– ರಾಘವೇಂದ್ರ ಅಡಿಗ ಎಚ್ಚೆನ್.

ಕನ್ನಡ ಕಿರುತೆರೆ ಮತ್ತು ಹಿರಿತೆರೆಯಲ್ಲಿ ಗಮನಾರ್ಹವಾಗಿ ಮಿಂಚುತ್ತಿರುವ ನಟಿ ಮಲೈಕಾ ವಸುಪಾಲ್ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವಿಡಿಯೋ ಮೂಲಕ ಸುದ್ದಿಯಲ್ಲಿದ್ದಾರೆ.

ಯೂಟ್ಯೂಬ್ ಚಾನಲ್‌ನಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋದಲ್ಲಿ ಮಲೈಕಾ ಅವರು ಗುಲಾಬಿ ಬಣ್ಣದ ರೇಷ್ಮೆ ಸೀರೆ ಹಾಗೂ ಸಾಂಪ್ರದಾಯಿಕ ಆಭರಣಗಳಲ್ಲಿ ಅಪ್ಪಟ ವಧುವಿನಂತೆ ಕಂಗೊಳಿಸುತ್ತಿದ್ದಾರೆ. ಅವರ ಸೌಂದರ್ಯ, ನಗು ಹಾಗೂ ವಧುವಿನ ಲುಕ್ ಕಂಡ ನೆಟ್ಟಿಗರು “ನಟಿಗೆ ಮದುವೆಯಾಗಿಬಿಟ್ಟಿತೇ?” ಎಂಬ ಪ್ರಶ್ನೆಗಳನ್ನು ಕೇಳತೊಡಗಿದ್ದಾರೆ. ಕೆಲವರು ಕಾಮೆಂಟ್ ವಿಭಾಗದಲ್ಲಿ ‘ಹ್ಯಾಪಿ ಮ್ಯಾರೀಡ್ ಲೈಫ್’ ಎಂದು ಶುಭಾಶಯಗಳನ್ನು ಸಹ ತಿಳಿಸಿದ್ದಾರೆ.

ಆದರೆ ಈ ಬಗ್ಗೆ ಗೊಂದಲಕ್ಕೆ ತೆರೆ ಎಳೆದಿರುವ ಅಭಿಮಾನಿಗಳು, ಇದು ನೈಜ ಮದುವೆಯಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಈ ವಿಡಿಯೋ ಸಿನಿಮಾ ಅಥವಾ ಜಾಹೀರಾತು ಚಿತ್ರೀಕರಣದ ಭಾಗವಾಗಿದ್ದು, ವದಂತಿಗಳು ಸುಳ್ಳು ಎಂಬುದು ತಿಳಿದುಬಂದಿದೆ.

ಹಿಟ್ಲರ್ ಕಲ್ಯಾಣ ಧಾರಾವಾಹಿ ಮೂಲಕ ನಟನಾ ಬದುಕು ಆರಂಭಿಸಿದ ಮಲೈಕಾ, ‘ಲೀಲಾ’ ಪಾತ್ರದ ಮೂಲಕ ಅಪಾರ ಜನಪ್ರಿಯತೆ ಗಳಿಸಿದ್ದರು. ನಂತರ ಉಪಾಧ್ಯಕ್ಷ ಚಿತ್ರದ ಮೂಲಕ ಹಿರಿತೆರೆಯಲ್ಲೂ ಯಶಸ್ವಿ ಎಂಟ್ರಿ ಕೊಟ್ಟಿದ್ದಾರೆ. ಜೊತೆಗೆ ‘ವಿದ್ಯಾಪತಿ’ ಸೇರಿದಂತೆ ಇನ್ನೂ ಹಲವು ಸಿನಿಮಾಗಳಲ್ಲಿ ನಟಿಸಿ ಗಮನ ಸೆಳೆದಿದ್ದಾರೆ.

ಇತ್ತೀಚೆಗೆ ಜಮೀರ್ ಪುತ್ರನ ಹೊಸ ಸಿನಿಮಾದಲ್ಲಿಯೂ ಅಭಿನಯಿಸಿರುವ ಮಲೈಕಾ, ಸದ್ಯ ಹಲವು ಪ್ರಾಜೆಕ್ಟ್‌ಗಳಲ್ಲಿ ಬ್ಯುಸಿಯಾಗಿದ್ದಾರೆ. ಈ ಬ್ರೈಡಲ್ ಲುಕ್ ಕೂಡ ಅವರ ವೃತ್ತಿಜೀವನದ ಭಾಗವಾಗಿದ್ದು, ಮದುವೆಯ ವದಂತಿಗಳಿಗೆ ಅಂತ್ಯವನ್ನಿಟ್ಟಿದೆ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ