ಕಥೆ - ಬಿ.ಟಿ. ನಾಯಕ್

ಪರಸ್ಪರ ಪ್ರೀತಿ ಅನುರಾಗದಿಂದ ಒಂದಾದ ಕಾವ್ಯಾ ಮತ್ತು ಮಲ್ಲೇಶ್ಮುಂದೆ ಅನಿವಾರ್ಯವಾಗಿ ಅಗಲಿದ್ದೇಕೆ.....? ನಂತರ ನಡೆದಿದ್ದಾದರೂ ಏನು......?

ಕಾವ್ಯಾ ಮತ್ತು ಮಲ್ಲೇಶ್‌ ಸುಪ್ರಸಿದ್ಧ ಐಟಿ ಕಂಪನಿಯ ಒಂದೇ ತಂಡದಲ್ಲಿ ಇದ್ದರು. ಅವರು ಜೊತೆಗೆ ಕೆಲಸ ಮಾಡುತ್ತಿರುವಾಗ ಕಛೇರಿಯ ವಿಷಯಗಳ ಚರ್ಚೆ ಮಾತ್ರ ಮಾಡುತ್ತಿದ್ದರು. ಕಾಲ ಕ್ರಮೇಣ ಅವರ ಚರ್ಚೆಗಳು ಕೊಂಚ ಬದಲಾದ. ಈಗ ತಮ್ಮ ಕುಟುಂಬದ ಆಗುಹೋಗುಗಳನ್ನು ಚರ್ಚಿಸತೊಡಗಿದರು.

ಹೀಗಾಗಿ, ಅವರಿಬ್ಬರೂ ಪರಸ್ಪರ ಹತ್ತಿರವಾದರು ಮತ್ತು ಸಂಕೋಚವಿಲ್ಲದೆಯೇ ಮಾತಾಡುತ್ತಿದ್ದರು. ಅವರ ನಡೆ ಹಾಗೆ ನಿರಂತರವಾಗಿ ಸಾಗಿದಾಗ, ತಮ್ಮ ವೈಯಕ್ತಿಕ ವಿಚಾರಗಳ ಪ್ರಾಧಾನ್ಯತೆ ಮೂಡಿದಾಗ ಮತ್ತು ತಮ್ಮ ಆಸೆ ಆಕಾಂಕ್ಷೆಗಳನ್ನು ವಿನಿಮಯ ಮಾಡಿಕೊಳ್ಳುತ್ತಲಿದ್ದರು. ಅನಂತರ, ಅವರಿಬ್ಬರಲ್ಲಿ ಪ್ರೇಮಾನುರಾಗ ಅಂಕುರವಾಯಿತು.

ಈಗ ಅವರು ಒಬ್ಬರನ್ನೊಬ್ಬರು ಬಿಟ್ಟು ಒಂದು ಕ್ಷಣ ಕೂಡಾ ಇರುತ್ತಿರಲಿಲ್ಲ. ಯಾವಾಗಲಾದರೂ ಒಬ್ಬರು ರಜೆಯ ಮೇಲೆ ಹೋಗುವ ಪ್ರಸಂಗ ಬಂದಾಗ, ಅಥವಾ ಕಂಪನಿಯೇ ರಜೆ ಘೋಷಿಸಿದಾಗ, ಒಟ್ಟಿಗೆ ಸೇರಲಾಗದೇ ಪರಿತಪಿಸುತ್ತಿದ್ದರು. ಅವರ ರಜೆ ಮುಗಿದು ಉದ್ಯೋಗಕ್ಕೆ ಹಾಜರು ಆದಾಗ, ತಕ್ಷಣವೇ ಇಬ್ಬರೂ ಸೇರಿ ನಗು ಮೊಗದಿಂದ ಶುಭಾಶಯಗಳನ್ನು ಕೋರುತ್ತಾ ಅವರವರ ಕುಟುಂಬದ ಕ್ಷೇಮ ಸಮಾಚಾರ ಕೇಳುತ್ತಿದ್ದರು.

ಕೆಲವು ದಿನಗಳಾದ ಮೇಲೆ, ಅವರಿಬ್ಬರೂ ಒಂದು ನಿರ್ಧಾರಕ್ಕೆ ಬಂದು, ತಮ್ಮ ಮನಸ್ಸಿನಾಳದ ಪ್ರೇಮ ಪ್ರಸ್ತಾವನೆ ಪರಸ್ಪರ ವಿನಿಮಯ ಮಾಡಿಕೊಂಡರು. ಆಮೇಲೆ ಅದು ಹೊಂದಾಣಿಕೆಯಾದ ಮೇಲೆ ತಮ್ಮ ತಮ್ಮ ಕುಟುಂಬದವರಿಗೆ ತಮ್ಮೊಲವಿನ ಬಗ್ಗೆ ಹೇಳಿಕೊಂಡು, ಮದುವೆಯ ಪ್ರಸ್ತಾಪದವರೆಗೆ ತಂದರು. ಇವರು ಅರಿಕೆ ಮತ್ತು ಅನ್ಯೋನ್ಯತೆಯ ತಾಳಮೇಳ ನೋಡಿ ಮನೆಯವರು ಫಿದಾ ಆಗಿ ಒಪ್ಪಿಯೇಬಿಟ್ಟರು. ಆಗ ಇವರಿಗೆ ಸಿಹಿ ಮುಹೂರ್ತ ಹತ್ತಿರವಾಯಿತು. ಅದರ ಫಲಶೃತಿ ದೊರಕಿ ನಿಶ್ಚಿತಾರ್ಥ ನಡೆದುಹೋಯಿತು. ಮುಂದೆ ಕೆಲವು ದಿನಗಳಲ್ಲಿ ಹಸೆಮಣೆಯ ಭಾಗ್ಯ ಕೂಡಾ ಒದಗಿ ಬಂದಾಗ, ಅವರ ಗುರುಹಿರಿಯರು ಮತ್ತು ಆಪ್ತರು ಆಶೀರ್ದಿಸಿ, ಅವರ ಮದುವೆ ಕಾರ್ಯದಲ್ಲಿ ಭಾಗಿಯಾದರು.

ಈಗ ಯುವ ಪ್ರೇಮಿಗಳು ಆಕಾಶದಲ್ಲಿ ಹಾರಾಡುವ ಸ್ವಚಂದ ಬಾನಾಡಿಗಳಂತೆ ಸಂಪೂರ್ಣ ಸ್ವೇಚ್ಛೆಯಾಗಿ ಮಧುಚಂದ್ರ ಇತ್ಯಾದಿ ಮುಗಿಸಿಕೊಂಡು ಬಂದು, ತಮ್ಮ ಉದ್ಯೋಗಗಳಿಗೆ ಹಾಜರಾದರು. ಆದರೂ ಕಛೇರಿಯಲ್ಲಿ ಏನಾದರೂ ನೆಪ ಮಾಡಿಕೊಂಡು ಅವರು ಪರಸ್ಪರ ಭೇಟಿಯಾಗುತ್ತಿದ್ದರು ಮತ್ತು ಊಟದ ಸಮಯದಲ್ಲಿ ಹೆಚ್ಚಿನ ಅವಧಿ ಪಡೆದು, ಮುಸು ಮುಸು ನಗುತ್ತಾ, ಕಣ್ಸನ್ನೆ ಮಾಡುತ್ತಾ ನಲಿಯುತ್ತಾ ಇರುತ್ತಿದ್ದರು.

ಅವರು ಪ್ರಣಯ ರಾಗಗಳ ಜೊತೆಗೆ, ಉದ್ಯೋಗವನ್ನು ಶ್ರದ್ಧೆಯಿಂದ ಮತ್ತು ಅಚ್ಚುಕಟ್ಟಾಗಿ ತಮ್ಮ ಮೇಲಧಿಕಾರಿಗಳಿಗೆ ಒಪ್ಪಿಗೆಯಾಗುವಂತೆ ಮಾಡುತ್ತಿದ್ದರಿಂದ, ಅವರಿಗೆ ಯಾವ ಅಡೆತಡೆಗಳಿರಲಿಲ್ಲ.

ಮುಂದೆ ಸಮಯ ಕಳೆದಂತೆ, ಕಾವ್ಯಾಗೆ ಏಕೋ ತನ್ನ ಆರೋಗ್ಯದಲ್ಲಿ ಋಣಾತ್ಮಕ ಬದಲಾವಣೆಯನ್ನು ಗಮನಿಸಿಕೊಂಡಳು. ಆದರೆ, ಆಕೆ ಕಿಂಚಿತ್ತೂ ಯಾರ ಬಳಿಯೂ ಹೇಳಿಕೊಳ್ಳಲಿಲ್ಲ. ಅಷ್ಟೇ ಏಕೆ ಮಲ್ಲೇಶನಿಗೂ ಕೂಡ ಹೇಳಲಿಲ್ಲ. ಈಗ ಸದ್ಯಕ್ಕೆ ಅದನ್ನು ಹೇಳುವುದು ಬೇಡ ಎಂಬುದನ್ನು ತನ್ನ ಮನಸ್ಸಿನಾಳಕ್ಕೆ  ಇಟ್ಟುಕೊಂಡಳು. ಆಮೇಲೆ ಒಂದು ದಿನ ನೆಪ ಹೂಡಿಕೊಂಡು ಮಲ್ಲೇಶನಿಗೆ, ``ನನ್ನಮ್ಮ ತವರಿಗೆ ಬರಲು ಹೇಳಿದ್ದಾಳೆ, ಹಾಗಾಗಿ ನಾನು ಕೆಲವು ದಿನಗಳ ಮಟ್ಟಿಗೆ ಅಲ್ಲಿಗೆ ಹೋಗಿ ಬರುತ್ತೇನೆ,'' ಎಂದು ಹೇಳಿದಳು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ