅದು ತಿಳಿಯಿತು. ಆಕೆಯ ತಂದೆ ಆ ಕುರಿತು ಅವಳಿಗೆ ಬಿಡಿಸಿ ಹೇಳಿದ್ದರು. ಈಕೆಯ ತಂದೆ ಅಂದ್ರೆ, ಹಿಂದಿ ಚಿತ್ರಗಳ ಗೀತರಚನೆಕಾರ ಜಾವೇದ್ ಅಖ್ತರ್. ಈ ಚಿತ್ರ ಭಾರತಕ್ಕೆ ಬಂದ ಮರುದಿನವೇ ಮುಂಬೈನಲ್ಲಿ ರಿಲೀಸ್ ಆಗಿತ್ತು.
ಚಿತ್ರದ ರಿಲೀಸ್ ಗಾಗಿ ಯಾವ ವ್ಯಕ್ತಿಗೆ ಅದರ ಕಾಪಿ ಸಿಕ್ಕಿತ್ತೋ, ಆತ ಅದನ್ನು ಸೀದಾ ಜಾವೇದ್ ರ ಬಳಿ ತಂದಿದ್ದ. ಆ ದಂಪತಿ ಫ್ರೆಂಡ್ಸ್ ನ್ನು ಮನೆಗೆ ಆಹ್ವಾನಿಸಿ, ಆ ಚಿತ್ರ ವೀಕ್ಷಿಸಿದರು. ಆ ರಾತ್ರಿ ಆ ಚಿತ್ರವನ್ನು 22 ಸಲ ನೋಡಿದರಂತೆ. ಕಾರಣ, ಮರುದಿನ ಅದು ಎಡಿಟ್ ಆಗಿ ನಂತರ ಥಿಯೇಟರ್ ರಿಲೀಸ್ ಆಗಲಿತ್ತು.

ಸಿನಿಮಾ ಲೋಕ
ಒಂದು ಮಗುವಿಗೆ ಈ ಚಿತ್ರವನ್ನು ಅರ್ಥೈಸಿಕೊಳ್ಳುವುದು ಕಷ್ಟ ಸಾಧ್ಯ. ಇದಾದ 5 ದಶಕಗಳ ನಂತರ, ನಾನು ಆಕೆ ಜೊತೆ ಅದೇ ಮನೆಯಲ್ಲಿ ಕುಳಿತು, ಬದಿಯಲ್ಲಿದ್ದ ಸಾಗರ ನೋಡುತ್ತಾ, ಅದರ ಬಗ್ಗೆ ಚರ್ಚಿಸಿದೆ. ಆ ನಂತರ ಅದನ್ನು ನಾವಿಬ್ಬರೂ ಹಲವು ಸಲ ನೋಡಿದ್ದೆವು.
ಜೋಯಾಳಿಗೆ ಸಿನಿಲೋಕ ಹೊಸದೇನಲ್ಲ. ಆಕೆ ಇದನ್ನು ಒಬ್ಬ ಪ್ರೇಕ್ಷಕಿ ಆಗಲ್ಲದೆ, ಪಾತ್ರವಾಗಿಯೇ ಉಳಿದು ಗಮನಿಸಿದಳು. ಈಕೆಯ ತಾಯಿ ನಟಿ, ಚಿತ್ರಕಥಾ ಲೇಖಕಿ ಹನಿ ಇರಾನಿ ಸದಾ ಬಿಝಿ. ತಂದೆ ಜಾವೇದ್ ಅಖ್ತರ್ ಖುದ್ದು ಪ್ರಸಿದ್ಧ ಕಲಾವಿದ, ಬಾಲಿವುಡ್ ನಲ್ಲಿ ಪ್ರಸಿದ್ಧರು.
ಹೆತ್ತವರು ಈಕೆಯನ್ನು ಸದಾ ಶೂಟಿಂಗ್ ಗೆ ಕರೆದೊಯ್ಯುತ್ತಿದ್ದರು. ಆಗ ನೋಡಿದ್ದೇ `ದೋಸ್ತಾನಾ’ ಚಿತ್ರ. ಸಂಗಡಿಗ ಸಲೀಂ ಖಾನ್
ಜೊತೆ ಬೆರೆತು, ಜಾವೇದ್ ಚಿತ್ರಕಥೆ ರೆಡಿ ಮಾಡಿದ್ದರು. ಈ ರೀತಿ ಸಲೀಂ ಜಾವೇದ್ ಬಾವುಲಿಡ್ ನ ಪ್ರಸಿದ್ಧ ಜೋಡಿ ಆಯ್ತು. `ದೋಸ್ತಾನಾ’ ಚಿತ್ರದಲ್ಲಿ ಜೀನತ್ ಅಮಾನ್, ಅಮಿತಾಭಾ, ಶತ್ರುಘ್ನ ಸಿನ್ಹಾ ಬಲು ಅದ್ಭುತವಾಗಿ ನಟಿಸಿದ್ದರು. ಈ ಚಿತ್ರದ `ದಿಲ್ಲಗಿ ನೇ ದೀ ಹಾ….’ ಹಾಡಿನ ಶೂಟಿಂಗ್ ಈಕೆಗೆ ಸದಾ ನೆನಪಿನಲ್ಲಿರುತ್ತಿತ್ತು. ಆಕೆ 1989ರ `ಬಸೇರಾ’ ಚಿತ್ರದ ಶೂಟಿಂಗ್ ಗೂ ಹೋಗಿದ್ದಳು. ಈಕೆಯ ತಾಯಿ ಅದರ ಸಹಾಯಕ ನಿರ್ದೇಶಕಿ.
ಈ ರೀತಿ ಈಕೆಯ ಜೀವನ ಶೂಟಿಂಗ್ ಸೆಟ್ ನಲ್ಲೇ ಕಳೆಯಿತು. “ಆ ಸೆಟ್ಟೇ ನನ್ನ ಮನೆ, ಆಟದ ಮೈದಾನ!” ಎಂದು ಜೋಯಾ ನೆನಪಿಸಿಕೊಳ್ಳುತ್ತಾಳೆ.

ಬದಲಾಗುವ ಪಾತ್ರಗಳು
ಕೆಲವೇ ದಶಕಗಳಲ್ಲಿ ಜೋಯಾ ತನ್ನ ವೀಕ್ಷಕರಿಗೆ ಬಗೆಬಗೆಯ ಚಿತ್ರ, ವೆಬ್ ಸಿರೀಸ್ ನೀಡಿದ್ದಾಳೆ. ಈಕೆಯ ಮುಖಾಂತರ ವೀಕ್ಷಕರು ಸ್ಪೇನಿನ ಹೆದ್ದಾರಿ ಪ್ರಯಾಣ, ಭೂಮಧ್ಯ ಸಾಗರದ ಕ್ರೂಜ್ ಶಿಪ್, ಮುಂಬೈನ ಜೋಪಡಿ, ದೆಹಲಿಯ ಭವ್ಯ ಬಂಗಲೆಯ ಕಥೆಗಳನ್ನು ನೋಡಿದ್ದಾರೆ. ಆಕೆ ಮಹಾನ್ ಕಲಾವಿದರೊಂದಿಗೆ ದುಡಿದಿದ್ದಾಳೆ. ಈಕೆಯ ಕಥೆಗಳು ಅಗಣಿತ ಪಾತ್ರಗಳ ಸಮಸ್ಯೆಗಳಿಂದ ತುಂಬಿ ಹೋಗಿವೆ. ಈಕೆಯ ಅಭಿಮಾನಿಗಳು `ಜಿಂದಗಿ ನ ಮಿಲೇಗಿ ದೋಬಾರಾ 2011, ದಿಲ್ ಧಡಕ್ನೆ ದೋಬಾರ 2015, ಗಲೀ ಬಾಯ್ ನೋಡಿ ಸಂಭ್ರಮಿಸಿದ್ದರೆ, ವಿಮರ್ಶಕರು ದಿ ಆರ್ಚೀವ್ ನೋಡಿ ಟೀಕಿಸಿದ್ದಾರೆ ಕೂಡ.
ಜೋಯಾಳ ಸ್ವಂತ ಪ್ರೊಡಕ್ಷನ್
ಕಂಪನಿ `ಟೈಗರ್ ಬೇಬಿ ಫಿಲಮ್ಸ್’ನಲ್ಲಿ ಆಕೆಯ ಪಾತ್ರ ಬದಲಾಗುತ್ತಿರುತ್ತದೆ. ಇದರಲ್ಲಿ ಈಕೆ ಲೇಖಕಿ, ನಿರ್ಮಾಪಕಿ, ನಿರ್ದೇಶಕಿಯಾಗಿ ವಿಭಿನ್ನ ಕೆಲಸ ನಿರ್ವಹಿಸಿದ್ದಾಳೆ. ತನ್ನ ಆಪ್ತ ಗೆಳತಿ ರೀಮಾ ಕಾಗತಿ ಜೊತೆ ಕೂಡಿ ಈಕೆ ಕಂಪನಿ ನಿರ್ವಹಿಸಿದಳು. ಚಿತ್ರದ ಸೆಟ್ ಏನೋ ಆಕೆಯ ಮನೆಯೇ, ಆದರೆ ಅದನ್ನೇ ಆಕೆ ತನ್ನ ಕರ್ಮಭೂಮಿ ಆಗಿಸಿಕೊಂಡಿದ್ದಳು.
ಎಲ್ಲರಿಗಿಂತ ವಿಭಿನ್ನ ತಾಯಿ
ತನ್ನ ತಾಯಿಯ ಕುರಿತಾಗಿ ಜೋಯಾ, “1950ರಲ್ಲಿ ಇದೇ ಹನೀ ಇರಾನಿ 3 ವರ್ಷದವಳು. ಆಗಿನಿಂದಲೇ ಆಕೆಗೆ ಬಾಲಿವುಡ್ ಪ್ರೇರಣೆ ಆಗಿತ್ತು. ಮುಂದೆ ಆಕೆ ಕ್ರಮೇಣ 70ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದಳು. 1972ರ `ಸೀತಾ ಔರ್ ಗೀತಾ’ ಚಿತ್ರದ ಸೆಟ್ ನಲ್ಲಿ ಈಕೆ ಜಾವೇದ್ ರನ್ನು ಭೇಟಿಯಾದಳು. ತಕ್ಷಣ ಮದುವೆಯೂ ಆಯ್ತು. ನಂತರ ಆಕೆ ಸಿನಿಮಾಗಳಿಂದ ವಿಮುಕ್ತಳಾದಳು. 1985ರಲ್ಲಿ ಇವರಿಬ್ಬರ ವಿಚ್ಛೇದನ ಆಗಿತ್ತು.”
ಈಕೆ ತನ್ನ ತಾಯಿಯನ್ನು `ಬಲು ಸ್ವತಂತ್ರ ಆತ್ಮ’ ಎಂದೇ ಬಣ್ಣಿಸುತ್ತಾಳೆ.
“ನನ್ನಮ್ಮನ ಮದುವೆ ಬಲು ಬೇಗ ಆಗಿಹೋಗಿತ್ತು. ಮಕ್ಕಳೂ ಬೇಗ ಬೇಗ ಆದ, ಹಾಗೆಯೇ ಡಿಯೋರ್ಸ್ ಕೂಡ! ನಾನು, ನನ್ನ ಅಣ್ಣ ಫರ್ಹಾನ್ ಅಖ್ತರ್ (ನಟ, ನಿರ್ಮಾಪಕ) ಅಮ್ಮನ ಜೊತೆಯೇ ಇದ್ದುಬಿಟ್ಟೆ, ಅಪ್ಪ ಬೇರೆ ಆದರು. ನಾನು 10 ವರ್ಷದವಳಿದ್ದಾಗ ಅಮ್ಮನಿಗೆ ಇನ್ನೂ 28! ಆಕೆ ನನಗೆ ಅಮ್ಮ ಅಲ್ಲ, ಅಕ್ಕನಾಗಿಯೇ ಉಳಿದುಬಿಟ್ಟಳು.
“ಆಕೆ ನಮ್ಮಿಬ್ಬರನ್ನೂ ಭೇದಭಾವ ಎಣಿಸದೆ ಒಂದೇ ರೀತಿ ಸಾಕಿದಳು. ಮಾನವೀಯತೆ ಎಲ್ಲಕ್ಕಿಂತ ಮಿಗಿಲು ಎಂದು ಕಲಿಸಿದಳು. ಕೆಲಸದ ಸಲುವಾಗಿ ಬಹಳ ಕಷ್ಟಪಡಬೇಕು ಎಂದು ತಿದ್ದಿದಳು. ನಾವು ತಪ್ಪು ಮಾಡಿದಾಗ ಬಹಳ ಖಂಡಿಸುತ್ತಿದ್ದಳು.
“ಬಾಲಕಲಾವಿದೆಯಾಗಿ ನನ್ನ ತಾಯಿ ಕೆಲಸ ಶುರು ಮಾಡಿ, ಬಾಲಿವುಡ್ ನ್ನೇ ಕೆರಿಯರ್ ಆಗಿಸಿಕೊಂಡಿದ್ದರಿಂದ, ಆಕೆಗೆ ಕ್ರಮಬದ್ಧ ಶಿಕ್ಷಣ ದೊರಕಲೇ ಇಲ್ಲ. ಮಕ್ಕಳು ದೊಡ್ಡವರಾಗುತ್ತಿದ್ದಂತೆ, ಪುಣೆಯಲ್ಲಿ ಸರ್ಕಾರ ನಡೆಸುತ್ತಿದ್ದ ಫಿಲ್ಮ್ ಟಿವಿ ಸಂಸ್ಥೆಯ ಕೋರ್ಸಿಗೆ ಸೇರಿದಳು. ಆಗ ನಾವಿಬ್ಬರೂ ಅವಳೊಂದಿಗೆ ಹೋಗುತ್ತಿದ್ದೆ. ಸಿನಿಮಾ ಅಂದ್ರೆ ಅದು ಅಮ್ಮನ ಪ್ರಾಣ ಎಂದು ಅರಿತೆ. ಅಲ್ಲಿ ನಾವು ಬಹಳ ಹೊತ್ತು ಕಾಲ ಕಳೆಯುತ್ತಿದ್ದೆ. ಅಂತಾರಾಷ್ಟ್ರೀಯ ಮಟ್ಟದ ಹಲವು ಚಿತ್ರ ಗಮನಿಸಿದೆ.”
ಆ ಕೋರ್ಸ್ ಮುಗಿಸಿಕೊಂಡು ಹನೀ ಇರಾನಿ ಬಾಲಿವುಡ್ ಗೆ ಹಿಂದಿರುಗಿದರು. ಈ ಸಲ ನಟಿಯಾಗಿ ಅಲ್ಲ, ಚಿತ್ರಕಥೆ ಸಿದ್ಧಪಡಿಸುವ ಲೇಖಕಿಯಾಗಿ!
ಈ ಹೊಸ ರೂಪದಲ್ಲಿ ಆಕೆ ಲಮ್ಹೆ 1991, ಡರ್, ಕ್ಯಾ ಕೆಹ್ನಾ 2000, ಕಹೋನಾ ಪ್ಯಾರ್ ಹೈ 2000, ಕೋಯಿ ಮಿಲ್ ಗಯಾ 2003, ಕೃಷ್ ಇತ್ಯಾದಿ ತೆರೆಗಿತ್ತರು.
ಸಿನಿ ವಾತಾವರಣ ಜೋಯಾಳ ಮನೆಯ ಇಡೀ ವಾತಾವರಣ ಸಿನಿಮಯವಾಗಿತ್ತು. ಸದಾ ಸರ್ದಾ ಸಿನಿಮಾ ಕುರಿತು ಚರ್ಚೆ. ಯಾವುದೋ ಚಿತ್ರಗಳ ಸಣ್ಣಪುಟ್ಟ ಪಾತ್ರಗಳ ಬಗ್ಗೆಯೂ ಮಾತನಾಡುತ್ತಿದ್ದರು. ಆ ಸ್ಕ್ರಿಪ್ಟ್ ಇನ್ನೂ ಚೆನ್ನಾಗಿರಬಹುದಿತ್ತು. ನಟನೆ ಮಾಗಬೇಕಿತ್ತು ಎಂದೆಲ್ಲ ವಾದವಿವಾದ.
ಬಾಲ್ಯದಿಂದಲೇ ಜೋಯಾ ತನ್ನ ತಾಯಿ ತಂದೆ ಸದಾ ಬರೆಯುತ್ತಾ ಚಿತ್ರಕಥೆ ಬಗ್ಗೆ ಚರ್ಚಿಸುವುದನ್ನು ಗಮನಿಸುತ್ತಿದ್ದಳು. ಅದನ್ನೇ ತನ್ನ ಶಕ್ತಿಯಾಗಿಸಿಕೊಂಡು, “ನಮ್ಮ ಮನೆಯಲ್ಲಿ ಈ ರೀತಿ ಸ್ಕ್ರಿಪ್ಟ್ ಬರವಣಿಗೆಯ ಬಗ್ಗೆಯೇ ಸದಾ ಚರ್ಚೆ ಹಾಡು, ದೃಶ್ಯ…. ಇತ್ಯಾದಿ. ಅದು ಪ್ರೊಫೆಶನ್ ವರ್ಕ್ ಅಲ್ಲ, ಮನೆಯ ಆಗುಹೋಗುವ ಎಂಬಂತೆ ಆಗಿತ್ತು. ಹೀಗಾಗಿ ನಾನು, ನಮ್ಮಣ್ಣ ಇಂಥ ಸ್ಕ್ರೀನ್ ಪ್ಲೇನಲ್ಲಿ ಚೆನ್ನಾಗಿಯೇ ಪಳಗಿದೆ.”
ಆಕೆಯ ತಲೆಯಲ್ಲಿದ್ದ ವಿಚಾರ, ತಾನಾಗಿ ಒಂದು ಸಿನಿಮಾ ಮಾಡುವುದು. “ಆಗೆಲ್ಲ ಬಾಲಿವುಡ್ ಇಷ್ಟು ಪವರ್ ಪುಲ್ ಇಂಡಸ್ಟ್ರಿ ಆಗಿರಲಿಲ್ಲ. ಆಗಿನ ಕಾಲದವರು ಹಿಂದಿ ಸಿನಿಮಾಗಳಲ್ಲಿ ಇಷ್ಟೆಲ್ಲ ಆಸಕ್ತಿ ತೋರಿಸುತ್ತಿರಲಿಲ್ಲ. ಇಲ್ಲಿ ಕೆಲಸ ಮಾಡುವರೆಂದರೆ ಸರ್ಕಸ್ ಮಂದಿ ಎಂದಾಗಿತ್ತು. ಈಗ ಅದರ ಕದರ್ರೇ ಬೇರೆ!”

ಕಣ್ತೆರೆಸಿದ ಅನುಭವ
ಜೋಯಾ ಸ್ನಾತಕ ಪದವಿ ಮುಗಿಸಿ, ಬಾಲಿವುಡ್ ಬದಲು ಜಾಹೀರಾತಿನ ಪ್ರಪಂಚಕ್ಕಿಳಿದಳು. ಈ ಮೂಲಕ ಒಂದು ಮಹತ್ತರ ಬದಲಾವಣೆ ಆಯ್ತು. ಆಕೆ ಮೀರಾ ನಾಯರ್ ರ `ಸಾಂ ಬಾಂಬೆ’ 1988 ಚಿತ್ರ ನೋಡಿದರು. ಅದರಲ್ಲಿ ಮುಂಬೈ ಸ್ಲಂನ ಒಬ್ಬ ಕಿಶೋರನ ಕಥೆ ಇದೆ. ಇದಕ್ಕೆ ಮೊದಲೇ ಆಕೆ ಮೃಣಾಲ್ ಸೇನ್, ಸತ್ಯಜಿತ್ ರೇ, ಶ್ಯಾಂ ಬೆನೆಗಲ್ ರಂಥ ಘಟಾನುಘಟಿ ನಿರ್ದೇಶಕರ ಆರ್ಟ್ ಫಿಲ್ಮ್ ಗಮನಿಸಿದ್ದಳು.
“ಅಂಥ ವಾಸ್ತವತೆಯ ಚಿತ್ರಣ ತೋರಿಸುವುದು ಸಹ ಕಷ್ಟವೇ…. `ಸಲಾಂ ಬಾಂಬೆ’ಯಲ್ಲಿ ಅದೆಲ್ಲ ಇತ್ತು. ನನಗೂ ಇಂಥದ್ದೇ ಹೊಸ ಅಲೆಯ ಚಿತ್ರ ಮಾಡಬೇಕಿತ್ತು. ಇದಂತೂ ನನ್ನ ಕಣ್ಣು ತೆರೆಸಿತು. ಇಂಥ ವಾಸ್ತವತೆಯ ಚಿತ್ರಣವನ್ನೇ ತೋರಿಸ ಬಯಸಿದೆ.”
ಆ ಚಿತ್ರ ಬಂದ ಎಷ್ಟೋ ವರ್ಷಗಳ ನಂತರ, ಈಕೆಗೆ ಮೀರಾರ ಜೊತೆ `ಕಾಮಸೂತ್ರ’ ಚಿತ್ರಕ್ಕೆ ಸಹಾಯಕ ನಿರ್ದೇಶಕಿಯಾಗಿ ದುಡಿಯುವ ಅವಕಾಶ ಸಿಕ್ಕಿತು. ಹೀಗೆ ಈಕೆಯ ಕನಸು ನನಸಾಗಿತ್ತು.
ಕೆಲವರ ಕಡು ಕೋಪ
ಇಂಥ ಹೊಸ ಅಲೆ ಬಿಟ್ಟು ಕಮರ್ಷಿಯಲ್ ಚಿತ್ರಗಳ ಸೆಟ್ ನಲ್ಲಿ ದುಡಿಯುವುದು ಆಕೆಗೆ ಹೊಸದೇನಲ್ಲ. ಕೆಲಸ ಮಾಡುವ ಹೊಸ ವಿಧಾನವನ್ನು ಇದರಿಂದ ಅರಿತಳು. `ಕಾಮಸೂತ್ರ’ ಅಮೆರಿಕನ್ ಬೇಸ್ಡ್ ಚಿತ್ರ. ಇದರ 70% ಪಾತ್ರಧಾರಿಗಳೂ ಅಮೆರಿಕನ್ನರೇ. ಇಷ್ಟಲ್ಲದೆ ಅಮೆರಿಕಾ ಭಾರತೀಯ ಚಿತ್ರಗಳಲ್ಲಿ ಬಹಳಷ್ಟು ಟೆಕ್ನಿಕ್ ವ್ಯತ್ಯಾಸಗಳಿದ್ದವು. ಸಿಂಕ್ರನೈಸ್ಡ್ ಸೌಂಡ್ ಬಳಸುವ ವಿಧಾನ, ಅಂದ್ರೆ ಶೂಟಿಂಗ್ ಸಮಯದಲ್ಲೇ ಆಡಿಯೋ, ರೆಕಾರ್ಡಿಂಗ್….. ಇತ್ಯಾದಿ. ಆಗೆಲ್ಲ ಇಂಥ ಟೆಕ್ನಿಕ್ಸ್ ಇಂಪ್ರೂವ್ ಆಗಿರಲಿಲ್ಲ. ಹೀಗಾಗಿ ಈ ಚಿತ್ರದಿಂದ ಆಕೆ ಬಹಳಷ್ಟು ಕಲಿತಳು.
1997ರಲ್ಲಿ ವಿದೇಶದಲ್ಲಿ ಬಿಡುಗಡೆಯಾದ ಈ ಚಿತ್ರದಲ್ಲಿ ಬಾಲ್ಯದಿಂದ ಗೆಳತಿಯರಾಗಿದ್ದ ಇಬ್ಬರು ಹೆಂಗಸರ ಲೆಸ್ಬಿಯನ್ ಕಥಾಹಂದರವಿತ್ತು. ವಿದೇಶೀ ಆಗಿದ್ದರೂ, ಅಲ್ಲಿನ ಮಡಿವಂತರು ಇದನ್ನು ಬಹಳ ಖಂಡಿಸಿದರು. ಭಾರತದಲ್ಲಂತೂ ಇದು ರಿಲೀಸ್ ಆಗು ಪ್ರಮೇಯವೇ ಇರಲಿಲ್ಲ. ನಂತರ ನಮ್ಮ ಸೆನ್ಸಾರ್ ಮಂಡಳಿ ಧಾರಾಳ ಕತ್ತರಿ ಆಡಿಸಿ, ಸರ್ಟಿಫಿಕೇಟ್ ನೀಡಿ, ರಿಲೀಸ್ ಗೆ ಒಪ್ಪಿತು.
ಇದರರ್ಥ ಭಾರತದಲ್ಲಿ ಇದಿನ್ನೂ ಥಿಯೇಟರ್ ರಲ್ಲಿ ಕೇವಲ ವಯಸ್ಕರು ಮಾತ್ರ ನೋಡಬೇಕು ಅಂತ. ಇದರಲ್ಲಿ ಆಕೆಯ ಕೆಲಸ ಬಹಳ ಸಹಜವಾಗಿತ್ತು.
“ನಾನು ಆಗ ತಾಯಿ ತಂದೆಗೆ ಹೇಳಿದ್ದೆಂದರೆ, 6 ತಿಂಗಳ ಕಾಲ ನಾನು ಖಜುರಾಹೋ ಟೆಂಪಲ್ಸ್ ನೋಡಿ ಬರುತ್ತೇನೆ. ಅಲ್ಲೇ ಈ ಚಿತ್ರದ ಶೂಟಿಂಗ್ ಇದೆ. ಅವರದ್ದೇನೂ ಆಕ್ಷೇಪಣೆ ಇರಲಿಲ್ಲ…..”
`ಸಲಾಂ ಬಾಂಬೆ’ ನೋಡಿದ ನಂತರ ಎಷ್ಟೋ ಪ್ರೊಫೆಶನ್ ಬಾಲಿವುಡ್ ಮಂದಿ ಬದಲಾದರು, ಜೋಯಾ ಸಹ ಹಾಗೇ. ಮತ್ತೊಬ್ಬ ಹೆಣ್ಣು ಇದರಿಂದ ಪ್ರಭಾವಿತಳಾಗಿ ಜೋಯಾ ತರಹ ಕೆಲಸ ಮಾಡಬಯಸಿದಳು. ಆಗ ಇನ್ನೂ ಇಬ್ಬರ ಪರಿಚಯ ಆಗಿರಲಿಲ್ಲ. ಇವಳಂತೆಯೇ ಕೆಲಸ ಮಾಡಬಯಸಿದ ಆಕೆಯೇ ರೀಮಾ ಕಾಗತಿ.

ಮೊದಲ ಭೇಟಿ ಸ್ನೇಹ
ಇವರಿಬ್ಬರ ಮೊದಲ ಭೇಟಿ ಕೈಜಾದ್ ಗುಸ್ತಾದ್ ರ `ಬಾಂಬೆ ಬಾಯ್ಸ್’ (1988) ನಿಂದ ಶುರುವಾಯ್ತು. ಇಬ್ಬರೂ ಅದಕ್ಕೆ ಸಹ ನಿರ್ದೇಶಕಿಯರಾಗಿದ್ದರು. ಆಗಿನಿಂದಲೇ ಇಬ್ಬರೂ ಉತ್ತಮ ಗೆಳತಿಯರಾದರು. ಮುಂದೆ ಹಲವು ವರ್ಷ ಇಬ್ಬರೂ ಸಹಾಯಕ ನಿರ್ದೇಶಕಿಯರಾಗಿ ದೊಡ್ಡ ನಿರ್ದೇಶಕರ ಜೊತೆ ಕೆಲಸ ಮಾಡಿದರು. ಕೇವುಲ ತರಬೇತಿ ಪಡೆಯುವುದು ಮಾತ್ರವಲ್ಲದೆ, ಮುಂದೆ ಸ್ವತಂತ್ರ ನಿರ್ದೇಶಕರಾಗಲು ಬೇಕಾದ ವಿಧಿವಿಧಾನಗಳನ್ನು ಆಗಿನಿಂದಲೇ ಕಲಿತರು. ಆಗಿನ ಕಾಲಕ್ಕೆ ಇದು ಹೊಸ ವಿಚಾರ. ಹೀಗೆ ಇಬ್ಬರೂ ಸಹಕಾರ ನೀಡುತ್ತಾ, ಪಾರ್ಟ್ ನರ್ಸ್ ತರಹವೇ ಆಗಿಹೋದರು.
ರೀಮಾ ಕಾಗತಿ ತನ್ನ ಮೊದಲ ಚಿತ್ರ ಮಾಡಲು 2007ರವರೆಗೂ ಕಾಯಬೇಕಾಯ್ತು. ಆಕೆ `ಹನೀಮೂನ್ ಟ್ರಾವೆಲ್ಸ್ ಲಿಮಿಟೆಡ್’ ಎಂಬ ಫೀಚರ್ ಫಿಲಮ್ಸ್ ನಿರ್ಮಿಸಿ, ನಿರ್ದೇಶಿಸಿದರು. ಈ ಕಾಮೆಡಿ ಡ್ರಾಮಾ, ಹೊಸದಾಗಿ ಮದುವೆಯಾಗಿದ್ದ 6 ಜೋಡಿ ಕುರಿತಾಗಿತ್ತು. ಇವರು ಮದುವೆ ನಂತರ ಮುಂಬೈನಿಂದ ಗೋವಾಕ್ಕೆ ಹೊರಟಿದ್ದರು. ಈ ಚಿತ್ರಕ್ಕೆ ಜೋಯಾ ಕೋಪ್ರೊಡ್ಯೂಸರ್ ಆದರು. ಫರ್ಹಾನ್ ಈ ಚಿತ್ರದ ನಿರ್ಮಾಪಕರಲ್ಲಿ ಒಬ್ಬರು. ರೀಮಾ ನಿರ್ದೇಶಕಿ ಆದ 2 ವರ್ಷಗಳ ನಂತರ, ಜೋಯಾ `ಲಕ್ ಬೈ ಚಾನ್ಸ್’ ಚಿತ್ರದ ಮೂಲಕ ಮೊದಲ ಸಲ ಸ್ವತಂತ್ರ ನಿರ್ದೇಶನಕ್ಕಿಳಿದರು.
ಈ ಚಿತ್ರ ತಯರಾಗುವುದೇ ಕಷ್ಟವಾಗಿತ್ತು. ಏಕೆಂದರೆ ಚಿತ್ರದ ನಾಯಕ `ವಿಕ್ರಮ’ನ ಪಾತ್ರಕ್ಕಾಗಿ ಅಂದಿನ ಕಾಲದ ಸುಮಾರು 7-8 ಮಂದಿ ಖ್ಯಾತ ನಾಯಕರು ಇದನ್ನು ತಿರಸ್ಕರಿಸಿಬಿಟ್ಟರು. ಕೊನೆಗೆ ಫರ್ಹಾನ್ ತಾನೇ ಈ ಚಿತ್ರದ ನಾಯಕನಾದ. ಹೀಗೆ ಅಂತೂ ಈ ಚಿತ್ರ ಶುರುವಾಯ್ತು. ಚಿತ್ರದ ಕಥೆ, ಒಬ್ಬ ಮಹತ್ವಾಕಾಂಕ್ಷಿ ನಟ, ಬಾಲಿವುಡ್ ನಲ್ಲಿ ಯಶಸ್ವಿ ಆಗಿದ್ದನು, ಆ ಹಂತೀರಲು ಸತತ ನೈತಿಕ ಪತನ ಹೊಂದುತ್ತಿರುತ್ತಾನೆ.

ಲಿಂಗಭೇದ
ನಾವು ನಮ್ಮವರು ಜೋಯಾರ ಅಚ್ಚುಮೆಚ್ಚಿನ ಚಿತ್ರಗಳಲ್ಲಿ 1975ರ `ದೀವಾರ್’ ಸಹ ಒಂದು. ಇದರಲ್ಲಿ ಅಣ್ಣ ಕಳ್ಳನಾದರೆ ತಮ್ಮ ಪೊಲೀಸ್. ಈ ಚಿತ್ರದ ಕುರಿತಾಗಿ ಆಕೆ, ಇಲ್ಲಿ ಕಳ್ಳನ ಪಾತ್ರ ನನ್ನನ್ನು ಬಹಳ ಆಕರ್ಷಿಸಿತ್ತು ಅಂತಾರೆ.
ಅಂಥ ಒಂದು ನೆಗೆಟಿವ್ ಪಾತ್ರ ತನಗೆ `ಲಕ್ ಬೈ ಚಾನ್ಸ್’ ಚಿತ್ರ ಮಾಡಲು ಪ್ರೇರೇಪಿಸಿತು. ಬಾಲಿವುಡ್ ಕುರಿತಾಗಿ, ಅದೇ ಚಿತ್ರರಂಗದ `ಲಕ್ ಬೈ ಚಾನ್ಸ್’ ಚಿತ್ರ ಅಲ್ಲಿನ ಅನಿಯಮಿತ ಚಿತ್ರ ನಿರ್ಮಾಣ, ಲಿಂಗಭೇದ, ನಾವು ನಮ್ಮವರಿಗೆ ಮಾತ್ರ ಅವಕಾಶ…. ಇತ್ಯಾದಿ ಕುರಿತು ಟಿಪ್ಪಣಿಗಳಿವೆ. ಈ ಕಥೆಯನ್ನು ಜೋಯಾ ಹಾಗೂ ಸಂವಾದ್ ಜಾವೇದ್ ಅಖ್ತರ್ ಒಟ್ಟಿಗೆ ಬರೆದಿದ್ದರು. ಇದು ಚಿತ್ರರಂಗದ ಅನಿಶ್ಚಿತತೆಗಳ ಕುರಿತಾಗಿ ಹೇಳುತ್ತದೆ.
“ಇಂದು ನಾನೇನಾದರೂ `ಲಕ್ ಬೈ ಚಾನ್ಸ್’ ಮಾಡುತ್ತೇನೆಂದರೆ, ಬಲು ಸುಲಭವಾಗಿ ಮಾಡಬಹುದು. ಈಗ ಕಾಲ ಹಿಂದಿನಂತಿಲ್ಲ. ಚಿತ್ರಗಳ ಕುರಿತಾಗಿ ಜನರ ವಿಚಾರಧಾರೆ ಬದಲಾಗಿದೆ. ಆ ಕಾಲದಲ್ಲಿ ಇದು ಕ್ಲಾಸಿಕ್ ಆಗಿತ್ತು. ನಾಯಕ ಖಳನಾಯಕರ ಸುತ್ತಲೇ ಕಥೆ ಕೇಂದ್ರಿಕೃತವಾಗಿತ್ತು!” ಎನ್ನುತ್ತಾರೆ ಜೋಯಾ.
2012ರಲ್ಲಿ ಬಂದಿದ್ದ `ತಲಾಶ್’ ಚಿತ್ರದ ಕುರಿತಾಗಿ ಜೋಯಾ ರೀಮಾ ಸಹ ಲೇಖಕರಾಗಿ, ತಮ್ಮ ಮೊದಲ ಸಸ್ಪೆನ್ಸ್ ಡ್ರಾಮಾ ತಯಾರಿಸಿದರು. ಇದರ ನಿರ್ದೇಶಕಿ ರೀಮಾ. ಇದೂ ಸಹ ಅಪ್ಪಟ ಮುಂಬೈ ನಗರಿ ಕುರಿತಾದುದು. ವೈಯಕ್ತಿಕ ಹಾನಿಯಿಂದ ಸಂತ್ರಸ್ತ ಒಬ್ಬ ಪೊಲೀಸ್ ಅಧಿಕಾರಿ, ಒಬ್ಬ ಉಚ್ಚ ನಟನ ಸಾವಿನ ಕುರಿತು ಇನ್ ವೆಸ್ಟಿಗೇಶನ್ ನಡೆಸುತ್ತಾನೆ.
ಈ ಜೋಡಿಯ ಮೊದಲ ಹಿಟ್ ಚಿತ್ರ ಅಂದ್ರೆ 2011ರಲ್ಲಿ ರಿಲೀಸ್ ಆದ `ಜಿಂದಗಿ ನ ಮಿಲೇಗೇ ದೋಬಾರಾ.’ ಇದರ ನಿರ್ದೇಶಕಿ ಜೋಯಾ. ಕಥೆಯನ್ನು ಇಬ್ಬರೂ ಸೇರಿಯೇ ಬರೆದರು. ಇದು ಮೂವರು ಗೆಳೆಯರ ಕಥೆ. ದುರ್ಬಲಗೊಂಡ ತಮ್ಮ ಗೆಳೆತನವನ್ನು ಸರಿಪಡಿಸಲು ಎಲ್ಲರೂ ಸ್ಪೇನ್ ಪ್ರವಾಸಕ್ಕೆ ಹೊರಡುತ್ತಾರೆ.
ಅಲ್ಲಿ ಒಬ್ಬನಿಗೆ ಲವ್ ಆಗಿ, ಬ್ರೇಕ್ ಅಪ್ ಸಹ ಆಗಿಹೋಗುತ್ತದೆ. 2ನೇ ಗೆಳೆಯ ತನ್ನ ತಾಯಿ ತಂದೆ ಪಡೆಯುತ್ತಾನೆ, ನಂತರ ಕಳೆದುಕೊಳ್ಳುತ್ತಾನೆ. ಗೂಳಿಗಳೆಂದರೆ ಹೆದವರು 3ನೆಯ ಅಲ್ಲಿನ `ಬುಲ್ ಫೈಟ್’ನಲ್ಲಿ ಭಾಗವಹಿಸುತ್ತಾನೆ. ಈ ರೀತಿ ಅವರು ಕಾಮಿಡಿಯಲ್ಲೇ ತಮ್ಮ ಗೆಳೆತನ ಗಟ್ಟಿಗೊಳಿಸುತ್ತಾರೆ.

ಹಿಟ್ ಆದ ಚಿತ್ರಗಳು
ಈ ಚಿತ್ರ ಬಲು ಹಿಟ್ ಆಯ್ತು. ವೀಕ್ಷಕರು ಇದರ 2ನೇ ಭಾಗಕ್ಕಾಗಿ ಕಾದರು. ಆದರೆ ದಶಕ ಕಳೆದರೂ ಜೋಯಾಗೆ ಆ ಆಸೆ ಬರಲೇ ಇಲ್ಲ.
“ಕೇವಲ ಹಣಕ್ಕಾಗಿ ಹಾಗೆಲ್ಲ ಕೆಲಸ ಮಾಡಲಾರೆ. ಅದಕ್ಕೆ ಲಾಯಕ್ ಆದ ಕಥೆ ಇಲ್ಲ ಅಂದ ಮೇಲೆ ಅಂಥ ಪ್ರಯತ್ನವೇಕೆ?”
ಈಕೆಯ ಮುಂದಿನ ಚಿತ್ರ `ದಿಲ್ ಧಡಕ್ನೆ ದೋ.’ (2015) ರೀಮಾ ಫರ್ಹಾನ್ ಜೊತೆ ಬೆರೆತು ಈ ಕಥೆ ಬರೆದಿದ್ದರು. ಚಿತ್ರದ ಕಥೆ ಶ್ರೀಮಂತ ಮನೆತನದವರ ಕುಂದುಕೊರತೆಗಳದ್ದು. ಒಂದು ಹಡಗಿನಲ್ಲಿ ನಡೆಯುವ ಫೆಸ್ಟಿವ್ ಸಮಾರಂಭದ ಮೂಲಕ ಇದನ್ನು ತೋರಿಸಲಾಗಿದೆ. ಈ ಚಿತ್ರ ಬಾಕ್ಸ್ ಆಫೀಸ್ ನಲ್ಲಿ ಹಿಟ್ ಆಯ್ತು.
ಆ ಸಂದರ್ಭದಲ್ಲಿ ಈಕೆ ರೀಮಾ ಜೊತೆ `ಟೈಗರ್ ಬೇಬಿ ಫಿಲಮ್ಸ್’ ಎಂಬ ಪ್ರೊಡಕ್ಷನ್ ಕಂಪನಿ ಆರಂಭಿಸಿದರು. “ಮೊದಲಿನಿಂದಲೂ ಈ ಕುರಿತು ನಮಗೆ ಯೋಜನೆ ಇರಲಿಲ್ಲ. ಮೊದಲು ನಾವಿಬ್ಬರೂ ಒಟ್ಟೊಟ್ಟಿಗೆ ಬರೆಯಲು ಆರಂಭಿಸಿದೆವು. ಅದು ಚೆನ್ನಾಗಿ ನಡೆಯಿತು. ಅದನ್ನೇ ಮುಂದುವರಿಸಿದೆವು. ಕಂಪನಿಯ ಜವಾಬ್ದಾರಿ ಮಾತ್ರವಲ್ಲದೆ ಬರವಣಿಗೆಯ ಜವಾಬ್ದಾರಿಯೂ ಇತ್ತು.”

ಹೆಚ್ಚಿನ ಮಟ್ಟದ ಪ್ರಶಂಸೆ
ಈ ಕಂಪನಿಯ ಮೊದಲ ಚಿತ್ರವೇ ಇವರು ನಿರ್ದೇಶಿದ `ಗಲೀ ಬಾಯ್’ (2019). ಇಲ್ಲಿ ಮುಂಬೈನ ಸ್ಲಂ ಏರಿಯಾ ಧಾರಾವಿಯ ಒಬ್ಬ ಬಡ ಮುಸ್ಲಿಂ ರ್ಯಾಪರ್ ನ ಯಶಸ್ಸಿನ ಕಥೆ ಇದೆ. ಚಿತ್ರದ ಪಾತ್ರಗಳು ತಮ್ಮ ಕೌಟುಂಬಿಕ ಸಂಘರ್ಷ, ಆರ್ಥಿಕ ಸಂಕಷ್ಟದಿಂದ ಕುಗ್ಗುತ್ತಾ, ತಮ್ಮ ಕಲಾತ್ಮಕ ದಾಹ ತೀರಿಸಿಕೊಳ್ಳಲು ಹೆಣಗುತ್ತವೆ. ಈ ಚಿತ್ರ ತನ್ನ ಕಥೆ, ಅದನ್ನು ಹೇಳುವ ಶೈಲಿಯಿಂದ ಗಮನ ಸೆಳೆಯುತ್ತದೆ. ಆದರೆ ಈ ಚಿತ್ರದ ಸಂಗೀತದಲ್ಲಿ ಎಂದಿನ ಕಮರ್ಷಿಯಲ್ ಟಚ್ ಇರದ ಕಾರಣ, ಬಹಳ ಟೀಕೆಗೆ ಒಳಗಾಯಿತು. 2020ರಲ್ಲಿ ಆಸ್ಕರ್ ಪ್ರಶಸ್ತಿಗಾಗಿ ಭಾರತದ ವತಿಯಿಂದ `ಗಲೀ ಬಾಯ್’ ಔಪಚಾರಿಕವಾಗಿ ಕಳುಹಿಸಲ್ಪಟ್ಟಿತ್ತು.
ಇದನ್ನು ಅಂತಾರಾಷ್ಟ್ರೀಯ ಫೀಚರ್ ಫಿಲ್ಮ್ ರೂಪದಲ್ಲಿ ನಾಮಾಂಕಿತಗೊಳಿಸಲಾಯಿತು. ಆದರೆ ಕೊನೆ ಘಳಿಗೆಯಲ್ಲಿ ಇದು ಜಾಗ ಪಡೆಯಲಿಲ್ಲ. 2019ರಲ್ಲಿ ಬಾಕ್ಸ್ ಆಫೀಸಿನಲ್ಲಿ ಅತಿ ಹೆಚ್ಚು ಹಣ ಗಳಿಸಿದ ಚಿತ್ರ ಇದು ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು.
“ನನ್ನ ಕೆಲಸದಲ್ಲಿ ನಾನು ಎಂದಿನ ಕಮರ್ಷಿಯಲ್ ಕ್ರಮ ಬಿಟ್ಟು ಸರಿದಾಗ, ಅದು ಸಕ್ಸೆಸ್ ಆಗಿದೆ! ಸ್ಕ್ರಿಪ್ಟ್ ನೋಡಿದರೆ ಇದು ಸಕ್ಸಸ್ ಆಗುತ್ತದೆಯೇ ಅನಿಸಿದರೂ, ಆಗಿದ್ದು ಮಾತ್ರ ನಿಜ! ಈ ಕುರಿತಾಗಿ ನನಗೆ ಖುಷಿ ಇದೆ. ಯಾರೋ ಒಬ್ಬರು ಹಳೆಯದನ್ನು ನೆನೆಯುತ್ತಾ, ನಿರ್ಮಾಪಕ ಕರಣ್ ಜೋಹರ್ ಕುರಿತಾಗಿ ಹೇಳಿದ್ದು, `ಈ ಚಿತ್ರ ನಿರ್ಮಿಸಲು ನನ್ನಲ್ಲಿನ ಕಮರ್ಷಿಯಲ್ ಪ್ರೊಡ್ಯೂಸರ್ ಒಪ್ಪುವಂತೆ ಕಾಣೆ!’
ಈ ಕಂಪನಿಯ ಪ್ರಾಜೆರ್ಟ್ ಗಳು ಇಮರ್ಸಿವ್ ಲೋಕೇಶನ್ಸ್ ಗಾಗಿ ಪ್ರಸಿದ್ಧ. ಅದು ಸತತ `ವಿಷುಯೆಲ್ ಫೀಲ್ ಫ್ಲೇವರ್’ನ್ನು ಮತ್ತೆ ಹುಡುಕಾಡಲು ಯೋಚಿಸುತ್ತದೆ. ವಿವಿಧತೆಯ ನಿರಂತರ ಹುಡುಕಾಟ ಆಕೆಯ ವೈಯಕ್ತಿಕ ಹುಡುಕಾಟವೇ ಆಗಿದೆ. ಸಂದರ್ಶನಗಳಲ್ಲಿ ಆಕೆ ಈ ಕುರಿತಾಗಿ ಹೇಳುತ್ತಾ, “ನಾನೀಗ ಆರ್ಟ್ ಅಥವಾ ಕಮರ್ಷಿಯಲ್ ಅಂತ ಭಾಗಾಕಾರ ಮಾಡಲಾರೆ. ನನ್ನನ್ನು ನಾನು ಮೆಯ್ನ್ ಸ್ಟ್ರೀಮ್ ನಲ್ಲಿ ಪ್ರಮುಖ ನಿರ್ದೇಶಕಿಯಾಗಿ ಗುರುತಿಸಿಕೊಳ್ಳಲು ಬಯಸುತ್ತೇನಷ್ಟೆ.”
ಅತ್ಯುತ್ತಮ ನಿರ್ದೇಶನ
“ನಾವು ಸದಾ ವಿಭಿನ್ನ ಬಗೆಯ ಚಿತ್ರಗಳನ್ನು ತಯಾರಿಸುವ ಆಟ ಆಡುತ್ತಿರುತ್ತೇವೆ. ನಾನು ರೀಮಾ ಕೂಡಿ ರೋಮಾನ್ಸ್, ಕೌಟುಂಬಿಕ ಇತ್ಯಾದಿಗಳ ಹಿಟ್ ಚಿತ್ರ ಮಾಡಿದ್ದೇವೆ. ಈಗ ಅಮೆಝಾನ್ ನಲ್ಲಿ ಪ್ರಸಾರವಾಗುತ್ತಿರುವ `ಮೇಡ್ ಇನ್ ಹೆವನ್’ ಇಂಥದ್ದೇ ಒಂದು ಸೀರೀಸ್. ನಾನು ಇದಕ್ಕಾಗಿ ಹಲವಾರು ಲೇಖಕರು ನಿರ್ದೇಶಕರ ಜೊತೆ ಕೆಲಸ ಮಾಡಬೇಕಾಯ್ತು. ಈ ಸೀರೀಸ್ ವೆಡ್ಡಿಂಗ್ ಪ್ಲಾನಿಂಗ್ ಬಿಸ್ ನೆಸ್ ನಡೆಸುವ ಇಬ್ಬರು ಫ್ರೆಂಡ್ಸ್ ಕುರಿತಾದುದು. ಇವರಿಬ್ಬರ ಮಧ್ಯೆ ಜಗಳ ಇದ್ದದ್ದೇ.
“ನಾವಿಬ್ಬರೂ ಕ್ರೈಂ ಕುರಿತಾದ ಚಿತ್ರಗಳನ್ನು ಇಷ್ಟಪಡ್ತೀವಿ. ಇದರ ಆಧಾರದಿಂದಲೇ 2023ರಲ್ಲಿ `ದಹಾಡ್’ ಎಂಬ ವೆಬ್ ಸೀರೀಸ್ ಸಿದ್ಧಪಡಿಸಿದೆ. ರಾಜಾಸ್ಥಾನದ ಮಾಂಡ್ವಾದ ಕಥೆ ಇದು. ರಿತೇಶ್ ಶಾಹ್, ಜತಿನ್ ಜೊತೆ ಸೇರಿ ಇದನ್ನು ರೆಡಿ ಮಾಡಿದೆ. ಇದು ಒಬ್ಬ ಸೀರಿಯ್ ಕಿಲ್ಲರ್ ನ ಗಂಭೀರ ಷಡ್ಯಂತ್ರಗಳ ಕುರಿತ ಕಥೆ. ಇಲ್ಲಿ ಖಳನಾಯಕ ಹೆಂಗಸರನ್ನು ಮರುಳು ಮಾಡಿ, ಮದುವೆಯಾಗಿ, ಲೂಟಿ ಮಾಡ್ತಾನೆ, ಕೊಲೆ ಮಾಡ್ತಾನೆ.
“ಇದನ್ನು ನಗರಗಳ ಕೇಂದ್ರಿತ ಕಥೆ ಎನ್ನಬಹುದು. ನಮ್ಮ ಕಂಪನಿಯ ಅನೇಕ ನಿರ್ಮಾಣದ ಚಿತ್ರಗಳು ಇಂಥದ್ದೇ ಆಧಾರಿತ. ನಾನು ದಹಾಡ್ ನ್ನು ತಲಾಶ್ ಗಿಂತ ವಿಭಿನ್ನವಾಗಿ ನೋಡ್ತೀನಿ. ಎರಡೂ ಕಥೆಗಳಲ್ಲಿ ಹೆಣ್ಣು ಕಣ್ಮರೆಯಾಗುವುದೇ ಕಥಾಹಂದರ. ಆದರೆ ಯಾರೂ ಆ ಬಗ್ಗೆ ತಲೆ ಕೆಡಿಸಿಕೊಳ್ಳೋಲ್ಲ ಎನ್ನುವುದೇ ವಿಡಂಬನೆ.”
ಜೋಯಾರ ನಂಬಿಕೆ ಎಂದರೆ, “ಕೊಳಕು ಮನಸ್ಸಿನ ಸಮಾಜದ ಕೈಗನ್ನಡಿ ಇಂಥ ವಿಚಾರಗಳು. ಹೆಣ್ಣಿಗೆ ಏನೇನೋ ಒತ್ತಡ ಹೇರಿ, ಗಂಭೀರ ಅಪಾಯಕ್ಕೆ ಒಡ್ಡಲಾಗುತ್ತದೆ. ಇದನ್ನು ಕೇಳುತ್ತಿದ್ದರೆ ಮೈಯೆಲ್ಲ ಉರಿದು, ಹುಚ್ಚು ಹಿಡಿಯುತ್ತದೆ.
ದಹಾಡ್ ಕಥೆಗಳಲ್ಲಿ ಮಹಿಳಾ ಪ್ರಧಾನ ವಸ್ತುವಿದೆ. ಇಲ್ಲಿ ಸೋನಾಕ್ಷಿ ಒಬ್ಬ ದಲಿತ ಪೊಲೀಸ್ ಅಧಿಕಾರಿಯ ಪಾತ್ರ ವಹಿಸಿದ್ದಾಳೆ. ಲೈಂಗಿಕ, ಜಾಗತಿಕ ಭೇದಭಾವ ಎದುರಿಸುತ್ತಾ ಯಶಸ್ವೀ ಪೊಲೀಸ್ ಅಧಿಕಾರಿ ಆಗುತ್ತಾಳೆ. ಇಲ್ಲಿ ಸೋನಾಕ್ಷಿಯ ಬಾಸ್ ಆಗಿರುವ ಗುಲ್ಶನ್ ದೇವಯ್ಯ, ಒಬ್ಬ ನಿಷ್ಠಾವಂತ ಪಿತ, ಆದರೆ ಹಿಂಸಕ ಪತಿ ಆಗಿರುತ್ತಾನೆ. ಒಂದು ದೃಶ್ಯದಲ್ಲಿ ಇಲ್ಲಿ ಆಕೆ ತನ್ನ ಮಗಳನ್ನು `ಝಾನ್ಸಿಯ ರಾಣಿ!’ ಎಂದೇ ಕರೆಯುತ್ತಾಳೆ. ಮಗಳು ಮಗನಿಗಿಂತ ಯಾವ ವಿಧದಲ್ಲೂ ಕಡಿಮೆಯಲ್ಲ ಎಂದು ಅವಳ ಆತ್ಮವಿಶ್ವಾಸ ಹೆಚ್ಚಿಸುತ್ತಾಳೆ.
ಈ ಕುರಿತಾಗಿ ಜೋಯಾ. “ನಾನು ರೀಮಾ ಇಂಥದ್ದೇ ವಾತಾವರಣದಲ್ಲಿ ಬೆಳೆದವರು. ನಮ್ಮ ಮನೆಗಳಲ್ಲಿ ಮಗ ಮಗಳು ಅಂತ ಭೇದ ಇರಲಿಲ್ಲ. ನಮ್ಮ ತಾಯಂದಿರು ಬಲು ಗಟ್ಟಿಗಿತ್ತಿಯರು, ತಂದೆಯ ರಕ್ಷಣೆಯೂ ಇತ್ತು. ಬೆಳೆಯುವ ಹೆಣ್ಣುಮಕ್ಕಳಿಗೆ ಇಂಥದ್ದು ಅತ್ಯಗತ್ಯ.”

ವಿಭಿನ್ನ ದೃಷ್ಟಿಕೋನ ಅತ್ಯಗತ್ಯ
ಒಬ್ಬ ಹೆಣ್ಣು ನಿರ್ಮಾಪಕಿ ಆದಾಗ, ಮಹಿಳಾ ದೃಷ್ಟಿಕೋನದಿಂದ ಚಿತ್ರ ರೂಪಿಸಬೇಕಾಗುತ್ತದೆ ಎನ್ನುವ ಜೋಯಾ, “ಒಬ್ಬ ಹೆಣ್ಣಾಗಿ ನಾನು ಈ ಪ್ರಪಂಚವನ್ನು ವಿಭಿನ್ನ ದೃಷ್ಟಿಕೋನದಿಂದ ನೋಡುತ್ತೇನೆ. ಈ ವಿಶ್ವ ನನ್ನನ್ನು ಹಾಗೇ ನೋಡುತ್ತದೆ. ನನ್ನೊಂದಿಗೆ ನಡೆಯುವ ವ್ಯವಹಾರಗಳಿಂದ ನಮ್ಮ ವ್ಯಕ್ತಿತ್ವ ಗಟ್ಟಿಗೊಳ್ಳುತ್ತದೆ. ನಾನು ಒಂದು ಚಿತ್ರದಲ್ಲಿ ಕಥೆ ಹೇಳತೊಡಗಿದಾಗ, ಖಂಡಿತಾ ಅದರಲ್ಲಿ ನನ್ನ ಅನುಭವ ಬೆರೆತಿರುತ್ತದೆ. ಇದರಿಂದ ವಿಶ್ವ ನನ್ನನ್ನು ಹೇಗೆ ಕಂಡಿತು, ನಾನು ಅದನ್ನು ಹೇಗೆ ಕಾಣುತ್ತೇನೆ ಎಂಬುದು ಸ್ಪಷ್ಟವಾಗುತ್ತದೆ.”
ಇದರ ಅರ್ಥ ಸಶಕ್ತ, ದೃಢ ಇಚ್ಛಾಶಕ್ತಿಯುಳ್ಳ ಹೆಣ್ಣು ಪಾತ್ರಗಳ ಸೃಷ್ಟಿ ಸುಲಭವಾಗುತ್ತದೆ. ಹಾಗೆಯೇ ಮೃದು ಸ್ವಭಾವದ ಗಂಡು ಪಾತ್ರಗಳೂ ಸೃಷ್ಟಿಯಾಗುತ್ತವೆ. ಇದು ಕೇವಲ ಕಲ್ಪನೆಯಲ್ಲ, ವಾಸ್ತವ ಹೌದು.
ಜೋಯಾರನ್ನು ಇನ್ನಷ್ಟು ಮತ್ತಷ್ಟು ಸ್ತ್ರೀಪ್ರಧಾನ ಚಿತ್ರಗಳನ್ನೇಕೆ ಮಾಡುತ್ತಿಲ್ಲ ಎಂದು ಕೇಳಿದರೆ, “ಮಹಿಳಾ ನಿರ್ದೇಶಕಿ ಆದಮಾತ್ರಕ್ಕೆ ಸದಾ ಇಂಥ ಚಿತ್ರಗಳನ್ನೇ ಮಾಡಬೇಕೇ? ನನಗೆ ಸರಿ ಎನಿಸುವಂಥ ಚಿತ್ರಗಳನ್ನಷ್ಟೇ ನಾನು ಮಾಡುತ್ತೇನೆ. ನಾನು ಸ್ವತಂತ್ರಳು ಎಂದರೆ ಇದೇ ಅರ್ಥ, ಅಲ್ಲವೇ? ನೀವು ಯಾವುದರಲ್ಲಿ ಸಮರ್ಥರೋ ಅಂಥದ್ದೇ ಕೆಲಸ ಮಾಡಬೇಕು, ನೀವು ಬಯಸುವಂಥದ್ದನ್ನೇ ಮಾಡಬೇಕು. ಕೂಪ ಮಂಡೂಕದಂತೆ ಒಂದೇ ಬಾವಿಯಲ್ಲಿ ಈಜುತ್ತಿರಬಾರದು, ಸರ್ವತಂತ್ರ ಸ್ವತಂತ್ರಳಾಗಿ ಬದುಕಬೇಕು!”
ಪರದೆ ಮೇಲೆ ಮಾತ್ರವಲ್ಲದೆ ಹೊರಗೂ ಸಹ ಪ್ರಭಾವಿಯಾಗಿ ಇರಬಲ್ಲಂಥ ಗಂಡಸರನ್ನೇ ಬಾಲಿವುಡ್ ನಾಯಕರನ್ನಾಗಿ ಚಿತ್ರ ಮಾಡುತ್ತದೆ. ಜೋಯಾ ತನ್ನ ಕೆರಿಯರ್ ಆರಂಭಿಸಿದಾಗಿನಿಂದ, ಬಾಲಿವುಡ್ ನಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಹಿಂದಿಗಿಂತ ಈಗ ಮಹಿಳಾ ನಿರ್ದೇಶಕರ ಸಂಖ್ಯೆ ಹೆಚ್ಚಿದೆ. ಕಥೆ, ಚಿತ್ರಕಥೆ ಬರೆಯುತ್ತಾ ತಮ್ಮದೇ ಐಡೆಂಟಿಟಿ ಸ್ಥಾಪಿಸಿಕೊಂಡಿದ್ದಾರೆ. ಹಾಗೆಂದು ಹಿಂದಿನ ಪುರುಷ ನಿರ್ದೇಶಕರು ಸಶಕ್ತ ಸ್ತ್ರೀ ಪಾತ್ರಗಳನ್ನು ಚಿತ್ರಿಸಿಲ್ಲ ಎಂದು ಭಾವಿಸಬಾರದು. ಮಹಿಳೆಯರು ಉತ್ತಮ ಗೆಳತಿಯರಾಗಲು ಸಾಧ್ಯವಿಲ್ಲ ಎಂಬ ಮಾತಿದೆ. ಈ ಕುರಿತಾಗಿ ಜೋಯಾ ಹೇಳುತ್ತಾರೆ, “ಹಾಗೇನಿಲ್ಲ. ಶ್ಯಾಂ ಬೆನೆಗಲ್ ರ `ಮಂಡಿ,’ (1983) ಶಶಾಂಕ್ ಘೋಷಲ್ ರ `ವೀರೇ ದಿ ವೆಡ್ಡಿಂಗ್’ (2018) ಇತ್ಯಾದಿ ಇದಕ್ಕೆ ವ್ಯತಿರಿಕ್ತ ಅಲ್ಲವೇ?”
ತಾಯಿ ತಂದೆ ಇವರ ಚಿತ್ರ ಮೆಚ್ಚಿದರು
ಜೋಯಾ ತಮ್ಮ ಕೆಲಸದಲ್ಲಿ ಜಾವೇದ್, ಫರ್ಹಾನ್ ರನ್ನೂ ಸಾಕಷ್ಟು ಬಿಝಿಯಾಗಿ ಇರಿಸಿಕೊಳ್ಳುತ್ತಾರೆ. ಆಕೆ ಯಾವುದೇ ಸ್ಕ್ರಿಪ್ಸ್ ಬರೆದಾಗಿಲ್ಲ, ಎಲ್ಲಕ್ಕೂ ಮೊದಲು ತನ್ನ ಕುಟುಂಬದ ಅಭಿಪ್ರಾಯ ಕೇಳುತ್ತಾರೆ. ಮನೆಯವರೇ ಈಕೆಯ ಚಿತ್ರಗಳನ್ನು ಮೊದಲು ಎಡಿಟ್ ಮಾಡಿ, ತಿದ್ದಿ ತೀಡುತ್ತಾರೆ.
“ಹೀಗೆ ಪ್ರತಿಕ್ರಿಯೆ ನೀಡುವಾಗ ನನ್ನಣ್ಣ ಬಹಳ ದಯಾಳು ಆಗುತ್ತಾನೆ. ನನ್ನ ತಾಯಿತಂದೆ ಅಂತೂ ತಪ್ಪುಗಳು ಕುರಿತು ಆಕ್ಷೇಪಿಸುತ್ತಾ ಯಾವ ದಯೆಯನ್ನೂ ತೋರುತ್ತಿರಲಿಲ್ಲ. ನನ್ನ ತಂದೆಯವರ ಪ್ರಕಾರ, `ಸರಿ ಬಿಡು, ಇದರಲ್ಲಿನ ಉತ್ತಮ ಅಂಶಗಳ ಬಗ್ಗೆ ನಾನೇನೂ ಹೇಳೋಲ್ಲ. ಅದು ಹೇಗೂ ಕ್ಲಿಕ್ ಆಗುತ್ತದೆ. ಯಾವುದು ಸರಿ ಇಲ್ಲವೋ ಅದನ್ನು ತಿದ್ದೋಣ.’
ಜೋಯಾರನ್ನು, ನಿಮ್ಮ ಅನುಭವೀ ಪ್ರೊಫೆಶನಲ್ ತಾಯಿ ತಂದೆ ನಿಮ್ಮ ಎಲ್ಲಾ ಚಿತ್ರಗಳನ್ನೂ ಮೆಚ್ಚುತ್ತಿದ್ದವರೇ ಎಂದರೆ, “ನನ್ನ ತಾಯಿ ತಂದೆ ಸಹ ಪ್ರೇಕ್ಷಕರಲ್ಲಿ ಒಬ್ಬರು. ಮಗಳಾಗಿ ನನ್ನ ಕೆಲಸ ಮೆಚ್ಚುತ್ತಿದ್ದರು, ವಿಮರ್ಶಕರಾಗಿ ಅದನ್ನು ಖಂಡಿಸಿ, ಟೀಕಿಸುತ್ತಿದ್ದರು ಕೂಡ. ಒಬ್ಬ ನಿರ್ಮಾಪಕಿಯಾಗಿ ಎಲ್ಲರೂ ನನ್ನ ಚಿತ್ರ ಮೆಚ್ಚಲಿ ಎಂದೇ ಬಯಸುತ್ತೇನೆ. ಅವರು ನನ್ನ ಚಿತ್ರ ನೋಡುತ್ತಿದ್ದಾಗ ಏನಂತಾರೋ ಏನೋ ಎಂಬ ಭಯ ಮೊದಲಿನಿಂದ ಲೇಟೆಸ್ಟ್ ಚಿತ್ರದವರೆಗೂ ಇದ್ದೇ ಇತ್ತು. ಅದೇ ರೀತಿ ಜನ ಇದನ್ನು ಒಪ್ಪಿಕೊಳ್ಳಲಿ ಎಂಬ ಪ್ರಾರ್ಥನೆಯೂ ಇರುತ್ತದೆ!” ಬಿನೀಟಾ ಫರ್ನಾಂಡೋ ಇರಾನಿ, ಫಿಲ್ಮ್ ಮೇಕರ್ ಬಾಲಿವುಡ್ ನಲ್ಲಿ ಹಿಂದಿ ಚಿತ್ರಗಳ ಅವಾರ್ಡ್ ವಿನ್ನಿಂಗ್ ಸ್ಕ್ರೀನ್ ರೈಟರ್. ಜಾವೇದ್ ಅಖ್ತರ್ ಫರ್ಹಾನ್ ಅಖ್ತರ್, 01 ಮೇ, 2007.
2019ರಲ್ಲಿ ತಯಾರಾದ ಮ್ಯೂಸಿಕ್ ಡ್ರಾಮಾ `ಗಲೀ ಬಾಯ್’ ಚಿತ್ರ.
ನಿರ್ದೇಶಕಿ ರೀಮಾ ಕಾಗತಿ ಜೋಯಾ ಅಖ್ತರ್, ಮುಂಬೈ, 23 ಆಗಸ್ಟ್ 2023.





