ಕಥೆ ವಿದ್ಯಾ ಎಸ್‌. ನಾಯಕ್

ಕ್ಷಣಾರ್ಧದಲ್ಲಿ ತಾಯಿಯಾದವಳ ಹೃದಯ ಎಷ್ಟೆಲ್ಲಾ ತುಡಿಯಬಹುದು....? ಮಕ್ಕಳಿಗೆ ಏನಾದರೂ ಆಗಿಬಿಟ್ಟರೆ ಏನು ಗತಿ......?

ಏಪ್ರಿಲ್ ತಿಂಗಳ ಕೊನೆ, ಮಕ್ಕಳಿಗೆ ಬೇಸಿಗೆ ಕಾಲದ ರಜಾ ದಿನಗಳು. ಬೆಳಗಾದರೆ ಸಾಕು ಪುಟ್ಟನನ್ನು ಆಟಕ್ಕೆ ಕರೆಯಲು ಬಾಗಿಲು ತಟ್ಟುವ ಮಕ್ಕಳು, ಟಿವಿಯಲ್ಲಿ ಏನೋ ಕಾರ್ಟೂನ್‌ ನೋಡುತ್ತಾ ಆಗಷ್ಟೇ ತಿಂಡಿ ಮುಗಿಸಿದ್ದ ಪುಟ್ಟ, ತನ್ನ ಗೆಳೆಯರು ಬಾಗಿಲು ತಟ್ಟಿದಂತೆ ತಣ್ಣಗಾದ ಹಾಲನ್ನು ಗಟಗಟನೇ ಕುಡಿದು, ಬಾಯಿಯನ್ನು ಕೈಯಲ್ಲೇ ಒರೆಸಿ, ಸೈಕಲ್ ಕೀ ಹಿಡಿದು ಓಡಲು ಅಣಿಯಾದ.

``ಏನೋ ಅದು ಕೆಟ್ಟ ಅಭ್ಯಾಸ? ತಿಂಡಿ ತಿಂದು ಕೈ, ಬಾಯಿ ತೊಳೆಯದಷ್ಟು ಗಡಿಬಿಡಿಯಾ?'' ಅವನು ತಿಂಡಿ ತಿಂದ ತಟ್ಟೆಯನ್ನು ಎತ್ತುತ್ತಾ ಕೇಳಿದೆ.

``ಅಮ್ಮಾ..... ನನ್ನ ಫ್ರೆಂಡ್ಸ್ ಕಾಯ್ತಾ ಇದ್ದಾರೆ, ಲೇಟ್‌ ಆಗುತ್ತೇ,'' ಅವನು ಅಡ್ಡ ಮೋರೆ ಹಾಕುತ್ತಾ ಹೇಳಿದ.

``ಬಾ ಒಳಗೆ, ಕೈ ಬಾಯಿ ತೊಳೆದು ಟಿವಿ ಆರಿಸಿ ಹೋಗು,'' ನಾನು ಜೋರಾಗಿ ಹೇಳಿದೆ. ಗೆಳೆಯರ ಮುಂದೆ ತನ್ನ ಮರ್ಯಾದೆ ಹೋದಂತಾಗಿ ಹೊರಗಡೆ ಕಾಯುತ್ತಿದ್ದ ಅವರ ಕಡೆಗೊಮ್ಮೆ ನೋಡಿ, ಕೀ ಇಟ್ಟು, `ಸಮ್ಮರ್‌ ಟೈಮ್ ನಲ್ಲೂ ನಂಗೆ ಫ್ರೀಡಂ ಇಲ್ಲ.....' ಎಂದು ಗೊಣಗುತ್ತಾ ಸಿಂಕ್‌ ಹತ್ತಿರ ನಡೆದ.

ಕೈ, ಬಾಯಿ ತೊಳೆದುಕೊಂಡು, ತನ್ನ ಕೈಯಲ್ಲಿದ್ದ ನೀರನ್ನು ಎಲ್ಲೆಡೆ ಸಿಡಿಸುತ್ತಾ, ಟಿವಿಯನ್ನು ಆರಿಸದೇ, ಸೈಕಲ್ ಕೀಯನ್ನು ಎತ್ತಿಕೊಂಡು ಆಟಕ್ಕೆ ಓಡಿದ.

``ಬೇಸ್ಮೆಂಟ್‌ ನಲ್ಲಿಯೇ  ಆಡಿ, ಹೊರಗಡೆ ಹೋಗಬೇಡಿ,'' ನಾನು ಕಿರುಚಿದ್ದು ಅವರಿಗೆ ಕೇಳಿಸಿತೋ ಇಲ್ಲವೋ...ಇವತ್ತು ಶುಕ್ರವಾರ, ವರ್ಕಿಂಗ್‌ ಡೇ, ಪುಟ್ಟನಿಗೆ ಬೇಸಿಗೆ ರಜೆ ಇರುವ ಕಾರಣ ನಮ್ಮಿಬ್ಬರಲ್ಲಿ ಒಬ್ಬರು ವರ್ಕ್‌ ಫ್ರಂ ಹೋಮ್ ಮಾಡಬೇಕಾಗಿತ್ತು. ಹಾಗೆ ಇಂದು ನನ್ನ ಸರದಿ. ನಾನು ಆಫೀಸಿಗೆ ಹೋಗುವ ದಿನ ಅಡುಗೆ ಕೆಲಸ ಬೆಳಗ್ಗೆಯೇ ಮುಗಿಸಿದರೆ, ವರ್ಕ್ ಫ್ರಂ ಹೋಮ್ ಇದ್ದ ದಿನ ಆರಾಮವಾಗಿ ಮಾಡುತ್ತಿದ್ದೆ. ಇವತ್ತು ಏನು ಏಡುಗೆ ಮಾಡೋದು ಎಂದು ಯೋಚಿಸುತ್ತಲೇ ಟಿವಿ ಆರಿಸಿ ಅಡುಗೆ ಮನೆಗೆ ಹೋದೆ.

ತರಕಾರಿ ಬೇರೆ ಖಾಲಿಯಾಗಿದೆ. ಹನ್ನೊಂದು ಗಂಟೆಗೆ ಲಾಗ್‌ ಇನ್‌ ಆಗಬೇಕು ಎಂಬ ನೆನಪು ಬಂದಾಗ, ಇವತ್ತಿನ ಅಡುಗೆಗೆ `ಪಾಸ್ತಾ' ಬೆಸ್ಟ್ ಚಾಯ್ಸ್ ಎನಿಸಿತು. ಮಾಡಲೂ ಸುಲಭ, ರುಚಿಯಾಗಿಯೂ ಇರುತ್ತೆ. ಅದು ಪುಟ್ಟನಿಗೆ ಇಷ್ಟ ಎಂದು ಮನಸ್ಸು ಸಮರ್ಥನೆ ಕೊಟ್ಟಿತು. ವಾರಕ್ಕಾಗುವಷ್ಟು ತರಕಾರಿ, ಹಣ್ಣುಗಳನ್ನು ವೀಕ್‌ ಎಂಡ್‌ ನಲ್ಲಿ ತಂದಿರಿಸುವ ಅನಿವಾರ್ಯತೆ ನಮಗಿತ್ತು.

ಆದ್ದರಿಂದ ಶುಕ್ರವಾರ ಫ್ರಿಜ್‌ ನಲ್ಲಿ ಒಣಗಿ ಹೋಗಿರುತ್ತಿದ್ದ ಆ ತರಕಾರಿಗಳ ದರ್ಶನ ಪಡೆದರೆ ಅಡುಗೆ ಮಾಡುವುದೇ ಬೇಡ ಎಂಬ ಭಾವನೆ ಬಲವಾಗುತ್ತಿದ್ದುರಿಂದ, ಆ ದಿನ ಬೇರೆ ಏನಾದರೂ ಸುಲಭದ ಅಡುಗೆ ಮಾಡುವುದು ರೂಢಿಯಾಗಿತ್ತು. ಅದಕ್ಕಾಗಿ ಪಾಸ್ತಾ, ಹೆಸರುಬೇಳೆ ಖಿಚಡಿ ಅಥವಾ ಪುಳಿಯೋಗರೆ ಹೀಗೆ ಏನಾದರೊಂದು ಮಾಡುತ್ತಿದ್ದೆ. ಮತ್ತೆ ವೀಕೆಂಡ್‌ ಬಂದಾಗ ಹೊರಗಡೆ ಹೋಗಿ ಮನೆಗೆ ಬೇಕಾದ ಸಾಮಗ್ರಿಗಳನ್ನು ತರುವ ನಮ್ಮದು ಬರೀ `ವೀಕೆಂಡ್‌ ಜೀವನ' ಅಂತ ಕೆಲವೊಮ್ಮೆ ಅನಿಸಿದ್ದೂ ಇದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ