-  ರಾಘವೇಂದ್ರ ಅಡಿಗ ಎಚ್ಚೆನ್.

ಕನ್ನಡ ಟಿವಿ ಲೋಕದಲ್ಲಿ ಭಾರೀ ಜನಪ್ರಿಯತೆ ಪಡೆದಿದ್ದ ‘ಅಗ್ನಿಸಾಕ್ಷಿ’ ಧಾರಾವಾಹಿ ಇದೀಗ ಹೊಸ ರೂಪದಲ್ಲಿ ಮರಳಿ ಬರುತ್ತಿದೆ. ಹಳೆಯ ಕಥಾಹಂದರದಿಂದ ವಿಭಿನ್ನವಾಗಿ, ಹೊಸ ಪಾತ್ರಗಳು ಮತ್ತು ಹೊಸ ಕಥೆಯೊಂದಿಗೆ ಧಾರಾವಾಹಿ ಪ್ರೇಕ್ಷಕರ ಮುಂದೆ ಬರಲು ಸಿದ್ಧವಾಗಿದೆ.

ಹಳೆಯ ಆವೃತ್ತಿಯಲ್ಲಿ ವೈಷ್ಣವಿ ಗೌಡ, ವಿಜಯ್ ಸೂರ್ಯ, ಪ್ರಿಯಾಂಕಾ ಮತ್ತು ಮುಖ್ಯಮಂತ್ರಿ ಚಂದ್ರು ಅಭಿನಯಿಸಿ ದೊಡ್ಡ ಮಟ್ಟದ ಯಶಸ್ಸು ಕಂಡಿದ್ದರು.

ಇದೀಗ ಹೊಸ ಆವೃತ್ತಿಯಲ್ಲಿ ಶಮಂತ್ ಬ್ರೋ ಗೌಡ ನಾಯಕನಾಗಿ, ವರ್ಷಿಣಿ ಗೌಡ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ಬಿಡುಗಡೆಯಾದ ಪ್ರೋಮೋದಲ್ಲಿ ಶಮಂತ್ ಒಬ್ಬ ಸ್ಟೈಲಿಷ್ ಉದ್ಯಮಿಯಾಗಿ ಕಾಣಿಸಿಕೊಂಡಿದ್ದು, ಅವರ ಪಾತ್ರದಲ್ಲಿ ಅಹಂಕಾರ ಮತ್ತು ಅಟ್ಟಹಾಸದ ಛಾಯೆಗಳು ಸ್ಪಷ್ಟವಾಗಿವೆ.

ಪ್ರೋಮೋದಲ್ಲಿ ಡಿಫೆಂಡರ್ ಕಾರಿನಲ್ಲಿ ಬರುವ ಶಮಂತ್, ಮಳೆಯ ನಡುವೆ ನಾಯಕಿ ವರ್ಷಿಣಿಯ ಛತ್ರಿಯನ್ನು ಕಿತ್ತುಕೊಳ್ಳುವ ದೃಶ್ಯ ಕುತೂಹಲ ಮೂಡಿಸಿದೆ. ಇದಕ್ಕೆ ಪ್ರತಿಯಾಗಿ ವರ್ಷಿಣಿ ತೀವ್ರವಾಗಿ ಪ್ರತಿಕ್ರಿಯಿಸುವ ದೃಶ್ಯ ಕಥೆಗೆ ಇಂಟೆನ್ಸ್ ಟೋನ್ ನೀಡಿದೆ.

‘ಬಿಗ್ ಬಾಸ್’ ಮೂಲಕ ಜನಪ್ರಿಯತೆ ಪಡೆದ ಶಮಂತ್ ಬ್ರೋ ಗೌಡ, ‘ಲಕ್ಷ್ಮೀ ಬಾರಮ್ಮ’ ಧಾರಾವಾಹಿಯ ಬಳಿಕ ಸ್ವಲ್ಪ ವಿರಾಮ ಪಡೆದಿದ್ದರು. ಈಗ ಈ ಪ್ರಾಜೆಕ್ಟ್ ಮೂಲಕ ಮತ್ತೆ ಕಂಬ್ಯಾಕ್ ಮಾಡುತ್ತಿದ್ದಾರೆ. ಮತ್ತೊಂದೆಡೆ ವರ್ಷಿಣಿ ಗೌಡ ತೆಲುಗು ಧಾರಾವಾಹಿಗಳ ಬಳಿಕ ಕನ್ನಡಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ.

ಪ್ರಸ್ತುತ ‘ಭಾಗ್ಯಲಕ್ಷ್ಮೀ’ ಧಾರಾವಾಹಿ ಮುಕ್ತಾಯವಾದ ನಂತರ ಈ ಹೊಸ ‘ಅಗ್ನಿಸಾಕ್ಷಿ’ ಪ್ರಸಾರವಾಗುವ ಸಾಧ್ಯತೆ ಇದೆ

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ