ಕಥೆ - ಶಶಿ ಅರುಣ್

ಒಂದು ದೊಡ್ಡ ತಪ್ಪು ಸುಂದರ್ ಸಂತೋಷವನ್ನು ಕಸಿದುಕೊಂಡಿತ್ತು. ಮಾತ್ರವಲ್ಲ, ಅವನು ತನ್ನನ್ನು ತಾನು ಕತ್ತಲೆಯಲ್ಲಿಯೇ ಇರಿಸಿಕೊಳ್ಳಲಾರಂಭಿಸಿದ. ದೀಪಾವಳಿಯ ರಾತ್ರಿಯೂ ಅವನು ದೀಪಗಳನ್ನು ಬೆಳಗಿಸದಿದ್ದಾಗ, ನೆರೆಹೊರೆಯವರಿಗೆ ಅವನ ಬಗ್ಗೆ ಅನುಮಾನ ಮೂಡಿತು. ನಂತರ.....

ಪಟಾಕಿಗಳ ಸದ್ದು ನಿರಂತರವಾಗಿ ಪ್ರತಿಧ್ವನಿಸುತ್ತಿತ್ತು. ಎಲ್ಲೆಡೆಯಿಂದ ಅಪ್ಪಳಿಸುತ್ತಿದ್ದ ಪಟಾಕಿಗಳ ಶಬ್ದ ಕಿವಿಯ ಪರದೆಯನ್ನೇ ಹರಿದುಬಿಡುವುದೇನೋ ಎಂಬಂತೆ ಭಾಸವಾಗುತ್ತಿತ್ತು. ಬೆಳಗ್ಗೆಯಿಂದಲೂ ಸುಂದರ್‌ ಏನನ್ನೂ ತಿಂದಿರಲಿಲ್ಲ. ಅಲ್ಲದೆ, ಅವನಿಗೆ ಹಾಸಿಗೆಯಿಂದ ಮೇಲೇಳಲೂ ಮನಸ್ಸಿರಲಿಲ್ಲ. ಪ್ರತಿಕ್ಷಣ ಮನಸ್ಸಿನ ತಳಮಳದಲ್ಲಿ ಅವನು ಗಾಢವಾಗಿ ಮಗ್ನನಾಗಿಬಿಟ್ಟಿದ್ದ. ಮನಸ್ಸಿನಲ್ಲಿ ಏಳುತ್ತಿದ್ದ ಚಿಂತೆಯ ಅಲೆಗಳ ಏರಿಳಿತಗಳು ಅವನ ಮೇಲೆ ಯಾವ ರೀತಿಯ ಪರಿಣಾಮ ಬೀರುತ್ತಿವೆ ಎಂದು ಸುಂದರ್‌ ಗೆ ಅರಿಯಲು ಸಾಧ್ಯವಾಗಲಿಲ್ಲ. ಆದರೆ ಅವನಿಗೆ ಮಲಗುವುದು ಸಹ ಅಸಹನೀಯವಾಗಿತ್ತು. ಕಿಟಕಿಗಳ ಮೂಲಕ ಆಕಾಶ ನೀಲಿ ಗೋಳಗಳ ಹಸಿರುಕೆಂಪು ಹೊಳಪು ಬಣ್ಣಗಳು ಬಲವಂತವಾಗಿ ಕಣ್ಣುಗಳಲ್ಲಿ ಪ್ರವೇಶಿಸಲು ಪ್ರಯತ್ನಿಸುವಂತೆ ತೋರುತ್ತಿತ್ತು.

ಸುಂದರ್‌ ಕಿರಿಕಿರಿಯಿಂದ ಕಣ್ಣುಗಳನ್ನು ಮುಚ್ಚಿದ. ಅವನು ತನ್ನ ಎಲ್ಲಾ ಶಕ್ತಿ ಪ್ರಯೋಗಿಸಿ ಕಣ್ಣುಗಳನ್ನು ಬಿಗಿಯಾಗಿ ಮುಚ್ಚಿಕೊಳ್ಳುವ ಪ್ರಯತ್ನ ಮಾಡುತ್ತಿದ್ದ. ಆದರೆ ಮರುಕ್ಷಣವೇ, ಪ್ರಖರವಾದ ಬೆಳಕು ಅವನ ಕಣ್ಣಿನ ರೆಪ್ಪೆಗಳನ್ನು ತನ್ನಿಂದ ತಾನೇ ತೆರೆಯುವಂತೆ ಮಾಡಿದ್ದ.

ರಜನಿ ತನ್ನ ಮೃದುವಾದ ಬೆರಳುಗಳಿಂದ ಆತನ ಕಣ್ಣಿನ ರೆಪ್ಪೆಗಳನ್ನು ಬಲವಂತವಾಗಿ ತೆರೆಯುತ್ತಿದ್ದಂತೆ.... ಅಂದು ಸುಂದರ್ ಕಿರಿಕಿರಿಗೊಳ್ಳುತ್ತಿದ್ದ. ಆದರೆ ಇಂದು ಅವನಿಗೆ ಮಲ್ಲಿಗೆಯ ಮುದ್ದಾದ ಮೊಗ್ಗುಗಳನ್ನು ಚುಂಬಿಸುವಂತೆ ಭಾಸವಾಗುತ್ತಿತ್ತು. ಅನಾಯಾಸವಾಗಿ ಅವನ ಕೈ ಅವನ ತುಟಿಗಳನ್ನು ತಲುಪಿತು. ಆದರೆ ಇದು ಏನು? ಆ ಶಾಖ ಇಲ್ಲ, ಆ ನಡುಕ ಇಲ್ಲ. ಸುಂದರ್ ಭಯದಿಂದ ಕಣ್ಣು ತೆರೆದ.

ಹೌದು, ಇಲ್ಲಿಗೆ ವರ್ಗವಾಗಿ ಹೊಸದಾಗಿ ನೇಮಕವಾದಾಗಿನಿಂದ ಹೀಗೇ ಆಗುತ್ತಿತ್ತು. ಅವನಿಗೆ ಒಂದು ಹಳೆಯ ಮೂರು ಕೋಣೆಗಳ ಮನೆ ದೊರೆತಿತ್ತು. ಆ ಮನೆ ನಗರದ ಹೊರಭಾಗದಲ್ಲಿತ್ತು. ಹಾಗೂ ಅಲ್ಲಿನ ಸುತ್ತಮುತ್ತಲಿನ ವಾತಾವರಣ ಹಸಿರಿನಿಂದ ಕಂಗೊಳಿಸುತ್ತಿತ್ತು. ಒಂದು ದಿನ ಬೆಳಗ್ಗೆ ಎದ್ದ ಅವನು, ಚಹಾ ಮಾಡಿಕೊಂಡು ಬಂದು ಎಂದಿನಂತೆ ವರಾಂಡದ ಕುರ್ಚಿಯ ಮೇಲೆ ಕುಳಿತ. ಚಹಾ ಮುಂದಿಟ್ಟುಕೊಂಡು ತನ್ನ ಮೊಬೈಲ್ ‌ನೋಡಲಾರಂಭಿಸಿದ. ಚಹಾ ಕಪ್‌ ಎತ್ತಿಕೊಂಡು ಒಂದು ಸಿಪ್ ಕುಡಿಯುತ್ತಿದ್ದಾಗ ಅವನು ಅಚ್ಚರಿಗೊಂಡ. ಮನೆಯ ಹುಲ್ಲುಹಾಸಿನಲ್ಲಿರುವ ಕಲ್ಲಿನ ಮೇಲಿಂದ ಸುರಿಯು ಕಾರಂಜಿ ನೀರಿನಲ್ಲಿ ಹುಡುಗಿಯೊಬ್ಬಳು ತನ್ನ ಗುಲಾಬಿ ರೆಕ್ಕೆಯನ್ನು ಬಡಿಯುತ್ತಿದ್ದಂತೆ ಅವನಿಗೆ ಕಂಡುಬಂತು. ಸುಂದರ್‌ ಬಿಟ್ಟ ಕಣ್ಣುಗಳನ್ನು ಬಿಟ್ಟುಕೊಂಡು ಎವೆಯಿಕ್ಕದೆ ನೋಡುತ್ತಲೇ ಇದ್ದ. ಚಹಾ ಕಪ್‌ ಅವನ ಕೈಯಲ್ಲೇ ಇತ್ತು. ಮನೆ ಸ್ವಚ್ಛಗೊಳಿಸಲು ಬಂದ ಕೆಲಸದವಳ ಧ್ವನಿ ಕೇಳಿದಾಗ ಅವನು ಗಾಬರಿಗೊಂಡು ಎಚ್ಚೆತ್ತುಗೊಂಡ.

``ಅವಳು ಇಲ್ಲಿನ ಪ್ಲಂಬರ್‌ ಮಗಳು. ಅವಳು ನಿನ್ನೆ ರಾತ್ರಿಯಷ್ಟೇ ಬೇರೆ ಊರಿನಿಂದ ಬಂದಿದ್ದಾಳೆ. ಅವಳು ಚಿಕ್ಕವಳಿದ್ದಾಗಿನಿಂದಲೂ ಈ ಕಾರಂಜಿಯಲ್ಲಿ ಸ್ನಾನ ಮಾಡುತ್ತಾಳೆ ಹಾಗೂ ಇಷ್ಟು ದೊಡ್ಡವಳಾದರೂ ಅವಳು ತನ್ನ ತುಂಟತನ ನಿಲ್ಲಿಸಿಲ್ಲ. ಅವಳ ತಂದೆ ಈ ಕಾರಂಜಿಯ ಪಂಪ್‌ ರಿಪೇರಿ ಮಾಡುತ್ತಾರೆ.''

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ