ಶೃತಿ ಸೇಠ್
ಪೇರೆಂಟಿಂಗ್ ಕಂಟೆಂಟ್ ಕ್ರಿಯೇಟರ್ ಅವಾರ್ಡ್ `ಶರವಾತ್’ ಸೀರಿಯಲ್ ನ ಜಿಯಾ ಪಾತ್ರ ಹಾಗೂ `ಕಾಮಿಡಿ ಸರ್ಕಸ್’ನ ಆ್ಯಂಕರ್ ಶೃತಿ ಸೇಠ್ ಕಿರುತೆರೆ ಮೂಲಕ ಎಲ್ಲರಿಗೂ ಪರಿಚಿತೆ. ಈ ಇವೆಂಟ್ ನಲ್ಲಿ ಶೃತಿಗೂ ಅವಾರ್ಡ್ ಸಿಕ್ಕಿತು. ಇದು ಆಕೆಯ ನಟನೆಗಾಗಿ ಅಲ್ಲ, ಬದಲಿಗೆ ಡಿಜಿಟಲ್ ಕ್ರಿಯೇಟರ್ ವಿಭಾಗದಲ್ಲಿ ಸನ್ಮಾನಿಸಲಾಯಿತು.
ಟಿವಿ, ಸಿನಿಮಾಗಳಲ್ಲಿ ಕಳೆದ 25 ವರ್ಷಗಳಿಂದ ಕೆಲಸ ಮಾಡುತ್ತಿದ್ದ ಶೃತಿ, ನಂತರ ಡಿಜಿಟಲ್ ಲೋಕಕ್ಕೆ ಕಾಲಿಟ್ಟರು. ಅಲ್ಲಿ ಈಕೆ ಪೇರೆಂಟಿಂಗ್, ಮದರ್ ಹುಡ್, ಫ್ಯಾಮಿಲಿ ಮೆಂಟಲ್ ಬ್ಲೋಯಿಂಗ್ ಗೆ ಸಂಬಂಧಿಸಿದ ಮಾಹಿತಿ ಒದಗಿಸುತ್ತಿರುತ್ತಾರೆ. ಈಕೆ ಮೈಂಡ್ ಕೋಟ್ ರೂಪದಲ್ಲಿಯೂ ತಮ್ಮ ಫಾಲೋಯರ್ಸ್ ಗೆ ಪೇರೆಂಟಿಂಗ್ ಗೆ ಬಂಧಿಸಿದ ಸತ್ಯ/ಮಿಥ್ಯೆ ಕುರಿತು ಸಲಹೆ ನೀಡುತ್ತಾರೆ.
ಸಂಶೋಧನೆಯ ಆಳಕ್ಕೆ ಇಳಿದಾಗ
`ಕ್ಯೋಂ ಹೋತಾ ಹೈ ಪ್ಯಾರ್, ಬ್ಲಡೀ ಬ್ರದರ್, ರಿಶ್ತಾ ಡಾಟ್ ಕಾಮ್, ಬಾಲ್ ವೀರ್, ಶ್‌ಶ್‌ಶ್ ಕೋಯಿ ಹೈ!’ ಇತ್ಯಾದಿ ಅನೇಕ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಈಕೆ ಕರಿಶ್ಮಾ ಜೊತೆ `ಮೆಂಟರ್ ಹುಡ್’ ಸೀರೀಸ್ ನಲ್ಲೂ ನಟಿಸಿದ್ದಾರೆ. ಆಮಿರ್ ಖಾನ್ ಕಾಜಲ್ ನಟನೆಯ `ಫನಾ’ ಚಿತ್ರದಲ್ಲಿ ಶೃತಿಗೆ ಗಮನಾರ್ಹ ಪಾತ್ರ. ಯಶ್ ರಾಜ್ ರ `ತಾರಾ ರಂ ಪಂ’ ಪ್ರಕಾಶ್ ರವರ ‘ರಾಜನೀತಿ’ ಚಿತ್ರಗಳಲ್ಲೂ ಕಾಣಿಸಿದ್ದರು.
ಇದೀಗ ಈಕೆ ಮೈಂಡ್ ಕೋಚ್ ರೂಪದಲ್ಲೂ ತಮ್ಮ ಐಡೆಂಟಿಟಿ ಸ್ಥಾಪಿಸಿಕೊಂಡಿದ್ದಾರೆ. ಈ ಕೋರ್ಸ್ ಹೇಗೆ ಸಿಕ್ಕಿತೆಂದು ಕೇಳಿದಾಗ, “ಕೊರೋನಾ ಮಹಾಮಾರಿಯ ಸಂದರ್ಭದಲ್ಲಿ ನಾನು ಅತಿಯಾದ ಜಿಜ್ಞಾಸೆ, ಆತ್ಮಪರೀಕ್ಷೆಗಳ ಅಗತ್ಯಾನುಸಾರ ಅಚನಾಕ್ ಡೀಪ್ ಆಗಿ ಅಧ್ಯಯನಕ್ಕೆ ಇಳಿದೆ. ಎಂದೂ ಮುಗಿಯದ ಯಾತ್ರೆಗೆ ತೊಡಗುತ್ತಿದ್ದೇನೆ ಎಂದು ತಿಳಿಯಲೇ ಇಲ್ಲ. ಈ ರೀತಿ ನನ್ನ ಸಂಶೋಧನೆ ಅತಿ ಜಟಿಲಲಾಯಿತು.”
ಹೀಗೆ ಲಾಭ ಸಿಕ್ಕಿತು
“ಹೀಗೆ ನಾನು ಶಿಕ್ಷಣ ಮುಂದುವರಿಸಿದಂತೆ, ನಾನು ಇತರರಿಗೂ ಲಾಭ ತಂದುಕೊಡಬಲ್ಲೆ ಎನಿಸಿತು. ಆಗ ಅವರೂ ಹೆಚ್ಚಿನ ಸಂತೃಪ್ತ ಜೀವನ ನಡೆಸಬಹುದು ಎನಿಸಿತು. ಹಳೆಯ ರೀತಿರಿವಾಜು ತೊರೆದು ಮುನ್ನುಗ್ಗಬಹುದು ಎನಿಸಿತು. ತಮ್ಮ ಕೆಲಸ ಕಾರ್ಯಗಳಲ್ಲಿ ಹೆಚ್ಚು ಜಾಗೃತರಾಗಬಹುದು. ಕಲೆ ಆಧಾರಿತ ಥೆರಪಿಯಲ್ಲಿ ಡಿಪ್ಲೊಮಾ ಹಾಗೂ ಮೈಂಡ್ ಫುಲ್ ನೆಸ್ ಮೆಡಿಟೇಶನ್ ಕೋರ್ಸ್ ನಲ್ಲಿ ಸರ್ಟಿಫೈಡ್ ಆದನಂತರ, ನಾನು ಅಪಾಯಕ್ಕೆ ಸಿಲುಕಿದ ಅನೇಕ ಮಕ್ಕಳು, ಶಿಕ್ಷಕರು, ವಿದ್ಯಾರ್ಥಿಗಳು, ಕಾರ್ಪೊರೇಟ್ ಸಿಬ್ಬಂದಿಗೂ ಸಹ ಅನೇಕ ವರ್ಕ್ ಶಾಪ್ಸ್ ನಡೆಸಿದೆ.”

ಎಂದೂ ಸೋಲು ಒಪ್ಪಲಿಲ್ಲ
ಶೃತಿ ಕಿರುತೆರೆಯಿಂದ ಹಿರಿತೆರೆವರೆಗೂ ತನ್ನ ಕೆಲಸವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಇದರಿಂದ ಆಕೆಗೆ ಹೆಚ್ಚಿನ ಸಂತೃಪ್ತಿ ಸಿಕ್ಕಿದೆ. ಅವಾರ್ಡ್ ಪಡೆಯುವಾಗ ಆಕೆ ನಸು ನಗುತ್ತಾ, “ಸಿನಿಮಾರಂಗದಲ್ಲಿ ನಾನು 25 ವರ್ಷ ಮುಗಿಸಿದಾಗಲೂ ಯಾವ ಪ್ರಶಸ್ತಿಯೂ ಬಂದಿರಲಿಲ್ಲ. ಆದರೆ ಇಂದು ಗೃಹಶೋಭಾ ನನ್ನ ಶ್ರಮ ಗುರುತಿಸಿ ಸನ್ಮಾನಿಸುತ್ತಿದೆ!” ಇತ್ತೀಚಿನ ದಿನಗಳಲ್ಲಿ ಹಲವಾರು ಕಲಾವಿದರು ಕಡಿಮೆ ಕೆಲಸ ಸಿಗುತ್ತಿರುವ ಕಾರಣ, ಸಂದರ್ಭದ ಬಲಿಪಶು ಆಗುತ್ತಿದ್ದಾರೆ. ಶೃತಿಯಂಥವರು ತಮಗಾಗಿ ಹೊಸ ಮಾರ್ಗ ಕಂಡುಕೊಳ್ಳುತ್ತಾರೆ.
ಹೊಸ ಪಾತ್ರದಿಂದ ಸಂತೃಪ್ತಿ
ಶೃತಿಯ ನಟನೆಯಂತೂ ಎಲ್ಲರಿಗೂ ತಿಳಿದ ವಿಷಯ. ಇದೀಗ ಆಕೆ ಒಬ್ಬ ಉತ್ಕೃಷ್ಟ `ಪೇರೆಂಟಿಂಗ್‌ಮೈಂಡ್ ಕೋಚ್’ ಸಹ ಆಗಿದ್ದಾರೆ. ಈಗ ಆಕೆ ತನ್ನ ಲೈಫ್ ಗೆ ಸ್ಕ್ರಿಪ್ಟ್ ರೈಟರ್ ಆಗುವುದರ ಜೊತೆ ಡೈರೆಕ್ಟರ್ ಸಹ ಹೌದು. ತನ್ನ ಹೊಸ ಪಾತ್ರವನ್ನು ಈಕೆ ಅಚ್ಚುಕಟ್ಟಾಗಿ ನಿಭಾಯಿಸುತ್ತಿದ್ದಾರೆ. ಸೋಶಿಯಲ್ ಮೀಡಿಯಾವನ್ನು ಸರಿಯಾದ ರೀತಿಯಲ್ಲಿ ಬಳಸಿಕೊಂಡರೆ, ಅದು ಎಲ್ಲರಿಗೂ ಲೈಫ್ ಚೇಂಜಿಂಗ್ ಮೀಡಿಯಂ ಆಗಬಲ್ಲದು. ಪ್ರತಿ ಹೆಣ್ಣಿನಲ್ಲೂ ಒಂದು ಅದ್ಭುತ ಪ್ರತಿಭೆ ಇದ್ದೇ ಇರುತ್ತದೆ. ಅದನ್ನು ಸರಿಯಾಗಿ ಹುಡುಕಿ ಹೊರ ತೋರಬೇಕಷ್ಟೆ. ಯಾವಾಗ ಅದನ್ನು ನೀವು ಸಾಧಿಸುತ್ತೀರೋ ನಿಮಗೆ ಸರಿಸಾಟಿ ಬೇರೆ ಯಾರೂ ಇರಲಾರರು!
– ಕುಂಕುಮ್





