ಗೃಹಶೋಭಾ ಇನ್ ಸ್ಪೈರ್ ಅವಾರ್ಡ್ಸ್ ನ ಮಿಶನ್ ವಿಭಿನ್ನ ಕ್ಷೇತ್ರಗಳಲ್ಲಿ ಮಹಿಳೆಯರ ವಿಶಿಷ್ಟ ಸಾಧನೆಯನ್ನು ಗುರುತಿಸಿ ಗೌರವಿಸುವುದು, ಸಂಭ್ರಮಾಚರಣೆ ಹಾಗೂ ಅವರನ್ನು ಪ್ರಮುಖ ಸುದ್ದಿಗೆ ತರುವುದು, ಅವರ ಧ್ವನಿಗೊಂದು ಉಚ್ಚಸ್ಥಾಯಿ ನೀಡುವುದು, ಅವರು ನಡೆದು ಬಂದ ದಾರಿಯ ಪ್ರದರ್ಶನ, ನಮ್ಮ ಓದುಗರು ಕನಸು ಕಾಣಲು, ನೇತೃತ್ವ ವಹಿಸಲು, ಹೊಸತೇನಾದರೂ ಮಾಡಲು ಪ್ರೇರೇಪಿಸುವುದಾಗಿದೆ.
ಆಯ್ಕೆಯ ಪ್ರಕ್ರಿಯೆ
ಗೃಹಶೋಭಾ ಇನ್ ಸ್ಪೈರ್ ಅವಾರ್ಡ್ಸ್ ಗಾಗಿ ಹೆಸರುಗಳ ಆಯ್ಕೆಯು ಒಂದು ಸುದೀರ್ಘ ಪ್ರಕ್ರಿಯೇ ಆಗಿತ್ತು. ಎಲ್ಲಕ್ಕೂ ಮೊದಲು ದೇಶಾದ್ಯಂತ ಹಲವು ಭಾಷೆಗಳಲ್ಲಿ ಹರಡಿರುವ ಗೃಹಶೋಭಾದ ಸಂಪಾದಕೀಯ ವಿಭಾಗ 300-400 ಹೆಸರುಗಳ ದೊಡ್ಡ ಪಟ್ಟಿ ರೂಪಿಸಿತು. ಇದನ್ನು ಆಯಾ ವಿಭಾಗಕ್ಕೆ ಅನುಸಾರ ವಿಂಗಡಿಸಲಾಯಿತು. ನಂತರ ಪ್ರತಿ ವಿಭಾಗದಲ್ಲೂ 10-12 ಹೆಸರನ್ನು ಶಾರ್ಟ್ ಲಿಸ್ಟ್ ಮಾಡಲಾಯಿತು. ಹೀಗೆ ಒಟ್ಟು 22 ವಿಭಾಗಗಳಾದವು. ಅಂದ್ರೆ ಒಟ್ಟು 200 ಹೆಸರುಗಳ ಬಯೋಡೇಟಾ ರೆಡಿ ಆಯ್ತು. ನಂತರ ಇಂಟರ್ನಲ್ ಜ್ಯೂರಿ ಬಳಿ ಕಳುಹಿಸಲಾಯಿತು.
ಆ ಮಂಡಳಿಯಲ್ಲಿ 5 ಜನರಿದ್ದರು. ಪ್ರೋಗ್ರಾಂ ಡೈರೆಕ್ಟರ್ ಪ್ರಿಯದರ್ಶಿನಿ ನರೇಂದ್ರ, ಮಾರ್ಕೆಟಿಂಗ್ ಹೆಡ್ ಶ್ವೇತಾ ರಾಬರ್ಟ್ಸ್, ಸೀನಿಯರ್ ರೈಟರ್ ಗರಿಮಾ ಪಂಕಜಾ, ಎಡಿಟೋರಿಯ್ ಕೋ ಆರ್ಡಿನೇಟರ್ ನಸೀಂ ಅನ್ಸಾರಿ, ವೆಬ್ ಎಡಿಟರ್ ನಿಶಾ ಸಿನ್ಹಾ ಪ್ರಮುಖರಾಗಿದ್ದರು.
ಈ ಐದೂ ಮಂದಿ ಕೆಲವು ಪ್ರಮುಖ ಪ್ಯಾರಾಮೀಟರ್ಸ್ ಆಧಾರದಿಂದ ಇದನ್ನು ಸ್ಕೋರ್ ಮಾಡಿದರು. ಅಂಥ ಅಂದ್ರೆ ಸಾಹಸ ರಿಸ್ಕ್ ಹೇರುವ ಸಾಮರ್ಥ್ಯ, ಇನೋವೇಶನ್‌ಕ್ರಿಯೇಟಿವಿಟಿ, ನೇತೃತ್ವ ಹಾಗೂ ಪ್ರಭಾ ಇತ್ಯಾದಿ.
ಆ ಸ್ಕೋರ್ ನಲ್ಲಿ ಪ್ರತಿ ವಿಭಾಗದಲ್ಲೂ 34 ಮಂದಿ ಟಾಪರ್ಸ್ ಹೆಸರನ್ನು ಎಕ್ಸಟರ್ನ್ ಜ್ಯೂರಿಗೆ ನೀಡಲಾಗುತ್ತಿತ್ತು. ಅವರಲ್ಲಿ 6 ಮಂದಿ ಇದ್ದರು. ಅವರಲ್ಲಿ ಪ್ರಮುಖರು ಅಂದ್ರೆ ಲೇಖಕಿ ಹಾಗೂ ಫೆಮಿನಾದ ಮಾಜಿ ಸಂಪಾದಕಿ ಸತ್ಯಾ ಸೂರನ್, ಜನಪ್ರಿಯ ನಟಿ ಪದ್ಮಪ್ರಿಯಾ ಜಾನಕಿ ರಾಮನ್, ಚಂಪಕದ ಸಂಪಾದಕಿ ರಿಚಾ ಶಾಹ್, ಲರ್ನಿಂಗ್ ಲಿಂಕ್ಸ್ ಫೌಂಡೇಶನ್ ಅಧ್ಯಕ್ಷೆ ನೂರಿಯಾ ಅನ್ಸಾರಿ, ಔಟ್ ವರ್ಡ್ ಬೌಂಡ್ ಹಿಮಾಲಯದ ಡೈರೆಕ್ಟರ್ ದಿಲ್ ಶಾದ್ ಮಾಸ್ಟರ್ ಹಾಗೂ ಕ್ಯಾರ್ ವಾನ್ ನ ವೆಬ್ ಎಡಿಟರ್ ಸುರಭಿ ಕಾಂಗಾ.
ಇವರುಗಳ ಫೈನಲ್ ಸ್ಕೋರ್ ಆಧಾರದಿಂದ ಟಾಪ್ ಸ್ಕೋರ್ ವಿನ್ನರ್ ಆದರು.
ಗೃಹಶೋಭಾ ಇನ್ ಸ್ಪೈರ್ ಅವಾರ್ಡ್ಸ್ 2025ರ ಆಯೋಜನೆಯೂ 20ನೇ ಮಾರ್ಚ್ 2025ರಂದು, ಟ್ರಾಂಕೋರ್ ಪ್ಯಾಲೇಸ್, ನವದೆಹಲಿ, ಇಲ್ಲಿ ನಡೆಸಲಾಗಿತ್ತು. ಸುಮಾರು ಮುನ್ನೂರಕ್ಕೂ ಹೆಚ್ಚು ಹೆಂಗಳೆಯರ ಸಮಕ್ಷಮದಲ್ಲಿ ಅವಾರ್ಡ್ಸ್ ವಿತರಿಸಲಾಯಿತು.

ಇಂಟರ್ನ್ ಜ್ಯೂರಿ ಗರಿಮಾ ಪಂಕಜಾ ಸೀನಿಯರ್ ರೈಟರ್

ಶ್ವೇತಾ ರಾಬರ್ಟ್ಸ್ ಮಾರ್ಕೆಟಿಂಗ್ ಹೆಡ್

ಪ್ರಿಯದರ್ಶಿನಿ ನರೇಂದ್ರ ಪ್ರೋಗ್ರಾಂ ಡೈರೆಕ್ಟರ್

ನಿಶಾ ಸಿನ್ಹಾ ವೆಬ್ ಎಡಿಟರ್

ನಸೀಂ ಕೋಚರ್ ಅಸೋಸಿಯೇಟ್ ಎಡಿಟರ್

ಸನ್ಮಾನ್ಯ ಜ್ಯೂರಿ ತಂಡ
ಸತ್ಯಾ ಸರನ್ (ಜ್ಯೂರಿ ಪ್ರಮುಖರು) : ಸತ್ಯಾ ಸರನ್ ಒಬ್ಬ ಫೇಮಸ್ ಜರ್ನಲಿಸ್ಟ್, ರೈಟರ್ ಹಾಗೂ ಫೆಮಿನಾದ ಮಾಜಿ ಸಂಪಾದಕಿ. ಈಕೆ ಭಾರತೀಯ ಫ್ಯಾಷನ್‌ಲೈಫ್ ಸ್ಟೈಲ್ ಜರ್ನಲಿಸಂನಲ್ಲಿ ಪ್ರಸಿದ್ಧರು. ಈಕೆ ಹಲವಾರು ಪುಸ್ತಕಗಳನ್ನು ಬರೆದಿದ್ದಾರೆ, ಅದರಲ್ಲಿ ಸಿನಿಮಾ ದಿಗ್ಗಜರ ಜೀವನಚರಿತ್ರೆಯೂ ಕೂಡಿದೆ. ಈಕೆ ಸಾಹಿತ್ಯ, ಮೀಡಿಯಾದಲ್ಲಿ ಒಬ್ಬ ಪ್ರಭಾವಶಾಲಿ ವ್ಯಕ್ತಿ.





