ಕಥೆ - ಪವಿತ್ರಾ ಬದ್ರಿನಾಥ್

ತಾನು ಬೆಳೆದು ಬಂದ ಪರಿಸರಕ್ಕೆ ಒಳಗಾಗಿ ಸ್ಪಂದನಾ ವಿಭಿನ್ನ ಮನೋಭಾವ ಬೆಳೆಸಿಕೊಂಡು, ತನ್ನಂಥ ನಾಲ್ವರು ಗೆಳತಿಯರೊಂದಿಗೆ ಅನ್ಯಾಯ ಕಂಡಾಗ ಸಿಡಿದು ನಿಲ್ಲುತ್ತಿದ್ದಳು. ಮುಂದೆ ನಡೆದದ್ದೇನು....?

ತನ್ನ ಒಂದು ನೋಟದಲ್ಲೇ ಮಿಂಚನ್ನು ಹರಿಸಿ, ಕಣ್ಣಿನಲ್ಲೇ ಕೊಲ್ಲುವಂಥ ಅಪ್ರತಿಮ ಮಾದಕ ಸೌಂದರ್ಯವನ್ನು ಹೊಂದಿದ್ದ ಸ್ಪಂದನಾ, ತನ್ನ ಆಪ್ತ ಗೆಳತಿಯಾದ ಸುರೇಖಾಳ ಜೊತೆ ರಾತ್ರಿ ಬಾರ್‌ ನಲ್ಲಿ ನೃತ್ಯ ಮಾಡುತ್ತಿದ್ದಳು.

ಸಿನಿಮಾ ನಾಯಕಿಯ ಹಾಗೆ ತೆಳ್ಳನೆಯ ಮೈಮಾಟ, ಅವಳ ಚೆಲುವು ಎಂಥವರನ್ನೂ ಮೋಡಿ ಮಾಡುವ ಹಾಗೆ ಇತ್ತು. ಅವಳ ವಸ್ತ್ರಗಳು ಫಳಫಳನೆ ಮಿಂಚುತ್ತಿತ್ತು. ಅವಳ ಅಂದಕ್ಕೆ ವೈಯಾರಕ್ಕೆ ಮನಸೋತಿದ್ದ ಪ್ರಸಾದ್‌ ಅವಳನ್ನೇ ಗುರಾಯಿಸುತ್ತಾ ಕಣ್ಣಲ್ಲೇ ತಿಂದು ಹಾಕುವವನಂತೆ ಮೇಲಿಂದ ಕೆಳಗೆ ನೋಡುತ್ತಿದ್ದ!

ಸ್ಪಂದನಾ ಅವನನ್ನು ಗಮನಿಸಿ, ``ಹಾಯ್‌, ನನ್ನ ಹೆಸರು ಸ್ಪಂದನಾ, ನೀವು ಪ್ರಸಾದ್‌ ಅಲ್ವಾ.....?'' ಎಂದು ಶೇಕ್‌ಹ್ಯಾಂಡ್ ಮಾಡಲು ಕೈ ಚಾಚಿದಳು.

ಪ್ರಸಾದ್‌ ಅವಳ ಕೈ ಹಿಡಿಯುತ್ತಿದ್ದಂತೆ ತಕ್ಷಣ ತಲೆಸುತ್ತಿ ಬಿದ್ದಳು. ಅವನಿಗೆ ಗಾಬರಿಯಾಗಿ ಅವಳ ಮೇಲೆ ನೀರು ಹಾಕುವ ನೆಪದಲ್ಲಿ ಅವಳ ತುಟಿ, ಸೊಂಟ ಗಟ್ಟಿಯಾಗಿ ಹಿಸುಕಿದ.

ಸ್ಪಂದನಾ ನಿಧಾನವಾಗಿ ಕಣ್ತೆರೆದು, ``ಅಬ್ಬಾ ಥ್ಯಾಂಕ್ಸ್ ಪ್ರಸಾದ್‌, ನಿಮಗೆ ನನ್ನ ಮೇಲೆ ಎಷ್ಟೊಂದು ಕಾಳಜಿ! ನಿಮ್ಮಂತಹ ಒಳ್ಳೆಯ ಮನಸ್ಸಿರುವವರು ನನಗೆ ಬಾಯ್‌ಫ್ರೆಂಡ್‌ ಆಗಿದ್ದರೆ, ನಾನು ಎಲ್ಲೇ ಇದ್ದರೂ ಕ್ಷೇಮವಾಗಿ ಇರುತ್ತೇನೆ,'' ಎಂದು ಅವನ ಗಡ್ಡ ಸವರುತ್ತಾ, ರೋಮಾಂಚನೀಯ ನೋಟದಲ್ಲಿ ಮುಗುಳ್ನಗುತ್ತಾ ಹೇಳಿದಳು.

ಪ್ರಸಾದ್‌ ಗೆ ಖುಷಿಯಾಗಿ, ``ನಾನೇ ಆ ಅದೃಷ್ಟಶಾಲಿ ಆಗಬಹುದಲ್ಲಾ....'' ಎಂದು ನೆಲದಲ್ಲಿದ್ದ ಅವಳನ್ನು ಮೇಲೆತ್ತುವ ನೆಪದಲ್ಲಿ ಅವಳ ಸೊಂಟ ಬಳಸಿ, ಕಣ್ಣಲ್ಲೇ ಮಾತನಾಡುತ್ತಾ ತನ್ನ ಬಾಹುಗಳಲ್ಲಿ ಬಂಧಿಸಿದ.

``ಹಾಗಾದ್ರೆ  ನಾಳೆ ರಾತ್ರಿ 9 ಗಂಟೆಗೆ ತೆಂಗುಪಾಳ್ಯದಲ್ಲಿ ಇರುವ ತೆಂಗಿನ ತೋಟಕ್ಕೆ ಬನ್ನಿ. ನಾನು ನಿಮಗಾಗಿ ಕಾಯುತ್ತಿರುವೆ,'' ಎಂದು ಸ್ಪಂದನಾ ಅವನ ತಲೆಕೂದಲು ಸವರುತ್ತಾ ಹೇಳಿದಳು.

``ನಿಮ್ಮ ಫೋನ್‌ ನಂಬರ್‌ ಕೊಡಿ ಪ್ಲೀಸ್‌,'' ಎಂದ ಪ್ರಸಾದ್‌.

``ಇಲ್ಲ ಹೀರೋ ನೀವು ಅಲ್ಲಿ ಬನ್ನಿ,'' ಎಂದು ಅವನ ಕೈಗೆ ಮುತ್ತಿಕ್ಕಿ ಹೋದಳು ಸ್ಪಂದನಾ.

`ನಾಳೆ ಇವಳನ್ನು ನನಗೆ ಹೇಗೆ ಬೇಕೋ ಹಾಗೆ ಬಳಸಿಕೊಂಡು ಮಜಾ ಮಾಡ್ತೀನಿ,' ಎಂದು ಪ್ರಸಾದ್‌ ಮನಸ್ಸಿನಲ್ಲೇ ಸಂಚು ಮಾಡಿದ.

ಪ್ರಸಾದ್‌, ಸ್ಪಂದನಾ ಹೇಳಿದ ಜಾಗಕ್ಕೆ ಸಮಯಕ್ಕೆ ಸರಿಯಾಗಿ ಹೋದ. ಅವನು ಸುತ್ತಲೂ ನೋಡುತ್ತಿದ್ದರೆ, ಅದೊಂದು ಭಯಾನಕವಾದ ಕಾಡಿನ ರೀತಿಯಲ್ಲಿ ಇತ್ತು. ಅಲ್ಲಿ ಜನ ಸಂಚಾರ ಇಲ್ಲವೇ ಇಲ್ಲ ಮತ್ತು ಯಾವ ಸಮಯದಲ್ಲಿ ಬೇಕಾದರೂ ಕಾಡುಪ್ರಾಣಿಗಳು ಆಕ್ರಮಿಸಿ ಪ್ರಾಣ ಹಾನಿ ಮಾಡುವಂತಹ ಭಯಾನಕವಾದ ಸ್ಥಳ ಅದಾಗಿತ್ತು.

ಅವನು ನಡುಗುತ್ತಾ, ``ಸ್ಪಂದನಾ....ಸ್ಪಂದನಾ... ಎಲ್ಲಿದ್ದೀಯಾ ನಾನು ಪ್ರಸಾದ್‌ ಬಂದಿದ್ದೀನಿ, ಪ್ಲೀಸ್‌ ಬೇಗ ಬಾ ಹೀಗೆ ಆಟ ಆಡಿಸಬೇಡ,'' ಎಂದು ಕೂಗಿದ.

ಆ ಕಡೆಯಿಂದ ಯಾವ ಪ್ರತಿಕ್ರಿಯೆಯೂ ಬರಲೇ ಇಲ್ಲ. ಅವನು ನಿಧಾನವಾಗಿ ಹೆಜ್ಜೆ ಮೇಲೆ ಹೆಜ್ಜೆ ಇಡುತ್ತಾ ಅವಳನ್ನು ಹುಡುಕುತ್ತಾ ಮುಂದೆ ಸಾಗಿದ. ಅಕಸ್ಮಾತ್‌ ಆಗಿ ಅವನ ಹಿಂದೆ ಮೂರು ಜನ ತಮ್ಮ ಮುಖವನ್ನು ಪೂರ್ತಿಯಾಗಿ ಮುಚ್ಚಿಕೊಂಡು ಅಲ್ಲಿಗೆ ಬಂದು ಅವನ ಕಣ್ಣುಗಳನ್ನು ಬಟ್ಟೆಯಿಂದ ಮುಚ್ಚಿ, ಕೈ ಕಾಲು, ಬಾಯಿ ಕಟ್ಟಿ ಹಾಕಿ, ಅವನ ಮೊಬೈಲ್ ಸ್ವಿಚ್‌ ಆಫ್‌ ಮಾಡಿ, ಅವನನ್ನು ಪಾಳುಬಿದ್ದ ಜಾಗಕ್ಕೆ ಎತ್ತಿಕೊಂಡು ಬಂದರು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ