ಸೌಮ್ಯಾ ಸ್ವಾಮಿನಾಥನ್
ಸೌಮ್ಯಾ ಸ್ವಾಮಿನಾಥನ್ ಇತ್ತೀಚೆಗೆ ತಾನೇ ವಿಶ್ವ ದ ಪ್ರಮುಖ ವಿಜ್ಞಾನಿ ಆಗಿದ್ದರು. ಭಾರತಕ್ಕೆ ಮರಳಿದ ನಂತರ ಆಕೆ ಫೆಬ್ರವರಿ 2023ರಲ್ಲಿ `ಸ್ವಾಮಿನಾಥನ್ ರಿಸರ್ಚ್ ಫೌಂಡೇಶನ್’ನ ಅಧ್ಯಕ್ಷೆಯಾದರು. ಈಕೆ ಭಾರತೀಯ ಚಿಕಿತ್ಸಾ ಅನುಸಂಧಾನ ಪರಿಷತ್ತಿನ ಮಹಾ ನಿರ್ದೇಶಕಿಯಾಗಿಯೂ ಸೇವೆ ಸಲ್ಲಿಸಿದ್ದಾರೆ.
ಈಕೆ ಭಾರತದ ಸುಪ್ರಸಿದ್ಧ ಮಕ್ಕಳ ರೋಗತಜ್ಞರು. ರೋಗಗಳ ವಿರುದ್ಧ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಂಶೋಧನೆ ನಡೆಸಿದ್ದಾರೆ. ಆಕೆ ಕ್ಲಿನಿಕ್ ಕೇರ್‌ರಿಸರ್ಚ್ ನಲ್ಲಿ 40ಕ್ಕೂ ಹೆಚ್ಚು ನರ್ಷ ಸೇವೆ ಸಲ್ಲಿಸಿದ್ದಾರೆ. ಈಕೆ ತಮ್ಮ ಇಡೀ ಕೆರಿಯರ್ ನಲ್ಲಿ ಅನುಸಂಧಾನಗಳನ್ನು ಪ್ರಭಾವಶಾಲಿ ಕಾರ್ಯಕ್ರಮ ಆಗಿಸಲು ಬಹಳ ಶ್ರಮಿಸಿದ್ದಾರೆ.
ಈಕೆ 2015-17ರವರೆಗೂ ಭಾರತ ಸರ್ಕಾರದಲ್ಲಿ ಆರೋಗ್ಯ ಅನುಸಂಧಾನ ಸಚಿವೆ ಹಾಗೂ ಭಾರತೀಯ ಚಿಕಿತ್ಸಾ ಅನುಸಂಧಾನ ಪರಿಷತ್ತಿನ ಮಹಾ ನಿರ್ದೇಶಕರಾಗಿದ್ದರು. 2009-11ರವರೆಗೂ ಈಕೆ ಜಿನೇವಾ ದೇಶದ ವಿಶ್ವ ಬ್ಯಾಂಕ್‌ಗಳ ವಿಶೇಷ ಕಾರ್ಯಕ್ರಮಗಳಿಗೆ ಕೋಆರ್ಡಿನೇಟರ್ ಆಗಿ ಸೇವೆ ಸಲ್ಲಿಸಿದ್ದಾರೆ.
ಉತ್ಕೃಷ್ಟ ಕೆರಿಯರ್
ಸೌಮ್ಯಾ ಭಾರತ, USA, UKಗಳಲ್ಲಿ ತಮ್ಮ ಅಕ್ಯಾಡೆಮಿಕ್ ಟ್ರೇನಿಂಗ್ ಪಡೆದಿದ್ದಾರೆ. ಆಕೆ UKನ `ನ್ಯಾಷನಲ್ ಅಕ್ಯಾಡೆಮಿ ಆಫ್ ಮೆಡಿಸಿನ್,’ UKಯ `ಅಕ್ಯಾಡೆಮಿ ಆಫ್ ಮೆಡಿಕಲ್ ಸೈನ್ಸಸ್’ ಹಾಗೂ ಭಾರತದ ಎಲ್ಲಾ ವಿಜ್ಞಾನದ ಅಕ್ಯಾಡೆಮಿಗಳ ಫೆಲೋಶಿಪ್ ಪಡೆದಿರುತ್ತಾರೆ. ಆಕೆಗೆ ಹಲವಾರು ಡಾಕ್ಟರೇಟ್ ಪ್ರಶಸ್ತಿಗಳೂ ಲಭಿಸಿವೆ. `ಕೆರೋಲಿಸ್ಕಾ ಇನ್ ಸ್ಟಿಟ್ಯೂಟ್, ಪಿಲ್ ಸ್ರೌ, ಲಾರೋನ್‌ಲಂಡನ್ ಸ್ಕೂಲ್ ಆಫ್ ಟ್ರಾಪಿಕ್ ಮೆಡಿಸಿನ್‌ಹೈಜೀನ್,’ ಪ್ರಮುಖವೆನಿಸಿವೆ.
ಆಕೆ ಅನೇಕ ರಾಷ್ಟ್ರೀಯ ಮತ್ತು ಜಾಗತಿಕ ಮಟ್ಟದ ಸಮಿತಿಗಳಿಗೆ ಸಲಹೆಗಾರರು. ಆಕೆ ಸ್ವೀಡನ್ನಿನಲ್ಲಿ ಕೆರೋಲಿಸ್ಕಾ ವಿ.ವಿ ಹಾಗೂ ಅಮೆರಿಕಾದ ಬೋಸ್ಟನ್ ನಲ್ಲಿ ಟಫ್ಟ್, ವಿ.ವಿ.ದಲ್ಲಿ ಸಹಾಯಕ ಪ್ರೊಫೆಸರ್ ಕೂಡ.

ಈಕೆ ಅಲೆಯನ್ಸ್ ಬಯೋರ್ಸಿಟಿ, ಕೊಲಿಶನ್ ಫಾರ್ ಎಪಿಡಮಿಕ್ ಪ್ರಿಪೇರ್ಡ್ ನೆಸ್ ಇನೋವೇಶನ್, ಪಾಪ್ಯುಲೇಶನ್ ಫೌಂಡೇಶನ್ ಆಫ್ ಇಂಡಿಯಾದ ಬೋರ್ಡ್ ಸದಸ್ಯೆ. ಆಕೆ ತಮಿಳುನಾಡಿನ ಹವಾಮಾನ ಪರಿವರ್ತನೆ ಮಿಶನ್ನಿನ ಗರ್ನಿಂಗ್ ಕೌನ್ಸಿಲ್ ನ ಸದಸ್ಯರು ಹಾಗೂ ವೈಜ್ಞಾನಿಕ ಸಲಹಾ ಮಂಡಳಿಯ ಅಧ್ಯಕ್ಷರು ಸಹ. ವಿಶ್ವದ ಉದ್ಘಾಟನಾ ಮುಖ್ಯ ವಿಜ್ಞಾನಿಯಾಗಿ ಇವರು ರಿಸರ್ಚ್, ಕ್ವಾಲಿಟಿ ಇನ್ ಶ್ಯೂರೆನ್ಸ್, ಕ್ರೈಟೀರಿಯಾ ಸ್ಟಾಂಡರ್ಡ್ ಹಾಗೂ ಡಿಜಿಟಲ್ ಹೆಲ್ತ್ ಕಡೆ ಕೇಂದ್ರೀಕರಿಸುತ್ತಾ ವಿಜ್ಞಾನ ಪ್ರಭಾವ ನಿರ್ಮಿಸಿದರು.
ನೇತೃತ್ವ ಮತ್ತು ಚಟುವಟಿಕೆ
ಸೌಮ್ಯಾ ಕೊರೋನಾ ಸಂದರ್ಭದಲ್ಲಿ ವಿಶ್ವದಲ್ಲಿ ವೈಜ್ಞಾನಿಕ ಪ್ರಯಾಸಗಳ ಸಮನ್ವಯ ಸಾಧಿಸುವುದರ ಜೊತೆಗೆ, ನಿಮ್ಮ ಹಾಗೂ ಮಧ್ಯಮ ಆದಾಯವುಳ್ಳ ದೇಶಗಳಿಗೆ ಸಮಾನ ವ್ಯಾಕ್ಸಿನ್ ವಿತರಣೆ ಕುರಿತು ಗಮನಹರಿಸುತ್ತಾ, ಕೋಲ್ ವ್ಯಾಕ್ಸಿನ್ ಸ್ಥಾಪನೆಯಲ್ಲಿ ಮಹತ್ವಪೂರ್ಣ ಪಾತ್ರ ನಿರ್ವಹಿಸಿದ್ದಾರೆ. ಇತ್ತೀಚೆಗೆ ಕೇಂದ್ರೀಯ ಆರೋಗ್ಯ ಸಚಿವಾಲಯ ಪ್ರೊ.ಡಾ. ಸೌಮ್ಯಾರನ್ನು ರಾಷ್ಟ್ರೀಯ ಕ್ಷಯರೋಗ ನಿರ್ಮೂಲನಾ ಕಾರ್ಯಕ್ರಮದ ಪ್ರಧಾನ ಸಲಹಾಗಾರರನ್ನಾಗಿ ನೇಮಿಸಿದೆ. ಹವಾಮಾನ ಪರಿವರ್ತನೆಯಿಂದ ಆರೋಗ್ಯದ ಮೇಲಾಗುವ ಪ್ರಭಾವ, ಅದರಲ್ಲೂ ವಿಶೇಷವಾಗಿ ಮಹಿಳೆ ಮಕ್ಕಳ ಮೇಲಾಗುವ ದುಷ್ಪ್ರಭಾವಗಳ ನಿವಾರಣೆಯತ್ತ ಇದೀಗ ಅವರ ಗಮನವೆಲ್ಲ ಇದೆ. ಭಾರತೀಯ ಹಾಗೂ ಪ್ರಾದೇಶಿಕ ಮಟ್ಟಗಳಲ್ಲಿ ಪೋಷಣೆಯ ಸುರಕ್ಷೆಯನ್ನು ಸಶಕ್ತಗೊಳಿಸಲೆಂದು, ಆಹಾರ ಪ್ರಣಾಲಿಯಲ್ಲಿ ಪರಿವರ್ತನೆ ತರುವ ಯೋಜನೆಯತ್ತಲೂ ಗಮನಿಸುತ್ತಿದ್ದಾರೆ. ಪಬ್ಲಿಕ್ ಹೆಲ್ತ್ ಸೈಂಟಿಫಿಕ್ ರಿಸರ್ಚ್ ನ ಕ್ಷೇತ್ರಗಳಲ್ಲಿ ಇವರ ನೇತೃತ್ವ ಹಾಗೂ ಸೇವೆ ಗಮನಿಸಿ, ಗೃಹಶೋಭಾ ಇನ್ ಸ್ಪೈರಿಂಗ್ ಅವಾರ್ಡ್ಸ್ ನಿಂದ, ನೇಶನ್ ಬಿಲ್ಡಿಂಗ್ ಐಕಾನ್ ಪ್ರಶಸ್ತಿಯಿತ್ತು ಗೌರವಿಸಲಾಯಿತು.
ವಿಶ್ವದೆಲ್ಲೆಡೆ ಹೆಂಗಸರ ಬುದ್ಧಿವಂತಿಕೆಯನ್ನು ತೆರೆದ ಮನದಿಂದ ಒಪ್ಪುವವರೇ ಕಡಿಮೆ, ಆದರೆ ಸೌಮ್ಯಾ ಆ ಮಾತನ್ನು ಸುಳ್ಳು ಎಂದು ಅಹರ್ನಿಶಿ ದುಡಿದು ನಿರೂಪಿಸಿದ್ದಾರೆ. ಸೈನ್ಸ್, ಟೆಕ್ನಾಲಜಿ, ಸೋಶಿಯ್ ಯಾ ಯಾವುದೇ ಫೀಲ್ಡ್ ಇರಲಿ, ಹೆಂಗಸರು ಗಂಡಸರಿಗೆ ಸರಿಸಮಾನರು ಮಾತ್ರವಲ್ಲ, ಅವರಿಗಿಂತ ಎಷ್ಟೋ ಮುಂದಿದ್ದಾರೆ! ಹೆಲ್ತ್ ಯಾ ಸೈಂಟಿಫಿಕ್ ರಿಸರ್ಚ್ ನಂಥ ಕಬ್ಬಿಣದ ಕಡಲೆಗಳನ್ನು, ಪರಿಪಕ್ವತೆಯಿಂದ ಹದನಾಗಿಸಿದ್ದಾರೆ. ತಮ್ಮ ಈ ಪ್ರಯಾಸಗಳನ್ನು ಇದಕ್ಕಿಂತ ಅತಿ ಉತ್ಸಾಹದಿಂದ ಮುಂದುವರಿಸುವ ಉಮೇದಿನಲ್ಲಿದ್ದಾರೆ. ಇಂಥ ಧೀಶಕ್ತಿಯುಳ್ಳ ಮಹಿಳೆ ನಮ್ಮ ಇಡೀ ದೇಶಕ್ಕೆ ಆದರ್ಶಪ್ರಾಯರು, ದಾರಿದೀಪ ಎಂದರೆ ಉತ್ಪ್ರೇಕ್ಷೆಯಲ್ಲ. ಮುಂದಿನ ಪೀಳಿಗೆಯ ಹೆಣ್ಣುಮಕ್ಕಳು ಇವರಿಂದ ಹೆಚ್ಚಿನ ಪ್ರೇರಣೆ ಪಡೆದು ತಮ್ಮ ಭವಿಷ್ಯ ರೂಪಿಸಿಕೊಳ್ಳಬೇಕು.
– ಗರಿಮಾ ಪಂಕಜಾ





