ಬಾಲಿವುಡ್ನಲ್ಲಿ ಈಕೆ ತನ್ನ ಐಡೆಂಟಿಟಿ ಪಡೆದಿದ್ದು ಹೇಗೆ?

ವೀಕ್ಷಕರಿಗೆ ಒಂದು ಬಗೆಯ ವಿಭಿನ್ನ ಚಿತ್ರಗಳಿಂದ ಹೊಸತನ ನೀಡುತ್ತಿರುವ ಜೋಯಾರಿಗೆ, ತನ್ನ ಚಿತ್ರೀಕರಣದ ಸೆಟ್ಟೇ ಮನೆಯಾಗಿ ಹೋಗಿದೆ! ಘಟ್ಟ ಆಕೆ ತಲುಪಿದ್ದು ಹೇಗೆ....?

ಜೋಯಾ ಅಖ್ತರ್‌ ತನ್ನ ಬಾಲ್ಯದ ಕುರಿತು ಯೋಚಿಸುವಾಗ, ತಾನು ನೋಡಿದ ಚಿತ್ರಗಳ ಬಗ್ಗೆಯೇ ಮತ್ತೆ ಮತ್ತೆ ನೆನಪಿಸಿಕೊಳ್ಳುತ್ತಾಳೆ. ಯಾವ ಮನೆಯಲ್ಲಿ ಆಕೆಯ ಬಾಲ್ಯ ಕಳೆದಿತ್ತೋ, ಅದು ಸದಾ ಒಂದು ತಾತ್ಕಾಲಿಕ ಥಿಯೇಟರ್‌ ಆಗಿ ಬದಲಾಗುತ್ತಿತ್ತು. ಅಲ್ಲಿ ಸದಾ ಒಂದು ಪ್ರೊಜೆಕ್ಟರ್‌ ಇರುತ್ತಿತ್ತು. ಎದುರಿನ ಗೋಡೆಯ ಮೇಲಿನ ಬಿಳಿ ಬಟ್ಟೆಯೇ, ಮಿನಿಪರದೆ ಆಗುತ್ತಿತ್ತು. ಪ್ರತಿ 20 ನಿಮಿಷಕ್ಕೊಮ್ಮೆ ಬ್ರೇಕ್‌ ಇರುತ್ತಿತ್ತು.

ಬ್ರೇಕ್‌ ನಲ್ಲಿ ಪ್ರೊಜೆಕ್ಟರ್‌ ಒದಗಿಸಿದ ಚಿತ್ರದ ರೀಲ್ ‌ಬದಲಾಗುತ್ತಿತ್ತು. ಇಲ್ಲಿಯೇ ಜೋಯಾ ಮೊದಲ ಸಲ ಶಮ್ಮಿ ಕಪೂರ್ ನಿರ್ದೇಶಿತ `ಬ್ಯಾಂಡ್‌ ಬಾಜ್‌' ಚಿತ್ರ ನೋಡಿದ್ದು. ಈಕೆ ಹುಟ್ಟಿದ್ದ ಕೆಲವು ವರ್ಷದ ನಂತರ ಅದು 1976ರಲ್ಲಿ ರಿಲೀಸ್‌ ಆಯ್ತು. ಇಂಥ ವಾತಾವರಣದಲ್ಲಿ ಹುಟ್ಟಿದ ಜೋಯಾ, ಮುಂದೆ ಅಮೆರಿಕಾದ ಕ್ಲಾಸಿಕ್‌ ಗ್ಯಾಂಗ್‌ ಸ್ಟರ್‌ `ದಿ ಗಾಡ್‌ ಫಾದರ್‌' ಚಿತ್ರ ನೋಡಿದಳು.

ಬಾಲ್ಯದಲ್ಲಿ ಈಕೆ ಈ ಚಿತ್ರದ ಮಹತ್ವ ಗಮನಿಸಿರಲಿಲ್ಲ. ಬಹುಕಾಲದ ನಂತರ ಅದು ತಿಳಿಯಿತು. ಆಕೆಯ ತಂದೆ ಆ ಕುರಿತು ಅವಳಿಗೆ ಬಿಡಿಸಿ ಹೇಳಿದ್ದರು. ಈಕೆಯ ತಂದೆ ಅಂದ್ರೆ, ಹಿಂದಿ ಚಿತ್ರಗಳ ಗೀತರಚನೆಕಾರ ಜಾವೇದ್‌ ಅಖ್ತರ್‌. ಈ ಚಿತ್ರ ಭಾರತಕ್ಕೆ ಬಂದ ಮರುದಿನವೇ ಮುಂಬೈನಲ್ಲಿ ರಿಲೀಸ್‌ ಆಗಿತ್ತು.

ಚಿತ್ರದ ರಿಲೀಸ್‌ ಗಾಗಿ ಯಾವ ವ್ಯಕ್ತಿಗೆ ಅದರ ಕಾಪಿ ಸಿಕ್ಕಿತ್ತೋ, ಆತ ಅದನ್ನು ಸೀದಾ ಜಾವೇದ್‌ ರ ಬಳಿ ತಂದಿದ್ದ. ಆ ದಂಪತಿ ಫ್ರೆಂಡ್ಸ್ ನ್ನು ಮನೆಗೆ ಆಹ್ವಾನಿಸಿ, ಆ ಚಿತ್ರ ವೀಕ್ಷಿಸಿದರು. ಆ ರಾತ್ರಿ ಆ ಚಿತ್ರವನ್ನು 22 ಸಲ ನೋಡಿದರಂತೆ. ಕಾರಣ, ಮರುದಿನ ಅದು ಎಡಿಟ್‌ ಆಗಿ ನಂತರ ಥಿಯೇಟರ್‌ ರಿಲೀಸ್‌ ಆಗಲಿತ್ತು.

04_Honey-Irani

ಸಿನಿಮಾ ಲೋಕ

ಒಂದು ಮಗುವಿಗೆ ಈ ಚಿತ್ರವನ್ನು ಅರ್ಥೈಸಿಕೊಳ್ಳುವುದು ಕಷ್ಟ ಸಾಧ್ಯ. ಇದಾದ 5 ದಶಕಗಳ ನಂತರ, ನಾನು ಆಕೆ ಜೊತೆ ಅದೇ ಮನೆಯಲ್ಲಿ ಕುಳಿತು, ಬದಿಯಲ್ಲಿದ್ದ ಸಾಗರ ನೋಡುತ್ತಾ, ಅದರ ಬಗ್ಗೆ ಚರ್ಚಿಸಿದೆ. ಆ ನಂತರ ಅದನ್ನು ನಾವಿಬ್ಬರೂ ಹಲವು ಸಲ ನೋಡಿದ್ದೆವು.

ಜೋಯಾಳಿಗೆ ಸಿನಿಲೋಕ ಹೊಸದೇನಲ್ಲ. ಆಕೆ ಇದನ್ನು ಒಬ್ಬ ಪ್ರೇಕ್ಷಕಿ ಆಗಲ್ಲದೆ, ಪಾತ್ರವಾಗಿಯೇ ಉಳಿದು ಗಮನಿಸಿದಳು. ಈಕೆಯ ತಾಯಿ ನಟಿ, ಚಿತ್ರಕಥಾ ಲೇಖಕಿ ಹನಿ ಇರಾನಿ ಸದಾ ಬಿಝಿ. ತಂದೆ ಜಾವೇದ್‌ ಅಖ್ತರ್‌ ಖುದ್ದು ಪ್ರಸಿದ್ಧ ಕಲಾವಿದ, ಬಾಲಿವುಡ್‌ ನಲ್ಲಿ ಪ್ರಸಿದ್ಧರು.

ಹೆತ್ತವರು ಈಕೆಯನ್ನು ಸದಾ ಶೂಟಿಂಗ್‌ ಗೆ ಕರೆದೊಯ್ಯುತ್ತಿದ್ದರು. ಆಗ ನೋಡಿದ್ದೇ `ದೋಸ್ತಾನಾ' ಚಿತ್ರ. ಸಂಗಡಿಗ ಸಲೀಂ ಖಾನ್‌

ಜೊತೆ ಬೆರೆತು, ಜಾವೇದ್‌ ಚಿತ್ರಕಥೆ ರೆಡಿ ಮಾಡಿದ್ದರು. ಈ ರೀತಿ ಸಲೀಂ ಜಾವೇದ್‌ ಬಾವುಲಿಡ್‌ ನ ಪ್ರಸಿದ್ಧ ಜೋಡಿ ಆಯ್ತು. `ದೋಸ್ತಾನಾ' ಚಿತ್ರದಲ್ಲಿ ಜೀನತ್‌ ಅಮಾನ್‌, ಅಮಿತಾಭಾ‌, ಶತ್ರುಘ್ನ ಸಿನ್ಹಾ ಬಲು ಅದ್ಭುತವಾಗಿ ನಟಿಸಿದ್ದರು. ಈ ಚಿತ್ರದ `ದಿಲ್ಲಗಿ ನೇ ದೀ ಹಾ....' ಹಾಡಿನ ಶೂಟಿಂಗ್‌ ಈಕೆಗೆ ಸದಾ ನೆನಪಿನಲ್ಲಿರುತ್ತಿತ್ತು. ಆಕೆ 1989ರ `ಬಸೇರಾ' ಚಿತ್ರದ ಶೂಟಿಂಗ್‌ ಗೂ ಹೋಗಿದ್ದಳು. ಈಕೆಯ ತಾಯಿ ಅದರ ಸಹಾಯಕ ನಿರ್ದೇಶಕಿ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ