ರಾಘವೇಂದ್ರ ಅಡಿಗ ಎಚ್ಚೆನ್.

ನಿನ್ನೆ ಕನ್ನಡ ಚಿತ್ರರಂಗ ಕಂಡ ಮೇರು ನಟ ಡಾ. ರಾಜ್ ಕುಮಾರ್ ಜನ್ಮದಿನ.  ಉತ್ತಮ ಸಂದೇಶವುಳ್ಳ ಚಿತ್ರಗಳ ಮೂಲಕ, ತಮ್ಮ ಅದ್ಭುತ ನಟನೆಯ ಮೂಲಕ ಜನಮನಗೆದ್ದಿರುವ ನಟಸಾರ್ವಭೌಮ. ಜೊತೆಗೆ ಅಮೋಘ ಗಾಯಕ ಕೂಡ ಹೌದು.
ದೇಶದಾದ್ಯಂತ ಅಪಾರ ಅಭಿಮಾನಿಗಳನ್ನು ಡಾ.ರಾಜ್ ಹೊಂದಿದ್ದಾರೆ. ಅವರಲ್ಲಿ ಮಾಲಿವುಡ್ ಸೂಪರ್ ಸ್ಟಾರ್ ಮೋಹನ್ ಲಾಲ್ ಕೂಡ ಒಬ್ಬರು. ಇದೀಗ ಅವರು ಹಾಡಿರುವ ರಾಜ್ ಕುಮಾರ್ ಅವರ ಹಾಡು ವೈರಲ್ ಆಗಿದೆ. ಅಮೆರಿಕದಲ್ಲಿ ಕನ್ನಡ ಹಾಡು… ಮೋಹನ್ ಲಾಲ್ ಇತ್ತೀಚೆಗೆ ಅಮೆರಿಕ ಪ್ರವಾಸ ಕೈಗೊಂಡಿದ್ದರು. ಈ ವೇಳೆ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದ ಅವರು ಕನ್ನಡ ಹಾಡಿಗೆ ದನಿಯಾಗಿದ್ದಾರೆ. ಇತರ ಕಲಾವಿದರ ಜೊತೆಗೂಡಿ ಡಾ.ರಾಜ್ ಕುಮಾರ್ ಹಾಗೂ ಮಂಜುಳಾ ನಟಿಸಿರುವ ‘ಎಂದೆಂದೂ ನಿನ್ನನ್ನು ಮರೆತು ಬದುಕಿರಲಾರೆ’ ಎಂಬ ಹಾಡನ್ನು ಹಾಡಿದ್ದಾರೆ.

Rajkumar

ಸ್ಪಷ್ಟವಾಗಿ, ಸೊಗಸಾಗಿ ಮೋಹನ್ ಲಾಲ್ ಹಾಡು ಹಾಡಿ ಮನಸೂರೆಗೊಳಿಸಿದ್ದಾರೆ. ಪರಭಾಷಾ ನಟನೊಬ್ಬ ಕನ್ನಡ ಹಾಡನ್ನು ಹಾಡಿರೋದು ಕನ್ನಡಿಗರ ಮನಗೆದ್ದಿದೆ. ವೀಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಕಮೆಂಟ್ಸ್‌ಗಳ ಸುರಿಮಳೆಯೇ ಹರಿದು ಬಂದಿದೆ.
1974ರಲ್ಲಿ ‘ಎರಡು ಕನಸು’ ಸಿನಿಮಾ ತೆರೆಗೆ ಬಂದಿತ್ತು. ಡಾ.ರಾಜ್ ಕುಮಾರ್, ಮಂಜುಳಾ, ಕಲ್ಪನಾ ಜೊತೆಯಾಗಿ ನಟಿಸಿದ್ದರು.  ರಾಜನ್-ನಾಗೇಂದ್ರ ಅವರ ಸಂಗೀತ ನಿರ್ದೇಶನದಲ್ಲಿ ಮೂಡಿಬಂದ ಈ ಚಿತ್ರದ ಸುಮಧುರ ಹಾಡುಗಳಲ್ಲಿ  ‘ಎಂದೆಂದೂ ನಿನ್ನನು ಮರೆತು..’ ಕೂಡ ಒಂದು. ಪಿ.ಬಿ. ಶ್ರೀನಿವಾಸ್ ಮತ್ತು ವಾಣಿ ಜಯರಾಮ್ ಈ ಹಾಡಿಗೆ ದನಿಯಾಗಿದ್ದಾರೆ. ಇದನ್ನೂ ಓದಿ :  ಹಳೆ ಹೆಸರು… ಹೊಸ ಕಥೆ… ಮರಳಿ ಬರಲಿದೆ ಅಗ್ನಿಸಾಕ್ಷಿ ಇನ್ನು ಮೋಹನ್ ಲಾಲ್ ಸಿನಿಮಾಗಳಲ್ಲಿ ಬಿಝಿ ಆಗಿದ್ದು, ಮಮ್ಮುಟ್ಟಿ  ಜೊತೆ ನಟಿಸಿರುವ ‘ಪೆಟ್ರಿಯಾಟ್’ ಸಿನಿಮಾ ಮೇ 1ರಂದು ತೆರೆಗೆ ಬರಲಿದೆ. ‘ದೃಶ್ಯಂ- 3’ ಸಿನಿಮಾ ಮೇ 21 ರಂದು ಬಿಡುಗಡೆ ಆಗಲಿದೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ