ರಾಘವೇಂದ್ರ ಅಡಿಗ ಎಚ್ಚೆನ್.

ಧ್ರುವ ಸರ್ಜಾಅಭಿನಯದ ಕೆಡಿ ಚಿತ್ರ ರಿಲೀಸ್‌ಗೆ ರೆಡಿ ಆಗಿದೆ. ಇನ್ನೇನು ಡಿಲೇ ಇಲ್ವೇ ಇಲ್ಲ. ಏಪ್ರಿಲ್-30 ಕ್ಕೆ ರಿಲೀಸ್ ಆಗುತ್ತಿದೆ. ಈ ಒಂದು ವಿಷಯವನ್ನು ಚಿತ್ರದ ಟ್ರೈಲರ್ ರಿಲೀಸ್ ಇವೆಂಟ್ ಅಲ್ಲಿಯೇ ಸಿನಿಮಾ ತಂಡದ ಸದಸ್ಯರು ಹೇಳಿಕೊಂಡಿದ್ದಾರೆ. ಈ ಒಂದು ಇವೆಂಟ್ ಅಲ್ಲಿ ಧ್ರುವ ಸರ್ಜಾ ಬಾತ್ ರೂಮ್ ಡಬ್ಬಿಂಗ್ ವಿಷಯನ್ನು ಹೇಳಿಕೊಂಡಿದ್ದಾರೆ. ಜೋಗಿ ಪ್ರೇಮ್ ಹೇಗೆಲ್ಲ ಹೇಳುತ್ತಿದ್ದರು. ಯಾವ ಟೈಮ್ ಅಲ್ಲಿ ಈ ಚಿತ್ರದ ಡಬ್ಬಿಂಗ್ ಮಾಡುಸುತ್ತಿದ್ದರು ಅನ್ನೋದನ್ನು ಹೇಳಿಕೊಂಡಿದ್ದಾರೆ.

secret

ಬಾತ್ ರೂಮ್ ಅಲ್ಲಿ ಡಬ್ಬಿಂಗ್
ಕೆಡಿ ಚಿತ್ರ ಹಲವು ಸಮಸ್ಯೆಗಳನ್ನ ಎದುರಿಸಿದೆ. ಸೆನ್ಸಾರ್ ವಿಚಾರದಲ್ಲೂ ಈ ಚಿತ್ರ ರಿವೈಸಿಂಗ್ ಕಮೀಟಿಂಗ್‌ಗೂ ಹೋಗಿದೆ. ಈ ಸಮಯದಲ್ಲಿಯೇ ಧ್ರುವ ಸರ್ಜಾ ಬಾತ್ ರೂಮ್ ಅಲ್ಲಿಯೇ ಡಬ್ಬಿಂಗ್ ಮಾಡಿದ್ದಾರೆ. ಹೌದು, ಸೆನ್ಸಾರ್ ಅವರು ಇದನ್ನ ಕಟ್ ಮಾಡು, ಅದನ್ನ ಮ್ಯೂಟ್ ಮಾಡು ಅಂತಿದ್ದಾರೆ. ಹಾಗಾಗಿಯೇ “ಮಗಾ ಒಂಚೂರು ಡಬ್ಬಿಂಗ್ ಮಾಡೋ ಅಂತಲೇ ಜೋಗಿ ಪ್ರೇಮ್ ಹೇಳ್ತಾ ಇದ್ದರು. ಆಗ ರಾತ್ರಿನೇ ಆಗಿರ್ತಾ ಇತ್ತು. ಡಬ್ಬಿಂಗ್ ಮಾಡೋದಾ? ಅಂತ ಧ್ರುವ ಕೇಳ್ತಾ ಇದ್ದರು. ಹೌದು ಮಗಾ ಅಂತಲೇ ಜೋಡಿ ಪ್ರೇಮ್ ಹೇಳ್ತಾ ಇದ್ದರು ನೋಡಿ. ಡಬ್ಬಿಂಗ್ ಅರ್ಜಂಟ್ ಇದೆ. ಬೇಗ ಮಾಡು, ಸೆನ್ಸಾರ್‌ ಅವರು ಕೇಳ್ತಿದ್ದಾರೆ. ಜೋಗಿ ಪ್ರೇಮ್ ಹೀಗೆ ಹೇಳುತ್ತಿದ್ದರು. ಫೋನ್ ಅಲ್ಲಿಯೇ ಡಬ್ಬಿಂಗ್ ಮಾಡಿಯೇ ಕಳಿಸುತ್ತಿದ್ದೆ. ಆದರೆ, ಮತ್ತೆ ಫೋನ್ ಬರೋದು. ಅದ್ಯಾಕೋ ಅವರಿಗೆ ಕೇಳ್ತಾ ಇಲ್ವಂತೆ. ಮತ್ತೆ ಮಾಡೋ? ಅಂತ ಹೇಳ್ತಾ ಇದ್ದರು. ಈ ರೀತಿ ಹಲವು ಕೆಡಿ ಚಿತ್ರಕ್ಕೆ ಬಾರಿ ಡಬ್ಬಿಂಗ್ ಮಾಡಿದ್ದೇನೆ ಅಂತಲೇ ಧ್ರುವ ಸರ್ಜಾ ಹೇಳಿಕೊಂಡಿದ್ದಾರೆ. ರಕ್ಷಿತಾ ಪ್ರೇಮ್ ಫೋನ್ ಮಾಡಿದಾಗ ಧ್ರುವ ಸರ್ಜಾ ಒಂದೇ ಮಾತು ಕೇಳ್ತಾ ಇದ್ದರು. ಅಕ್ಕ ಪ್ರಮೋಷನ್ ಯಾವಾಗ? ಮಾಡೋಣ ಅಂತಲೇ ರಕ್ಷಿತಾ ಪ್ರೇಮ್ ಹೇಳ್ತಾ ಇದ್ದರು. ಸೆನ್ಸಾರ್ ಆಯ್ತಾ? ಆಗುತ್ತದೆ. ಸೆನ್ಸಾರ್ ಸರ್ಟಿಫಿಕೇಟ್ ಬಂತಾ? ಬರುತ್ತದೆ. ಹೀಗೆ ಧ್ರುವ ಸರ್ಜಾ ಹಾಗೂ ರಕ್ಷಿತಾ ಪ್ರೇಮ್ ನಡುವೆ ಫೋನ್ ಮಾತುಕತೆ ಆಗ್ತಾನೇ ಇತ್ತು. ಇದನ್ನೂ ಧ್ರುವ ಸರ್ಜಾ ಇಲ್ಲಿ ನೆನಪಿಸಿಕೊಂಡಿದ್ದಾರೆ.

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ